Breaking News

ಯಾದಗಿರಿ: ವಿದ್ಯಾರ್ಥಿನಿಯ ಜಾತಿ ತಿದ್ದಿದ್ದ ಪ್ರಭಾರ ಮುಖ್ಯಶಿಕ್ಷಕ ಅಮಾನತು!

ವಿದ್ಯಾರ್ಥಿನಿಯ ಶಾಲಾ ದಾಖಲಾತಿ ಜಾತಿ ಕಾಲಂ ತಿದ್ದಿದ್ದ ಆರೋಪದಡಿ ಸುರಪುರ ತಾಲ್ಲೂಕಿನ ಕರಡಕಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರಭಾರ ಮುಖ್ಯ ಶಿಕ್ಷಕ ಮನೋಹರ ಪತ್ತಾರ ಅವರನ್ನು ಡಿಡಿಪಿಐ ಅಮಾನತುಗೊಳಿಸಿದ್ದಾರೆ.ವಿದ್ಯಾರ್ಥಿನಿ ಪೋಷಕರಿಂದ ಹಣ ಪಡೆದ ಮನೋಹರ, ಜಾತಿ ಕಾಲಂ ವೈಟ್‌ನರ್ ಹಚ್ಚಿದ್ದು, ಮೂಲಜಾತಿ ಬದಲಿಗೆ ‘ತಳವಾರ’ ಎಂದು ಬರೆದಿದ್ದರು ಎಂದು ದೂರು ದಾಖಲಾಗಿತ್ತು.ಈ ಬಗ್ಗೆ ಸುರಪುರ ಬಿಇಒ ಅವರ ವರದಿ ಆಧರಿಸಿ ಕ್ರಮವಹಿಸಲಾಗಿದೆ ಎಂದು ಡಿಡಿಪಿಐ ಚನ್ನಬಸಪ್ಪ ಮುಧೋಳ ಹೇಳಿದ್ದಾರೆ.

Share News

About BigTv News

Check Also

ಬೆಂಗಳೂರು | ಸಿಕ್ಕವರ ಮೇಲೆ ಮಚ್ಚು ಬೀಸಿದ ದುಷ್ಕರ್ಮಿಗಳು: ಎಂಟು ಮಂದಿಗೆ ಗಾಯ

ಬೆಂಗಳೂರು: ಮಾಸ್ಕ್ ಧರಿಸಿ ನಾಲ್ಕು ಬೈಕ್‌ಗಳಲ್ಲಿ ಬಂದಿದ್ದ ಎಂಟು ಮಂದಿ ದುಷ್ಕರ್ಮಿಗಳು ಉತ್ತರಹಳ್ಳಿ ಮುಖ್ಯರಸ್ತೆ ಹಾಗೂ ಅರಹಳ್ಳಿ ಗೇಟ್ ಬಳಿ …

Leave a Reply

Your email address will not be published. Required fields are marked *