Breaking News

ಹುಬ್ಬಳ್ಳಿ ರೌಡಿಶ್ಟರ್ಗಳ ಮೇಲೆ ಪೊಲೀಸರಿಗೆ ಎಲ್ಲಿಲ್ಲದ ಪ್ರೀತಿ!! ಕಾನೂನು ರಕ್ಷಕರಿಗೆ ಇದೇನಾಗಿದೆ…???

ಹುಬ್ಬಳ್ಳಿ ಧಾರವಾಡ ಇದೇನಾಗಿದೆ ನಮ್ಮ ಪೊಲೀಸ್ರಿಗೆ ರೌಡಿಶೀಟರ್ ಗಳ ಮೇಲೆ ಎಲ್ಲಿಲ್ಲದ ಪ್ರೀತಿ ಉಕ್ಕಿ ಹರಿಯುತ್ತಿದ್ದು ಪೊಲೀಸರ ಬರ್ತಡೇ ಸೆಲೆಬ್ರೇಶನ್ ರೌಡಿಗಳ ಜೊತೆ , ರೌಡಿಶೀಟರ್ ಗಳ ಜೊತೆ ಒಂದು ಹೆಜ್ಜೆ ಮುಂದೆ ಇಡುತ್ತಿದ್ದಾರಾ..? ಇದಕ್ಕೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತಕರು ಉತ್ತರವೇನು..?? ಅದೊಂದು ಕಾಲ ಇತ್ತು ಪೊಲೀಸರ ಕಂಡರೆ ರೌಡಿಶೀಟರ್ ಗಳು ಬಹಳ ಹೆದರುತ್ತಿದ್ದರು. ಇದೀಗ ಪೊಲೀಸರ ಜೊತೆಗೆ ಬರ್ತಡೇ ಸೆಲೆಬ್ರೇಶನ್ ಪಾರ್ಟಿಗಳನ್ನು ಮಾಡುವುದು ನೋಡುತ್ತಿದ್ದರೆ ಇದೇನಾಗ್ತಿದೆ ಹುಬ್ಬಳ್ಳಿ ಪೊಲೀಸರಿಗೆ ಎಂಬ ಪ್ರಶ್ನೆ ಮೂಡುತ್ತಿದೆ ಇದಕ್ಕೆಲ್ಲಾ ಆಯುಕ್ತಕರು ಏನು ಉತ್ತರ ನೀಡುತ್ತಾರೆ ಎಂದು ಕಾಯ್ದು ನೋಡಬೇಕಾಗಿದೆ…

ಹುಬ್ಬಳ್ಳಿ ಧಾರವಾಡ: ಠಾಣೆಯ ಪೊಲೀಸ್ ಪಿ ಅವರು ರೌಡಿಶೀಟರ್‌ಗಳು ಮತ್ತು ಎನ್‌ಡಿಪಿಎಸ್ (ಮಾದಕ ವಸ್ತುಗಳ ಕಾಯಿದೆ) ಪ್ರಕರಣಗಳ ಆರೋಪಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿರುವ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಘಟನೆ ಜಿಲ್ಲೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಸಾರ್ವಜನಿಕ ವಲಯದಲ್ಲಿ ಪೊಲೀಸ್ ಇಲಾಖೆಯ ವಿಶ್ವಾಸಾರ್ಹತೆ ಕುರಿತು ಹಲವು ಪ್ರಶ್ನೆಗಳು ಎದ್ದಿವೆ​. ​

ವೈರಲ್ ಆಗಿರುವ ಫೋಟೊಗಳಲ್ಲಿ …. ಅವರೊಂದಿಗೆ ರೌಡಿಶೀಟರ್‌ಗಳು ಮತ್ತು ಮಾದಕ ವಸ್ತುಗಳ ಸಾಗಾಣಿಕೆ ಆರೋಪಿಗಳು ಭಾಗಿಯಾಗಿರುವುದು ಸ್ಪಷ್ಟವಾಗಿ ದಾಖಲಾಗಿದೆ. ಈ ಗಂಭೀರ ಘಟನೆಯ ಬಗ್ಗೆ ಮುಂದೆ ಎನಾಗುತ್ತದೆ ಸಾರ್ವಜನಿಕರೆ ಕಾದು ನೋಡಬೇಕಿದೆ….. ಏನು ಕಮಿಷನರ್ ಸಾಹೇಬರು ಸ್ವಲ್ಪ ಲೂಸ್ ಬಿಟ್ಟಿದ್ದಾರೆ ಎಂದು ಪೊಲೀಸರೆ ರೌಡಿಗಳ ಜೊತೆ ಫೋಟೋ ತೆಗೆಸಿಕೊಳ್ಳುವುದೇನು ಬರ್ತಡೆ ಸೆಲೆಬ್ರೇಶನ್ ಮಾಡಿಸಿಕೊಳ್ಳುವುದು ಇದೆಲ್ಲ ಎಲ್ಲಿಗೆ ಹೋಗಿ ನಿಲ್ಲುತ್ತದೆ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಇದರ ಬಗ್ಗೆ ಪೊಲೀಸ ಕಮಿಷನರ್ ಉತ್ತರ ನೀಡಬೇಕಾಗಿದೆ.

Share News

About Shaikh BigTv

Check Also

ಕುಷ್ಟಗಿಯಲ್ಲಿ ಘೋರ ದುರಂತ: ಮೂವರು ಮಕ್ಕಳಿಗೆ ವಿಷ ಕುಡಿಸಿ ತಂದೆಯೂ ಆತ್ಮಹತ್ಯೆಗೆ ಯತ್ನ!

ಕುಷ್ಟಗಿ ತಾಲೂಕಿನ ನೀರಲೂಟಿ ಗ್ರಾಮದಲ್ಲಿ ಮದ್ಯವ್ಯಸನಿ ತಂದೆಯೊಬ್ಬ ತನ್ನ 10, 8 ಮತ್ತು 5 ವರ್ಷದ ಮೂವರು ಮಕ್ಕಳಿಗೆ ವಿಷ …

Leave a Reply

Your email address will not be published. Required fields are marked *