Breaking News

ಇಂದು ಪವರ್ ಸ್ಟಾರ್ ಅಭಿನಯದ ಜೇಮ್ಸ್ ಚಿತ್ರದ ಸಾಂಗ್ ರಿಲೀಸ್

ಪುನೀತ್​ ರಾಜ್​ಕುಮಾರ್ ಅಭಿಮಾನಿಗಳಿಗೆ ಇಂದು ಮಾರ್ಚ್​ 1 ವಿಶೇಷ ದಿನ.ಅವರು ಹೀರೋ ಆಗಿ ನಟಿಸಿದ ಕೊನೆಯ ಸಿನಿಮಾ ‘ಜೇಮ್ಸ್​’ನ ಲಿರಿಕಲ್​ ಸಾಂಗ್​​, ‘ಟ್ರೇಡ್​ಮಾರ್ಕ್​. ಬೆಳಗ್ಗೆ 11:11ಕ್ಕೆ ರಿಲೀಸ್​ ಆಗುತ್ತಿದೆ. ಈ ವಿಚಾರವನ್ನು ಈ ಮೊದಲು ಚಿತ್ರತಂಡ ಘೋಷಣೆ ಮಾಡಿತ್ತು.

ಹೀಗಾಗಿ, ಅಭಿಮಾನಿಗಳು ಈ ಸಾಂಗ್​ ಕೇಳೋಕೆ ಕಾದು ಕೂತಿದ್ದಾರೆ. ಈಗಾಗಲೇ ಟೀಸರ್​ ಮೂಲಕ ಈ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಈಗ ಚಿತ್ರದ ಹಾಡು ಹೇಗಿರಲಿದೆ ಎಂಬುದನ್ನು ನೋಡೋಕೆ ಅಭಿಮಾನಿಗಳು ಕಾದಿದ್ದಾರೆ.

ಲಿರಿಕಲ್​ ಸಾಂಗ್​ ರಿಲೀಸ್ ಮಾಡುವಾಗ ಅದಕ್ಕೊಂದು ಸಿದ್ಧಸೂತ್ರವಿದೆ. ಸಿನಿಮಾದ ಸ್ಟಿಲ್​ಗಳನ್ನು ಹಾಕಿ, ಬ್ಯಾಕ್​ಗ್ರೌಂಡ್​ನಲ್ಲಿ ಸಾಂಗ್​ ಹಾಕಲಾಗುತ್ತದೆ. ಬಹುತೇಕರು ಹೀಗೆಯೇ ಮಾಡುತ್ತಾರೆ. ಆದರೆ, ‘ಟ್ರೇಡ್​ಮಾರ್ಕ್​’ ಲಿರಿಕಲ್​ ಸಾಂಗ್​ ಆ ರೀತಿಯಲ್ಲಿ ಇರುವುದಿಲ್ಲ ಎಂಬುದನ್ನು ಇತ್ತೀಚೆಗೆ ಚೇತನ್​ ಕುಮಾರ್ ಹೇಳಿದ್ದರು. ‘ಟ್ರೇಡ್​ಮಾರ್ಕ್​ ಸಾಂಗ್​ಅನ್ನು 5 ಗಾಯಕರು ಹಾಡಿದ್ದಾರೆ.

Share News

About admin

Check Also

ಉಡುಪಿ: ಮದುವೆ ನಿರಾಕರಿಸಿದ ವ್ಯಕ್ತಿಯನ್ನು ಬೆದರಿಸಿ 42ಲಕ್ಷ ರೂ. ಹಣ ವಸೂಲಿ; ಶಿಕ್ಷಕಿ ಸಹಿತ ಇಬ್ಬರ ಬಂಧನ

ಉಡುಪಿ: ಮದುವೆ ಪ್ರಸ್ತಾಪ ನಿರಾಕರಿಸಿದ ವ್ಯಕ್ತಿಗೆ ಸುಳ್ಳು ಪ್ರಕರಣ ದಾಖಲಿಸುವುದಾಗಿ ಬೆದರಿಸಿ ₹42.97 ಲಕ್ಷ ವಸೂಲಿ ಮಾಡಿ ವಂಚಿಸಿದ ಆರೋಪದಲ್ಲಿ …

Leave a Reply

Your email address will not be published. Required fields are marked *