Breaking News

ಮಕ್ಕಳ ಆಟದ ನೋಟು ತೋರಿಸಿ ವಂಚನೆಗೆ ಯತ್ನ; ಸಿಸಿಬಿ ಬಲೆಗೆ ಬಿದ್ದ ಖದೀಮರು!

ಬೆಳಗಾವಿಯಲ್ಲಿ ₹3 ಕೋಟಿ ನಗದು ನೀಡಿದರೆ ₹5 ಕೋಟಿ ಆನ್‌ಲೈನ್ ಮೂಲಕ ವರ್ಗಾವಣೆ ಮಾಡುವುದಾಗಿ ನಂಬಿಸಿ ಪರಸ್ಪರ ವಂಚಿಸಲು ಯತ್ನಿಸಿದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಶಿವಲಿಂಗಯ್ಯ ಗಣಾಚಾರಿ, ಸಾಗರ ಕಿಳ್ಳಿಕೇತ, ವಿನಾಯಕ ನೋಕರೆ ಹಾಗೂ ಶಿವಾನಂದ ಮುನವಳ್ಳಿ ಬಂಧಿತ ಆರೋಪಿಗಳು. ಮಾರ್ಸ್ ಇನ್‌ಫ್ರಾ ಕಂಪನಿಯ ಹೆಸರನ್ನು ದುರ್ಬಳಕೆ ಮಾಡಿಕೊಂಡು ನಕಲಿ ಬ್ಯಾಂಕ್ ಸ್ಟೇಟ್‌ಮೆಂಟ್ ಸೃಷ್ಟಿಸಿ ಹಣ ವರ್ಗಾವಣೆ ಮಾಡುವುದಾಗಿ ಮೂವರು ಆರೋಪಿಗಳು ನಂಬಿಸಿದ್ದರು. ಮತ್ತೊಂದೆಡೆ ಶಿವಾನಂದ ಕೂಡ ₹3 ಕೋಟಿ ಇದೆ ಎಂದು ತೋರಿಸಲು ಮಕ್ಕಳ ಆಟಿಕೆ ನೋಟುಗಳನ್ನು ಅಸಲಿ ಹಣದಂತೆ ಜೋಡಿಸಿಟ್ಟಿದ್ದ. ನವೆಂಬರ್ 3ರಂದು ಬೆಳಗಾವಿಯ ಶಾಂತಿನಗರದಲ್ಲಿ ಸಿಸಿಬಿ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಅವರಿಂದ ನಗದು, ಏರ್ ಪಿಸ್ತೂಲ್, ಐದು ಮೊಬೈಲ್ ಹಾಗೂ ನಕಲಿ ಬ್ಯಾಂಕ್ ಸ್ಟೇಟ್‌ಮೆಂಟ್ ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ತಿಲಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಮಣಿಪಾಲ: ರಸ್ತೆಯಲ್ಲೇ ಗುಂಪು ಕಟ್ಟಿ ಮಾರಾಮಾರಿ; ವೈರಲ್ ವಿಡಿಯೊ ಆಧರಿಸಿ 11 ಯುವಕರ ವಿರುದ್ಧ ಪ್ರಕರಣ ದಾಖಲು

ಮಣಿಪಾಲದ ಈಶ್ವರನಗರದಲ್ಲಿ ರಾಷ್ಟ್ರೀಯ ಹೆದ್ದಾರಿ 169(A) ಪಕ್ಕದ ಸಾರ್ವಜನಿಕ ರಸ್ತೆಯಲ್ಲಿ ಯುವಕರ ಗುಂಪೊಂದು ಪರಸ್ಪರ ಹೊಡೆದಾಡಿಕೊಂಡ ಘಟನೆ ನಡೆದಿದೆ. ಈ …

Leave a Reply

Your email address will not be published. Required fields are marked *