ಯಾದಗಿರಿ: ಗುರುವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ತಾಲ್ಲೂಕಿನ ಪಗಲಾಪುರ ಸೇತುವೆ ಮತ್ತೆ ಕುಸಿದಿದ್ದು, ಕೂಡಲೇ ದುರಸ್ತಿ ಮಾಡುವಂತೆ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಆಗ್ರಹಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಜಿಲ್ಲಾ ಕೇಂದ್ರದಿಂದ ಸುಮಾರು 3 ಕಿ.ಮೀ.ಅಂತರದಲ್ಲಿರುವ ಕೊಯಿಲೂರ ಪಗಲಾಪುರ ಪ್ರಮುಖ ಗ್ರಾಮೀಣ ರಸ್ತೆ ಇದಾಗಿದ್ದು, ಆಗಸ್ಟ್ ಮೊದಲನೇ ವಾರ ಸುರಿದ ಭಾರಿ ಮಳೆಯಿಂದ ಸೇತುವೆ ಮೇಲೆ ನೀರು ಹರಿದು ಸಂಚಾರ ಅಸ್ತವ್ಯಸ್ತವಾಗಿತ್ತು. ತಕ್ಷಣ ಹೊಸ ಸೇತುವೆ ನಿರ್ಮಾಣ ಮಾಡಿ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ರೈತರು ಗ್ರಾಮಸ್ಥರು ದೂರದ ರಸ್ತೆಯ ಮೂಲಕ ಯಾದಗಿರಿ ನಗರಕ್ಕೆ ಸುತ್ತುವರಿದು ಬರುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ, ರೋಗಿಗಳಿಗೆ, ರೈತರಿಗೆ ತೀವ್ರ ತೊಂದರೆಯಾಗಿದೆ. ಅಂಬುಲೆನ್ಸ್ ಹೋಗಬೇಕಾದರೂ ಸುತ್ತುವರಿದು ಬರಬೇಕಾಗಿದೆ ಎಂದು ದೂರಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

