Breaking News

Breaking News

ಕಾಗವಾಡ :20 ಎಕರೆ ಕಬ್ಬು ಬೆಂಕಿಗಾಹುತಿ.

ಉಗಾರ ಬಿಕೆ ಗ್ರಾಮದಲ್ಲಿ ಬುಧವಾರ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಆರು ಮಂದಿ ರೈತರಿಗೆ ಸೇರಿದ 20 ಎಕರೆಯಷ್ಟು ಕಬ್ಬು ಸುಟ್ಟಿದ್ದು, ₹25 ಲಕ್ಷದಷ್ಟು ನಷ್ಟವಾಗಿದೆ ಎಂದು ರೈತರು ಅಂದಾಜಿಸಿದ್ದಾರೆ.ಭರತೇಶ ಖಂಡೇರಾಜುರೆ ಅವರ 5 ಎಕರೆ, ಚಂದ್ರಕಾಂತ ಅಕಿವಾಟೆ, ಧರೆಪ್ಪ ಕುಸನಾಳೆ ಅವರ ತಲಾ 3 ಎಕರೆ, ಮಲ್ಲು ಕುರುಬರ, ಅಣ್ಣು ಕುರಬರ, ಮಹಾದೇವ ಕುರುಬರ ಅವರಿಗೆ ಸೇರಿದ 9 ಎಕರೆ ಬೆಂಕಿಗೆ ಆಹುತಿಯಾಗಿದೆ.ಕಾಗವಾಡದಿಂದ ಅಗ್ನಿ ಶಾಮಕ ದಳದ ವಾಹನ ಬರುವಷ್ಟರಲ್ಲಿ …

Read More »

ಮಹಿಳೆ’ ಕಾಮದಾಹಕ್ಕೆ 19 ವರ್ಷದ ಯುವಕ ಬಲಿ : ‘ಆಂಟಿ’ ಕಿರುಕುಳಕ್ಕೆ ಬೇಸತ್ತು ನೇಣು ಬಿಗಿದುಕೊಂಡು ಆತ್ಮಹತ್ಯೆ.!

ಮಹಿಳೆ ಕಾಮದಾಹಕ್ಕೆ 19 ವರ್ಷದ ಯುವಕ ಬಲಿಯಾಗಿದ್ದಾನೆ. ಹೌದು, 38 ವರ್ಷದ ‘ಆಂಟಿ’ ಕಿರುಕುಳಕ್ಕೆ ಬೇಸತ್ತು ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.ಕಾಚನಹಳ್ಳಿ ಕೆರೆ ಬಳಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕ ನಿಖಿಲ್ ಕುಮಾರ್ (19) ಶವ ಪತ್ತೆಯಾಗಿದೆ. ಆತ್ಮಹತ್ಯೆ ಮಾಡಿಕೊಂಡ ಯುವಕ ನಿಖಿಲ್ ಕುಮಾರ್ 38 ವರ್ಷದ ಮಹಿಳೆ ಶಾರದಾ ಜೊತೆ ಅಕ್ರಮ ಸಂಬಂಧ ಹೊಂದಿದ್ದನು. ಶಾರದಾ ಪತಿಗೆ ವಿಚ್ಚೇದನ ನೀಡಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು. …

Read More »

ಗೋವಾದಲ್ಲಿ ಅಂಗಡಿಗಳ ಮೇಲೆ ಪಾಕಿಸ್ತಾನ ಪರ ಘೋಷಣೆ- 9 ಮಂದಿ ಅರೆಸ್ಟ್‌.

ಉತ್ತರ ಗೋವಾದಲ್ಲಿ ಬಾಗಾ ಮತ್ತು ಅರ್ಪೋರಾ ಗ್ರಾಮಗಳು ಪರಸ್ಪರ ಪಕ್ಕದಲ್ಲಿವೆ. ಎರಡು ಅಂಗಡಿಗಳೊಂದಿಗೆ ಸಂಪರ್ಕ ಹೊಂದಿದ್ದ ಒಂಬತ್ತು ಜನರನ್ನು ಬಂಧಿಸಲಾಗಿದೆ. ಅಂಗಡಿಗಳು ಪರಸ್ಪರ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದ್ದು, ಮಂಗಳವಾರ ಸಂಜೆ ಎರಡೂ ಅಂಗಡಿಗಳಲ್ಲಿ ಪಾಕಿಸ್ತಾನ ಪರ ಘೋಷಣೆಗಳನ್ನು ಒಂದೇ ಸಮಯದಲ್ಲಿ ಪ್ರದರ್ಶಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಕ್ಯಾಲಂಗುಟ್ ಪೊಲೀಸರು ನಾಲ್ವರನ್ನು ಮತ್ತು ಅಂಜುನಾ ಪೊಲೀಸರು ಐವರನ್ನು ಬಂಧಿಸಿದ್ದಾರೆ ಎಂದು ಅವರು ಹೇಳಿದರು.ಪೊಲೀಸರು ಎಲ್‌ಇಡಿ ಬೋರ್ಡ್‌ಗಳ ಸಂಪರ್ಕ ಕಡಿತಗೊಳಿಸಿದ್ದಾರೆ ಮತ್ತು ಭಾರತೀಯ ನ್ಯಾಯ …

Read More »

ಸಾಗರ | ಬಾಲಕಿಯ ಗರ್ಭಪಾತ ಮಾಡಿದ ಆರೋಪ; ಸರಕಾರಿ ವೈದ್ಯೆ ಸೇರಿ 9 ಮಂದಿಯ ವಿರುದ್ಧ ಪ್ರಕರಣ ದಾಖಲು.

ಬಾಲಕಿಯ ಗರ್ಭಪಾತ ಪ್ರಕರಣದಲ್ಲಿ ಮಧ್ಯವರ್ತಿಗಳಾಗಿದ್ದ ಕುಮಾರ್, ದೂಗೂರು ಪರಮೇಶ್ವರ್ ಅವರ ಮೇಲೂ ದೂರು ದಾಖಲಿಸಲಾಗಿದೆ. ಅಲ್ಲದೇ, ಚಾಂದಿನಿ ಆಸ್ಪತ್ರೆಯ ವೈದ್ಯರೊಬ್ಬರ ಮೇಲೂ ಪ್ರಕರಣ ದಾಖಲಿಸಲಾಗಿದೆ. ತನಿಖೆ ಮುಂದುವರಿದ್ದು, ಇದುವರೆಗೂ ವೈದ್ಯರು, ಮಧ್ಯವರ್ತಿಗಳನ್ನು ಬಂಧಿಸಿಲ್ಲ ಎಂದು ಸ್ಪಷ್ಟಪಡಿಸಿದರು.ಕೃತ್ಯ ನಡೆದ ಖಾಸಗಿ ಆಸ್ಪತ್ರೆಯ ಪಾತ್ರ ಎಷ್ಟಿದೆ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ನಂತರವಷ್ಟೇ ಆ ಖಾಸಗಿ ಆಸ್ಪತ್ರೆ ಮೇಲೆ ದೂರು ದಾಖಲಿಸುವುದರ ಬಗ್ಗೆ ಕ್ರಮವಹಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು.ಸರಕಾರಿ ಪ್ರಸೂತಿ ತಜ್ಞೆ …

Read More »

ಬೆಂಗಳೂರು| ಸೈಬರ್ ವಂಚನೆ: ₹ 5 ಲಕ್ಷ ಕಳೆದುಕೊಂಡ ಕಾನ್‌ಸ್ಟೆಬಲ್.

ಎಸ್‌ಬಿಐ ಬ್ಯಾಂಕ್ ಹೆಸರಲ್ಲಿ ವಾಟ್ಸ್‌ಆಯಪ್‌ ಗ್ರೂಪ್‌ವೊಂದನ್ನು ಸೃಷ್ಟಿಸಿ, ಅದಕ್ಕೆ ಶಬೀರ್‌ ಅವರ ಮೊಬೈಲ್‌ ಸಂಖ್ಯೆಯನ್ನು ಆರೋಪಿಗಳು ಸೇರಿಸಿದ್ದರು.ಸ್ವಲ್ಪ ಸಮಯದ ಬಳಿಕ ಎಪಿಕೆ ಫೈಲ್ ಅನ್ನು ಕಳುಹಿಸಿ, ‘ಈ ದಿನ ನಿಮ್ಮ ಖಾತೆಯನ್ನು ಅಪ್‌ಡೇಟ್ (ಕೆವೈಸಿ) ಮಾಡಿಕೊಳ್ಳಿ. ಇಲ್ಲವಾದಲ್ಲಿ ನಿಮ್ಮ ಬ್ಯಾಂಕ್‌ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗುತ್ತದೆ’ ಎಂದು ಸಂದೇಶ ಕಳುಹಿಸಿದ್ದರು. ಹೀಗಾಗಿ ಅವರು ಎಪಿಕ್‌ ಫೈಲ್‌ ತೆರೆದು ಕೆವೈಸಿಗೆ ಸಂಬಂಧಿಸಿದ ಮಾಹಿತಿಗಳು, ಆಧಾರ್ ಕಾರ್ಡ್, ಎಟಿಎಂ ನಂಬರ್ ಹಾಗೂ ಪಾನ್ ನಂಬರ್ ಅಪ್‌ಡೇಟ್ …

Read More »

ರಾಮನಗರ | ಲಂಚಕ್ಕೆ ಬೇಡಿಕೆ: ಆರ್‌ಟಿಒ ವರ್ಗಾವಣೆ.

ಶಾಲಾ ಬಸ್‌ವೊಂದಕ್ಕೆ ವಿಎಲ್‌ಟಿಡಿ (ವಾಹನದ ಸ್ಥಳ ಟ್ರ್ಯಾಕಿಂಗ್ ಸಾಧನ) ಅನುಮೋದನೆ ನೀಡಲು ₹1 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿರುವ ಆರೋಪದ ಮೇರೆಗೆ, ಇಲ್ಲಿನ ಪ್ರಾದೇಶಿಕ ಸಾರಿಗೆ ಅಧಿಕಾರಿ ಸಿ.ಎಂ. ಕೃಷ್ಣೇಗೌಡ ಅವರನ್ನು ಮಂಡ್ಯ ಪ್ರಾದೇಶಿಕ ಸಾರಿಗೆ ಕಚೇರಿಗೆ ಬುಧವಾರ ವರ್ಗಾವಣೆ ಮಾಡಲಾಗಿದೆ.ಮೇಲ್ನೋಟಕ್ಕೆ ಅಧಿಕಾರಿ ಲಂಚ ಕೇಳಿರುವುದು ಸಾಬೀತಾಗಿರುವುದರಿಂದ ಪಕ್ಕದ ಮಂಡ್ಯ ಜಿಲ್ಲೆಗೆ ಅವರನ್ನು ವರ್ಗಾವಣೆ ಮಾಡಿ ಆಯುಕ್ತರು ಆದೇಶ ಹೊರಡಿಸಿದ್ದಾರೆ.

Read More »

ಐದು ಜಿಲ್ಲೆಯ ಪೊಲೀಸರಿಗೆ ಬೇಕಾಗಿದ್ದ ನಟೋರಿಯಸ್ ಕಳ್ಳ ಅಂದರ್‌.

ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ಹಾವೇರಿ ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ಮನೆಗಳ್ಳತನ ಮಾಡುತ್ತಿದ್ದ. ಹಗಲೆಲ್ಲ ಐಷಾರಾಮಿ ಮನೆಗಳನ್ನ ನೋಡಿಕೊಂಡು ತಡರಾತ್ರಿ ಹೊತ್ತು ಅಸ್ಲಾಂ ತನ್ನ ಕೈಚಳಕ ತೋರುತ್ತಿದ್ದ.ಕಿಟಕಿ ತೆರೆದು ಮಹಿಳೆಯರು ನಿದ್ರೆಗೆ ಜಾರಿದ್ರೆ ಕುತ್ತಿಗೆಯಲ್ಲಿರುವ ಸರ ಎಗರಿಸಿ ಎಸ್ಕೇಪ್ ಆಗುತ್ತಿದ್ದ. ಅಲ್ಲದೇ ಕಿಟಕಿ ಪಕ್ಕದಲ್ಲಿ ಮೈನ್ ಡೋರ್ ಇದ್ರೆ ಕಿಟಕಿ ಗ್ಲಾಸ್ ಒಡೆದು ಅದರ ಮೂಲಕ ಡೋರ್ ಓಪನ್ ಮಾಡಿ ಕಳ್ಳತನ ಮಾಡುತ್ತಿದ್ದ.ಈತನನ್ನು ಚಿಕ್ಕಬಳ್ಳಾಪುರದ ವಡೇಪಾಳ್ಯದ ಚೇತನ್ ಎಂದು ಗುರುತಿಸಲಾಗಿದ್ದು, …

Read More »

ದರೋಡೆಗೆ ಇಳಿದಿದೆ ಲಗ್ನ ಪತ್ರಿಕೆ ಗ್ಯಾಂಗ್, ಮದುವೆ ಆಹ್ವಾನ ಕೊಡೋ ನೆಪದಲ್ಲಿ ಮನಗೆ ನುಗ್ಗಿ ಕಳ್ಳತನ

ಪರಿಚಯ ಇಲ್ಲದವರು ಮದುವೆ ಆಮಂತ್ರಣ ಪತ್ರಿಕೆ ಕೊಡಲು ಬಂದರೆ ಎಚ್ಚರ. ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ನೆರಳೂರಿನಲ್ಲಿ ಲಗ್ನ ಪತ್ರಿಕೆ ಗ್ಯಾಂಗ್ ಪ್ರಕರಣ ಬೆಳಕಿಗೆ ಬಂದಿದೆ. ನೆರಳೂರು ನಿವಾಸಿ ರವಿಕುಮಾರ್, ನಾಗವೇಣಿ ದಂಪತಿ ಮನೆಯಲ್ಲಿ ಕಳ್ಳರು ಹೊಸ ತಂತ್ರದ ಮೂಲಕ ದರೋಡೆ ಮಾಡಿದ್ದಾರೆ. ಒಬ್ಬಂಟಿ ಮಹಿಳೆಯರು, ಮನೆಯಲ್ಲಿ ಪತಿ ಕೆಲಸಕ್ಕೆ ಹೋಗಿರುವ ವೇಳೆ, ಮನೆಯಲ್ಲಿ ಮಹಿಳೆಯರೇ ಇರುವಾಗ ಈ ಗ್ಯಾಂಗ್ ಮದುವೆ ಆಮಂತ್ರಣ ಪತ್ರಿಕೆ ಹಿಡಿದು ಪ್ರತ್ಯಕ್ಷವಾಗುತ್ತೆ. ಹೀಗೆ ರವಿಕುಮಾರ್ …

Read More »

ಬೆಂಗಳೂರು| ವೃದ್ದೆ ಕೊಲೆ ಮಾಡಿ ಚಿನ್ನ ದೋಚಿದ್ದ ಕೇಸ್- 24 ಗಂಟೆಯೊಳಗೆ ಆರೋಪಿಗಳು ಅರೆಸ್ಟ್.

ರಾಜಧಾನಿ ಬೆಂಗಳೂರಲ್ಲಿ ವೃದ್ದೆ ಕೊಲೆ ಮಾಡಿ ಚಿನ್ನ ದೋಚಿದ್ದ ಕೇಸ್ ಗೆ ಸಂಬಂಧಿಸಿದಂತೆ 24 ಗಂಟೆಯೊಳಗೆ ಆರೋಪಿಗಳನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.ದುರ್ಘಟನೆಗೆ ಸಂಬಂಧಿಸಿದ ಆರೋಪಿಗಳು, ಪ್ರಸಾದ್ ಶ್ರೀಶೈಲ(26) ಮತ್ತು ಸಾಕ್ಷಿ (23), ಮನೆ ಬಾಡಿಗೆಗೆ ಇದ್ದ ದಂಪತಿ ಆಗಿದ್ದು, ಇಬ್ಬರೂ ಮೂಲತಃ ಮಹಾರಾಷ್ಟ್ರ ರಾಜ್ಯದವರು. ಪ್ರಸಾದ್ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದರೆ, ಸಾಕ್ಷಿ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು. ಆರೋಪಿತ ದಂಪತಿ ಕೊಲೆ ಮಾಡಿದ ನಂತರ ತಮ್ಮ ಮೇಲೆ ಯಾವುದೆ ಸಂದೇಹವಿಲ್ಲದಂತೆ …

Read More »

ದೇವರ ದರ್ಶನ ಮುಗಿಸಿ ವಾಪಸಾಗುತ್ತಿದ್ದಾಗಲೇ ದುರಂತ: ಭೀಕರ ರಸ್ತೆ ಅಪಘಾತಕ್ಕೆ ನಾಲ್ವರು ಬಲಿ.

ಭಾಲ್ಕಿ ತಾಲ್ಲೂಕಿನ ನೀಲಮ್ಮನಳ್ಳಿ ತಾಂಡಾ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿ ನಾಲ್ವರು ವ್ಯಕ್ತಿಗಳು ಮೃತಪಟ್ಟಿದ್ದಾರೆ. ಮೃತರು ತೆಲಂಗಾಣದ ಜಗನ್ನಾಥಪುರ ಗ್ರಾಮದ ರಾಚಪ್ಪ, ನವೀನ್, ಕಾಶೀನಾಥ್ ಮತ್ತು ನಾಗರಾಕಾರು ಮತ್ತು ಗೂಡ್ಸ್ ವಾಹನ ಮುಖಾಮುಖಿ ಡಿಕ್ಕಿ ಹೊಡೆದಿದ್ದು, ಕಾರಿನಲ್ಲಿ ಇದ್ದ ಐವರಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ಬೀದರ್ ಬ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಇಲ್ಲಿ ಒಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇನ್ನೊಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ.ಜ್ ಎಂದು ಗುರುತಿಸಲ್ಪಟ್ಟಿದ್ದಾರೆ.

Read More »