Breaking News

ಅಪರಾಧ

Featured Video Play Icon

ಬಿವ್ಹಿಬಿ ಕಾಲೇಜಿನಿಂದ ಸಿಐಡಿ ಅಧಿಕಾರಿಗಳ ನಿರ್ಗಮನ: ಮೂರು ಗಂಟೆಗಳ ಕಾಲ ಕಾರ್ಯಾಚರಣೆ…

ಹುಬ್ಬಳ್ಳಿ: ನೇಹಾ ಹಿರೇಮಠ ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ಫಯಾಝ್ ನನ್ನು ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದ ಬೆನ್ನಲ್ಲೇ ಹುಬ್ಬಳ್ಳಿಯ ಬಿವ್ಹಿಬಿ ಕಾಲೇಜಿಗೆ ಆಗಮಿಸಿ ಸ್ಥಳ ಮಹಜರು ಮಾಡಿಕೊಂಡು ಹೊರಟಿದ್ದಾರೆ… ಸ್ಥಳ ಮಹಜರು ಮುಗಿಸಿ ಸಿಐಡಿ ಅಧಿಕಾರಿಗಳು ಬಿವ್ಹಿಬಿಯಿಂದ ನಿರ್ಗಮಿಸಿದ್ದು, ಧಾರವಾಡ ರಸ್ತೆಯ ಮಾರ್ಗವಾಗಿ ಹೊರಟಿದ್ದಾರೆ. ಕಳೆದ 3ಗಂಟೆಗಳ ಕಾಲ ಕಾಲೇಜಿನ ಆವರಣದಲ್ಲಿ ಸ್ಥಳ ಮಹಜರು ಮಾಡಿದ್ದಾರೆ.ಇನ್ನೂ ಸಾಕಷ್ಟು ಮಾಹಿತಿಯನ್ನು ಕಲೆ ಹಾಕಿರುವ ಅಧಿಕಾರಿಗಳು ನಿರಂತರ ಮೂರು ಗಂಟೆಗಳ ಕಾಲ ಸ್ಥಳ …

Read More »
Featured Video Play Icon

ನೇಹಾ ಕೊಲೆ‌ ಪ್ರಕರಣ: ಕೊಲೆ ನಡೆದ ಸ್ಥಳದಲ್ಲಿ ಆರೋಪಿ ಫಯಾಜ್ ಸಮುಖದಲ್ಲಿ ಸ್ಥಳ ಮಹಜರು..

ಹುಬ್ಬಳ್ಳಿ.. ನೇಹಾ ಕೊಲೆ ಪ್ರಕರಣ ವಿಚಾರವಾಗಿ ತನಿಖೆ ಚುರುಕು ಪಡೆದಿದ್ದು ನೇಹಾ ಕೊಲೆ ಆರೋಪಿ ಫಯಾಜ್ ನನ್ನು ಸಿಐಡಿ ಪೊಲೀಸರು ಆರು ದಿನಗಳ ಕಾಲ ವಶಕ್ಕೆ ‌ಪಡೆದಿದ್ದು, ಇಂದು ಕೊಲೆ ನಡೆದ ಬಿವಿಬಿ ಕಾಲೇಜು ಆವರಣಕ್ಕೆ ಕರೆದುಕ್ಕೊಂಡು ಬಂದ ಸಿಐಡಿ ಅಧಿಕಾರಿಗಳು ಮಹಜರು ಮಾಡಿದರು.ಧಾರವಾಡ ಕೇಂದ್ರ ಕಾರಾಗೃಹದಿಂದ ಆರೋಗ್ಯ ತಪಾಸಣೆ ಮಾಡಿಸಿದ ಸಿಐಡಿ ಅಧಿಕಾರಿಗಳು ನೇರವಾಗಿ ಧಾರವಾಡದಿಂದ ಹುಬ್ಬಳ್ಳಿಯ ಬಿವಿಬಿ ಇಂಜಿನಿಯರಿಂದ ಕಾಲೇಜಿಗೆ ಕರೆತಂದು ಸ್ಥಳ ಮಹಜರು ಮಾಡಿದರು.‌ ಹುಬ್ಬಳ್ಳಿಯ …

Read More »
Featured Video Play Icon

ನೇಹಾ ಹಿರೇಮಠ ಮನೆಗೆ ಸುರ್ಜೆವಾಲಾ ಭೇಟಿ: ಸಾಂತ್ವನ ಹೇಳಿದ ಕಾಂಗ್ರೆಸ್ ಮುಖಂಡರು..

ಹುಬ್ಬಳ್ಳಿ: ಮೊನ್ನೆಯಷ್ಟೇ ಹುಬ್ಬಳ್ಳಿಯ ಬಿವ್ಹಿಬಿ ಕಾಲೇಜಿನಲ್ಲಿ ಕೊಲೆಯಾದ ನೇಹಾ ಹಿರೇಮಠ ಮನೆಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ರಣಧೀಪ್ ಸುರ್ಜೆವಾಲಾ ಭೇಟಿ ನೀಡಿ ಮೃತಳ ಪಾಲಕರಿಗೆ ಸಾಂತ್ವನ ಹೇಳಿದರು.. ಬಿಡನಾಳದಲ್ಲಿರುವ ನೇಹಾ ಹಿರೇಮಠ ನಿವಾಸಕ್ಕೆ ಆಗಮಿಸಿ ಸುರ್ಜೆವಾಲಾ ಅವರು ನಿರಂಜನಯ್ಯ ಹಿರೇಮಠ ಹಾಗೂ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು.ಇನ್ನೂ ಸಚಿವರಾದ ಸಂತೋಷ ಲಾಡ್, ಎಚ್.ಕೆ.ಪಾಟೀಲ, ಲೋಕಸಭಾ ಅಭ್ಯರ್ಥಿ ವಿನೋದ ಅಸೂಟಿ ಸೇರಿದಂತೆ ಕಾಂಗ್ರೆಸ್ ಮುಖಂಡರು ಸಾಂತ್ವನ ಹೇಳಿದರು.

Read More »

ಹುಬ್ಬಳ್ಳಿ ಬ್ರೇಕಿಂಗ್:ಆರೋಪಿ ಫಯಾಝ್ 6 ದಿನ ಸಿಐಡಿ ವಶಕ್ಕೆ: ನ್ಯಾಯಾಲಯ ಆದೇಶ..

ಹುಬ್ಬಳ್ಳಿ: ನೇಹಾ ಹಿರೇಮಠ ಕೊಲೆ ಮಾಡಿರುವ ಆರೋಪಿಯನ್ನು ಆರು ದಿನಗಳ ಕಾಲ ಸಿಐಡಿ ವಶಕ್ಕೆ ನೀಡಿ ಒಂದನೇ ಅಧಿಕ ದಿವಾಣಿ ಹಾಗೂ ಜೆ.ಎಂ.ಎಫ್.ಸಿ ಹುಬ್ಬಳ್ಳಿಯ ನ್ಯಾಯಾಲಯ ಆದೇಶ ಹೊರಡಿಸಿದೆ.ಹೌದು.. ಬಿವ್ಹಿಬಿ ಕಾಲೇಜಿನಲ್ಲಿಯೇ ವಿದ್ಯಾರ್ಥಿನಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಿದ್ದ ವಿದ್ಯಾನಗರದ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ರಾಜ್ಯದಲ್ಲಿ ಸಾಕಷ್ಟು ಒತ್ತಡ ಬಂದ ಬೆನ್ನಲ್ಲೇ ರಾಜ್ಯ ಸರ್ಕಾರ ಪ್ರಕರಣವನ್ನು ಸಿಐಡಿಗೆ ಒಪ್ಪಿಸಿತ್ತು. ಈಗ ನ್ಯಾಯಾಲಯವು ಆರು ದಿನಗಳ ಕಾಲ …

Read More »
Featured Video Play Icon

ಬಿವ್ಹಿಬಿ ಕಾಲೇಜಿನ ಮುಂದೆ ಎನ್ ಎಸ್ ಯು ಐ ಪ್ರತಿಭಟನೆ: ಬಿಸಿಲಿನಲ್ಲಿಯೂ ಹೆಚ್ಚಿದ ಆಕ್ರೋಶ…

ಹುಬ್ಬಳ್ಳಿ: ಪ್ರತಿಷ್ಠಿತ ಕೆಎಲ್ಇ ಸಂಸ್ಥೆಯ ಬಿವ್ಹಿಬಿ ಕಾಲೇಜಿನಲ್ಲಿ ನಡೆದ ನೇಹಾ ಹಿರೇಮಠ ಕೊಲೆ ಪ್ರಕರಣ ಖಂಡಿಸಿ ಎನ್ ಎಸ್ ಯು ಐ ಸಂಘಟನೆಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು. ಸಾವಿರಾರು ಕಾರ್ಯಕರ್ತರು ಭಾಗವಹಿಸಿ ನೇಹಾ ಹಿರೇಮಠ ಸಾವಿಗೆ ನ್ಯಾಯ ಸಿಗುವಂತೆ ಒತ್ತಾಯಿಸಿದರು. ಹುಬ್ಬಳ್ಳಿಯ ಬಿವ್ಹಿಬಿ ಕಾಲೇಜಿನ ಮುಂದೆ ಬೃಹತ್ ಪ್ರತಿಭಟನೆ ನಡೆಸಿದ್ದು, ಆರೋಪಿ ಫಯಾಜ್ ನನ್ನು ಗಲ್ಲಿಗೇರಸಲು ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು.ಇನ್ನೂ ಬೇಕೆ ಬೇಕು.. ನ್ಯಾಯಾ ಬೇಕು ಎಂದು ಕಾರ್ಯಕರ್ತರು ಸುಡುವ …

Read More »

ನಕಲಿ ಸಿಐಡಿ ಅಧಿಕಾರಿಗಳನ್ನು ಬಂಧನ ಮಾಡಿದ ಹಳೇ ಹುಬ್ಬಳ್ಳಿ ಪೊಲೀಸರು..

ಹುಬ್ಬಳ್ಳಿ: ಈಗಾಗಲೇ ನೇಹಾ ಕೊಲೆ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದ್ದು, ಎಸ್ಪಿ ವೆಂಕಟೇಶ ನೇತೃತ್ವದ ತಂಡ ಸೋಮವಾರ ರಾತ್ರಿ ಹುಬ್ಬಳ್ಳಿಗೆ ಬಂದು ವಾಸ್ತವ್ಯ ಮಾಡಿದೆ. ಈ ನಡುವೆ ಹಳೇಹುಬ್ಬಳ್ಳಿ ಪೊಲೀಸರು ಸಿಐಡಿ ಕ್ರೈಂ ಬ್ರ್ಯಾಂಚ್’ನ ಅಧಿಕಾರಿಗಳು ಎಂದು ಬಂದಿದ್ದ ಮೂವರು ನಕಲಿ ಸಿಐಡಿ ಅಧಿಕಾರಿಗಳನ್ನು ಬಂಧಿಸಿದ್ದಾರೆ. ಇತ್ತಿಚೆಗೆ ಹುಬ್ಬಳ್ಳಿ ನಗರದಲ್ಲಿ ಮೂರು ಜನರು ಸಿಐಡಿ ಕ್ರೈಂ ಬ್ರ್ಯಾಂಚ್ ಪೊಲೀಸರು ಎಂದು ಸುಳ್ಳು ಹೇಳಿಕೊಂಡು, ಚೈತನ್ಯ ನಗರದ ನಿವಾಸಿ …

Read More »
Featured Video Play Icon

ನೇಹಾ ಕೊಲೆ ಖಂಡಿಸಿ ಬಿಜೆಪಿ ಮಹಿಳಾ ಮೋರ್ಚಾ ಪ್ರತಿಭಟನೆ; ನ್ಯಾಯಕ್ಕಾಗಿ ಹೋರಾಟ..!

ಹುಬ್ಬಳ್ಳಿ: ಹುಬ್ಬಳ್ಳಿಯ ಪ್ರತಿಷ್ಠಿತ ಕೆಎಲ್ಇ ಸಂಸ್ಥೆಯ ಬಿವ್ಹಿಬಿ ಕಾಲೇಜಿನಲ್ಲಿಯೇ ಮುಸ್ಲಿಂ ಯುವಕನೊಬ್ಬ ಹಿಂದೂ ಯುವತಿಯನ್ನು ಕೊಲೆ ಮಾಡಿರುವುದನ್ನು ಖಂಡಿಸಿ ಹುಬ್ಬಳ್ಳಿಯಲ್ಲಿ ಬಿಜೆಪಿ ಮಹಿಳಾ ಮೋರ್ಚಾದಿಂದ ಮೇಣದ ಬತ್ತಿ ಬೆಳಗಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಲಾಯಿತು.ಹೌದು.. ನೇಹಾ ಹಿರೇಮಠ ಕೊಲೆ‌ ಪ್ರಕರಣ ಹಿನ್ನೆಲೆಯಲ್ಲಿಬಿಜೆಪಿ ಮಹಿಳಾ ಮೂರ್ಚಾ ವತಿಯಿಂದ ಪ್ರತಿಭಟನೆ ವಿನೂತನ ಪ್ರತಿಭಟನೆ ನಡೆಸಿ ನೇಹಾ ಆತ್ಮಕ್ಕೆ ಶಾಂತಿ‌ ಕೋರಲಾಯಿತು. ಅಲ್ಲದೇ ಆರೋಪಿ ಫಯಾಝ್ ಗೆ ಗಲ್ಲು ಶಿಕ್ಷೆ ವಿಧಿಸುವಂತೆ ಆಗ್ರಹಿಸಿದ್ದು, ಚೆನ್ನಮ್ಮ …

Read More »
Featured Video Play Icon

ನೇಹಾ ಕೊಲೆ ಪ್ರಕರಣ ಸಿಐಡಿಗೆ: ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ ನಿರಂಜನಯ್ಯ ಹಿರೇಮಠ…

ಹುಬ್ಬಳ್ಳಿ:ನೇಹಾ ಹತ್ಯೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ ಸರಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ನಮ್ಮ‌ ಕುಟುಂಬದ ಹಾಗೂ ಎಲ್ಲ ಹೋರಾಟಗಾರರ ಒತ್ತಡಕ್ಕೆ ಮಣಿದು ಸರ್ಕಾರ ಇಂತಹದೊಂದು ನಿರ್ಧಾರ ತೆಗೆದುಕೊಂಡಿರುವುದಕ್ಕೆ ಸಿಎಂ ಸಿದ್ಧರಾಮಯ್ಯನವರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದು ಮೃತಳ ತಂದೆ ನಿರಂಜನಯ್ಯ ಹಿರೇಮಠ ಹೇಳಿದರು.ಸರ್ಕಾರ ನೇಹಾಳ ಕೊಲೆಯನ್ನು ಸಿಐಡಿಗೆ ಒಪ್ಪಿಸಿದ ಬೆನ್ನಲ್ಲೇ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಸರಕಾರದ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಡಿಸಿಎಂ ನನ್ನ ಜೊತೆ ದೂರವಾಣಿ ಮೂಲಕ ಮಾತನಾಡಿದ್ದರು. ಸಿಐಡಿ ತನಿಖೆಗೆ …

Read More »

ಸಿಐಡಿ ತನಿಖೆ ಕಣ್ಣೊರೆಸುವ ತಂತ್ರ: ರಾಜ್ಯ ಸರ್ಕಾರದ ವಿರುದ್ಧ ಈಶ್ವರಪ್ಪ ವಾಗ್ದಾಳಿ..

ಹುಬ್ಬಳ್ಳಿ: ಸಿಐಡಿ ತನಿಖೆಯಿಂದ ಪರಿಹಾರ ಸಿಗಲ್ಲ, ತಕ್ಷಣ ಸಿಬಿಐ ತನಿಖೆಗೆ ಕೊಡಿ. ಕಣ್ಣೋರೆಸುವ ತಂತ್ರ ಮಾಡಬೇಡಿ. ರಾಜ್ಯ ಸರಕಾರ ತಪ್ಪಿತಸ್ಥರಾಗೋತ್ತೇವೆ ಎಂದು ಕಣ್ಣೋರೆಸುವ ತಂತ್ರ ಮಾಡಿದೆ ಹೀಗಾಗಿ ಸಿಐಡಿಗೆ ಕೊಟ್ಟಿದೆ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದರು.ನೇಹಾ ಹಿರೇಮಠ ಮನೆಗೆ ಭೇಟಿ ನೀಡಿದ ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ಅವರು,‌ನೇಹಾ ಹಿರೇಮಠ ಕೊಲೆ ಮುಸಲ್ಮಾನ ಗೂಂಡಾನಿಂದ ಆಗಿದ್ದನ್ನ‌ಉ ರಾಜ್ಯ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು. …

Read More »

ಮುಸ್ಲಿಂ ವ್ಯಾಪಾರಸ್ಥರಿಂದ ಹುಬ್ಬಳ್ಳಿ ಬಂದ್: ಬಿಕೋ ಎನ್ನುತ್ತಿದೆ ಹುಬ್ಬಳ್ಳಿಯ ಮಾರ್ಕೆಟ್..!

ಹುಬ್ಬಳ್ಳಿ: ನೇಹಾ ಹತ್ಯೆ ಖಂಡಿಸಿ ವಾಣಿಜ್ಯನಗರಿ ಹುಬ್ಬಳ್ಳಿಯ ಬಂದ್‌ಗೆ ಕರೆ ನೀಡಿರುವ ಬೆನ್ನಲ್ಲೇ ಮುಸ್ಲಿಂ ವ್ಯಾಪಾರ-ವಹಿವಾಟು ಸಂಪೂರ್ಣ ಬಂದ್ ಆಗಿದ್ದು, ಹುಬ್ಬಳ್ಳಿಯ ಶಾಹ ಬಜಾರ್ ಮತ್ತು ನೂರಾನಿ ಮಾರ್ಕೆಟ್ ವ್ಯಾಪಾರಸ್ಥರಿಂದ ಬಂದ್‌ಗೆ ಬೆಂಬಲ ನೀಡಲಾಯಿತು.ಹೌದು.. ಅಂಗಡಿ- ಮುಗ್ಗಟ್ಟುಗಳನ್ನ ಬಂದ್ ಮಾಡಿ ನೇಹಾ ಹತ್ಯೆಯನ್ನು ‌ಖಂಡಿಸಿದ ವ್ಯಾಪಾರಸ್ಥರು, ಬೆಳಿಗ್ಗೆ 8 ರಿಂದ ಮಧ್ಯಾಹ್ನ ಮೂರು ಗಂಟೆಯವರೆಗೆ ಅಂಗಡಿಗಳು ಬಂದ್ ಮಾಡಿ, ಜಸ್ಟಿಸ್ ಟೂ ನೇಹಾ ಹಿರೇಮಠ ಎಂದು ತಮ್ಮ ಅಂಗಡಿಗಳಿಗೆ ಬೋರ್ಡ್‌ಗಳನ್ನ …

Read More »