Breaking News

Breaking News


ಜೆಡಿಎಸ್ ಅಭ್ಯರ್ಥಿಗಳ 7 ಮಂದಿ ಪಟ್ಟಿ ಬಿಡುಗಡೆ ಪ್ರಕಟಿಸಲಾಗುವುದು : ರೇವಣ್ಣ

ಹಾಸನ: ವಿಧಾನಸಭೆ ಚುನಾವಣೆಗೆ ಶೀಘ್ರದಲ್ಲೇ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವುದಾಗಿ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಹೇಳಿದ್ದಾರೆ. ಹಾಸನದಲ್ಲಿ ಮಾತನಾಡಿದ ಅವರು, ಮೊದಲ ಪಟ್ಟಿಯಲ್ಲಿ ಹಾಸನದ 7 ಅಭ್ಯರ್ಥಿಗಳ ಹೆಸರು ಪ್ರಕಟಿಸಲಾಗುವುದು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಟಿಕೆಟ್ ಘೋಷಣೆ ಮಾಡಲಾಗುವುದು ಎಂದರು. ಶಿವಲಿಂಗೇಗೌಡರು ಪಕ್ಷ ತೊರೆಯುವುದಿಲ್ಲ ಎಂದು ಅವರೇ ಹೇಳಿದ್ದಾರೆ. 15 ದಿನಗಳ ಹಿಂದೆ ಕುಮಾರಸ್ವಾಮಿಯನ್ನು ಭೇಟಿಯಾಗಿ ಅವರು ತಿಳಿಸಿದ್ದಾರೆ. ದೇವೇಗೌಡರು ಇರುವವರೆಗೂ ಪಕ್ಷ ಬಿಡುವುದಿಲ್ಲ ಎಂದು ತಿಳಿಸಿದ್ದಾರೆ. …

Read More »

ಗುಜರಾತ್ ಚುನಾವಣೆ : 16 ವಿಧಾನಸಭಾ ಕ್ಷೇತ್ರಗಳಲ್ಲಿ ಮೂರು ಗಂಟೆಗಳ ಕಾಲ ಮೆಗಾ ರೋಡ್ ಶೋ

ಅಹಮದಾಬಾದ್ (ಗುಜರಾತ್) : ಎರಡು ದಿನಗಳ ಅಂತರದ ನಂತರ, ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಗುಜರಾತ್ ಚುನಾವಣಾ ಪ್ರಚಾರದ ಹಾದಿಗೆ ಮರಳಲಿದ್ದಾರೆ ಮತ್ತು ಈ ಬಾರಿ ರಾಜ್ಯ ವಿಧಾನಸಭೆಯ ಎರಡನೇ ಹಂತದ ಚುನಾವಣೆಗಾಗಿ 16 ವಿಧಾನಸಭಾ ಕ್ಷೇತ್ರಗಳಲ್ಲಿ ಮೂರು ಗಂಟೆಗಳ ಕಾಲ ಮೆಗಾ ರೋಡ್ ಶೋ ನಡೆಸಲಿದ್ದಾರೆ. ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಪ್ರಕಾರ, ಈ ಮೆಗಾ ಶೋ ನರೋಡಾ ಗಾಮ್‌ನಿಂದ ಪ್ರಾರಂಭವಾಗಿ ಗಾಂಧಿನಗರ ದಕ್ಷಿಣ ಕ್ಷೇತ್ರದಲ್ಲಿ 50 ಕಿಲೋಮೀಟರ್‌ಗಿಂತಲೂ …

Read More »

ಕುಕ್ಕರ್ ಬಾಂಬ್ ಸ್ಪೋಟ್ : 9 ಜನ ಬಂಧನ

ಮಂಗಳೂರು: ನಗರದ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಜ್ಯುವೆಲ್ಲರಿಯೊಂದನ್ನು ಕನ್ನ ಕೊರೆದು ದರೋಡೆಗೆ ಸಂಚು ರೂಪಿಸಿದ ಕುಖ್ಯಾತ ಆಂತಾರಾಜ್ಯ ಜ್ಯುವೆಲ್ಲರಿ ಮತ್ತು ಬ್ಯಾಂಕ್ ದರೋಡೆ ಗ್ಯಾಂಗ್ ನ 9 ಮಂದಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದು, ದರೋಡೆಗಾಗಿ ಸಂಗ್ರಹಿಸಿಟ್ಟಿದ್ದ ವಿವಿಧ ಸಾಮಾಗ್ರಿಗಳನ್ನು ವಶಪಡಿಸಿಕೊಂಡು ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ. ನವೆಂಬರ್29- 30ರಂದು ರಾತ್ರಿ ವೇಳೆಯಲ್ಲಿ ತೊಕ್ಕೊಟ್ಟು ಮಂಚಿಲ ಪರಿಸರದ ಮನೆಯೊಂದರಲ್ಲಿ ಉತ್ತರ ಭಾರತದ ಕುಖ್ಯಾತ ” ಸಾಹೇಬ್ ಗಂಜ್ ದರೋಡೆ ಗ್ಯಾಂಗ್ …

Read More »

ಹಸೆಮಣೆ ಏರಲು ಸಜ್ಜಾದ ತಿಥಿ ಚಿತ್ರದ ನಾಯಕಿ

ಬೆಂಗಳೂರು : ಕನ್ನಡದ ತಿಥಿ ಚಿತ್ರದ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ನಾಯಕಿ ಪೂಜಾ ಕೆಲವು ವರ್ಷಗಳಿಂದ ಸಿನಿಮಾ ರಂಗದಿಂದಲೇ ದೂರವಾಗಿದ್ದರು. ಓದಿನ ಕಡೆ ಗಮನ ಕೊಟ್ಟಿದ್ದ ಪೂಜಾ ಇದೀಗ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿರುವ ಪೂಜಾ ಡಿಸೆಂಬರ್ ನಲ್ಲಿ ಸಪ್ತಪದಿ ತುಳಿಯಲಿದ್ದಾರೆ. ಡಿಸೆಂಬರ್ 4ರಂದು ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಚೌಟ್ರಿಯಲ್ಲಿ ಪೂಜಾ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮದುವೆಗಾಗಿಯೇ ವಿಶೇಷ ಪ್ರೊಮೋ ಒಂದನ್ನು ರೆಡಿ ಮಾಡಿದ್ದು, ಅದರಲ್ಲಿ …

Read More »

ಕರ್ತವ್ಯಲೋಪ ಐವರು ಪೊಲೀಸರು ಅಮಾನತು : ಆದೇಶ ಹಿಪಂಡೆಯುವಂತೆ ಪ್ರತಿಭಟನೆ

ಚಾಮರಾಜನಗರ: ಜೀಪಿನಿಂದ ಹಾರಿ ಆರೋಪಿ ಯುವಕ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಐವರು ಪೊಲೀಸರು ಅಮಾನತುಗೊಂಡಿದ್ದಾರೆ. ಯಳಂದೂರು ಸಿಪಿಐ ಶಿವಮಾದಯ್ಯ, ಪಿಎಸ್‌ಐ ಮಹದೇವಗೌಡ, ಎಎಸ್‌ಐ ಚೆಲುವರಾಜ್, ಹೆಡ್ ಕಾನ್ಸ್‌ಟೇಬಲ್ ಭದ್ರಮ್ಮ, ಕಾನ್ಸ್‌ಟೇಬಲ್ ಸೋಮಶೇಖರ್ ಅಮಾನತುಗೊಂಡ ಪೊಲೀಸ್ ಸಿಬ್ಬಂದಿ. ಆರೋಪಿ ಬಂಧಿಸಿ ಕರೆತರುವಾಗ ಕರ್ತವ್ಯಲೋಪ ಎಸಗಿದ್ದಾರೆ ಎಂಬ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಈ ಅಮಾನತು ಆದೇಶ ಹೊರಬಿದ್ದಿದೆ. ಯಳಂದೂರು ತಾಲೂಕಿನ ಕುಂತೂರುಮೋಳೆ ಗ್ರಾಮದ ನಿಂಗರಾಜು(21) ಎಂಬಾತನ ವಿರುದ್ಧ ಅಪ್ರಾಪ್ತೆ ಅಪಹರಿಸಿದ ದೂರು ದಾಖಲಾಗಿತ್ತು. …

Read More »

ವಾಕಿಂಗ್​ ಮಾಡುವಾಗ ಹಾರಿಹೊಯ್ತು ಗಜರಾಜನ ಪ್ರಾಣಪಕ್ಷಿ

ಪುದುಚೇರಿ: ಇಲ್ಲಿನ ಮಣಕ್ಕುಳ ವಿನಯಗರ್​ ದೇವಸ್ಥಾನದಲ್ಲಿದ್ದ ಆನೆಯೊಂದು ವಾಕಿಂಗ್​ ಮಾಡುವಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಮೃತಪಟ್ಟಿದೆ.ಬುಧವಾರ ಬೆಳಗ್ಗೆ 6:30ಕ್ಕೆ ಈ ದುರ್ಘಟನೆ ನಡೆದಿದೆ. ಬಳಿಕ ಆನೆ ಲಕ್ಷ್ಮಿಯನ್ನು ಪರೀಕ್ಷಿಸಿದ ವೈದ್ಯರು ಹೃದಯಾಘಾತದಿಂದ ಸಾವನ್ನಪ್ಪಿದೆ ಎಂದು ಹೇಳಿದ್ದಾರೆ. ಅಲ್ಲದೇ ಆನೆಗೆ ಮಧುಮೇಹವಿದ್ದು, ಕಾಲಿನ ಗಾಯದಿಂದ ಬಳಲುತ್ತಿತ್ತು ಎಂದು ತಿಳಿದುಬಂದಿದೆ. ಪುದುಚೇರಿಯ ಮಾಜಿ ಸಿಎಂ ಜಾನಕಿರಾಮನ್ ಅವರು 1996ರಲ್ಲಿ, ಐದು ವರ್ಷದ ಈ ಆನೆಯನ್ನು ದೇವಸ್ಥಾನಕ್ಕೆ ನೀಡಿದ್ದರು. ಆನೆ ಲಕ್ಷ್ಮಿ (32) ಭಕ್ತರಿಗೆ …

Read More »

ಯಾದಗಿರಿ ಜಿಲ್ಲೆಯಲ್ಲಿ 149 ಜನರಿಗೆ ಎಚ್‌ಐವಿ ಸೊಂಕು ದೃಢ

ಯಾದಗಿರಿ: ಜಿಲ್ಲೆಯಲ್ಲಿ 2022-23 ರಲ್ಲಿ 35,656 ಸಾಮಾನ್ಯ ಅರ್ಥಿಗಳ ಎಚ್‌ಐವಿ ಪರೀಕ್ಷೆ ಮಾಡಲಾಗಿದ್ದು, ಅದರಲ್ಲಿ 149 ಜನರಿಗೆ ಎಚ್‌ಐವಿ ಸೊಂಕು ದೃಢಪಟ್ಟಿದೆ. ಪಾಸಿಟಿವಿಟಿ ರೇಟ್ 0.41 ಇದೆ. ಕಳೆದ ವರ್ಷ 210 ಮಂದಿಗೆ ಸೋಂಕು ಇರುವುದು ಪತ್ತೆಯಾಗಿತ್ತು. ಪ್ರಸಕ್ತ ವರ್ಷದಲ್ಲಿ 24,132 ಗರ್ಭಿಣಿಯರ ಎಚ್‌ಐವಿ ಪರೀಕ್ಷೆ ಮಾಡಲಾಗಿದ್ದು, ಅದರಲ್ಲಿ 8 ಗರ್ಭಿಣಿಯರಿಗೆ ಎಚ್‌ಐವಿ ಸೋಂಕು ದೃಢಪಟ್ಟಿದೆ. ಎಲ್ಲರೂ ಎಆರ್‌ಟಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಾಸಿಟಿವಿಟಿ ರೇಟ್ 0.03 ಇದೆ. ‘ಸಮಾನಗೊಳಿಸು ಅಂದರೆ …

Read More »

ಕೆಆರ್ ಇಡಿಎಲ್ ಯೋಜನಾ ನಿರ್ದೇಶಕ ಡಿ.ಕೆ.ದಿನೇಶ್ ಕುಮಾರ್ ಅನುಮಾನಾಸ್ಪದ ಸಾವು

ಮೈಸೂರು: ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ (ಕೆಆರ್ ಇಡಿಎಲ್) ಯೋಜನಾ ನಿರ್ದೇಶಕ, ವಿಜಯನಗರ ನಿವಾಸಿ ಡಿ.ಕೆ.ದಿನೇಶ್ ಕುಮಾರ್ (51) ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಬಗ್ಗೆ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶ್ರೀರಂಗಪಟ್ಟಣ ತಾಲ್ಲೂಕಿನ ದೊಡ್ಡಪಾಳ್ಯ ಗ್ರಾಮದ ದಿನೇಶ್ ಬೆಂಗಳೂರಿನ ನಾಗರಬಾವಿಯಲ್ಲಿ ಕೆಆರ್ ಇಡಿಎಲ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಭಾನುವಾರ ರಾತ್ರಿ ಊಟದ ನಂತರ ದಿನೇಶ್ ಮಲಗಿದ್ದರು ಮತ್ತು ಸೋಮವಾರ ಪ್ರಜ್ಞೆ ತಪ್ಪಿದರು ಎಂದು ಅವರ ಪತ್ನಿ …

Read More »


ಕರ್ತವ್ಯ ನಿರತ ಪೊಲೀಸ್​ ಪೇದೆ ಸಾವು

ಕೋಲಾರ: ಕರ್ತವ್ಯ ನಿರತ ಪೊಲೀಸ್​ ಪೇದೆ ಹೃದಯಾಘಾತದಿಂದ ಠಾಣೆಯಲ್ಲೇ ಮೃತಪಟ್ಟಿರುವ ಘಟನೆ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಸುರೇಶ್ (48) ಮೃತಪಟ್ಟ ಮುಖ್ಯಪೇದೆ. ರಾತ್ರಿ ಪಾಳಿಯ ಕರ್ತವ್ಯದಲ್ಲಿದ್ದ ಸುರೇಶ್ ಅವರಿಗೆ ಬೆಳಗ್ಗೆ ಹೃದಯಾಘಾತವಾಗಿದ್ದು, ತಕ್ಷಣ ಅವರನ್ನು ಬಂಗಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಆದರೆ, ಅಷ್ಟರಲ್ಲಾಗಲೇ ಸುರೇಶ್​ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.ಘಟನಾ ಸ್ಥಳಕ್ಕೆ ಕೆಜಿಎಫ್ ಎಸ್ಪಿ ಧರಣಿದೇವಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

Read More »

ನನ್ನ ಬಲಿದಾನವಾದ್ರೂ ಸರಿ, ಮುಸ್ಲಿಂ ಕಾಲೇಜು ಸ್ಥಾಪನೆಗೆ ನಾನು ಬಿಡೋದಿಲ್ಲ: ಮುತಾಲಿಕ್

ಧಾರವಾಡ: ರಾಜ್ಯದ ಬಿಜೆಪಿ ಸರ್ಕಾರ 10 ಮುಸ್ಲಿಂ ಕಾಲೇಜುಗಳ ಸ್ಥಾಪನೆಗೆ ಮುಂದಾಗಿರುವ ಕ್ರಮವನ್ನು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ತೀವ್ರವಾಗಿ ಖಂಡಿಸಿದ್ದಾರೆ. ಧಾರವಾಡದಲ್ಲಿ ಮಾತನಾಡಿದ ಅವರು, ನನ್ನ ಬಲಿದಾನವಾದರೂ ಸರಿ. ಮುಸ್ಲಿಂ ಕಾಲೇಜು ಸ್ಥಾಪನೆಗೆ ನಾನು ಒಪ್ಪುವುದಿಲ್ಲ. ಮುಸ್ಲಿಂ ಕಾಲೇಜು ಸ್ಥಾಪನೆಗೆ ನಾನು ವಿರೋಧ ಮಾಡುತ್ತೇನೆ. ಈ ಸಂಬಂಧ ಹಿಂದೂ ಸಂಘಟನೆಗಳ ಒಕ್ಕೂಟದಿಂದ ಅದರ ವಿರುದ್ಧ ಹೋರಾಟ ಮಾಡುತ್ತೇನೆ ಎಂದಿದ್ದಾರೆ. ಕಾಂಗ್ರೆಸ್ ಪಕ್ಷ ಮುಸ್ಲಿಂರಿಗೆ ಸಪೋರ್ಟ್ ಮಾಡಿದ ಪರಿಣಾಮವಾಗಿ …

Read More »