karibasvaraja BIG TV NEWS, Davanagere
June 15, 2019
ಅಪರಾಧ, ದಾವಣಗೆರೆ
ವ್ಯಕ್ತಿಯ ಬರ್ಬರ ಕೊಲೆ ಮಾಡಿದ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ನಡೆದಿದೆ. ದಯಾನತ್ ಖಾನ್ (20)ಕೊಲೆಯಾದ ವ್ಯಕ್ತಿ. ದಾವಣಗೆರೆ ಜಿಲ್ಲೆಯ ಹೊನ್ನಾಳಿಯ ದುರ್ಗಿಗುಡಿ ನಿವಾಸಿ ಹಾಗೂ ವ್ಯಕ್ತಿ ಗ್ಯಾರೇಜ್ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಕಳೆದ ಒಂದು ವರ್ಷದಿಂದ ಹೊನ್ನಾಳಿ ತಾಲೂಕಿನ ಗೊಲ್ಲರಹಳ್ಳಿಯ ಬಾಷಾಸಾಬ್ ಎಂಬುವರ ಮಗಳನ್ನು ಪ್ರೀತಿ ಮಾಡುತ್ತಿದ್ದ. ಇದೇ ಕಾರಣಕ್ಕೆ ಕಳೆದ ಮೂರುದಿನಗ ಹಿಂದೆ ಬಾಷಾಸಾಬ್ ನಮ್ಮ ಮನೆಗೆ ಬಂದು ನಮ್ಮ ಮಗಳನ್ನು ಪ್ರೀತಿ ಮಾಡಲು ಬಿಡಲ್ಲ ಎಂದು …
Read More »
SRINIVAS BIG TV NEWS, MANGALORE
June 15, 2019
ಅಪರಾಧ, ದಕ್ಷಿಣ ಕನ್ನಡ
ಪಶ್ಚಿಮ ಬಂಗಾಳದಲ್ಲಿ ವೈದ್ಯರ ಮೇಲೆ ನಡೆಯುತ್ತಿರುವ ಹಲ್ಲೆಯನ್ನು ಖಂಡಿಸಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಇಂದು ರಾತ್ರಿ ಮೋಂಬತ್ತಿ ಮೆರವಣಿಗೆ ನಡೆಯಿತು .ವೈದ್ಯರು ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಮಂದಿ ಈ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡರು . ವೈದ್ಯರ ಮೇಲಿನ ಹಿಂಸೆ ಖಂಡನೀಯ .ರಾಜ್ಯ ಹಾಗೂ ಕೇಂದ್ರ ಸರಕಾರಗಳು ವೈದ್ಯರಿಗೆ ರಕ್ಷಣೆ ನೀಡಲು ಕ್ರಮ ಕೈಗೊಳ್ಳಬೇಕೆಂದು ಭಾರತೀಯ ವೈದ್ಯಕೀಯ ಸಂಘದ ಸುಳ್ಯ ಘಟಕದ ಸ್ಥಾಪಕಾಧ್ಯಕ್ಷ ಡಾ. ಕೆ.ವಿ ಚಿದಾನಂದ …
Read More »
SRINIVAS BIG TV NEWS, MANGALORE
June 15, 2019
ಅಪರಾಧ, ದಕ್ಷಿಣ ಕನ್ನಡ
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಲಾೃಲ ಗ್ರಾಮದ ರಾಘವೇಂದ್ರ ನಗರ ನಿವಾಸಿ ಕೇಶವ ಭಂಡಾರಿ ಎಂಬವರ ಬೆಳ್ತಂಗಡಿ ಬಸ್ ಸ್ಟಾಂಡ್ ನಲ್ಲಿ ಕಾರ್ಯಚರಿಸುತ್ತಿದ್ದ ಸ್ಟೈಲೋ ಹೇರ್ ಡ್ರೆಸ್ಸ್ಸಸ್ ಹಾಗೂ ಫ್ಯಾನ್ಸಿ ಅಂಗಡಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಸಂಪೂರ್ಣ ಭಸ್ಮಗೊಂಡಿದೆ. ವಿದ್ಯುತ್ ಅವಘಡದಿಂದ ಅಂಗಡಿ ಭಸ್ಮಗೊಂಡು ಅಪಾರ ನಷ್ಟವಾಗಿದೆ.ಅಗ್ನಿ ಶಾಮಕ ದಳದ ಸಿಬ್ಬಂದಿಗಳು ತಡ ರಾತ್ರಿ ವರೆಗೆ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಶಮನ ಮಾಡಿದ್ದಾರೆ .ಸಾರ್ವಜನಿಕರು ಸಹಕಾರ ನೀಡಿದರು.ಬೆಳ್ತಂಗಡಿ …
Read More »
Ambrish BIG TV NEWS,Anekal
June 14, 2019
ಅಪರಾಧ, ಬೆಂಗಳೂರು ಗ್ರಾಮಾಂತರ
ಕುಡಿದ ಅಮಲಿನಲ್ಲಿ ಕೃಷಿ ಹೊಂಡಕ್ಕೆ ಬಿದ್ದು ವ್ಯಕ್ತಿ ಸಾವನ್ನಪ್ಪಿದ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಸಮಂದೂರು ಬಳಿ ನಡೆದಿದೆ.ಸಮಂದೂರಿನ ಈರಣ್ಣ ಎಂಬುವವರ ತೋಟದ ಕೃಷಿ ಹೊಂಡದಲ್ಲಿ ನಡೆದಿರುವ ಘಟನೆಯಾಗಿದ್ದು, ಮೃತನನ್ನು ಆನೇಕಲ್ನ ರಾಚಮನಹಳ್ಳಿ ನಿವಾಸಿ ಯಲ್ಲಪ್ಪ ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಅತ್ತಿಬೆಲೆ ಪೋಲಿಸರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದ್ದು, ಈ ಕುರಿತು ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »
NAGARAJ
June 14, 2019
ಅಪರಾಧ, ಕೊಡಗು
ಹೈಸ್ಕೂಲ್ ಶಿಕ್ಷಕಿ ಮೇಲೆ ವ್ಯಕ್ತಿಯೊಬ್ಬ ಗುಂಡಿನ ದಾಳಿ ಮಾಡಿ ಕೊಲೆ ಮಾಡಿದ್ದು, ಬಳಿಕ ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬಾಳಲೆ ಗ್ರಾಮದಲ್ಲಿ ನಡೆದಿದೆ. ಬಾಳೆಲೆ ಗ್ರಾಮದ ಆಶಾ ಕಾವೇರಮ್ಮ(50) ಮೃತ ಶಿಕ್ಷಕಿ. ಜಗದೀಶ್(60) ಆತ್ಮಹತ್ಯೆಗೆ ಶರಣಾದ ಆರೋಪಿ. ಮೃತ ಶಿಕ್ಷಕಿ ಇಂದು ಬೆಳಗ್ಗೆ 8.15ರ ಸುಮಾರಿಗೆ ಶಾಲಾ ವಾಹನಕ್ಕಾಗಿ ಕಾಯುತ್ತಿದ್ದ ವೇಳೆ ಶಿಕ್ಷಕಿಯ ಮೇಲೆ ಪೊನ್ನಂಪೇಟೆ ನಿವಾಸಿ ಜಗದೀಶ್ ಐದು ಬಾರಿ ಗುಂಡು ಹಾರಿಸಿದ್ದಾನೆ. …
Read More »
NAGARAJ
June 14, 2019
ಅಪರಾಧ, ರಾಮನಗರ
ವ್ಯಕ್ತಿಯನ್ನು ಬರ್ಬರ ಕೊಲೆ ಮಾಡಿರುವ ಘಟನೆ ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನ ಸಾತನೂರು ಹೋಬಳಿ ಗೇರಳ್ಳಿ ಗ್ರಾಮದ ಬಳಿ ನಡೆದಿದೆ. ಗೇರಳ್ಳಿ ಸಮೀಪದ ಗುಡ್ಡದ ಮೇಲೆ ಅಪರಿಚಿತ ವ್ಯಕ್ತಿಯನ್ನು ಕಲ್ಲಿನಿಂದ ಜಜ್ಜಿ ಕೂಲೆ ಮಾಡಿದ್ದಾರೆ. ಕೌಟುಂಬಿಕ ಕಲಹ ಹಿನ್ನಲೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ ಸಾತನೂರು ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆಯಾದ ವ್ಯಕ್ತಿ ಯಾರೆಂದು ತಿಳಿದು ಬಂದಿಲ್ಲ. ವ್ಯಕ್ತಿಯ ಪೋಷಕರಿಗಾಗಿ ಪೋಲಿಸರಿಂದ ಹುಡುಕಾಟ ನಡೆಸಿದ್ದಾರೆ.
Read More »
Rajappa BIG TV NEWS, Chikkaballapur
June 14, 2019
ಅಪರಾಧ, ಚಿಕ್ಕಬಳ್ಳಾಪುರ
ಅಪರಿಚಿತ ವಾಹನ ಹರಿದು ಬೈಕ್ ಸವಾರ ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ರಾಷ್ಟ್ರೀಯ ಹೆದ್ದಾರಿ 234ರಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ವೀರಾಪುರ ಗ್ರಾಮದ ಬಳಿ ನಡೆದಿದೆ. ಶಿಡ್ಲಘಟ್ಟ ತಾಲೂಕಿನ ತುಲದುಮ್ಮನಹಳ್ಳಿ ನಿವಾಸಿ ನಾಗೇಶ(೩೬) ಮೃತ ದುರ್ದೈವಿಯಾಗಿದ್ದಾನೆ. ಈ ಕುರಿತು ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿ ಪ್ರಕರಣ ದಾಖಲಾಗಿದ್ದು, ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Read More »
Ambrish BIG TV NEWS,Anekal
June 13, 2019
ಅಪರಾಧ, ಬೆಂಗಳೂರು ಗ್ರಾಮಾಂತರ
ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಕೊಲೆ ಮಾಡಿದ ಕೃತ್ಯ ಬೆಂಗಳೂರು ಹೊರವಲಯದ ಗೊಟ್ಟಿಗೆರೆ ಬಳಿಯ ಕೊತ್ತನೂರು ದಿಣ್ಣೆ ಕೆರೆ ಬಳಿ ನಡೆದಿದೆ. ರಾಮು (28) ಕೊಲೆಯಾದ ಯುವಕ. ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದ ರಾಮುವನ್ನು ಜೊತೆಯಲ್ಲೇ ಇದ್ದತನ್ನ ಸ್ನೇಹಿತರಿಂದಲೇ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ಕೊಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Read More »
Prakash s kamble BIG TV NEWS, Athani
June 13, 2019
ಅಪರಾಧ, ಬೆಳಗಾವಿ
ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಕೈ ಹಿಡಿದ ಮಡದಿಯನ್ನೇ ಪಾಪಿ ಪತಿ ಕೊಲೆ ಮಾಡಿದ್ದೇನೆ. ನಂತರ ತಾನೇ ಪೊಲೀಸ್ ಠಾಣೆಗೆ ಬಂದು ತನ್ನ ಹೆಂಡತಿ ಕಾಣೆಯಾಗಿದ್ದಾಳೆಂದು ದೂರು ಸಹ ನೀಡಿದ್ದನು. ದೂರು ದಾಖಲಿಸಿ ಕೊಂಡ ಪೋಲಿಸ್ ಇಲಾಖೆ ತನಿಖೆ ಆರಂಭ ಮಾಡಿದಾಗ ದೂರು ಕೊಟ್ಟವನೇ ಕೊಲೆಗಾರ ಎಂಬುದು ತಿಳಿದು ಬರುತ್ತೇ. ಅಪ್ಪಸಾಹೇಬ್ ಸುರುಡೆ (೪೨) ಬಂಧಿತ ಆರೋಪಿಯಾಗಿದ್ದಾನೆ. ಪ್ರಮುಖವಾಗಿ ಅಪ್ಪಾಸಾಹೇಬ್ ಸುರುಡೆ ತನ್ನ ಪತ್ನಿ ಸಹೋದರಿಯೊಂದಿಗೆ ಅಕ್ರಮ ಸಂಬಂಧ ಹೊಂದಿರುತ್ತಾನೆ. ಇದನ್ನು …
Read More »
SRINIVAS BIG TV NEWS, MANGALORE
June 13, 2019
ಅಪರಾಧ, ದಕ್ಷಿಣ ಕನ್ನಡ
ಕೆಎಸ್ಸಾರ್ಟಿಸಿ ಬಸ್ ಹಾಗೂ ಬೈಕ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಕಡಬ ತಾಲೂಕಿನ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬಲ್ಯದಲ್ಲಿ ಸಂಭವಿಸಿದೆ. ಮೃತ ಸವಾರನನ್ನು ಬಲ್ಯ ಮದ್ರಾಡಿ ನಿವಾಸಿ ರಾಮಚಂದ್ರ ಗೌಡ ಎಂಬವರ ಪುತ್ರ ಸುಬ್ರಹ್ಮಣ್ಯ ಕಾಲೇಜಿನ ಅಂತಿಮ ವರ್ಷದ ಪದವಿ ವಿದ್ಯಾರ್ಥಿ ಮೋಕ್ಷಿತ್(21) ಎಂದು ಗುರುತಿಸಲಾಗಿದೆ. ಮೋಕ್ಷಿತ್ ತನ್ನ ಪಲ್ಸರ್ ಬೈಕಿನಲ್ಲಿ ಬಲ್ಯದಿಂದ ಕಡಬಕ್ಕೆ ತೆರಳುತ್ತಿದ್ದಾಗ ಕೆಎಸ್ಸಾರ್ಟಿಸಿ ಬಸ್ …
Read More »