BigTv News
April 29, 2026
Breaking News
ಬೆಳಗಾವಿ: ಕ್ಯಾಂಪ್ ಫಾತಿಮಾ ಚರ್ಚ್ ಬಳಿಯ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ದಾಳಿ ಮಾಡಿರುವ ಕ್ಯಾಂಪ್ ಠಾಣೆ ಪೊಲೀಸರು ಸುಳಗಾದ ಗಂಗಾರಾಮ ಪರಶುರಾಮ ಸಿಂಗನಗುಡಿ(24)ಯನ್ನು ಬಂಧಿಸಿ 56,500 ರೂ. ಮೌಲ್ಯದ ಗಾಂಜಾ 1.130 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ. ಬೆಳಗಾವಿ ನಗರದಲ್ಲಿ ಗಾಂಜಾ ಮಾರಾಟ ಮಾಡಲು ಮಹಾರಾಷ್ಟ್ರದ ಸೊಲ್ಲಾಪುರದ ಸುನೀಲ ಪೂರೈಕೆ ಮಾಡುತ್ತಿರುವುದಾಗಿ ಆರೋಪಿ ಮಾಹಿತಿ ನೀಡಿದ್ದು, ಆತನ ವಿರುದ್ಧವೂ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Read More »
BigTv News
April 29, 2026
Breaking News
ಹೈದರಾಬಾದ್: ತೆಲಂಗಾಣದ ಮಹಬೂಬಾಬಾದ್ ಜಿಲ್ಲೆಯಲ್ಲಿ 30 ವರ್ಷದ ವ್ಯಕ್ತಿಯೊಬ್ವ, ಕೌಟುಂಬಿಕ ಸಮಸ್ಯೆಗಳಿಂದಾಗಿ ಪತ್ನಿ ಮನೆ ಬಿಟ್ಟು ಹೋದ ಹಿನ್ನೆಲೆ ತನ್ನ ಮೂರು ಮತ್ತು ಐದು ವರ್ಷದ ಇಬ್ಬರು ಗಂಡು ಮಕ್ಕಳನ್ನು ಕೊಂದು, ತಾನು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ. ಸೋಮವಾರ ರಾತ್ರಿ ತೋರೂರು ಹೊರವಲಯದಲ್ಲಿ ಈ ಘಟನೆ ನಡೆದಿದೆ. ಮೃತ ವ್ಯಕ್ತಿ ಅಮ್ಮಾಪುರಂ ನಿವಾಸಿಯಾಗಿದ್ದು, ಕಳೆದ 10 ದಿನಗಳ ಹಿಂದೆ ಪತ್ನಿ ಮನೆ ಬಿಟ್ಟು ಹೋಗಿದ್ದಳು …
Read More »
BigTv News
April 29, 2026
Breaking News
ಕೊಪ್ಪಳ: ಶೋರೂಮ್ ಟ್ರೇಡ್ ಲೈಸನ್ಸ್ ನೀಡಲು ಲಂಚ ಬೇಡಿಕೆಯಿಟ್ಟಿದ್ದ ಆರ್‌ಟಿಒ ಕಚೇರಿಯ ಸಿಬ್ಬಂದಿಯನ್ನು ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಬಂಧಿಸಿರುವ ಘಟನೆ ನಡೆದಿದೆ. ಕೊಪ್ಪಳ ಆರ್‌ಟಿಒ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಎಸ್‌ಡಿಎ ರಂಜಿತ್ ಎಂಬಾತನು ಲೈಸನ್ಸ್ ನೀಡಲು 21 ಸಾವಿರ ಲಂಚ ಕೇಳಿದ್ದನು. ಈ ಸಂಬಂಧ ನಯೀಮ್ ಎಂಬವರು ಲೋಕಾಯುಕ್ತರಿಗೆ ದೂರು ನೀಡಿದ್ದರು. ದೂರು ಆಧರಿಸಿ ಲೋಕಾಯುಕ್ತರು ಕಾರ್ಯಾಚರಣೆ ನಡೆಸಿ, ನಯೀಮ್ ಅವರು ಹಣ ನೀಡುವ ವೇಳೆ ರಂಜಿತ್‌ನನ್ನು ಬಂಧಿಸಿದ್ದಾರೆ. …
Read More »
BigTv News
April 29, 2026
Breaking News
ಬೆಂಗಳೂರು: ಮಡಿವಾಳ ಚೆಕ್‌ಪೋಸ್ಟ್ ಬಳಿಯ ಪಾದಚಾರಿ ಮಾರ್ಗದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ 6 ಮಂದಿ ವಿದೇಶಿ ಮಹಿಳೆಯರನ್ನು ಸಿಸಿಬಿ ಮಹಿಳಾ ರಕ್ಷಣಾ ದಳ ಸಿಬ್ಬಂದಿ ವಶಕ್ಕೆ ಪಡೆದುಕೊಂಡಿದ್ದಾರೆ. ನೈಜೀರಿಯಾ ಮತ್ತು ಉಗಾಂಡ ದೇಶದ ವಿದೇಶಿ ಮಹಿಳೆಯರು ವೀಸಾ ಅವಧಿ ಮುಕ್ತಾಯಗೊಂಡಿ ದ್ದರೂ ನಗರದಲ್ಲಿ ಅಕ್ರಮವಾಗಿ ವಾಸ ವಾಗಿದ್ದರು. ಮಡಿವಾಳ ಬಸ್ ನಿಲ್ದಾಣದ ಪಾದಚಾರಿ ಮಾರ್ಗದ ಬಳಿ ನಿಂತುಕೊಂಡು ರಸ್ತೆಯಲ್ಲಿ ಓಡಾಡುವ ಪುರುಷರನ್ನು ವೇಶ್ಯವಾಟಿಕೆಗೆ ಪ್ರಚೋದಿಸುತ್ತಿದ್ದರು. ಈ ಕುರಿತು ಸ್ಥಳೀಯರು ಪೊಲೀಸರಿಗೆ …
Read More »
BigTv News
April 29, 2026
Breaking News
ಬೆಂಗಳೂರಿನಲ್ಲಿ ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸಿದ್ದು ಒಂದೇ ವಾರದಲ್ಲಿ 50 ಕೋಟಿ ಮೌಲ್ಯದ ಡ್ರಗ್ಸ್ ಸಿಜ್ ಮಾಡಿದ್ದಾರೆ ಬೆಂಗಳೂರಿನ ಬಾಗಲೂರು ಪೊಲೀಸರು 16 ಕೋಟಿ ಮೌಲ್ಯದ ಎಲ್‌ಎಸ್‌ಡಿ ಪಕ್ಷಕ್ಕೆ ಪಡೆದಿದ್ದಾರೆ. ಸಿಸಿಬಿ ಪೊಲೀಸರಿಂದ 17.5 ಕೋಟಿ ಮೌಲ್ಯದ ಎಂ ಡಿ ಎಂ ಎ ವಶಕ್ಕೆ ಪಡೆಯಲಾಗಿದೆ. ಯಶವಂತಪುರ ಜಾಲಹಳ್ಳಿಯಲ್ಲಿ 6.47 ಕೋಟಿ ಮಾಡಿದ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ ಹಾಡುಗೋಡಿ ಪೊಲೀಸ್ರಿಂದ 1.5 ಕೋಟಿ ಮೌಲ್ಯದ ಗ್ರೌಂಡ್ ಶುಗರ್ ಜಪ್ತಿ ಮಾಡಲಾಗಿದ್ದು …
Read More »
BigTv News
April 29, 2026
Breaking News
ಮುಂಬೈ: ಭದ್ರತಾ ಸಿಬ್ಬಂದಿಯ ಹೆಸರು ಮತ್ತು ಧರ್ಮ ಕೇಳಿ ಇಸ್ಲಾಮಿಕ್ ಶ್ಲೋಕ ಪಠಿಸಲು ಹೇಳಿ ಚಾಕುವಿನಿಂದ ಇರಿದ ಘಟನೆ ಮುಂಬೈ ಸಮೀಪದ ಮೀರಾ ರೋಡ್‌ನಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 31 ವರ್ಷದ ಭಾನುವಾರ ಮುಂಜಾನೆ ಮೀರಾ ರೋಡ್‌ನ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ರಾಜ್‌ಕುಮಾರ್ ಮಿಶ್ರಾ ಮತ್ತು ಸುಬ್ರೋಟೊ ಸೇನ್ ಎಂಬ ಇಬ್ಬರು ಸೆಕ್ಯುರಿಟಿ ಗಾರ್ಡ್ ಕರ್ತವ್ಯದಲ್ಲಿದ್ದರು. ಅಲ್ಲಿಗೆ ಬಂದ ಆರೋಪಿ ಅನ್ಸಾರಿ, ಅವರ ಹೆಸರು ಮತ್ತು ಧರ್ಮವನ್ನು ಕೇಳಿದ್ದಾನೆ. ಬಳಿಕ …
Read More »
BigTv News
April 29, 2026
Breaking News
ಚಾಮರಾಜನಗರ: ಚಿನ್ನಾಭರಣದ ವಿಚಾರಕ್ಕೆ ಮದುವೆ ಮನೆಯಲ್ಲಿ ಮಾರಾಮಾರಿ ನಡೆದ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ನಡೆದಿದೆ. 70 ಗ್ರಾಂ ಚಿನ್ನದ ವ್ಯತ್ಯಾಸಕ್ಕಾಗಿ ವಧು-ವರರ ಕಡೆಯವರು ಬೀದಿ ಕಾಳಗಕ್ಕಿಳಿದಿದ್ದು, ಚಾಕು ಇರಿತದಂತಹ ಘಟನೆ ನಡೆದಿದ್ದು ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಕೊಳ್ಳೇಗಾಲದ ಆರ್.ಎಸ್.ಫಂಕ್ಷನ್ ಹಾಲ್‌ನಲ್ಲಿ ಬುಧವಾರ ಮದುವೆ ನಿಶ್ಚಯವಾಗಿತ್ತು. ಮಂಗಳವಾರ ರಾತ್ರಿ ನಡೆದ ಅರಶಿಣ ಶಾಸ್ತ್ರದ ಕಾರ್ಯಕ್ರಮಕ್ಕೆ ವರನ ಕಡೆಯವರು ತಡವಾಗಿ ಬಂದಿದ್ದು ಮೊದಲ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ನಡುವೆ, ವಧುವಿನ …
Read More »
BigTv News
April 29, 2026
Breaking News
ಉಡುಪಿ: ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಆತ್ರಾಡಿ ಮದಗದಲ್ಲಿ ನಾಲ್ಕು ವರ್ಷಗಳ ಹಿಂದೆ ನಡೆದಿದ್ದ ತಾಯಿ ಮತ್ತು ಮಗಳ ಹತ್ಯೆ ಪ್ರಕರಣದ ಆರೋಪಿಗೆ ಉಡುಪಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ₹20 ಸಾವಿರ ದಂಡ ವಿಧಿಸಿ ಗುರುವಾರ ಮಹತ್ವದ ತೀರ್ಪು ನೀಡಿದೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದ ಹರೀಶ್ ಆರ್. ಅಲಿಯಾಸ್ ಗಣೇಶ (33) ಶಿಕ್ಷೆಗೆ ಗುರಿಯಾದ ಆರೋಪಿ. ತಮಿಳುನಾಡು ಮೂಲದ ಚೆಲುವಿ …
Read More »
BigTv News
April 29, 2026
Breaking News
ಬೆಳಗಾವಿ : ಪೊಲೀಸರ ಕಿರುಕುಳದಿಂದ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಮೂರು ಪೊಲೀಸರನ್ನು ಸಸ್ಪೆಂಡ್ ಮಾಡಲಾಗಿದೆ ಹೆಡ್ ಕಾನ್ಸ್ಟೇಬಲ್ ಚಂದ್ರು ನಡುವಿನಮನಿ ಕಿರಣ ಡೊಕ್ಕಣ್ಣನವರ್ ಹಾಗೂ ಸಯ್ಯದ್ ತಹಶೀಲ್ದಾರ್ ಸಸ್ಪೆಂಡ್ ಆಗಿದ್ದಾರೆ. ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಯ ಪೇದೆಗಳು ಅಮಾನತು ಆಗಿದ್ದಾರೆ. ಪೊಲೀಸರ ಕಿರುಕುಳದಿಂದ ವಿದ್ಯಾರ್ಥಿ ಆದಿತ್ಯ ಆತ್ಮಹತ್ಯೆಗೆ ಶರಣಾಗಿದ್ದ. ಶನಿವಾರ ಆದಿತ್ಯ ಮತ್ತು ಕೆಲವು ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಗಾಂಜಾ ಸೇವನೆ ಆರೋಪದಲ್ಲಿ ವಶಕ್ಕೆ ಪಡೆದಿರುತ್ತಾರೆ. …
Read More »
BigTv News
April 29, 2026
Breaking News
ಹಾಸನ: ಚನ್ನರಾಯಪಟ್ಟಣ ತಾಲ್ಲೂಕಿನ ಮಟ್ಟನವಿಲೆ ಗ್ರಾಮದ ಮನೆಯ ಬೀಗ ಮುರಿದು ₹1.45 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ. ಗ್ರಾಮದ ಯಶ್ವಂತ್ ಕುಟುಂಬದವರು ಏ.27ರಂದು ಚನ್ನರಾಯಪಟ್ಟಣದಲ್ಲಿ ನೆಂಟರ ಮದುವೆಗಾಗಿ ಮನೆಗೆ ಬೀಗ ಹಾಕಿ ತೆರಳಿದ್ದರು. ಮಧ್ಯಾಹ್ನ 1 ಗಂಟೆಗೆ ಮನೆಗೆ ಬಂದು ನೋಡಿದಾಗ, ಮನೆಯ ಮುಂಬಾಗಿಲ ಬೀಗ ಹಾಕಿದ್ದು, ಕೊಟ್ಟಿಗೆಯ ಬಾಗಿಲನ್ನು ತೆರೆದ ಕಳ್ಳರು, ಮನೆಯ ಒಳಗೆ ನುಗ್ಗಿ ಬೀರುವಿನಲ್ಲಿ ಇಟ್ಟಿದ್ದ 25 ಗ್ರಾಂ ಚಿನ್ನಾಭರಣ ಕಳವು ಮಾಡಿರುವುದು ಗೊತ್ತಾಗಿದೆ. …
Read More »