BigTv News
October 4, 2024
Breaking News, ಯಾದಗಿರಿ
ಯಾದಗಿರಿ: ಗುರುವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ತಾಲ್ಲೂಕಿನ ಪಗಲಾಪುರ ಸೇತುವೆ ಮತ್ತೆ ಕುಸಿದಿದ್ದು, ಕೂಡಲೇ ದುರಸ್ತಿ ಮಾಡುವಂತೆ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಆಗ್ರಹಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ಜಿಲ್ಲಾ ಕೇಂದ್ರದಿಂದ ಸುಮಾರು 3 ಕಿ.ಮೀ.ಅಂತರದಲ್ಲಿರುವ ಕೊಯಿಲೂರ ಪಗಲಾಪುರ ಪ್ರಮುಖ ಗ್ರಾಮೀಣ ರಸ್ತೆ ಇದಾಗಿದ್ದು, ಆಗಸ್ಟ್ ಮೊದಲನೇ ವಾರ ಸುರಿದ ಭಾರಿ ಮಳೆಯಿಂದ ಸೇತುವೆ ಮೇಲೆ ನೀರು ಹರಿದು ಸಂಚಾರ ಅಸ್ತವ್ಯಸ್ತವಾಗಿತ್ತು. ತಕ್ಷಣ ಹೊಸ …
Read More »
BigTv News
September 28, 2024
Breaking News, ಯಾದಗಿರಿ
ಯಾದಗಿರಿ: ಜಿಲ್ಲೆಯ 6 ತಾಲ್ಲೂಕುಗಳಲ್ಲಿ ಪ್ರಾಗೈತಿಹಾಸಿಕ, ಐತಿಹಾಸಿಕ ಪ್ರವಾಸಿ ತಾಣಗಳಿದ್ದು, ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಪ್ರವಾಸಿ ತಾಣಗಳಿಗೆ ಸೂಕ್ತ ಸೌಲಭ್ಯ ಇಲ್ಲದಿರುವುದು ದೊಡ್ಡ ಕೊರತೆಯಾಗಿದೆ. ಕೃಷ್ಣಾ ಮತ್ತು ಭೀಮಾ ನದಿಗಳು ಜಿಲ್ಲೆಯಲ್ಲಿ ಹರಿಯುತ್ತಿವೆ. ಯಾದಗಿರಿ ತಾಲ್ಲೂಕಿನ ಹತ್ತಿಕುಣಿ, ಸೌದಗಾರ್ ಬಳಿ ಎರಡು ಚಿಕ್ಕ ಜಲಾಶಯಗಳಿವೆ. ನಾರಾಯಣಪುರದಲ್ಲಿ ದೊಡ್ಡ ಜಲಾಶಯವಿದೆ. ಕೋಟೆ ಸೇರಿದಂತೆ ಬೆಟ್ಟಗುಡ್ಡಗಳಿಂದ ಆವೃತ್ತವಾಗಿರುವ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳಿವೆ. ಆದರೆ, ಅವುಗಳನ್ನು ಜನರಿಗೆ ಪ್ರವಾಸಿ ತಾಣವಾಗಿ ರೂಪಿಸಿ ಅವುಗಳಿಂದ ಆದಾಯ …
Read More »
BigTv News
September 24, 2024
Breaking News, ಯಾದಗಿರಿ
ಯಾದಗಿರಿ: ಸೋಮವಾರ ಸಿಡಿಲು ಬಡಿದು ನಾಲ್ವರು ಮೃತಪಟ್ಟದ್ದರು ಇಂದು ಯಾದಗಿರಿ ತಾಲ್ಲೂಕಿನ ಜಿನಕೇರಾ ತಾಂಡಕ್ಕೆ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪ ದರ್ಶನಾಪುರ ಅವರು ತಾಂಡಾಕ್ಕೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಇಂತಹ ಘಟನೆಗಳು ಆಗದಂತೆ ದೇವರಲ್ಲಿ ಪ್ರಾರ್ಥಿಸುತ್ತೇನೆ. ಆ ಕುಟುಂಬದ ನೋವನ್ನು ತಡೆದುಕೊಳ್ಳುವ ಶಕ್ತಿ ನೀಡಲಿ. ಸರ್ಕಾರದಿಂದ ಏನೆಲ್ಲ ಪರಿಹಾರ ಇದೆಯೋ ಅದನ್ನು ಆ ಕುಟುಂಬಗಳಿಗೆ ಒದಗಿಸಲು ಅಧಿಕಾರಿಗಳಿಗೆ ಸೂಚಿಸುತ್ತೇನೆ …
Read More »
BigTv News
September 24, 2024
Breaking News, ಯಾದಗಿರಿ
ಯಾದಗಿರಿ: ಯಾದಗಿರಿ ಜಿಲ್ಲೆಯಾದ್ಯಂತ ಸೋಮವಾರ ಗುಡುಗು ಸಹಿತ ಭಾರೀ ಮಳೆ ಸುರಿದಿದ್ದು, ಸಿಡಿಲ ಅಬ್ಬರಕ್ಕೆ ಐದು ಜನರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಯಾದಗಿರಿ ತಾಲೂಕಿನ ಜನಕೇರ ತಾಂಡದಲ್ಲಿ ದುರ್ಘಟನೆ ನಡೆದಿದೆ. ಚೇನು (22) ಕಿಶನ್ (30) ಸುಮಿ ಬಾಯಿ (30) ಚನ್ನಪ್ಪ ತಂದೆ ನ್ಯಾಮು ಮೃತ ದುರ್ದೈವಿಗಳು. ಮೃತರೆಲ್ಲರು ಜೀನಕೇರ ತಾಂಡದ ನಿವಾಸಿಗಳು. ಜಮೀನು ಕೆಲಸಕ್ಕೆ ಹೋದಾಗ ಬಿರುಗಾಳಿ ಸಹಿತ ಮಳೆಗೆ ಗುಡಿಯಲ್ಲಿ ಕುಳಿತ್ತಿದ್ದ ವೇಳೆ ಅವಘಡ ಸಂಭವಿಸಿದೆ. …
Read More »
BigTv News
September 23, 2024
Breaking News, ಯಾದಗಿರಿ
ಯಾದಗಿರಿ: ತಾಲ್ಲೂಕಿನ ಜಿನಕೇರಾ ತಾಂಡಾದಲ್ಲಿ ಸಿಡಿಲು ಬಡಿದು ನಾಲ್ವರು ಸಾವನ್ನಪ್ಪಿರುವ ದುರ್ಘಟನೆ ಸೋಮವಾರ ನಡೆದಿದೆ. ಕಿಶನ್ ನಾಮಣ್ಣ ಜಾಧವ (33), ಚನ್ನಪ್ಪ ನಾಮಣ್ಣ ಜಾಧವ (24), ಸುನಿಬಾಯಿ ರಾಠೋಡ (30), ನೇನು ನಿಂಗಪ‍್ಪ ಜಾಧವ (18) ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ತಾಂಡಾದ ಜಮೀನಿನಲ್ಲಿ ಈರುಳ್ಳಿ ಸಸಿ ನಾಟಿ ಮಾಡುತ್ತಿರುವ ವೇಳೆ ಮಳೆ ಬಂದಿದ್ದರಿಂದ ಇದರಿಂದ ತಪ್ಪಿಸಿಕೊಳ್ಳಲು ಜಮೀನಿನಲ್ಲಿರುವ ದುರುಗಮ್ಮ ದೇವಸ್ಥಾನದಲ್ಲಿ ಆಶ್ರಯ ಪಡೆದಿದ್ದಾರೆ. ಈ ವೇಳೆ ಸಿಡಿಲು …
Read More »
BigTv News
September 13, 2024
Breaking News, ಯಾದಗಿರಿ
ಯಾದಗಿರಿ: ಒನ್ ಸ್ಟಾಪ್ ಸೆಂಟರ್ (ಸಖಿ) ಯೋಜನೆ ಅನುಷ್ಠಾನಗೊಳಿಸಲು ಹೊರಗುತ್ತಿಗೆ ಆಧಾರದ ಮೇರೆಗೆ ಕೇಂದ್ರ ನಿರ್ವಾಹಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ವೀರನಗೌಡ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಒನ್ ಸ್ಟಾಪ್ ಸೆಂಟರ್ (ಸಖಿ) ಯೋಜನೆ ಅನುಷ್ಠಾನಗೊಳಿಸಲು ತಾತ್ಕಾಲಿಕವಾಗಿ ಕೇಂದ್ರ ನಿರ್ವಾಹಕರ ಹುದ್ದೆಯನ್ನು ಗುತ್ತಿಗೆ, ಹೊರಗುತ್ತಿಗೆ ಆಧಾರದಲ್ಲಿ ವಿದ್ಯಾರ್ಹತೆ, ಅನುಭವ ಹಾಗೂ ಉಸ್ತುವಾರಿಯಲ್ಲಿ ಉತ್ತಮ ಕೆಲಸ ನಿರ್ವಹಿಸಬಲ್ಲ, ಗಣಕಯಂತ್ರ ನಿರ್ವಹಣೆಯಲ್ಲಿ ಪರಿಣಿತಿ, ಕನ್ನಡ …
Read More »
BigTv News
September 13, 2024
Breaking News, ಯಾದಗಿರಿ
ಯಾದಗಿರಿ: ಸಾಮಾಜಿಕ ಬಹಿಷ್ಕಾರದ ಅನಿಷ್ಟ ಪದ್ಧತಿ ಯಾದಗಿರಿಯಲ್ಲಿ ಇನ್ನೂ ಜೀವಂತ ಇರುವುದು ಬೆಳಕಿಗೆ ಬಂದಿದೆ. ಕೇಸ್ ದಾಖಲಿಸಿದ್ದಕ್ಕೆ ದಲಿತರಿಗೆ ಬಹಿಷ್ಕಾರ ಹಾಕಿದ ವಿದ್ಯಮಾನ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಬಪ್ಪರಗಾ ಗ್ರಾಮದಿಂದ ವರದಿಯಾಗಿದೆ, ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಸವರ್ಣೀಯ ಯುವಕನೊಬ್ಬನ ಮೇಲೆ ದಲಿತ ಕುಟುಂಬ ಪೊಲೀಸರಿಗೆ ದೂರು ನೀಡಿದ್ದೇ ಬಹಿಷ್ಕಾರಕ್ಕೆ ಕಾರಣವಾಗಿದೆ. ದಲಿತರಿಗೆ ಅಂಗಡಿಗಳಲ್ಲಿ ಸಾಮಗ್ರಿ ನೀಡದಂತೆ ಸವರ್ಣೀಯರು ಕಟ್ಟಪ್ಪಣೆ ಮಾಡಿದ್ದಾರೆ. ಇದರಿಂದಾಗಿ ದಲಿತರ ಮಕ್ಕಳಿಗೆ ಪೆನ್ನು, …
Read More »
BigTv News
September 11, 2024
Breaking News, ಯಾದಗಿರಿ
ವಡಗೇರಾ: ತಾಲ್ಲೂಕಿನ ಗುರುಸುಣಿಗಿ ಕ್ರಾಸ್‌ನಿಂದ ಯಾದಗಿರಿ ನಗರಕ್ಕೆ ಹೋಗುವ ರಾಜ್ಯ ಹೆದ್ದಾರಿಯ ಭೀಮಾ ನದಿಯ ಹಳೆಯ ಸೇತುವೆಯ ಮೇಲೆ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಗುರುಸುಣಿಗಿ ಕ್ರಾಸ್‌ನಿಂದ ಭೀಮಾ ನದಿಗೆ ಅಡ್ಡಲಾಗಿ ಕಟ್ಟಿರುವ ಹೊಸ ಬ್ರಿಜ್ ಕಂಬ್ಯಾರೇಜು ಮೂಲಕ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಗುರುಸುಣಿಗಿ ಗ್ರಾಮದ ಕ್ರಾಸ್ ಹತ್ತಿರ ಬ್ಯಾರಿಕೇಡ್ ಹಾಕಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಯಾದಗಿರಿ ನಗರದ ಸಮೀಪದಲ್ಲಿ ರೈಲ್ವೆ ಸೇತುವೆಯ ಹತ್ತಿರ ಭೂ ಕುಸಿತ …
Read More »
BigTv News
September 9, 2024
Breaking News, ಯಾದಗಿರಿ
ನಾರಾಯಣಪುರ: ಒಳಹರಿವು ತಗ್ಗಿದ್ದರಿಂದ ಸೋಮವಾರ ಬಸವಸಾಗರ ಜಲಾಶಯದ 19 ಕ್ರಸ್ಟ್‌ಗೇಟ್‌ಗಳು ಹಾಗೂ ಖಾಸಗಿ ಎಂಪಿಸಿಎಲ್ ಜಲವಿದ್ಯುತ್ ಸ್ಥಾವರದ ಮೂಲಕ ಒಟ್ಟು 49 ಸಾವಿರ ಕ್ಯುಸೆಕ್ ನೀರನ್ನು ಕೃಷ್ಣಾ ನದಿಗೆ ಹರಿಬಿಡಲಾಗುತ್ತಿದೆ. ಬಸವಸಾಗರಕ್ಕೆ ಆಲಮಟ್ಟಿ ಲಾಲ್ ಬಹದ್ದೂರ ಶಾಸ್ತ್ರಿ ಜಲಾಶಯದಿಂದ 65 ಸಾವಿರ ಕ್ಯುಸೆಕ್ ನೀರು ಬಿಡುಗಡೆ ಮಾಡುತ್ತಿರುವುದರಿಂದ ಬಸವಸಾಗರ ಜಲಾಶಯದಿಂದ 49 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಬಿಡಲಾಗುತ್ತಿದೆ ಎಂದು ಕೆಬಿಜೆಎನ್‌ಎಲ್ ಮೂಲಗಳಿಂದ ತಿಳಿದು ಬಂದಿದೆ.
Read More »
BigTv News
September 9, 2024
Breaking News, ಯಾದಗಿರಿ
ಯಾದಗಿರಿ: 2024-25ನೇ ಸಾಲಿನ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ರಾಜ್ಯ ಮಟ್ಟದ ಶ್ರೀ ಮಹರ್ಷಿ ವಾಲ್ಮಿಕಿ ಪ್ರಶಸ್ತಿಯನ್ನು ಅಕ್ಟೋಬರ್ ತಿಂಗಳಲ್ಲಿ ಜರುಗುವ ಜಯಂತಿ ವೇಳೆ ಪ್ರದಾನ ಮಾಡಲಾಗುವುದು. ಆಸಕ್ತ ಅರ್ಹರು ಪ್ರಶಸ್ತಿಗೆ ಅಗತ್ಯ ದಾಖಲೆಗಳೊಂದಿಗೆ ಸೆ.17ರವರೆಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ನಮೂನೆ ಯಾದಗಿರಿ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಲಭ್ಯವಿದ್ದು, ಹೆಚ್ಚಿನ ಮಾಹಿತಿಗಾಗಿ ಕಚೇರಿಯನ್ನು …
Read More »