Breaking News

Breaking News

2024ರೊಳಗೆ ಕರ್ನಾಟಕದ ರಸ್ತೆಗಳು ಅಮೆರಿಕ ಮಾದರಿಗೆ ಮಾರ್ಪಟ್ಟ : ನಿತಿನ್‌ ಗಡ್ಕರಿ

ಬೆಂಗಳೂರು : ಭಾರತದ ರಸ್ತೆಗಳ ಗುಣಮಟ್ಟವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿಸುವ ಗುರಿ ಹೊಂದಿದ್ದು 2024ರೊಳಗೆ ಕರ್ನಾಟಕದ ಎಲ್ಲ ರಸ್ತೆಗಳ ಗುಣಮಟ್ಟವನ್ನು ಅಮೆರಿಕ ಮಾದರಿಗೆ ಎತ್ತರಿಸಲಾಗುವುದು ಎಂದು ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಘೋಷಿಸಿದ್ದಾರೆ. ಬೆಳಗಾವಿ, ಹುಬ್ಬಳ್ಳಿ ಮತ್ತು ಮಂಗಳೂರುಗಳಲ್ಲಿ ಸೋಮವಾರ ಒಂದೇ ದಿನದಲ್ಲಿ ನಡೆದ ಪ್ರತ್ಯೇಕ ಸಮಾರಂಭಗಳಲ್ಲಿ ಅವರು ಒಟ್ಟಾರೆ ರಾಜ್ಯದ ವಿವಿಧೆಡೆ ನಡೆಯಲಿರುವ .19,930 ಕೋಟಿ ವೆಚ್ಚದ 46 ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಿಗೆ ಚಾಲನೆ ನೀಡಿ …

Read More »

ಇಂದು ಪವರ್ ಸ್ಟಾರ್ ಅಭಿನಯದ ಜೇಮ್ಸ್ ಚಿತ್ರದ ಸಾಂಗ್ ರಿಲೀಸ್

ಪುನೀತ್​ ರಾಜ್​ಕುಮಾರ್ ಅಭಿಮಾನಿಗಳಿಗೆ ಇಂದು ಮಾರ್ಚ್​ 1 ವಿಶೇಷ ದಿನ.ಅವರು ಹೀರೋ ಆಗಿ ನಟಿಸಿದ ಕೊನೆಯ ಸಿನಿಮಾ ‘ಜೇಮ್ಸ್​’ನ ಲಿರಿಕಲ್​ ಸಾಂಗ್​​, ‘ಟ್ರೇಡ್​ಮಾರ್ಕ್​. ಬೆಳಗ್ಗೆ 11:11ಕ್ಕೆ ರಿಲೀಸ್​ ಆಗುತ್ತಿದೆ. ಈ ವಿಚಾರವನ್ನು ಈ ಮೊದಲು ಚಿತ್ರತಂಡ ಘೋಷಣೆ ಮಾಡಿತ್ತು. ಹೀಗಾಗಿ, ಅಭಿಮಾನಿಗಳು ಈ ಸಾಂಗ್​ ಕೇಳೋಕೆ ಕಾದು ಕೂತಿದ್ದಾರೆ. ಈಗಾಗಲೇ ಟೀಸರ್​ ಮೂಲಕ ಈ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಈಗ ಚಿತ್ರದ ಹಾಡು ಹೇಗಿರಲಿದೆ ಎಂಬುದನ್ನು ನೋಡೋಕೆ ಅಭಿಮಾನಿಗಳು …

Read More »

ಮೇಕೆದಾಟು ಪಾದಯಾತ್ರೆ : ಕಾಂಗ್ರೆಸ್ ನಾಯಕರ ವಿರುದ್ಧ FIR ದಾಖಲು

ರಾಮನಗರ: ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಪಾದಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ ನಾಯಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ರಾಮನಗರದ ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಎ1 ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಎ2 ವಿಪಕ್ಷ ನಾಯಕ ಸಿದ್ದರಾಮಯ್ಯ, ಎ3 ಡಿ.ಕೆ. ಸುರೇಶ್‌, ಎ4 ಎಂಎಲ್‌ಸಿ ಎಸ್‌. ರವಿ ಸೇರಿ ಪಾದಯಾತ್ರೆ ನಡೆಸುತ್ತಿರುವ 37 ಕಾಂಗ್ರೆಸ್‌ ನಾಯಕರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.

Read More »

ಪಠ್ಯದಲ್ಲಿ ವೀರ ವನಿತೆಯರ ಸಾಹಸಗಾಥೆ: ಸಿಎಂ ಬೊಮ್ಮಾಯಿ

ಹುಬ್ಬಳ್ಳಿ: ಬೆಳವಡಿ ಮಲ್ಲಮ್ಮ, ಕೆಳದಿ ಚೆನ್ನಮ್ಮ ಸೇರಿದಂತೆ ಕನ್ನಡನಾಡಿನ ವೀರವನಿತೆಯರ ಸಾಹಸಗಾಥೆಗಳನ್ನು ಪಠ್ಯದಲ್ಲಿ ಅಳವಡಿಸಿ ಮಕ್ಕಳಿಗೆ ಅವರ ಶೌರ್ಯ, ಸಾಹಸಗಳ ಪರಿಚಯ ಮಾಡಿಕೊಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಹುಬ್ಬಳ್ಳಿಯ ಆದರ್ಶನಗರದ ಸ್ವಗೃಹದಲ್ಲಿ ಬೆಳವಡಿ ಮಲ್ಲಮ್ಮನವರು ಮರಾಠಾ ಸೈನ್ಯದ ವಿರುದ್ಧದ ಜಯಗಳಿಸಿದ 374ನೇ ವರ್ಷಾಚರಣೆ ಸ್ಮರಣಾರ್ಥ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ಸಾಂಕೇತಿಕವಾಗಿ ಬೆಳವಡಿ ಮಲ್ಲಮ್ಮನವರ ವಿಜಯ ದಿನವನ್ನು ಆಚರಿಸಲಾಗಿದೆ. ಕನ್ನಡನಾಡಿನ ಕೆಳದಿ ಚೆನ್ನಮ್ಮ, ಬೆಳವಡಿ …

Read More »

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹತ್ಯೆ ಮಾಡಲು ಸಂಚು

ಕೀವ್ : ರಷ್ಯಾದ 400 ಸೈನಿಕರಿಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಹತ್ಯೆ ಮಾಡಲು ಆದೇಶಿಸಿದ್ದು, ಇದರಿಂದಾಗಿ ಅವರು ರಷ್ಯಾ ಸೈನಿಕರು ಹುಡುಕುತ್ತಿದ್ದಾರೆ ಎಂಬ ವಿಷಯ ಇದೀಗ ಬಹಿರಂಗವಾಗಿದೆ. 400ಕ್ಕೂ ಹೆಚ್ಚು ಸೈನಿಕರನ್ನು ರಷ್ಯಾ ಆಫ್ರಿಕಾದಿಂದ ಕರೆಸಿಕೊಂಡಿದ್ದು, ಅಧ್ಯಕ್ಷ ಝೆಲೆನ್ಸ್ಕಿ ಮತ್ತು ಅವರ ಸರ್ಕಾರದ ಅಧಿಕಾರಿಗಳನ್ನು ಹತ್ಯೆ ಮಾಡಲು ಯೋಜನೆ ಹಾಕಿಕೊಂಡಿದ್ದಾರೆ. ಅಧ್ಯಕ್ಷ ಪುಟಿನ್ ಅವರ ಮಿತ್ರರ ಬಳಗದಲ್ಲಿ ಒಬ್ಬರಿಂದ ನಡೆಸಲ್ಪಡುವ ವ್ಯಾಗ್ನರ್ ಗ್ರೂಪ್ ಕಂಪನಿಯು ಐದು ವಾರಗಳ …

Read More »

ಟಿಡಿಪಿ ಮುಖಂಡ ಯದ್ಲಪತಿ ವೆಂಕಟ ರಾವ್‌ ನಿಧನ

ಅಮರಾವತಿ: ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖಂಡ ಯದ್ಲಪತಿ ವೆಂಕಟ ರಾವ್‌ ಹೈದರಾಬಾದ್‌ನಲ್ಲಿ ಸೋಮವಾರ ನಿಧನರಾದರು. ಅವರಿಗೆ 102 ವರ್ಷ ವಯಸ್ಸಾಗಿತ್ತು. ಹೈದರಾಬಾದ್‌ನಲ್ಲಿರುವ ಅವರ ಪುತ್ರಿಯ ಮನೆಯಲ್ಲಿ ನಿಧನರಾದರು ಎಂದು ಪಕ್ಷದ ಮೂಲಗಳು ತಿಳಿಸಿವೆ.

Read More »

ಕ್ರೇಜಿಸ್ಟಾರ್ ರವಿಚಂದ್ರನ್ ತಾಯಿ ನಿಧನ

ಬೆಂಗಳೂರು: ಕ್ರೇಜಿಸ್ಟಾರ್​ ರವಿಚಂದ್ರನ್ ಅವರ ತಾಯಿ ಪಟ್ಟಮ್ಮಾಳ್ ವೀರಸ್ವಾಮಿ ಸೋಮವಾರ ನಿಧನರಾದರು. ಪಟ್ಟಮ್ಮಾಳ್ ಅವರಿಗೆ 83 ವರ್ಷ ವಯಸ್ಸಾಗಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ಪಟ್ಟಮ್ಮಾಳ್ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ​ ಬೆಳಗ್ಗೆ ಕೊನೆಯುಸಿರೆಳೆದರು.

Read More »

ಜೂನ್‌ ಅಂತ್ಯದಲ್ಲಿ 4ನೇ ಕೋವಿಡ್ ಅಲೆ ಪ್ರಾರಂಭ

ಹೈದರಾಬಾದ್‌ : ದೇಶದಲ್ಲಿ ಕೋವಿಡ್‌ 3ನೇ ಅಲೆ ಇನ್ನೇನು ಅಂತ್ಯಕ್ಕೆ ಸಮೀಪಿಸಿದೆ ಅನ್ನುವಷ್ಟರಲ್ಲೇ, 2022ರ ಜೂನ್‌ ಅಂತ್ಯದ ವೇಳೆಗೆ ದೇಶದ ಮೇಲೆ ಸೋಂಕಿನ 4ನೇ ದಾಳಿಯ ಸಾಧ್ಯತೆ ಇದೆ ಎಂದು ಐಐಟಿ ಕಾನ್ಪುರದ ತಜ್ಞರ ತಂಡ ಎಚ್ಚರಿಸಿದೆ. ಒಂದು ವೇಳೆ 4ನೇ ಅಲೆ ಕಾಣಿಸಿಕೊಂಡಿದ್ದೇ ಆದಲ್ಲಿ ಅದರ ಪರಿಣಾಮಗಳು, ಆಗ ಹುಟ್ಟಿಕೊಳ್ಳಬಹುದಾದ ಹೊಸ ರೂಪಾಂತರಿಯ ತೀವ್ರತೆ, ಕೋವಿಡ್‌ ಲಸಿಕೆ ವಿತರಣೆಯ ಸ್ಥಿತಿಗತಿ, ಬೂಸ್ಟರ್‌ ಡೋಸ್‌ ನೀಡಿಕೆ ಅವಲಂಬಿಸಿರುತ್ತದೆ ಎಂದು ಹೇಳಿದೆ. …

Read More »

ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಹಿನ್ನೆಲೆ ಸಭೆ ಕರೆದ ಮೋದಿ

ನವದೆಹಲಿ: ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಮುಂದುವರಿಸಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಸತತ 2 ಗಂಟೆಗಳ ಕಾಲ ಸಭೆ ನಡೆಸಿದ ಪ್ರಧಾನಿ ಮೋದಿ, ಭಾರತೀಯ ವಿದ್ಯಾರ್ಥಿಗಳ ಸ್ಥಳಾಂತರ ಕುರಿತು ಚರ್ಚೆ ನಡೆಸಿದ್ದಾರೆ. ತ್ವರಿತಗತಿಯಲ್ಲಿ ವಿದ್ಯಾರ್ಥಿಗಳ ಸ್ಥಳಾಂತರಕ್ಕೆ ಸೂಚನೆ ನೀಡಿದ್ದಾರೆ. ಉಕ್ರೇನ್‌ನ ನೆರೆಯ ರಾಷ್ಟ್ರಗಳ ಸಹಕಾರಕ್ಕೆ ಕೂಡ ಸೂಚನೆ ನೀಡಿದ್ದಾರೆ.

Read More »

ಶಿವಮೊಗ್ಗದಲ್ಲಿ ಇಂದಿನಿಂದ ಶಾಲೆ ಕಾಲೇಜ್ ಪ್ರಾರಂಭ

ಶಿವಮೊಗ್ಗ: ಹಿಜಾಬ್‌ ವಿವಾದ, ಕರ್ಫ್ಯೂ ಹಿನ್ನೆಲೆಯಲ್ಲಿ 15 ದಿನದಿಂದ ಶಿವಮೊಗ್ಗ ನಗರದಲ್ಲಿ ಬಂದ್‌ ಆಗಿದ್ದ ಶಾಲಾ-ಕಾಲೇಜುಗಳು ಸೋಮವಾರದಿಂದ ಆರಂಭ ಗೊಳ್ಳಲಿದೆ. ಹಿಜಾಬ್‌ ವಿವಾದದ ಹಿನ್ನೆಲೆಯಲ್ಲಿ ಕೆಲ ಕಾಲೇಜುಗಳಲ್ಲಿ ಕಲ್ಲು ತೂರಾಟ, ಭಗವಾಧ್ವಜ ಹಾರಾಟ ವಿವಾದ ನಡೆದಿತ್ತು. ಹಲವೆಡೆ ಘರ್ಷಣೆಗಳು ಕೂಡ ನಡೆದಿದ್ದವು. ವಿದ್ಯಾರ್ಥಿನಿಯರು ಹಿಜಾಬ್‌ಗ ಅವಕಾಶ ನೀಡುವಂತೆ ಪಟ್ಟು ಹಿಡಿದು ಪ್ರತಿಭಟನೆ ಕೂಡ ನಡೆಸಿದ್ದರು. ಇದರಿಂದ ಶಿಕ್ಷಣ ಸಂಸ್ಥೆಗಳಲ್ಲಿ ಶಾಂತಿಭಂಗವಾಗಿತ್ತು. ಇದನ್ನು ಹತೋಟಿಗೆ ತರಲು ಕೆಲ ದಿನ ಶಾಲೆಗಳಿಗೆ ರಜೆ …

Read More »