Breaking News

Breaking News

ಹಾಸನದ ಪಶುವೈದ್ಯಕೀಯ ಕಾಲೇಜಿನಲ್ಲಿ ರ‍್ಯಾಗಿಂಗ್​​​​ ಆರೋಪ, 7 ವಿದ್ಯಾರ್ಥಿಗಳು ಅಮಾನತು

ಹಾಸನ : ನಗರದಲ್ಲಿರುವ ಸರ್ಕಾರಿ ಪಶುವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ನಿಲಯದಲ್ಲಿ ಹಿರಿಯ ವಿದ್ಯಾರ್ಥಿಗಳು ಕಿರಿಯರ ಮೇಲೆ ದೌರ್ಜನ್ಯ ಎಸಗಿದ್ದು , ಅಮಾನವೀಯವಾಗಿ ನಡೆಸಿಕೊಂಡು ರ‍್ಯಾಗಿಂಗ್ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಹಾಸ್ಟೆಲ್ ಆವರಣದಲ್ಲಿ ತಡರಾತ್ರಿ ಈ ಘಟನೆ ಸಂಭವಿಸಿದೆ. ಪಶುವೈದ್ಯಕೀಯ ಕಾಲೇಜಿನ ಮೊದಲ ವರ್ಷದ ವಿದ್ಯಾರ್ಥಿಗಳಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರುಕುಳ ನೀಡಲಾಗಿದೆ ಎಂದು ಹೇಳಲಾಗಿದೆ. ಈ ವಿಷಯವು ಕಾಲೇಜು ಆಡಳಿತ ಮಂಡಳಿಯ ಗಮನಕ್ಕೆ ಬರುತ್ತಿದ್ದಂತೆಯೇ, ಪ್ರಾಥಮಿಕ ತನಿಖೆ …

Read More »

ಕಬ್ಬನ್ ಪಾರ್ಕ್ ನಲ್ಲಿ ವ್ಯಕ್ತಿ ಆತ್ಮಹತ್ಯೆ ಕೇಸ್, ದೊಡ್ಡ ಜಾಲ ಭೇದಿಸಿದ ಪೊಲೀಸರು

ಬೆಂಗಳೂರು : ನಗರದ ಹೃದಯಭಾಗದ ಕಬ್ಬನ್ ಪಾರ್ಕ್ ಸಮೀಪ ಸಂಭವಿಸಿದ ವ್ಯಕ್ತಿಯೊಬ್ಬನ ನಿಗೂಢ ಸಾವು ರಾಜಧಾನಿಯಲ್ಲಿ ತಲ್ಲಣ ಮೂಡಿಸಿತ್ತು. ಆರಂಭದಲ್ಲಿ ಇದನ್ನು ಸಾಮಾನ್ಯ ಆತ್ಮಹತ್ಯೆ ಎಂದು ಭಾವಿಸಲಾಗಿತ್ತಾದರೂ, ಪೊಲೀಸರು ನಡೆಸಿದ ಆಳವಾದ ತನಿಖೆ ಆಘಾತಕಾರಿ ಸಂಗತಿಗಳನ್ನು ಹೊರಹಾಕಿದೆ. ಮೃತಪಟ್ಟ ವ್ಯಕ್ತಿಯ ಸಾವಿನ ಹಿಂದೆ ದೊಡ್ಡ ಜಾಲವೊಂದು ಕಾರ್ಯನಿರ್ವಹಿಸಿರುವುದು ಈಗ ದೃಢಪಟ್ಟಿದೆ. ರಾಜಸ್ಥಾನ ಮೂಲದ ತಂಡವೊಂದು ಈ ಪ್ರಕರಣದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದ್ದು, ಅವರು ವ್ಯವಸ್ಥಿತವಾಗಿ ಜನರನ್ನು ಗುರಿಯಾಗಿಸಿಕೊಂಡು ಹಣಕ್ಕಾಗಿ ಪೀಡಿಸುತ್ತಿದ್ದರು …

Read More »

ಮಚ್ಚಿನಿಂದ ಬೀದಿ ನಾಯಿಯ ಕೊಚ್ಚಿದ ಎಳನೀರು ವ್ಯಾಪಾರಿ!

ಬೆಂಗಳೂರು: ಬೀದಿ ನಾಯಿ ಮೇಲೆ ಎಳನೀರು ವ್ಯಾಪಾರಿಯೊಬ್ಬ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಕೆ.ಆರ್‌.ಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಸಂಬಂಧ ಭಾರತಿನಗರ ನಿವಾಸಿ ವಿಕಾಸ್‌ ಎಂಬುವರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಏ.25 ರ ಬೆಳಗ್ಗೆ 8.30ಕ್ಕೆ ಈ ಘಟನೆ ನಡೆದಿದ್ದು ಶ್ವಾನದ ಮೇಲೆ ಹಲ್ಲೆ ನಡೆಸುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಿರಿಯ ನಾಗರಿಕರೊಬ್ಬರು ಬೀದಿ ನಾಯಿಯನ್ನು …

Read More »

ಬೆಂಗಳೂರು | ₹1 ಕೋಟಿಯ ಚಿನ್ನಾಭರಣ ಕಳವು: ಆರೋಪಿಗಾಗಿ ಹುಡುಕಾಟ

ಅಮೆರಿಕದಿಂದ ಸಹೋದರಿ ಮಗನ ಮದುವೆಗೆ ಬಂದಿದ್ದ ವೈದ್ಯೆಯೊಬ್ಬರ ₹1 ಕೋಟಿ ಮೌಲ್ಯದ 725 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಲಾಗಿದೆ.ವೈದ್ಯೆ ಸಿರುವೆಲ್ಲ ಶ್ರೀದೇವಿ ಎಂಬುವರು ನೀಡಿದ ದೂರಿನ ಮೇರೆಗೆ ಅಪರಿಚಿತ ವ್ಯಕ್ತಿಯ ವಿರುದ್ಧ ಆವಲಹಳ್ಳಿ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ. ಅಮೆರಿಕದಲ್ಲಿ ವಾಸವಿರುವ ದೂರುದಾರೆ ಏಪ್ರಿಲ್ 18ರಂದು ನಗರಕ್ಕೆ ಬಂದು, ಬಳ್ಳಾರಿ ರಸ್ತೆಯ ಗಂಗಾನಗರದಲ್ಲಿರುವ ಸಹೋದರರ ಮನೆಯಲ್ಲಿ ತಂಗಿದ್ದರು. ಏಪ್ರಿಲ್ 22ರಂದು ಹಳೇ ಮದ್ರಾಸ್ ರಸ್ತೆಯ ಎಸ್‌ಡಿಪಿ ಕಲ್ಯಾಣ …

Read More »

ಚಿನ್ನಾಭರಣ ಕದ್ದವನ ಬಂಧನ

ಬಾಗೇಪಲ್ಲಿ: ತಾಲೂಕಿನ ಮೊಟುಕುಪಲ್ಲಿ ಗ್ರಾಮದಲ್ಲಿ 10 ದಿನಗಳ ಹಿಂದೆ ಕಳವಾಗಿದ್ದ 230 ಗ್ರಾಂ ಚಿನ್ನಾಭರಣವನ್ನು ಬಾಗೇಪಲ್ಲಿ ಪೊಲೀಸರು ವಶಕ್ಕೆ ಪಡೆದು ಆರೋಪಿಯನ್ನು ಬಂಧಿಸಿದ್ದಾರೆ. ಮೊಟುಕುಪಲ್ಲಿ ಗ್ರಾಮದ ಗಂಧರ್ವರೆಡ್ಡಿ ಆರೋಪಿ. ತಾಲೂಕಿನ ಕಸಬಾ ಹೋಬಳಿಯ ಮೊಟುಕುಪಲ್ಲಿ ಗ್ರಾಮದ ಶಿವಕುಮಾರ್​ ಮನೆಯಲ್ಲಿ ಏ.15 ರಂದು ಕಳ್ಳತನ ನಡೆದಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಬಾಗೇಪಲ್ಲಿಯ ಸರ್ಕಲ್​ ಇನ್​ಸ್ಪೆಕ್ಟರ್​ ನೇತೃತ್ವದಲ್ಲಿ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿ ಗಂಧರ್ವರೆಡ್ಡಿಯನ್ನು ಬಂಧಿಸಿ 230 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. ದೂರು …

Read More »

ಬೆಂಗಳೂರಲ್ಲಿ ಆಸ್ತಿ ವಿವಾದ ಹಿನ್ನೆಲೆ, ಕುಟುಂಬ ಸಮೇತ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನ!

ಬೆಂಗಳೂರಲ್ಲಿ ಆಸ್ತಿ ವಿವಾದ ಹಿನ್ನಲೆಯಲ್ಲಿ ಕುಟುಂಬ ಸಮೇತ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿರುವ ಘಟನೆ ವರದಿಯಾಗಿದೆ. ಸ್ವಲ್ಪ ಎಚ್ಚರ ತಪ್ಪಿದ್ರೂ ಕುಟುಂಬ ಸಮೇತ ಮನೆ ಸುಡಲು ಯತ್ನಿಸಲಾಗಿದೆ. ಬೆಂಗಳೂರಿನ ಜಯನಗರದ ಭೈರಸಂದ್ರದಲ್ಲಿ ಸೋದರಿಯಿಂದ ಕೃತ್ಯ ನಡೆದಿದೆ. ಮನೆಯ ಕಿಟಕಿ ಬಾಗಿಲು ಮುರಿದು ಒಳಗೆ ನುಗ್ಗುಲು ಪ್ರಯತ್ನಿಸಲಾಗಿದೆ. ಅಲ್ಲದೇ ಮಚ್ಚು ದೊಣ್ಣೆಗಳಿಂದ ಹಲ್ಲೆ ನಡೆಸಿ ಜೀವಂತ ಸುಡುವುದಾಗಿ ಧಮ್ಕಿ ಹಾಕಲಾಗಿದೆ. ಮನೆಗೆ ಅಳವಡಿಸಿದ್ದ ಸಿಸಿ ಕ್ಯಾಮರಾ ಒಡೆದು ಹಾಕಿ ದಬ್ಬಾಳಿಕೆ …

Read More »

ಅಂತರರಾಜ್ಯ ಕಳ್ಳನ ಬಂಧನ

ಉಡುಪಿ: ಬೈಂದೂರಿನ ಪಡುವರಿ ಗ್ರಾಮದ ಗುರುಕಿರಣ್‌ ಪಟ್ವಾಲ್‌ ಎಂಬುವವರ ಮನೆಯೊಳಗೆ ನುಗ್ಗಿ ನಗದು, ಚಿನ್ನಾಭರಣ ಕಳವು ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಅಂತರರಾಜ್ಯ ಕಳ್ಳನನ್ನು ಬಂಧಿಸಿದ್ದಾರೆ.ಕಾಪು ಮಲ್ಲಾರುವಿನ ಉಮೇಶ್‌ ಬಳೆಗಾರ ಬಂಧಿತ ಆರೋಪಿ. ಆರೋಪಿಯಿಂದ ಸುಮಾರು ₹2.81 ಲಕ್ಷ ಮೌಲ್ಯದ ಒಟ್ಟು 22 ಗ್ರಾಂ ಚಿನ್ನದ ಗಟ್ಟಿಯನ್ನು ವಶಪಡಿಸಿಕೊಳ್ಳಲಾಗಿದೆ. ಉಮೇಶ್‌ ಬಳೆಗಾರನ ವಿರುದ್ದ ತಮಿಳುನಾಡು, ಕೇರಳ ಹಾಗೂ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳ ಪೊಲೀಸ್‌ ಠಾಣೆಗಳಲ್ಲಿ ಒಟ್ಟು 36 ಪ್ರಕರಣಗಳು …

Read More »

ಸಂಬಳ ನೀಡಿಲ್ಲ ಎಂದು ಚಿನ್ನಸ್ವಾಮಿ ಸ್ಟೇಡಿಯಂನ 240 ಸಿಸಿಟಿವಿ ಕೇಬಲ್ ಕಟ್ ಮಾಡಿದ ಇಬ್ಬರು ಉದ್ಯೋಗಿಗಳು

ಬೆಂಗಳೂರು: ಕಂಪನಿ ಸಂಬಳ ನೀಡಿಲ್ಲ ಎಂದು ಕೋಪಗೊಂಡ ಇಬ್ಬರು ಉದ್ಯೋಗಿಗಳು ಬೆಂಅಗ್ಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ನ ಸಿಸಿಟಿವಿ ಕೇಬಲ್ ಕಟ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಸಿಸಿಟಿವಿ ಕೇಬಲ್ ಕಟ್ ಆಗಿರುವುದನ್ನು ಕಂಡು ಪರಿಶೀಲಿಸಿದ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ತನಿಖೆ ನಡೆಸಿದಾಗ ಇಬ್ಬರ ಕರಾಮತ್ತು ಬೆಳಕಿಗೆ ಬಂದಿದೆ. ಚಿನ್ನಸ್ವಾಮಿ ಸ್ಟೇಡಿಯಂಗೆ ಸಿಸಿಟಿವಿ ಅಳವಡಿಕೆಗೆ ಐವಿಎಸ್ ಡಿಜಿಟಲ್ ಸಲ್ಯೂಷನ್ ಕಂಪನಿಗೆ ಸಬ್ ಕಾಂಟ್ರಾಕ್ಟ್ ನೀಡಲಾಗಿತ್ತು. ಇದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ …

Read More »

ಮಂಜೇಶ್ವರ : ಕಾರಿನಲ್ಲಿ ಎಂಡಿಎಂಎ ಸಾಗಿಸುತ್ತಿದ್ದ ಮೂವರ ಬಂಧನ

ಮಂಜೇಶ್ವರ: ಕಾರಿನಲ್ಲಿ ಸಾಗಿಸುತ್ತಿದ್ದ ಸುಮಾರು 50 ಗ್ರಾಂ ಎಂಡಿಎಮ್‌ಎ ಮಾದಕ ವಸ್ತು ಸಹಿತ ಮೂವರನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಕಾಸರಗೋಡು ಜಿಲ್ಲೆಯ ಅಲಂಪಾಡಿ ನಿವಾಸಿ ಸಿ.ಎ. ಮುಹಮ್ಮದ್ ಸಹಲ್, ಎರ್ನಾಕುಲಂ ಮೂಲದ ಅರುಣ್ ಕುಮಾರ್ ಹಾಗೂ ವಡಗರ ನಿವಾಸಿ ಎಂ.ಪಿ. ಅನೂಷ್ ಎಂದು ಗುರುತಿಸಲಾಗಿದೆ. ತಮಗೆ ಲಭಿಸಿದ ಖಚಿತ ಮಾಹಿತಿಯ ಆಧಾರದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಮಂಜೇಶ್ವರ ಪಾವೂರು ಸಮೀಪ ಸ್ವಿಫ್ಟ್ ಕಾರನ್ನು ತಡೆದು ನಿಲ್ಲಿಸಿ ತಪಾಸಣೆ …

Read More »

ರಾತ್ರಿ ವೇಳೆ ವಿದ್ಯಾರ್ಥಿನಿಗೆ ಕರೆ ಮಾಡಿ ಬೆತ್ತಲೆ ಫೋಟೋ ಕಳುಹಿಸಲು ವಾರ್ಡನ್ ಒತ್ತಡ

ಕಲಬುರಗಿ: ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಿಸಿಎಂ ಹಾಸ್ಟೆಲ್ ವಾರ್ಡನ್ ವಿರುದ್ಧ ಪೋಕ್ಸೊ ಕೇಸ್ ದಾಖಲಾಗಿದೆ. ವಿದ್ಯಾರ್ಥಿನಿಗೆ ರಾತ್ರಿ ವೇಳೆ ಕರೆ ಮಾಡಿ ಬೆತ್ತಲೆ ಫೋಟೋಗಳನ್ನು ಕಳುಹಿಸುವಂತೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಕೇಳಿ ಬಂದಿದೆ. ಅಫಜಲಪುರ ಬಿಸಿಎಂ ಹಾಸ್ಟೆಲ್ ವೊಂದರ ವಾರ್ಡನ್ ಹಣಮಂತ ಬಿರಾದಾರ ವಿರುದ್ಧ ಕಲಬುರ್ಗಿಯ ಎಂ.ಬಿ. ನಗರ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಕೇಸ್ ದಾಖಲಾಗಿದೆ. ವಿದ್ಯಾರ್ಥಿನಿಗೆ ಇನ್ಸ್ಟಾಗ್ರಾಮ್ ಮೂಲಕ ಕರೆ ಮಾಡಿದ್ದ ಆರೋಪಿ …

Read More »