Breaking News

ಕಳತ್ತೂರು: ಗೂಗಲ್ ಪೇ ಗೆ ಹಣ ಜಮಾ ಮಾಡಿದ ಸಂದೇಶ ಕಳುಹಿಸಿ 2.49 ಲ.ರೂ. ವಂಚನೆ

ಉಡುಪಿ: ಗೂಗಲ್ ಪೇಗೆ ಹಣ ಜಮಾ ಆಗಿರುವಂತೆ ನಕಲಿ ಸಂದೇಶ ಕಳುಹಿಸಿ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ ₹2,49,299.73 ಹಣ ವರ್ಗಾಯಿಸಿ ವಂಚಿಸಿರುವ ಘಟನೆ ಕಳತ್ತೂರಿನಲ್ಲಿ ನಡೆದಿದೆ. ಕಳತ್ತೂರು ಬರೆಬೆಟ್ಟು ಹೊಸಮನೆಯ ವಾಸು ಶೆಟ್ಟಿ (57) ವಂಚನೆಗೊಳಗಾದವರು. ವಾಸು ಶೆಟ್ಟಿ ಅವರ ಮೊಬೈಲ್‌ಗೆ ಗೂಗಲ್ ಪೇ ಮೂಲಕ ₹0.01 ಜಮಾ ಆಗಿರುವಂತೆ ಸಂದೇಶ ಬಂದಿತ್ತು. ಇದನ್ನು ತೆರೆದ ಬಳಿಕ ಅವರ ಖಾತೆಯ ಚಾನೆಲ್ ಲಿಮಿಟ್ ಬದಲಾವಣೆಯಾಗಿದೆ ಎಂಬ ಮತ್ತೊಂದು ಸಂದೇಶ ಬಂದಿದೆ. ಬಳಿಕ ಅವರ ಬ್ಯಾಂಕ್ ಖಾತೆಯಿಂದ ಐದು ಹಂತಗಳಲ್ಲಿ ಒಟ್ಟು ₹2,49,299.73 ಹಣ ಕಡಿತಗೊಂಡಿದೆ. ಈ ಬಗ್ಗೆ ವಾಸು ಶೆಟ್ಟಿ ನೀಡಿದ ದೂರಿನ ಮೇರೆಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಕೊಲೆಯಾಗಿದ್ದಾಳೆ ಎನ್ನಲಾದ ಮಹಿಳೆ ದಿಢೀರ್ ಪ್ರತ್ಯಕ್ಷ; ಮಾಡದ ತಪ್ಪಿಗೆ 2.5 ವರ್ಷ ಜೈಲಿನಲ್ಲಿದ್ದ ವ್ಯಕ್ತಿ!

ಮಂಡ್ಯ: 2019ರಲ್ಲಿ ನಾಪತ್ತೆಯಾಗಿದ್ದ ಮಂಜು ಎಂಬ ಮಹಿಳೆಯ ಕೊಲೆ ಆರೋಪದ ಮೇಲೆ ರಾಜೇಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಆದರೆ ಯಾವುದೇ …

Leave a Reply

Your email address will not be published. Required fields are marked *