Breaking News

ಮೈಸೂರು

ಸ್ವಾಮೀಜಿಗಳು ಸರ್ಕಾರ ನೀಡಿದ ಅನುದಾನದಿಂದ ಕೆಲಸ ಮಾಡುತ್ತಾರೆ :ವಿಶ್ವನಾಥ್‌ ಸಲಹೆ

ಮೈಸೂರು: ಮಠಗಳಿಗೆ ಹಣ ನೀಡುವ ಬದಲು, ಅದನ್ನು ಇತರ ಕಾರ್ಯಗಳಿಗೆ ಮೀಸಲಿಡಬೇಕು’ . ‘ಸ್ವಾಮೀಜಿಗಳು ಸರ್ಕಾರ ನೀಡಿದ ಅನುದಾನದಿಂದ ಕೆಲಸ ಮಾಡುತ್ತಾರೆ ಎಂದು ವಿಧಾನ ಪರಿಷತ್‌ ಸದಸ್ಯ ಎಚ್.ವಿಶ್ವನಾಥ್‌ ಸಲಹೆ ನೀಡಿದರು. ನಗರದಲ್ಲಿ ಶುಕ್ರವಾರ ಒಡನಾಡಿ ಸಂಸ್ಥೆಯು ಏರ್ಪಡಿಸಿದ್ದ ‘ಪ್ರಸ್ತುತ ವಿದ್ಯಮಾನದಲ್ಲಿ ತೇಜಸ್ವಿ ಚಿಂತನೆ’ ಸಂವಾದದಲ್ಲಿ ಮಾತನಾಡಿದ ಅವರು, ‘ನಗರಕ್ಕೆ ಗುರುವಾರ ಭೇಟಿ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಸರ್ಕಾರಗಳು ಮಾಡುವ ಕೆಲಸವನ್ನು ಸ್ವಾಮೀಜಿಗಳು ಮಾಡುತ್ತಾರೆ ಎಂದಿದ್ದರು.

Read More »

ಸ್ವಾಮೀಜಿಗಳಿಗೆ ಅವಮಾನ ಮಾಡಿಲ್ಲ , ನನ್ನ ಬಗ್ಗೆ ಸುಳ್ಳು ಅಪಪ್ರಚಾರ : ಸಿದ್ದರಾಮಯ್ಯ

ಮೈಸೂರು:ಸರ್ವ ಜಾತಿಗಳ ಸ್ವಾಮೀಜಿಗಳ ಬಗ್ಗೆ ಗೌರವವಿದೆ. ಯಾರ ಬಗ್ಗೆಯೂ ಅಗೌರವದಿಂದ ನಡೆದುಕೊಂಡಿಲ್ಲ‌ ಎನ್ನುವುದು ರಾಜ್ಯದ ಜನತೆಗೆ ಗೊತ್ತಿದೆ. ಸ್ವಾಮೀಜಿಗಳಿಗೆ ಅವಮಾನ ಮಾಡಿಲ್ಲ, ಅಗೌರವ ತೋರಿಲ್ಲ. ಟ್ವೀಟ್ ನಲ್ಲಿ ಪ್ರತಿಕ್ರಿಯಿಸಿದ ಅವರು, ‌’ನಮ್ಮ ತಾಯಂದಿರು ಸೇರಿದಂತೆ ಸಾಮಾನ್ಯವಾಗಿ ಎಲ್ಲರೂ ತಲೆಮೇಲೆ ಬಟ್ಟೆ ಹಾಕಿಕೊಳ್ಳುತ್ತಾರೆ ಎಂದು ಹೇಳಿದ್ದೇನೆಯೇ . ‘ರಾಜಕೀಯ ವಿರೋಧಿಗಳು ದುರುದ್ದೇಶದಿಂದ ನನ್ನ ಹೇಳಿಕೆಯನ್ನು ತಿರುಚಿ ಅಪಪ್ರಚಾರ ಮಾಡುತ್ತಿದ್ದಾರೆ’ ಎಂದಿದ್ದಾರೆ.

Read More »

ಮುಸ್ಲಿಂ ಮಹಿಳೆಯರ ಕುರಿತು ವ್ಯಂಗ್ಯ ಮಾಡಿದ ಕಣ್ಮನ್

ಮೈಸೂರು: ಈ ಬಾರಿಯ ರಂಗೋತ್ಸವದ ಎಲ್ಲ ಕಾರ್ಯಕ್ರಮಗಳು ‘ತಾಯಿ’ ಪರಿಕಲ್ಪನೆಯಡಿ ನಡೆದಿತ್ತು. ‘ತಾಯಿ ವಿಷಯವನ್ನಾಧರಿಸಿ ರೂಪಿಸಲಾದ ರಂಗೋತ್ಸವದಲ್ಲಿ ಹೆಣ್ಣಿನ ಬಗ್ಗೆ ಈ ರೀತಿಯ ಮಾತುಗಳನ್ನಾಡಿದ್ದು ಹೇಗೆ’ ಎಂದು ಹಲವರು ಪ್ರಶ್ನಿಸಿದ್ದಾರೆ. ತುಚ್ಛವಾಗಿ ಮಾತನಾಡುವ ಈ ನೀಚ ತಾನು ಪೂಜೆ ಮಾಡುವ ಕೋದಂಡರಾಮ ದೇವಾಲಯದಲ್ಲಿ ರಾಮನ ಜೊತೆ ನಿಂತಿರುವ ಸೀತೆಯನ್ನು ಯಾವ ದೃಷ್ಟಿಯಿಂದ ನೋಡುತ್ತಿರಬಹುದು?’ ಎಂದು ಶಶಿಧರ ಹೆಮ್ಮಾಡಿ ಪ್ರಶ್ನಿಸಿದ್ದಾರೆ. ‘ಕಣ್ಣನ್‌ ಅವರು, ಹಿಜಾಬ್‌ ಹಾಕಿಕೊಂಡು ಕಾಲೇಜಿಗೆ ಬರುವ ಹೆಣ್ಣು ಮಕ್ಕಳ …

Read More »

ದಿ. ನಟ ಪುನೀತ್ ರಾಜ್ ಕುಮಾರ್ ಗೆ ಡಾಕ್ಟರೇಟ್ : ಅಶ್ವಿನಿ ಪ್ರಶಸ್ತಿ ಸ್ವೀಕರಿಸಿ ಭಾವುಕ

ಮೈಸೂರು: ನಟ ಪುನೀತ್ ರಾಜ್ ಕುಮಾರ್ ಗೆ ಮರಣೋತ್ತರವಾಗಿ ಗೌರವ ಡಾಕ್ಟರೇಟ್ ಘೋಷಣೆ ಮಾಡಲಾಗಿದ್ದು, ಇಂದು ಇಲ್ಲಿನ ಮೈಸೂರು ವಿಶ್ವವಿದ್ಯಾಲಯದಲ್ಲಿ ಪುನೀತ್ ಪತ್ನಿ ಅಶ್ವಿನಿಯವರು ಸ್ವೀಕರಿಸಿದ ಅವರು ಭಾವುಕರಾಗಿ ಕಣ್ಣೀರಿಟ್ಟರು. ಇಂದು ಮೈಸೂರಿನ ವಿಶ್ವವಿದ್ಯಾನಿಲಯದ ಆವರಣದಲ್ಲಿ ನಡೆದಂತ ಮೈಸೂರು ವಿಶ್ವವಿದ್ಯಾಲಯದ ಘಟಿಕೋತ್ಸವ ಕಾರ್ಯಕ್ರಮದಲ್ಲಿ, ನಟ ಪುನೀತ್ ರಾಜ್ ಕುಮಾರ್ ಗೆ ಮರಣೋತ್ತರವಾಗಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಪತ್ನಿ, ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು, ಮರಣೋತ್ತರವಾಗಿ ಪುನೀತ್ ರಾಜ್ …

Read More »

ಮಗು ನಿರೀಕ್ಷೆಯಲ್ಲಿದ್ದ ಗರ್ಭಿಣಿ ಸಾವುನಲ್ಲಿ ಅಂತ್ಯ

ಮೈಸೂರು : ಮಗುವಿನ ನೀರಿಕ್ಷೆಯಲ್ಲಿದ್ದ 7 ತಿಂಗಳ ಗರ್ಭಿಣಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಈಕೆ ಗಂಡನ ಮೇಲೆ ಕೊಲೆ ಆರೋಪ ಕೇಳಿಬಂದಿದೆ.ವಿಜಯನಗರ ನಿವಾಸಿ ಅಶ್ವಿನಿ (23) ಮೃತ ಗರ್ಭಿಣಿ. ತಾಲೂಕಿನ ಮೈದನಹಳ್ಳಿಯ ಪ್ರಮೋದ್ ಮತ್ತು ಅಶ್ವಿನಿ ಪರಸ್ಪರ ಪ್ರೀತಿಸಿ 2021ರ ಜೂನ್ 13ರಂದು ಮದುವೆಯಾಗಿದ್ದರು. 7 ತಿಂಗಳ ಗರ್ಭಿಣಿಯಾಗಿದ್ದ ಅಶ್ವಿನಿ ತಂದೆ ಮನೆಯಲ್ಲಿದ್ದಳು. ಮಾ.18ರ ರಾತ್ರಿ ಮಾವನ ಮನೆಯಿಂದ ತನ್ನ ಪತ್ನಿಯನ್ನ ಪ್ರಮೋದ್​ ಕರೆದೊಯ್ದಿದ್ದ. ಇದೀಗ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಮಗಳನ್ನು …

Read More »

ತಮ್ಮ ನ ಚಿತ್ರ ವೀಕ್ಷಿಸಿ ಕಣ್ಣೀರು ಇಟ್ಟ ಹ್ಯಾಟ್ರಿಕ್ ಹಿರೋ

ಮೈಸೂರು: ಪವರ್​ ಸ್ಟಾರ್​ ಪುನೀತ್ ರಾಜ್​ಕುಮಾರ್​ ಹುಟ್ಟುಹಬ್ಬದ ಅಂಗವಾಗಿ ಚೇಮ್ಸ್ ಚಿತ್ರ ದೇಶ ವಿದೇಶದಲ್ಲಿ ಬಿಡುಗಡೆಯಾಗಿದೆ. ಅಪ್ಪು ನಟನೆಯ ಕೊನೇ ಚಿತ್ರವಾಗಿರೋ ಜೇಮ್ಸ್ ಇಂದು ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆಕಂಡಿದೆ. ಬಹಳಷ್ಟು ಅಭಿಮಾನಿಗಳು ಚಿತ್ರ ನೋಡ್ತಿದ್ದಂತೆ ಪುನೀತ್​ ರಾಜ್​ಕುಮಾರ್​ ಅವರನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಇನ್ನು 2 ದಿನಗಳಿಂದ ಮೈಸೂರಿನ ಶಕ್ತಿಧಾಮದಲ್ಲಿ ಕಾಲಕಳೆಯುತ್ತಿರೋ ಶಿವರಾಜ್​ ಕುಮಾರ್ , ಇವತ್ತು ಮೈಸೂರು ಚಿತ್ರಮಂದಿರದಲ್ಲೇ ಜೇಮ್ಸ್​ ಚಿತ್ರ ನೋಡಿ ಕಣ್ಣೀರಿಟ್ಟಿದ್ದಾರೆ.

Read More »

ಮಾಜಿ‌‌‌ ಸಿಎಂಗೆ ವ್ಯಂಗ್ಯಮಾಡಿದ ಸಾ.ರಾ.ಮಹೇಶ್

ಮೈಸೂರು: ಕೆಆರ್ ನಗರದ ಜೆಡಿಎಸ್ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಶಾಸಕ ಸಾ.ರಾ.ಮಹೇಶ್ ವ್ಯಂಗ್ಯಮಾಡಿದರು. ಮಾತನಾಡಿದ ಅವರು, ಹೆಚ್ಚು ಸಾಲ ಮಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಭಾರತ ರತ್ನ ನೀಡಬೇಕು ಎಂದರು. ಹಲವರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು. ಯಾರು ಮಾಡದಷ್ಟು ಸಾಲವನ್ನು ಸಿದ್ದರಾಮಯ್ಯ ಮಾಡಿದ್ದಾರೆ. ಆದರೂ ಜೆಡಿಎಸ್ ಬಗ್ಗೆ ಅವರು ಮಾತನಾಡುತ್ತಾರೆಂದರು. ಇನ್ನು ಮುಂದೆಯಾದರೂ ಸಿದ್ದರಾಮಯ್ಯನವರು ಜೆಡಿಎಸ್ ಬಗ್ಗೆ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಹೇಳಿದರು.

Read More »

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ಡಾಕ್ಟರೇಟ್ ಪದವಿ

ಮೈಸೂರು: ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಗೆ ಮೈಸೂರು ವಿವಿಯಿಂದ ಗೌರವ ಡಾಕ್ಟರೇಟ್ ಘೋಷಣೆ ಮಾಡಲಾಗಿದೆ. ಸ್ವತಹ ಮೈಸೂರು ವಿವಿಯ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅವರು, ಬೆಂಗಳೂರಿನ ಸದಾಶಿವನಗರದಲ್ಲಿನ ಪುನೀತ್ ನಿವಾಸಕ್ಕೆ ತೆರಳಿ, ಪತ್ನಿ ಅಶ್ವಿನಿಗೆ ಕಾರ್ಯಕ್ರಮಕ್ಕೆ ಆಗಮಿಸುವಂತೆ ಆಹ್ವಾನ ನೀಡಿದ್ದಾರೆ. ಈ ವೇಳೆ ಅಂದು ಪುನೀತ್ ರಾಜ್ ಕುಮಾರ್ ಹೇಳಿದ್ದ ಮಾತನ್ನು ನೆನಪು ಮಾಡಿಕೊಂಡ ಅವರು, ಈ ಹಿಂದೆ ಹಲವು ಬಾರಿ ಅಪ್ಪುಗೆ ಗೌರವ ಡಾಕ್ಟರೇಟ್ ನೀಡುವ …

Read More »

ಕಾಂಗ್ರೆಸ್ ಪಾರ್ಟ್ ಟೈಮ್ ಪಕ್ಷ, ರಾಹುಲ್ ಗಾಂಧಿ ಪಾರ್ಟ್ ಟೈಂ ನಾಯಕ : ಶ್ರೀ ರಾಮುಲು ಟೀಕೆ

ಮೈಸೂರು:ಐದು ರಾಜ್ಯಗಳ ಚುನಾವಣೆ ಬಳಿಕ ಕಾಂಗ್ರೆಸ್ ನಾಯಕರು ನಮ್ಮ ಸಂಪರ್ಕದಲ್ಲಿದ್ದಾರೆ.ಕಾಂಗ್ರೆಸ್ ಪಕ್ಷದ ಕೆಲ ಶಾಸಕರು ನಮ್ಮ ಸಂಪರ್ಕದಲ್ಲಿದ್ದು, ಬಿಜೆಪಿಗೆ ಬರಲು ಸಿದ್ದರಾಗಿದ್ದಾರೆ ಎಂದು ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕಾಂಗ್ರೆಸ್ ಧೂಳೀಪಟವಾಗಿದೆ. ಈ ಅದೊಂದು ಪಾರ್ಟ್ ಟೈಮ್ ಪಕ್ಷವಾಗಿದೆ ಎಂದರು. ರಾಹುಲ್ ಗಾಂಧಿ ಪಾರ್ಟ್ ಟೈಂ ನಾಯಕರಾಗಿದ್ದಾರೆ. ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಮಹಾತ್ಮ ಗಾಂಧೀಜಿ ಅವರ ಹೆಸರು ಇಟ್ಟುಕೊಂಡು ಕಾಂಗ್ರೆಸ್ ನಲ್ಲಿ ಹಲವು ನಕಲಿ ಗಾಂಧಿಗಳು ರಾಜಕಾರಣ ಮಾಡಿದರು …

Read More »

ಸಿದ್ದರಾಮಯ್ಯ ಯನ್ನು ಹುಣಸೂರಿನಿಂದ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನನ್ನದು : ಜಿಟಿ ದೇವೇಗೌಡ

ಮೈಸೂರು: ಸಿದ್ದರಾಮಯ್ಯ ಅವರು ಮುಂದಿನ ಚುನಾವಣೆಯಲ್ಲಿ ಹುಣಸೂರಿನಲ್ಲಿ ಸ್ಪರ್ಧಿಸಬೇಕು. ಅವರನ್ನು ಹುಣಸೂರಿನಿಂದ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನನ್ನದು ಎಂದು ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಹೇಳಿದ್ದರು. ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿಟಿಡಿ,ಸಿದ್ದರಾಮಯ್ಯ ಎಲ್ಲಿ ಸ್ಪರ್ದಿಸಬೇಕು ಅನ್ನೋ ವಿಚಾರ ಚರ್ಚೆ ಆಗಿಲ್ಲ. ಹುಣಸೂರಿನಲ್ಲಿ ನಿಲ್ಲಿ ಎಂದು ಅವರಿಗೆ ಆಫರ್ ಇದೆ. ಮಂಜುನಾಥ್ ಗೆ MLC ಮಾಡಿ ಸಿದ್ದರಾಮಯ್ಯ ಚುನಾವಣೆಗೆ ನಿಲ್ಲಲಿ. ಅವರನ್ನು ಹುಣಸೂರಿನಿಂದ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನನ್ನದು. ನಾನು ಮಾತ್ರ …

Read More »