BigTv News
May 12, 2025
Breaking News, Crime
ಶ್ರೀಲಂಕಾದಲ್ಲಿ ಭಾನುವಾರ ಬೆಳಿಗ್ಗೆ ಸರ್ಕಾರಿ ಬಸ್ ಬೆಟ್ಟದಿಂದ ಜಾರಿ ಬಂಡೆಯಿಂದ ಬಿದ್ದ ಪರಿಣಾಮ ಕನಿಷ್ಠ 21 ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಬಸ್ ದಕ್ಷಿಣದ ಯಾತ್ರಾ ಪಟ್ಟಣವಾದ ಕಾತರಗಾಮದಿಂದ ವಾಯುವ್ಯದ ಕುರುನಾಗಾಲಕ್ಕೆ 75 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು.ಅಪಘಾತದಲ್ಲಿ 35 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಇಬ್ಬರು ಮಕ್ಕಳು ಸೇರಿದಂತೆ 15 ಜನರ ಸ್ಥಿತಿ ಗಂಭೀರವಾಗಿದೆ.ಅಧಿಕಾರಿಗಳು ಗಾಯಾಳುಗಳನ್ನು ನುವಾರಾ ಎಲಿಯಾ, ಕಂಬಲೈ ಮತ್ತು ನವಲಪಟ್ಟಿಯ ಆಸ್ಪತ್ರೆಗಳಿಗೆ ಸಾಗಿಸಿದ್ದಾರೆ. ಗಂಭೀರ ಪ್ರಕರಣಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ನುವಾರಾ ಎಲಿಯಾ …
Read More »
BigTv News
May 12, 2025
Breaking News, Crime
ಬೋವಿಕ್ಕಾನ ತೇಜಸ್ ಹೌಸಿಂಗ್ ಕಾಲೊಮಿ ನಿವಾಸಿ ಚೋಮು (80) ಎಂಬುವರು ಮನೆ ಬಳಿಯ ಮಾವಿನಮರದ ಗೆಲ್ಲಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನೊಂದು ಘಟನೆಯಲ್ಲಿ ಕಾರಡ್ಕ ಶಾಂತಿನಗರ ನಿವಾಸಿ ಸಿ.ಎಚ್.ಶಶಿ (58) ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಮನೆಯಲ್ಲಿ ಒಬ್ಬಂಟಿಯಾಗಿದ್ದರು. ಸಿಪಿಎಂ ಶಾಖಾ ಕಾರ್ಯದರ್ಶಿಯಾಗಿದ್ದರು.
Read More »
BigTv News
May 12, 2025
Breaking News, Crime
ಶಿರಿಯ ಒಳಯಂ ಎಂಬಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 12.087 ಗ್ರಾಂ ಎಂಡಿಎಂಎಯನ್ನು ಅಬಕಾರಿ ದಳ ಪತ್ತೆಮಾಡಿದೆ.ಇನ್ನೊಂದು ಪ್ರಕರಣದಲ್ಲಿ ಕುಂಬಳೆ ಬದ್ರಿಯಾನಗರದಲ್ಲಿ 10 ಗ್ರಾಂ ಗಾಂಜಾ ಸಹಿತ ಸ್ಥಳೀಯ ನೀರಾಳಿ ನಿವಾಸಿ ಅಫ್ಝಲ್ (28) ಎಂಬಾತನನ್ನು ಅಬಕಾರಿ ದಳ ಬಂಧಿಸಿದೆ.
Read More »
BigTv News
May 12, 2025
Breaking News, Crime
ಚೆರುವತ್ತೂರು ಮಟ್ಟಲಾಯಿ ಎಂಬಲ್ಲಿ ಸೋಮವಾರ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ವೇಳೆ ಗುಡ್ಡದಿಂದ ಮಣ್ಣು ಕುಸಿದು ವ್ಯಕ್ತಿ ಮೃತಪಟ್ಟಿದ್ದು, ಇಬ್ಬರು ಗಂಭೀರ ಗಾಯಗೊಂಡಿದ್ದಾರೆ.ನಿರ್ಮಾಣಗೊಳ್ಳುತ್ತಿದ್ದ ಮನೆಯ ಮೊದಲ ಅಂತಸ್ತಿನಿಂದ ಬಿದ್ದು, ಮೇಸ್ತ್ರಿ ಮೃತಪಟ್ಟಿದ್ದಾರೆ. ಚಿನ್ನಮೊಗರು ಎಂಬಲ್ಲಿ ಘಟನೆ ನಡೆದಿದ್ದು, ಜೋಡುಕಲ್ಲು ನಿವಾಸಿ ಶಶಿಧರ (32) ಮೃತಪಟ್ಟವರು.ಗಂಭೀರ ಗಾಯಗೊಂಡಿದ್ದ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಅವರು ಮೃತಪಟ್ಟಿದ್ದರು. ಅವರಿಗೆ ಪತ್ನಿ ಇದ್ದಾರೆ.
Read More »
BigTv News
May 12, 2025
Breaking News, Crime
ರಾಯಚೂರಿನಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದ್ದು, 4 ವರ್ಷದ ಬಾಲಕಿಯ ಮೇಲೆ ಸಂಬಂಧಿಕ ಯುವಕನೇ ಅತ್ಯಾಚಾರ ಎಸಗಿದ್ದಾನೆ. ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ಘಟನೆ ನಡೆದಿದೆ. ಮನೆಯ ಬಳಿ ಆಟವಾಡುತ್ತಿದ್ದ ಬಾಲಕಿ, ಆರೋಪಿಯ ಮನೆಯೊಳಗೆ ಹೋಗಿದ್ದಾಳೆ. ಇದನ್ನೇ ದುರುಪಯೋಗಪಡಿಸಿಕೊಂಡ ದುರುಳ ಯುವಕ, ಬಾಲಕಿಗೆ 5 ರೂಪಾಯಿ ಹಣ ನೀಡಿ, ಪುಸಲಾಯಿಸಿ ಅತ್ಯಾಚಾರವೆಸಗಿದ್ದಾನೆ.ಮರುದಿನ ಬಾಲಕಿಯ ಆರೋಗ್ಯದಲ್ಲಿ ಏರುಪೇರಾಗಿದೆ. ತಕ್ಷಣ ಪೋಷಕರು ಬಾಲಕಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಈ ಸಂದರ್ಭದಲ್ಲಿ ಘಟನೆಯ ಬಗ್ಗೆ …
Read More »
BigTv News
May 12, 2025
Breaking News, Crime
ಆಸ್ತಿಗಾಗಿ ಇಬ್ಬರನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ. ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲ್ಲೂಕಿನ ನಂದವಾಡಗಿ ಗ್ರಾಮದಲ್ಲಿ ಆಸ್ತಿ ವಿವಾದಕ್ಕೆ ವ್ಯಕ್ತಿಯೊಬ್ಬ ತಾಯಿ, ಮಗನನ್ನೇ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.ತಾಯಿ ಸಂಗಮ್ಮ ಗೋನಾಳ (45), ಮಗ ಸೋಮಪ್ಪ (26) ಎಂಬವರನ್ನು ಕೊಡಲಿಯಿಂದ ಕೊಚ್ಚಿ ಸಣ್ಣ ಸೋಮಪ್ಪ ಗೋನಾಳ ಎಂಬಾತ ಹತ್ಯೆ ಮಾಡಿದ್ದಾನೆ. ಸ್ಥಳಕ್ಕೆ ಇಳಕಲ್ ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Read More »
BigTv News
May 12, 2025
Breaking News, Crime
ಬ್ರೇಕ್ ಫೇಲ್ ಆಗಿ ಚಾಲಕನ ನಿಯಂತ್ರಣ ತಪ್ಪಿದ ಶಾಲಾ ಬಸ್ಸೊಂದು ಸಿಗ್ನಲ್ ನಲ್ಲಿ ನಿಂತ್ತಿದ್ದ ವಾಹನಗಳಿಗೆ ಡಿಕ್ಕಿ ಹೊಡೆದು ಓರ್ವ ಯುವ ವೈದ್ಯೆ ಮೃತಪಟ್ಟು ಆರು ಮಂದಿ ಗಾಯಗೊಂಡಿರುವ ಘಟನೆ ಭೋಪಾಲ್ ನಲ್ಲಿ ಸಂಭವಿಸಿದೆ.ಸಾವನ್ನಪ್ಪಿದ ಮಹಿಳೆಯನ್ನು ಬಿಎಎಂಎಸ್ ವೈದ್ಯೆ ಆಯೇಷಾ ಖಾನ್ ಎಂದು ಗುರುತಿಸಲಾಗಿದೆ. ಮುಲ್ಲಾ ಕಾಲೋನಿಯ ನಿವಾಸಿ ಆಯೇಷಾ ಜೆಪಿ ಆಸ್ಪತ್ರೆಯಲ್ಲಿ ಇಂಟರ್ನ್‌ಶಿಪ್ ಮಾಡುತ್ತಿದ್ದರು. ಅಲ್ಲಿಂದ ಮನೆಗೆ ಹಿಂತಿರುಗುವಾಗ ಅಪಘಾತಕ್ಕೀಡಾಗಿದ್ದಾರೆ. ಇನ್ನು ಅಪಘಾತ ನಡೆಯುತ್ತಿದ್ದಂತೆ ಶಾಲಾ ಬಸ್ಸಿನ ಚಾಲಕ …
Read More »
BigTv News
May 12, 2025
Breaking News, Crime
ಮಧ್ಯರಾತ್ರಿ ಜಮ್ಮು ವಿಭಾಗದ ಆರ್‌ಎಸ್ ಪುರದಲ್ಲಿ ಪಾಕಿಸ್ತಾನ ರೇಂಜರ್‌ಗಳು ನಡೆಸಿದ ಗಡಿಯಾಚೆಗಿನ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಗಡಿ ಭದ್ರತಾ ಪಡೆಗಳ ಕಾನ್‌ಸ್ಟೆಬಲ್ ದೀಪಕ್ ಚಿಂಗಖಮ್ ಮೃತಪಟ್ಟಿದ್ದಾರೆ.ಕಾರ್ಯನಿರ್ವಹಣೆಯಲ್ಲಿ ಕಾನ್‌ಸ್ಟೆಬಲ್ ದೀಪಕ್ ಚಿಂಗಖಮ್ ಮಾಡಿದ ಅತ್ಯುನ್ನತ ತ್ಯಾಗಕ್ಕೆ ಬಿಎಸ್‌ಎಫ್ ಡಿಜಿ ಮತ್ತು ಎಲ್ಲಾ ಶ್ರೇಣಿಗಳು ನಮಿಸುತ್ತವೆ. ಜಮ್ಮುವಿನ ಆರ್‌ಎಸ್ ಪುರ ಪ್ರದೇಶದಲ್ಲಿ ಅಂತರರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನ ನಡೆಸಿದ ಗಡಿಯಾಚೆಗಿನ ಗುಂಡಿನ ದಾಳಿಯಲ್ಲಿ ಅವರು ಗಾಯಗೊಂಡರು. ಇಂದು, ಮೇ 11, 2025 ರಂದು ಅವರು …
Read More »
BigTv News
May 12, 2025
Breaking News, Crime
ಬ್ರೇಕಪ್ ಆಗಿದ್ದಕ್ಕೆ ಬೇಸರಗೊಂಡ ಪ್ರೇಯಸಿ ತನ್ನ ಪ್ರಿಯಕರನ ಕೈಬೆರಳನ್ನೇ ಕತ್ತರಿಸಿ ಫ್ರಿಜ್ನೊಳಗೆ ಇರಿಸಿದ್ದ ಘಟನೆ ಜಪಾನ್ನಲ್ಲಿ ನಡೆದಿದೆ. ಈ ಯುವತಿ ಪ್ರಿಯಕರನನ್ನು ತುಂಬಾ ಪ್ರೀತಿಸುತ್ತಿದ್ದಳು. ತಾನು ಉಂಗುರು ಹಾಕಬೇಕಿದ್ದ ಬೆರಳಿಗೆ ಮತ್ಯಾರೋ ಹಾಕಬಹುದು ಎನ್ನುವ ಕೋಪದಲ್ಲಿ ಆಕೆ ತನ್ನ ಹುಡುಗನ ಉಂಗುರದ ಬೆರಳನ್ನೇ ಕತ್ತರಿಸಿ ಫ್ರಿಜ್ನಲ್ಲಿಟ್ಟಿದ್ದಳು ಎಂದು ಹೇಳಲಾಗಿದೆ.ಜಪಾನ್‌ನ ಒಸಾಕಾದಲ್ಲಿ ಈ ಘಟನೆ ನಡೆದಿದ್ದು, 21 ವರ್ಷದ ವ್ಯಕ್ತಿ ಸ್ವತಃ ಪೊಲೀಸರಿಗೆ ಕರೆ ಮಾಡಿ ತನಗೆ ಆದ ಈ ಭಯಾನಕ …
Read More »
BigTv News
May 12, 2025
Breaking News, Crime
ಪಹಲ್ಗಾಮ್ ಉಗ್ರರ ದಾಳಿಗೆ ಪ್ರತಿಕಾರವಾಗಿ ಭಾರತ ಪಾಕಿಸ್ತಾನದ ಮೇಲೆ ದಾಳಿ ನಡೆಸಿ ಉಗ್ರರ ನೆಲೆಗಳನ್ನು ನಾಶ ಮಾಡಿದೆ. ಅಲ್ಲದೆ ನೂರಕ್ಕೂ ಅಧಿಕ ಉಗ್ರರನ್ನು ಹತ್ಯೆಗೈದಿದೆ. ಇದರ ಮಧ್ಯ ಮಸೀದಿಯಲ್ಲಿದ್ದ ಕುರಾನ್ ಪುಸ್ತಕ ಕದ್ದೊಯ್ದು ಸುಟ್ಟು ಹಾಕಿರುವ ಘಟನೆ ಬೆಳಗಾವಿ ತಾಲೂಕಿನ ಸಂತಿಬಸ್ತವಾಡ ಗ್ರಾಮದಲ್ಲಿ ನಡೆದಿದೆ.ಬೆಳಗಾವಿ ತಾಲೂಕಿನ ಸಂತಿಬಸ್ತವಾಡ ಗ್ರಾಮದ ನಿರ್ಮಾಣ ಹಂತದ ಮಸೀದಿಯ ಕೆಳಮಹಡಿಯಲ್ಲಿದ್ದ ಕುರಾನ್ ಪುಸ್ತಕವನ್ನು ಕದ್ದೊಯ್ದು ಸುಟ್ಟು ಹಾಕಲಾಗಿದೆ. ಇಂದು ಪ್ರಾರ್ಥನೆಗೆಂದು ಬಂದಾಗ ಕುರಾನ್, ಹದೀಸ್ ಇಲ್ಲದಿರುವುದು …
Read More »