ಮೈಸೂರು : ಮಗುವಿನ ನೀರಿಕ್ಷೆಯಲ್ಲಿದ್ದ 7 ತಿಂಗಳ ಗರ್ಭಿಣಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಈಕೆ ಗಂಡನ ಮೇಲೆ ಕೊಲೆ ಆರೋಪ ಕೇಳಿಬಂದಿದೆ.
ವಿಜಯನಗರ ನಿವಾಸಿ ಅಶ್ವಿನಿ (23) ಮೃತ ಗರ್ಭಿಣಿ.
ತಾಲೂಕಿನ ಮೈದನಹಳ್ಳಿಯ ಪ್ರಮೋದ್ ಮತ್ತು ಅಶ್ವಿನಿ ಪರಸ್ಪರ ಪ್ರೀತಿಸಿ 2021ರ ಜೂನ್ 13ರಂದು ಮದುವೆಯಾಗಿದ್ದರು. 7 ತಿಂಗಳ ಗರ್ಭಿಣಿಯಾಗಿದ್ದ ಅಶ್ವಿನಿ ತಂದೆ ಮನೆಯಲ್ಲಿದ್ದಳು. ಮಾ.18ರ ರಾತ್ರಿ ಮಾವನ ಮನೆಯಿಂದ ತನ್ನ ಪತ್ನಿಯನ್ನ ಪ್ರಮೋದ್ ಕರೆದೊಯ್ದಿದ್ದ. ಇದೀಗ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.
ಮಗಳನ್ನು ಅಳಿಯನೇ ಕೆರೆಗೆ ತಳ್ಳಿ ಕೊಲೆ ಮಾಡಿದ್ದಾನೆ. ಇಬ್ಬರೂ ಪ್ರೀತಿಸಿ ವಿವಾಹವಾಗಿದ್ದರು. ಇದೀಗ ಜಾತಿ ನೆಪದಲ್ಲಿ ನಿಂದಿಸಿ ಕೊಲೆ ಮಾಡಿದ್ದಾನೆ ಎಂದು ಮೃತಳ ಪೋಷಕರು ದೂರಿದ್ದಾರೆ. ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

