Breaking News

Breaking News

ಉಡುಪಿ | ಭೀಕರ ಕಾರು ಅಪಘಾತದಲ್ಲಿ ಯುವ ಉದ್ಯಮಿ ಸಾವು

ನಿಯಂತ್ರಣ ತಪ್ಪಿದ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಮಂಗಳೂರಿನ ಯುವ ಉದ್ಯಮಿ ಸಾವನ್ನಪ್ಪಿದ ಘಟನೆ ಪಡುಬಿದ್ರೆ ರಾ. ಹೆದ್ದಾರಿ 66ರಲ್ಲಿ ನಿನ್ನೆ ತಡರಾತ್ರಿ ಎರಡು ಗಂಟೆ ಸುಮಾರಿಗೆ ಘಟನೆ ನಡೆದಿದೆ. ಮಂಗಳೂರಿನ ‘ಗೌಜಿ ಇವೆಂಟ್ಸ್’ ಮಾಲೀಕ ಅಭಿಷೇಕ್ ಮೃತ ವ್ಯಕ್ತಿಯಾಗಿದ್ದಾರೆ. ನಿನ್ನೆ ತಡರಾತ್ರಿ ಎರಡು ಗಂಟೆ ವೇಳೆಗೆ ತೆಂಕ ಎರ್ಮಾಳು ಬಳಿ ಅಪಘಾತ ನಡೆದಿದ್ದು, ಉಡುಪಿ ಕಡೆಯಿಂದ ಮಂಗಳೂರಿಗೆ ಅಭಿಷೇಕ್ ಕಾರಿನಲ್ಲಿ ಒಬ್ಬರೇ ತೆರಳುತ್ತಿದ್ದರು. ಎರ್ಮಾಳು ತೆಂಕ ಸೇತುವೆ ಬಳಿ …

Read More »

ಅಗ್ರಹಾರದಲ್ಲಿ ಅಕ್ರಮ ಹೆಚ್ಚು ಬೆನ್ನಲ್ಲೇ, ಖಡಕ್ ಪೊಲೀಸ್ ಅಧಿಕಾರಿ ಎಂಟ್ರಿ, ಕೈದಿಗಳಿಗೆ ನಡುಕ

ಬೆಂಗಳೂರು: ರಾಜ್ಯ ಸರ್ಕಾರ ಡಿಜಿಪಿಯಾಗಿ ಹಿರಿಯ ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್‌ ಅವರನ್ನು ಮುಂಬಡ್ತಿ ನೀಡಿದೆ.ಡಿಜಿಪಿ ಹುದ್ದೆಗೆ ಮುಂಬಡ್ತಿ ನೀಡಿ ಕಾರಗೃಹ ಇಲಾಖೆ ಡಿಜಿಪಿಯಾಗಿ ಅಲೋಕ್ ಕುಮಾರ್ ಅವರನ್ನು ವರ್ಗಾವಣೆ ಮಾಡಲಾಗಿದೆ. ತನ್ನ ಖಡಕ್ ಹಾಗೂ ನೇರ ಮಾರತುಗಳಿಂದ ಖೈದಿಗಳ ಬೆವರಿಸುವ ಅಲೋಕ್ ಕುಮಾರ್ ಇದೀಗ ಕಾರಾಗೃಹ ಇಲಾಖೆ ಡಿಜಿಪಿಯಾಗಿ ಮುಂಬಡ್ತಿ ಜೈಲಿನಲ್ಲಿದ್ದ ಕ್ರಿಮಿಗಳ ಎದೆಯಲ್ಲಿ ನಡುಕ ಶುರುವಾಗಿದೆ.ಕಾರಾಗೃಹ ಅಕ್ರಮ ಹೆಚ್ಚಾದ ಬೆನ್ನಲ್ಲೇ ಅಲೋಕ್ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ. …

Read More »

ಎಣ್ಣೆ ಮತ್ತಲ್ಲಿ ಸ್ನೇಹಿತನನ್ನೇ ಕೊಲೆಗೈದು ವಿಡಿಯೋ ಮಾಡಿದ್ದ ಆರೋಪಿ ಅರೆಸ್ಟ್

ಹಾಸನ :ಡಿಸೆಂಬರ್ 8ರಂದು ನಗರದ ಬಿಟ್ಟಗೋಡನಹಳ್ಳಿ ಬೈಪಾಸ್ ಬಳಿ ಉಲ್ಲಾಸ್ ತನ್ನ ಸ್ನೇಹಿತ ಕೀರ್ತಿಯನ್ನು ಕೊಲೆಗೈದಿದ್ದ.ಇಬ್ಬರೂ ಆಟೋ ಚಾಲಕರು, ಎರಡು ವರ್ಷಗಳಿಂದ ಸ್ನೇಹಿತರಾಗಿದ್ದರು. ಮದ್ಯಪಾನ ವೇಳೆ ಜಗಳವಾಗಿ, ಕೀರ್ತಿ ಉಲ್ಲಾಸ್ ಕೆನ್ನೆಗೆ ಬಾರಿಸಿದ್ದ. ಇದರಿಂದ ಕೋಪಗೊಂಡ ಉಲ್ಲಾಸ್, ಮತ್ತೆ ಕುಡಿಯಲು ಇನ್ನಿಬ್ಬರೊಂದಿಗೆ ಕೀರ್ತಿಯನ್ನು ಆಟೋದಲ್ಲಿ ಕರೆದೊಯ್ದಿದ್ದ. ನಂತರ ಜಗಳ ಹೆಚ್ಚಾಗಿ, ಕಲ್ಲಿನಿಂದ ಕೀರ್ತಿಗೆ ಹಲ್ಲೆ ನಡೆಸಿ ಬರ್ಬರವಾಗಿ ಕೊಲೆ ಮಾಡಿದ್ದ. ಮತ್ತಿನ ನಶೆಯಲ್ಲಿ ಶವದ ಬಳಿ ನಿಂತು ಸೆಲ್ಫಿ ವೀಡಿಯೋ …

Read More »

ಚಿನ್ನಾಭರಣ ಕಳ್ಳತನ: ಮಹಿಳೆ ಬಂಧನ

ಕಗ್ಗಲೀಪುರ ಪೊಲೀಸ್ ಠಾಣೆ ವ್ಯಾಪ್ತಿಯ ತಾತಗುಣಿ ಸಮೀಪದ ತಿಮ್ಮರಾಯಪ್ಪ ಲೇಔಟ್‌ನ ಮನೆಯಲ್ಲಿ ನಡೆದಿದ್ದ ಸುಮಾರು ₹13 ಲಕ್ಷ ಮೌಲ್ಯದ 121 ಗ್ರಾಂ ಚಿನ್ನಾಭರಣ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಸದರಿ ಮನೆಯಲ್ಲಿ ಬಾಡಿಗೆಗೆ ಇದ್ದ ಮಹಿಳೆ ಕುಸುಮ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ.ಕುಸುಮ ಮೇಲೆ ಅನುಮಾನ ವ್ಯಕ್ತಪಡಿಸಿದ್ದ ಭಾಗ್ಯ ಅವರು ಠಾಣೆಗೆ ದೂರು ಕೊಟ್ಟಿದ್ದರು. ಕೃತ್ಯದ ಬಳಿಕ ತಲೆಮರೆಸಿಕೊಂಡಿದ್ದ ಕುಸುಮ ಅವರನ್ನು ಪತ್ತೆಹಚ್ಚಿ ವಿಚಾರಣೆ ನಡೆಸಿದಾಗ ಚಿನ್ನಾಭರಣ ಕದ್ದಿರುವುದಾಗಿ ಒಪ್ಪಿಕೊಂಡರು. ಬಳಿಕ ಅವರ …

Read More »

ರಾಮನಗರ | ಅತ್ತಿಗೆ ಕೊಲೆಗೆ ಯತ್ನ: ಮೈದುನನಿಗೆ 5 ವರ್ಷ ಶಿಕ್ಷೆ!

ತಾವರೆಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತನ್ನ ಅತ್ತಿಗೆಯನ್ನೇ ಮಚ್ಚಿನಿಂದ ಹೊಡೆದು ಕೊಲೆಗೆ ಯತ್ನಿಸಿದ್ದ ಮೈದುನನಿಗೆ, ಇಲ್ಲಿನ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ಕೋರ್ಟ್ ಅಪರಾಧಿಗೆ 5 ವರ್ಷ ಜೈಲು ಶಿಕ್ಷೆ ಹಾಗೂ ₹21 ಸಾವಿರ ದಂಡ ವಿಧಿಸಿದೆ. ಮಾಗಡಿ ತಾಲ್ಲೂಕಿನ ಮಾಡಬಾಳ್ ಹೋಬಳಿಯ ಅತ್ತಿಂಗೆರೆ ಗ್ರಾಮದ ಗಂಗಮುತ್ತಯ್ಯ ಅಲಿಯಾಸ್ ಗಂಗರಾಜು (28) ಶಿಕ್ಷೆಗೊಳಗಾದ ಅಪರಾಧಿ.ಅಕ್ಕಪಕ್ಕದವರು ಕೂಡಲೇ ಸ್ಥಳಕ್ಕೆ ಜಮಾಯಿಸಿದರು. ಅಷ್ಟರೊಳಗೆ ಆರೋಪಿ ಪರಾರಿಯಾಗಿದ್ದ. ಮಚ್ಚೇಟಿನಿಂದ ಗಾಯಗೊಂಡಿದ್ದ ಶಾಂತಮ್ಮ ಅವರನ್ನು ಪತಿ …

Read More »

ಕನಕಪುರ | ವಿದ್ಯುತ್ ಪ್ರವಹಿಸಿ ಆನೆ ಸಾವು: ಜಮೀನು ಮಾಲೀಕನಿಗೆ ದಂಡ

ಸಂಗಮ ವನ್ಯಜೀವಿ ವಲಯದಲ್ಲಿರುವ ಉಯ್ಯಂಬಳ್ಳಿ ಗ್ರಾಮದ ಜಮೀನಿನಲ್ಲಿ 6 ವರ್ಷಗಳ ಹಿಂದೆ ವಿದ್ಯುತ್ ಪ್ರವಹಿಸಿ ಕಾಡಾನೆ ಮರಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯವು ಜಮೀನು ಮಾಲೀಕ ಶಿವಲಿಂಗೇಗೌಡ ಎಂಬುವರಿಗೆ ₹5 ಸಾವಿರ ದಂಡ ವಿಧಿಸಿದೆ.ಆರೋಪಿಗೆ ಶಿಕ್ಷೆ ಕೊಡಿಸುವಲ್ಲಿ ಠಾಣೆಯ ಕೋರ್ಟ್ ಸಿಬ್ಬಂದಿ ಮೆಹಬೂಬ್ ಸಾಬ್ ಮುಲ್ಲಾ ಹಾಗೂ ಇತರ ಅಧಿಕಾರಿಗಳು ಶ್ರಮಿಸಿದ್ದರು.

Read More »

ಬೈಂದೂರು | ಪ್ರತ್ಯೇಕ ಪ್ರಕರಣ: ಇಬ್ಬರು ಆತ್ಮಹತ್ಯೆ

ವಿಪರೀತ ಮದ್ಯಪಾನ ಮಾಡುವ ಚಟದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಪಡುವರಿ ಗ್ರಾಮದ ದೊಂಬೆಯ ನರಸಿಂಹ ಪೂಜಾರಿ(62) ಎಂಬವರು ಡಿ.7ರಂದು ಪಡುವರಿ ಗ್ರಾಮದ ಚೌಕಿಮನೆ ಹಾಡಿಯಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಸಿಗದ ಸರ್ಕಾರಿ ಕೆಲಸ – ಮನನೊಂದು ಯುವಕ ಆತ್ಮಹತ್ಯೆಗೆ ಶರಣು.!

ಅಂಜಿನಪ್ಪ ಪದವಿ ಮುಗಿಸಿದ ನಂತರದಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ದಿನರಾತ್ರಿ ಓದುತ್ತಿದ್ದ. ದಿನನಿತ್ಯ ಹಗಲು ರಾತ್ರಿ ಎನ್ನದೆ ಓದುತ್ತಿದ್ದ.. ಆದರೆ ಎಷ್ಟೇ ಪ್ರಯತ್ನಿಸಿದರೂ ಕೆಲಸ ಸಿಗದಿರುವುದು ಅವನನ್ನು ತುಂಬಾ ಖಿನ್ನನಾಗಿಸಿತ್ತು.ಬಾಗಿಲು ತಟ್ಟಿದಾಗ ಕೊಂಚ ಭಯಗೊಂಡು ಕಿಟಕಿಯಿಂದ ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿರುವುದನ್ನು ಗಮನಿಸಿದ್ದಾರೆ. ಕೂಡಲೇ ಹೇಗೋ ಕಷ್ಟಪಟ್ಟು ಬಾಗಿಲು ತೆಗೆದು ಒಳಗೆ ಹೋಗಿದ್ದಾರೆ ಆದರೆ ಅಷ್ಟರಲ್ಲಿ ಅಂಜಿನಪ್ಪ ಮೃತಪಟ್ಟಿದ್ದ. ಸದ್ಯ ಈ ಘಟನೆಗೆ ಸಂಬಂಧಪಟ್ಟಂತೆ ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, …

Read More »

ಆಸ್ಪತ್ರೆಗೆ ಹೋಗಿದ್ದ ಗರ್ಭಿಣಿ ಹುಟ್ಟುಹಬ್ಬದಂದೇ ಸಾವು; ಹೊಟ್ಟೆಯಲ್ಲೇ ಅಸುನೀಗದ ಮಗು!

ಹುಟ್ಟುಹಬ್ಬದ ಸಂಭ್ರಮದಲ್ಲೇ ಹೆರಿಗೆಗೆ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಗರ್ಭಿಣಿಯೊಬ್ಬರು ಮಾರ್ಗ ಮಧ್ಯೆಯೇ ಅಕಾಲಿಕವಾಗಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಉತ್ತರಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ಜಗಲ್‌ಬೇಟ್‌ನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.ಆಂಬ್ಯುಲೆನ್ಸ್‌ನಲ್ಲಿ ರೋಹಿಣಿಯನ್ನು ಧಾರವಾಡಕ್ಕೆ ಕರೆದುಕೊಂಡು ಹೋಗುತ್ತಿದ್ದಾಗ, ಹಳಿಯಾಳ ಪಟ್ಟಣ ತಲುಪುವಷ್ಟರಲ್ಲಿ ರೋಹಿಣಿಯ ಸ್ಥಿತಿ ಮತ್ತಷ್ಟು ಬಿಗಡಾಯಿಸಿತು. ತುರ್ತು ಪರಿಸ್ಥಿತಿಯನ್ನು ಅರಿತ ಕುಟುಂಬಸ್ಥರು, ಆಕೆಯನ್ನು ಹಳಿಯಾಳ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಆದರೆ, ಹಳಿಯಾಳದ ವೈದ್ಯರು ಪರಿಶೀಲನೆ ನಡೆಸಿದಾಗ ರೋಹಿಣಿ ಆಗಲೇ ಸಾವನ್ನಪ್ಪಿರುವುದು ದೃಢಪಟ್ಟಿದೆ.

Read More »

ಬೆಂಗ್ಳೂರು, ದಿಲ್ಲಿ ಪೊಲೀಸರಿಗೆ ಬೆದರಿಕೆ: ಆರೋಪಿ ಬಂಧನ

ನವದೆಹಲಿ: ಬೆಂಗಳೂರು ಸೇರಿ ದೇಶದ ವಿವಿಧ ನಗರಗಳ ಪೊಲೀಸರಿಗೆ ಬೆದರಿಕೆ ಇಮೇಲ್‌ಗಳನ್ನು ಕಳಿಸುತ್ತಿದ್ದ ಆರೋಪದ ಮೇರೆಗೆ ವ್ಯಕ್ತಿಯೊಬ್ಬನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಅಭಯ್‌ ಎಂದು ಗುರುತಿಸಲಾಗಿದೆ. ನಿಷೇಧಿತ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವುದಾಗಿ ಸುಳ್ಳು ಹೇಳಿ ದೆಹಲಿ, ಬೆಂಗಳೂರು, ರಾಜಸ್ಥಾನದ ಹಲವು ಜಿಲ್ಲೆಗಳ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಅಭಯ್‌ ಸಂದೇಶಗಳನ್ನು ಕಳುಹಿಸುತ್ತಿದ್ದ.ಅಲ್ಲದೆ, ತನಿಖಾಧಿಕಾರಿಗಳನ್ನು ದಾರಿತಪ್ಪಿಸಲು ಉದ್ದೇಶಪೂರ್ವಕವಾಗಿ ಮತ್ತೋರ್ವ ವ್ಯಕ್ತಿಯ ಮೊಬೈಲ್ ಸಂಖ್ಯೆಯನ್ನು ಇಮೇಲ್‌ನಲ್ಲಿ ಉಲ್ಲೇಖಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

Read More »