Breaking News

ಭಾರತಕ್ಕೆ ಧನ್ಯವಾದ ತಿಳಿಸಿದ ರಷ್ಯಾ

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ರಷ್ಯಾವನ್ನು ಖಂಡಿಸುವ ನಿರ್ಣಯವನ್ನು ಬೆಂಬಲಿಸದ ಭಾರತ, ಚೀನಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ರಷ್ಯಾ ಧನ್ಯವಾದ ಹೇಳಿದೆ.

ಈ ಕರಡನ್ನು ಬೆಂಬಲಿಸದವರಿಗೆ ನಾವು ಧನ್ಯವಾದ ಹೇಳುತ್ತೇವೆ ಎಂದು ವಿಶ್ವಸಂಸ್ಥೆಯ ( ರಷ್ಯಾದ ರಾಯಭಾರಿ ವಾಸಿಲಿ ನೆಬೆಂಜಿಯಾ ಹೇಳಿದ್ದಾರೆ.

ಭಾರತ, ಚೀನಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಉಕ್ರೇನ್ ವಿಷಯಕ್ಕೆ ಸಂಬಂಧಿಸಿದಂತೆ ರಷ್ಯಾವನ್ನು ಖಂಡಿಸುವ ನಿರ್ಣಯದ ಮೇಲೆ ಮತದಾನದಿಂದ ದೂರ ಉಳಿದಿವೆ. 11 ದೇಶಗಳು ಈ ಪ್ರಸ್ತಾಪವನ್ನು ಬೆಂಬಲಿಸಿದರೂ, ರಷ್ಯಾ ಈ ಪ್ರಸ್ತಾಪವನ್ನು ವೀಟೋ ಮಾಡಿದೆ. ಕೌನ್ಸಿಲ್‌ನ ಖಾಯಂ ಸದಸ್ಯ ರಾಷ್ಟ್ರವಾಗಿರುವ ರಷ್ಯಾದ ವೀಟೋ ಅಧಿಕಾರವು ಖಂಡನಾ ನಿರ್ಣಯ ಅಂಗೀಕೃತಗೊಳ್ಳಲು ವಿಫಲವಾಗಿದೆ.

Share News

About admin

Check Also

ಸರಗಳ್ಳತನ ಮಾಡುತ್ತಿದ್ದ ಅಪ್ರಾಪ್ತ ಸೇರಿ ಇಬ್ಬರು ಆರೋಪಿಗಳ ಬಂಧನ

ಬೆಂಗಳೂರು: ಅಪ್ರಾಪ್ತ ಬಾಲಕನೊಂದಿಗೆ ಸೇರಿ ಮಹಿಳೆಯರ ಚಿನ್ನದ ಮಾಂಗಲ್ಯ ಸರ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಡೇಪಾಳ್ಯ ಪೊಲೀಸರು ವಶಕ್ಕೆ …

Leave a Reply

Your email address will not be published. Required fields are marked *