Breaking News

Breaking News

ಕೇಂದ್ರ ಸಚಿವ ಅಜಯ್‌ ಮಿಶ್ರಾ ಅವರ ಪುತ್ರ ಆಶಿಶ್‌ ಮಿಶ್ರಾ ಬಿಡುಗಡೆ

ಲಖನೌ: ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದ ಪ್ರಮುಖ ಆರೋಪಿ, ಕೇಂದ್ರ ಸಚಿವ ಅಜಯ್‌ ಮಿಶ್ರಾ ಅವರ ಪುತ್ರ ಆಶಿಶ್‌ ಮಿಶ್ರಾ ಅವರನ್ನು ಜಾಮೀನಿನ ಮೇಲೆ ಜೈಲಿನಿಂದ ಮಂಗಳವಾರ ಬಿಡುಗಡೆ ಮಾಡಲಾಗಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಲಖಿಂಪುರ ಖೇರಿಯಲ್ಲಿ ಕೃಷಿ ಕಾಯ್ದೆಗಳ ವಿರುದ್ದ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಆಶಿಶ್‌ ಮಿಶ್ರಾ ಅವರ ಬೆಂಗಾವಲು ಪಡೆಯ ವಾಹನ ಹರಿದು ನಾಲ್ಕು ಮಂದಿ ರೈತರು, ಒಬ್ಬ ಸ್ಥಳೀಯ ಪತ್ರಕರ್ತ ಸೇರಿ ಎಂಟು ಮಂದಿ …

Read More »

ಹಿಜಾಬ್ ವಿವಾದಕ್ಕೆ ಮತ್ತೊಂದು ತಿರುವು : ವಿಭಿನ್ನ ರೀತಿಯಲ್ಲಿ ಶಾಲೆಗೆ ಬಂದ ವಿದ್ಯಾರ್ಥಿಗಳು

ದಾವಣಗೆರೆ: ಹಿಜಾಬ್‌ ಜತೆ ಇದೀಗ ಮತ್ತೊಂದು ಹೊಸ ವಿವಾದ ಶುರುವಾಗಿದೆ.ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿ ಗ್ರಾಮದ ಕರ್ನಾಟಕ ಪಬ್ಲಿಕ್‌ ಶಾಲೆಯ ಪ್ರೌಢಶಾಲೆ ವಿಭಾಗದಲ್ಲಿ ಹೊಸದೊಂದು ಘಟನೆ ನಡೆದಿದೆ. ತಲೆಗೆ ಬಿಳಿ ಟೊಪ್ಪಿಗೆ (ತಖೀಯಾ) ಧರಿಸಿ ಮುಸ್ಲಿಂ ವಿದ್ಯಾರ್ಥಿಗಳು ಶಾಲೆಗೆ ಬಂದಿದ್ದಾರೆ. ನಮಾಜ್‌ ಸಂದರ್ಭದಲ್ಲಿ ಮುಸ್ಲಿಮರು ಧರಿಸುವ ಬಿಳಿ ಟೊಪ್ಪಿಗೆ ಧರಿಸಿ ಬಂದಿದ್ದಾರೆ. ಟೊಪ್ಪಿಗೆ ಧರಿಸಿಯೇ ವಿದ್ಯಾರ್ಥಿಗಳು ತರಗತಿ ಪ್ರವೇಶಿಸಿದ್ದಾರೆ. ಹೊಸ ಬಗೆಯ ಸಂಘರ್ಷಕ್ಕೆ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆ …

Read More »

ಜಮೀರ್ ಅಹ್ಮದ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರಮೋದ್ ಮುತಾಲಿಕ್

ಬಾಗಲಕೋಟೆ: ಹಿಜಾಬ್ ವಿಚಾರವಾಗಿ ಶಾಸಕ ಜಮೀರ್ ಅಹ್ಮದ್ ನೀಡಿರುವ ಹೇಳಿಕೆ ಮಹಿಳೆಯರಿಗೆ ಮಾಡಿದ ಅಪಮಾನ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಮೋದ್ ಮುತಾಲಿಕ್, ಹಿಜಾಬ್ ಧರಿಸದೇ ಇದ್ದರೆ ರೇಪ್ ಆಗುತ್ತೆ ಎಂಬ ಜಮೀರ್ ಹೇಳಿಕೆ ಅತ್ಯಂತ ನಿರ್ಲಜ್ಜದ ಹೇಳಿಕೆ.ಈ ದೇಶದಲ್ಲಿ ಹಿಂದೂ ಮಹಿಳೆಯರು ಹಿಜಾಬ್ ಇಲ್ಲದೇ ಜೀವನ ಮಾಡುತ್ತಿದ್ದಾರೆ. ಅವರು ಸುರಕ್ಷಿತರಾಗಿಯೇ ಇದ್ದಾರೆ. ಹೀಗಿರುವಾಗ ಹಿಜಾಬ್ ಇಲ್ಲದಿದ್ದರೆ ಅತ್ಯಾಚಾರವಾಗುತ್ತದೆ ಎಂಬ ರೀತಿಯಲ್ಲಿ ಶಾಸಕರು …

Read More »

ನಟಿ ಭಾರ್ಗವಿ ನಾರಾಯಣ್ ಅವರ ದೇಹದಾನ ಮಾಡುವಂತೆ ಕುಟುಂಬ ನಿರ್ಧಾರ

ಬೆಂಗಳೂರು : ಇಲ್ಲಿಯ ಸೇಂಟ್ ಜಾನ್ ಆಸ್ಪತ್ರೆಗೆ ಹಿರಿಯ ನಟಿ ಭಾರ್ಗವಿ ನಾರಾಯಣ್ ಅವರ ದೇಹದಾನ ಮಾಡಲಾಗಿದೆ. ಬೆಳಿಗ್ಗೆ 11 ಗಂಟೆಯವರೆಗೆ ಭಾರ್ಗವಿ ಅವರ ಸ್ವಗೃಹದಲ್ಲಿಯೇ ಅಂತಿಮ ದರ್ಶನಕ್ಕೆ ಏರ್ಪಾಡು ಮಾಡಲಾಗಿತ್ತು. ನಂತರ ಅಲ್ಲಿಂದ ಪಾರ್ಥಿವ ಶರೀರವನ್ನು ಸೇಂಟ್ ಜಾನ್ ಆಸ್ಪತ್ರೆಗೆ ರವಾನಿಸಲಾಯಿತು. ದೇಹದಾನ ಮತ್ತು ಕಣ್ಣುದಾನ ಮಾಡಬೇಕು ಎನ್ನುವುದು ಸ್ವತಃ ಭಾರ್ಗವಿ ನಾರಾಯಣ್ ಅವರ ಬಯಕೆಯಾಗಿತ್ತು. ಈ ನಿಟ್ಟಿನಲ್ಲಿ ಕುಟುಂಬವು ಅವರ ಆಸೆಯನ್ನು ಈಡೇರಿಸಿದೆ ಎಂದು ನಟ, ನಿರ್ದೇಶಕ …

Read More »

ಫೆ.16 ರಿಂದ ಪಿಯುಸಿ, ಪದವಿ ತರಗತಿಗಳು ಆರಂಭ

ಬೆಂಗಳೂರು :ಪಿಯುಸಿ, ಪದವಿ ತರಗತಿಗಳು ಫೆ.16 ಬುಧವಾರದಿಂದ ಆರಂಭವಾಗಲಿದೆ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ. ರಾಜ್ಯದಲ್ಲಿ ಸಮವಸ್ತ್ರ ವಿವಾದ ಭುಗಿಲೆದ್ದಿದ್ದು, ಈ ಸಂಬಂಧ ಸಿಎಂ ‘ಬಸವರಾಜ ಬೊಮ್ಮಾಯಿ’ ನೇತೃತ್ವದಲ್ಲಿ ಮಹತ್ವದ ನಡೆದಿದೆ.ಸಭೆ ಬಳಿಕ ಮಾತನಾಡಿದ ಸಚಿವರು ಫೆ.16 ಬುಧವಾರದಿಂದ ಪಿಯುಸಿ, ಪದವಿ ತರಗತಿಗಳು ಆರಂಭವಾಗಲಿದೆ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ. ಹೈಕೋರ್ಟ್ ಸೂಚನೆಯಂತೆ ಕಾಲೇಜು ಪ್ರಾರಂಭಿಸಿದ್ದೇವೆ, ಹೈಕೋರ್ಟ್ ಆದೇಶ ಪಾಲಿಸಬೇಕು. ಆದೇಶವನ್ನು ಕಟ್ಟುನಿಟ್ಟಾಗಿ ಪಾಲನೆ …

Read More »

ಏರ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಇಲ್ಕರ್ ಐಸಿ ನೇಮಕ

ದೆಹಲಿ: ಟಾಟಾ ಸನ್ಸ್ ಟರ್ಕಿಯ ಏರ್‌ಲೈನ್ಸ್‌ನ ಮಾಜಿ ಅಧ್ಯಕ್ಷ ʻಇಲ್ಕರ್ ಐಸಿʼ ಅವರನ್ನು ಏರ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸಿದೆ. ನಿಯಮಿತ ಚರ್ಚೆಗಳ ನಂತರ ಮಂಡಳಿಯು ಏರ್ ಇಂಡಿಯಾದ CEO ಮತ್ತು MD ಆಗಿ ಇಲ್ಕರ್ ಐಸಿಯ ನೇಮಕವನ್ನು ಅನುಮೋದಿಸಿದೆ. ಈ ನೇಮಕಾತಿಯು ಅಗತ್ಯ ನಿಯಂತ್ರಣ ಅನುಮೋದನೆಗಳಿಗೆ ಒಳಪಟ್ಟಿರುತ್ತದೆ ಎಂದು ಟಾಟಾ ಸನ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.

Read More »

ಸಿಲಿಕಾನ್ ಸಿಟಿ ಅಭಿವೃದ್ಧಿಗೆ ಅನುದಾನ ಬಿಡುಗಡೆ : ಥಾವರ್‌ಚಂದ್‌ ಗೆಹಲೋತ್‌

ವಿಧಾನಸಭೆ : ಬೆಂಗಳೂರು ನಗರದ ಅಭಿವೃದ್ಧಿ ಕಾರ್ಯ ಮತ್ತು ಮೂಲಸೌಕರ್ಯ ಕಲ್ಪಿಸಲು ರಾಜ್ಯ ಸರ್ಕಾರ 8,015 ಕೋಟಿ ರು. ಅನುಮೋದನೆ ನೀಡಿದ್ದು, 2022-23ರಲ್ಲಿ ಬೆಂಗಳೂರು ಮೆಟ್ರೋ ರೈಲು ಯೋಜನೆ ಎರಡನೇ ಹಂತವನ್ನು ಪೂರ್ಣಗೊಳಿಸಲಾಗುವುದು ಎಂದು ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌  ಹೇಳಿದ್ದಾರೆ. ಸೋಮವಾರ ವಿಧಾನಮಂಡಲದ ಉಭಯ ಸದನಗಳ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ ಅವರು, ಬೆಂಗಳೂರು ನಗರದ ವ್ಯವಸ್ಥಿತ ಅಭಿವೃದ್ಧಿಗೆ ಸರ್ಕಾರ ಕ್ರಮ ಕೈಗೊಂಡಿದೆ. 8,015 ಕೋಟಿ ರು. ವೆಚ್ಚದಲ್ಲಿ …

Read More »

ರಾಹುಲ್ ಗಾಂಧಿ ವಿರುದ್ಧ 1,000ಕ್ಕೂ ಹೆಚ್ಚು ದೂರುಗಳು ದಾಖಲೆ

ಹೊಸದಿಲ್ಲಿ: ಇತ್ತೀಚೆಗೆ ಆಕ್ಷೇಪಾರ್ಹ ಟ್ವೀಟ್‌ ಮಾಡಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರ ವಿರುದ್ಧ ಮೋರ್ಚಾದ ಸಾವಿರಾರು ಕಾರ್ಯ ಕರ್ತರು ಒಗ್ಗೂಡಿ ರಾಹುಲ್‌ ಗಾಂಧಿ ವಿರುದ್ಧ 1,000ಕ್ಕೂ ಹೆಚ್ಚು ದೂರುಗಳನ್ನು ರಾಜ್ಯದ ಪೊಲೀಸ್‌ ಠಾಣೆಗಳಲ್ಲಿ ದಾಖಲಿಸಿದ್ದಾರೆ ಎಂದು ಮೋರ್ಚಾ ಹೇಳಿದೆಯಾದರೂ, ಯಾವ ಪೊಲೀಸ್‌ ಠಾಣೆಗಳಲ್ಲಿ ಎಷ್ಟೆಷ್ಟು ದೂರುಗಳು ದಾಖಲಾಗಿವೆ ಎಂಬ ಮಾಹಿತಿಯನ್ನು ನೀಡಿಲ್ಲ. ರಾಹುಲ್‌ ಗಾಂಧಿಯವರು ಇತ್ತೀಚೆಗೆ ಭಾರತದ ಉದ್ದಗಲಗಳ ಬಗ್ಗೆ ಟ್ವೀಟ್‌ ಮಾಡಿ, ಕಾಶ್ಮೀರದಿಂದ ಕೇರಳದ ವರೆಗೆ, ಗುಜರಾತ್‌ನಿಂದ ಪಶ್ಚಿಮ …

Read More »

ಗೋಕರ್ಣದಲ್ಲಿ ವಿದೇಶಿ ಪ್ರವಾಸಿಗ ಸಾವು

ಗೋಕರ್ಣ: ಇಲ್ಲಿಯ ಮೇನ್ ಬೀಚಿನಲ್ಲಿರುವ ಕರಿಯಪ್ಪ ಕಟ್ಟೆಯ ಬಳಿ ಖಾಸಗಿ ವಸತಿ ಗೃಹದಲ್ಲಿ ನೆಲೆಸಿದ್ದ ಎಸ್ಟೋನಿಯಾ ದೇಶದ ಪ್ರಜೆ ಕಾಸಿಕ್ ಮಾರ್ಟಿನ್ (45) ಸೋಮವಾರ ಮಧ್ಯರಾತ್ರಿ ಮೃತಪಟ್ಟಿದ್ದಾರೆ. ಇವರು ಸೋಮವಾರ ಸಂಜೆಯಷ್ಟೇ ಗೋಕರ್ಣಕ್ಕೆ ಬಂದಿದ್ದರು. ಸಾವಿಗೆ ಕಾರಣ ತಿಳಿದು ಬಂದಿಲ್ಲ. ವಸತಿ ಗೃಹದ ಮಾಲೀಕರು ರಾತ್ರಿ ನೋಡಿದಾಗ ಮೃತಪಟ್ಟ ಸ್ಥಿತಿಯಲ್ಲಿದ್ದರು. ಕೂಡಲೇ ಅವರು ಪೊಲೀಸರಿಗೆ ತಿಳಿಸಿದ್ದಾರೆ. ಗೋಕರ್ಣ ಠಾಣಿಯಲ್ಲಿ ಪ್ರಕರಣ ದಾಖಲಾಗಿದ್ದು, ಶವವನ್ನು ಮರಣೋತ್ತರ ಪರೀಕ್ಷೆ ಮತ್ತು ಹೆಚ್ಚಿನ ತನಿಖೆಗಾಗಿ …

Read More »

ರಾಜ್ಯದಲ್ಲಿ 1568 ಜನರಿಗೆ ಕೊರೋನಾ ದೃಢ

ಬೆಂಗಳೂರು: ರಾಜ್ಯದಲ್ಲಿ ಇಂದು 1568 ಜನರಿಗೆ ಕೊರೋನಾ ಸೋಂಕು ತಗುಲಿದೆ. 25 ಜನ ಸೋಂಕಿತರು ಮೃತಪಟ್ಟಿದ್ದಾರೆ. 6025 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದುವರೆಗೆ 38,57,323 ಜನ ಗುಣಮುಖರಾಗಿದ್ದು, 39,665 ಜನ ಸೋಂಕಿತರು ಮೃತಪಟ್ಟಿದ್ದಾರೆ.ಒಟ್ಟು ಸೋಂಕಿತರ ಸಂಖ್ಯೆ 39,28,237 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ 31,215 ಸಕ್ರಿಯ ಪ್ರಕರಣಗಳಿವೆ. ಪಾಸಿಟಿವಿಟಿ ದರ ಶೇಕಡ 2.25 ರಷ್ಟು ಇದೆ. ಬೆಂಗಳೂರಿನಲ್ಲಿ ಇಂದು 754 ಜನರಿಗೆ ಕೊರೋನಾ ಸೋಂಕು ತಗುಲಿದ್ದು, 5 ಜನ ಸೋಂಕಿತರು ಮೃತಪಟ್ಟಿದ್ದಾರೆ. …

Read More »