Breaking News

Breaking News

ಬೆಂಗಳೂರಿನಲ್ಲಿ ಘೋರ ದುರಂತ: ಆಟವಾಡುತ್ತಿದ್ದ ವೇಳೆ ಕೆರೆಗೆ ಬಿದ್ದ ಅಣ್ಣ-ತಮ್ಮ: ಇಬ್ಬರು ಮಕ್ಕಳು ದುರ್ಮರಣ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಘೋರ ಘಹ್ಟನೆ ನಡೆದಿದೆ. ಕೆರೆಯ ಬಳಿ ಆಟವಾಡುತ್ತಿದ್ದ ಇಬ್ಬರು ಬಾಲಕರು, ಕೆರೆ ನೀರಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.ಬೆಂಗಳೂರಿನ ವಿಶ್ವೇಷ್ವರಯ್ಯ ಲೇಔಟ್ ನಲ್ಲಿ ಈ ದುರಂತ ಸಂಭವಿಸಿದೆ. 10 ವರ್ಷದ ಜಗನ್ನಾಥ್ ಹಾಗೂ 8 ವರ್ಷದ ಸಂಜಯ್ ಮೃತ ಬಾಲಕರು.ಇಬ್ಬರೂ ಅಣ್ಣ-ತಮ್ಮಂದಿರು. ಮನೆಯ ಬಳಿಯೇ ಇದ್ದ ಕೆರೆಯ ಬಳಿ ಆಟವಾಡುತ್ತಿದ್ದ ಮಕ್ಕಳು ಆಕಸ್ಮಿಕವಾಗಿ ಕೆರೆ ನೀರಿಗೆ ಬಿದ್ದಿದ್ದಾರೆ. ತಕ್ಷಣ ಪೋಷಕರು ಮಕ್ಕಳನ್ನು ಮೇಲಕೆತ್ತಿದ್ದಾರೆ. ಅಷ್ಟರಲ್ಲಿ ಬಾಲಕ …

Read More »

ಚಿತ್ರದುರ್ಗದಲ್ಲಿ ‘ವಿಕೃತ ಕಾಮಿ’ ಪ್ರತ್ಯಕ್ಷ : ನಡುರಸ್ತೆಯಲ್ಲೇ ನಗ್ನವಾಗಿ ಓಡಾಡಿ ಮಹಿಳೆಯರಿಗೆ ಕಿರುಕುಳ.!

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ವಿಕೃತ ಕಾಮಿಯೋರ್ವ ನಡುರಸ್ತೆಯಲ್ಲೇ ನಗ್ನವಾಗಿ ಓಡಾಡಿ ಮಹಿಳೆಯರಿಗೆ ಕಿರುಕುಳ ನೀಡುತ್ತಿರುವ ಘಟನೆ ವರದಿಯಾಗಿದೆ. ನಡುರಸ್ತೆಯಲ್ಲೇ ಬೆತ್ತಲಾಗಿ ಓಡಾಡುವ ಯುವಕ ಮಹಿಳೆಯನ್ನು ನೋಡಿದಾಕ್ಷಣ ಅಸಭ್ಯವಾಗಿ ವರ್ತಿಸುತ್ತಾನೆ.ಯುವಕನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕಾಮುಕನ ಕಾಟಕ್ಕೆ ಮಹಿಳೆಯರು ರೋಸಿ ಹೋಗಿದ್ದಾರೆ.ಯುವಕನ ವರ್ತನೆಯಿಂದ ಭಯಗೊಂಡ ಮಹಿಳೆಯರು, ಯುವತಿಯರು ರಸ್ತೆಯಲ್ಲಿ ಒಬ್ಬಂಟಿಯಾಗಿ ಓಡಾಡಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ಚಳ್ಳಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Read More »

ವರದಕ್ಷಿಣ ಕಿರುಕುಳಕ್ಕೆ ಯುವತಿ ಬಲಿ?: ಮೃತಳ ಪೋಷಕರಿಂದ ಗಂಭೀರ ಆರೋಪ

ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಎನ್.ಆರ್.ಪುರ ಮೂಲದ ಗೃಹಿಣಿ ಮೃತಪಟ್ಟಿದ್ದು, ಪತಿ ಮನೆಯವರೇ ಕೀಟನಾಶಕ ಕೊಟ್ಟು ಮಗಳನ್ನ ಕೊಲೆ ಮಾಡಿದ್ದಾರೆ ಎಂದು ಮಹಿಳೆಯ ಪೋಷಕರು ಆರೋಪಿಸಿದ್ದಾರೆ. ಚಿಕಿತ್ಸೆ ಫಲಿಸದೆ ಗೃಹಿಣಿ ಪೂಜಾ(30) ಇಹಲೋಕ ತ್ಯಜಿಸಿದ್ದು, ಇವರಿಗೆ ಎನ್.ಆರ್.ಪುರ ತಾಲೂಕಿನ ಮಾವಿನಕೆರೆ ಶೆಟ್ಟಿಕೊಪ್ಪದ ನಿವಾಸಿ ಶರತ್​ ಎಂಬವರ ಜೊತೆ 3 ವರ್ಷದ ಹಿಂದೆ ವಿವಾಹವಾಗಿತ್ತು. ಶರತ್​-ಪೂಜಾ ದಂಪತಿಗೆ ಎರಡು ವರ್ಷದ ಗಂಡು ಮಗುವೂ ಇದ್ದು, ವರದಕ್ಷಿಣಿಗಾಗಿ ಪೂಜಾ ಮೇಲೆ ಹಲ್ಲೆ ನಡೆಸಲಾಗುತ್ತಿತ್ತು. …

Read More »

ಲೈಂಗಿಕ ಕಿರುಕುಳ’ ನೀಡಿದ ಪೊಲೀಸ್ ಸಿಬ್ಬಂದಿಗೆ ಧರ್ಮದೇಟು ನೀಡಿದ ಯುವತಿ : ವಿಡಿಯೋ ವೈರಲ್

ಪೋಲೀಸರ ಕೆಲಸ ಮಹಿಳೆಯರನ್ನು ರಕ್ಷಿಸುವುದು ಮತ್ತು ಮಹಿಳೆಯರ ತಂಟೆಗೆ ಹೋದವರ ವಿರುದ್ಧ ಕ್ರಮ ಕೈಗೊಳ್ಳುವುದು, ಆದರೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ಕಥೆ ಬೇರೆನೆ. ಲೈಂಗಿಕ ಕಿರುಕುಳ ನೀಡಿದ ಪೊಲೀಸ್ ಸಿಬ್ಬಂದಿಗೆ ಧರ್ಮದೇಟು ನೀಡಿದ ಘಟನೆ ಕಾನ್ಪುರದಲ್ಲಿ ನಡೆದಿದ್ದು, ವಿಡಿಯೋ ವೈರಲ್ ಆಗಿದೆ.ಓರ್ವ ಯುವತಿ ಕಾನ್ಪುರದ ಗೋಲ್ ಚೌರಾಹಾಗೆ ಸ್ಟಾಂಪ್ ಪೇಪರ್ ಖರೀದಿಸಲು ಹೋದಾಗ ಅಲ್ಲಿದ್ದ ಒಬ್ಬ ಪೊಲೀಸ್ ಅವಳಿಗೆ ಕಿರುಕುಳ ನೀಡಲು ಮತ್ತು ಅವಳ ಕಡೆಗೆ ಅಶ್ಲೀಲ ಸನ್ನೆಗಳನ್ನು ಮಾಡಲು …

Read More »

ATMನಲ್ಲಿ ಹಣ ವಿತ್​ ಡ್ರಾ ಮಾಡುವಾಗ ಎಚ್ಚರ. ಎಚ್ಚರ: ಯಾಮಾರಿದ್ರೆ ಬಕ್ರಾ ಆಗೋದು ಫಿಕ್ಸ್​!

ಕ್ಯಾಶ್ ಡ್ರಾ ಮಾಡಲು ಬಂದವರಿಗೆ ನೆರವಾಗುವ ನೆಪದಲ್ಲಿ ATM ಕಾರ್ಡ್ ಬದಲಾಯಿಸಿ ವಂಚನೆ ಮಾಡಿರುವ ಘಟನೆ ಚಿತ್ರದುರ್ಗ (Chitradurga) ಜಿಲ್ಲೆ ಚಳ್ಳಕೆರೆಯ ಕೆನರಾ ಬ್ಯಾಂಕ್ ATMನಲ್ಲಿ ನಡೆದಿದೆ.ಪಾಸ್ ವರ್ಡ್ ನೋಡಿ ಕ್ಷಣಾರ್ಧದಲ್ಲಿ ATM ಕಾರ್ಡ್ ಎಕ್ಸ್ ಚೇಂಜ್ ಮಾಡಿರುವ ವಂಚಕ ಬೇರೊಂದು ATMನಲ್ಲಿ ಹಣ ಡ್ರಾ ಮಾಡಿಕೊಂಡು ಎಸ್ಕೇಪ್​ ಆಗಿದ್ದಾನೆ. ATMನಲ್ಲಿ ಕಾರ್ಡ್ ಬದಲಿಸಿದ ವಂಚಕನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್ ಆಗಿದೆ.

Read More »

ಗುಂಪು ಹತ್ಯೆ ಪ್ರಕರಣ; ಇಬ್ಬರಿಗೆ ಜಾಮೀನು

ಕುಡುಪು ಬಳಿ ಎ. 27ರಂದು ನಡೆದ ಕೇರಳದ ವಯನಾಡಿನ ಮಹಮ್ಮದ್ ಅಶ್ರಫ್ ಗುಂಪು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಲ್ಲಿ ಇಬ್ಬರಾದ ಮನೀಶ್ ಶೆಟ್ಟಿ ಮತ್ತು ಅನಿಲ್ ಕುಮಾರ್‌ಗೆ ಮಂಗಳೂರಿನ 6ನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 21 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದರು. ಅವರಲ್ಲಿ 8 ಮಂದಿಗೆ ಜಾಮೀನು ಲಭಿಸಿದೆ. ಉಳಿದಂತೆ 13 ಮಂದಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

Read More »

ಸಿಎಂ ತವರು ಜಿಲ್ಲೆಯಲ್ಲೇ ಮೈಕ್ರೋಫೈನಾನ್ಸ್‌ ಹಾವಳಿ – ಸಾಲ ಪಾವತಿಸಿದ ರೈತನ ಮನೆ ಜಪ್ತಿ!

ಮೈಕ್ರೋ ಫೈನಾನ್ಸ್ ಸಾಲ ಮರು ಪಾವತಿಸದ ರೈತನ ಮನೆ ಜಪ್ತಿ ಮಾಡಲಾಗಿದ್ದು,ಸಾಲದ ಕಂತು ಕಟ್ಟಿಲ್ಲ ಎಂದು ಖಾಸಗಿ ಫೈನಾನ್ಸ್ ಸಿಬ್ಬಂದಿ ಮನೆ ಜಪ್ತಿ ಮಾಡಿದ್ದಾರೆ.ನಂಜನಗೂಡು ತಾಲ್ಲೂಕಿನ ಕಂದೇಗಾಲ‌ ಗ್ರಾಮದಲ್ಲಿ ಘಟನೆ ನಡೆದಿದ್ದು,ಕಾಲಾವಕಾಶ ಕೋರಿದ್ದರೂ ಸ್ಪಂದಿಸದ ಫೈನಾನ್ಸ್ ಸಿಬ್ಬಂದಿ ನ್ಯಾಯಾಲಯದ ಆದೇಶ ತಂದು ಜಪ್ತಿ ಮಾಡಿದ್ದಾರೆ.ಮನೆ ನಿರ್ಮಾಣಕ್ಕೆ 2.70 ಲಕ್ಷ ಸಾಲವನ್ನು ಇಕ್ವೀಟಾಸ್ ಸ್ಮಾಲ್ ಫೈನಾನ್ಸ್ ನಲ್ಲಿ ಕುಟುಂಬ ಪಡೆದಿತ್ತು. ಸಾಲ ಪಡೆದಿದ್ದ ಚಿನ್ನಸ್ವಾಮಿ ಈಗಾಗಲೆ 19 ಕಂತುಗಳ 1,89,000 ಸಾಲ‌ …

Read More »

ನಿಯಮ ಉಲ್ಲಂಘನೆ: 63 ಬಸ್‌ ಜಪ್ತಿ

ಬೆಂಗಳೂರು: ನಗರ ಮತ್ತು ಹೊರವಲಯಗಳಲ್ಲಿ ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತರ (ಪ್ರವರ್ತನ ದಕ್ಷಿಣ) ನೇತೃತ್ವದಲ್ಲಿ 12 ತಂಡಗಳು ಕಾರ್ಯಾಚರಣೆ ನಡೆಸಿ 380ಕ್ಕೂ ಅಧಿಕ ಬಸ್‌ಗಳ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿವೆ. 63 ವಾಹನಗಳನ್ನು ಜಪ್ತಿ ಮಾಡಲಾಗಿದೆ.ಬಸ್‌ಗಳಲ್ಲಿ ಪ್ರಥಮ ಚಿಕಿತ್ಸೆ ಪಟ್ಟಿಗೆ, ಬೆಂಕಿ ನಂದಿಸುವ ಸಾಧನ, ತುರ್ತು ನಿರ್ಗಮನ ವ್ಯವಸ್ಥೆ ಸೇರಿದಂತೆ ಪ್ರಯಾಣಿಕರ ಸುರಕ್ಷತೆಗೆ ಕೈಗೊಂಡಿರುವ ಕ್ರಮಗಳನ್ನು ತಂಡವು ಪರಿಶೀಲನೆ ನಡಸಿತು. ಈ ಸಂದರ್ಭದಲ್ಲಿ ತೆರಿಗೆ ಪಾವತಿಸದೇ ಇರುವ ವಾಹನಗಳು, ರಹದಾರಿ …

Read More »

ಪತಿಯ ಕಿರುಕುಳಕ್ಕೆ ಆತ್ಮಹತ್ಯೆಗೆ ಶರಣಾದ ಮಹಿಳೆ: ಶವ ಆಸ್ಪತ್ರೆಯಲ್ಲಿಟ್ಟು ಪರಾರಿಯಾದ ಕುಟುಂಬ

ಪತಿ ಹಾಗೂ ಕುಟುಂಬದವರ ಕಿರುಕುಳಕ್ಕೆ ಬೇಸತ್ತ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದು, ಆಕೆಯ ಶವವನ್ನು ಆಸ್ಪತ್ರೆಯಲ್ಲಿಟ್ಟು ಕುಟುಂಬದವರು ಪರಾರುಯಾಗಿರುವ ಘಟನೆ ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನ ಕೋಣಂದೂರಿನಲ್ಲಿ ನಡೆದಿದೆ.ಪೂಜಾ ಮೃತ ಮಹಿಳೆ. ಮೂರು ವರ್ಷಗಳ ಹಿಂದೆ ಮಾವಿನಕೆರೆ ಶೆಟ್ಟಿಕೊಪ್ಪದ ಶರತ್ ಜೊತೆ ಪೂಜಾ ವಿವಾಹವಾಗಿತ್ತು.ದಂಪತಿಗೆ ಎರಡು ವರ್ಷದ ಮಗನಿದ್ದಾನೆ. ಆದರೂ ಪತಿ ಹಾಗೂ ಅತ್ತೆ-ಮಾವ, ನಾದಿನಿ ಪೂಜಾಳಿಗೆ ಕಿರುಕುಳ ನೀಡುತ್ತಿದ್ದರಂತೆ. ಇದರಿಂದ ನೊಂದ ಪೂಜಾ ತವರು ಮನೆಗೆ ಬಂದು ಕಣ್ಣೀರಿಟ್ಟಿದ್ದಳು. ಆಕೆಯನ್ನು ತವರಿನವರು …

Read More »

ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೋಯ್ಯುವಾಗ ಆಂಬುಲೆನ್ಸ್ ಗೆ ದಾರಿ ಬಿಡದೇ ಪುಂಡಾಟ : ಬೈಕ್ ಸವಾರ ಅರೆಸ್ಟ್

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ ನಿವಾಸಿಯಾಗಿರುವ ಮಹಮ್ಮದ್ KA22 C 1382 ಸಗೆಯ ದ್ವಿಚಕ್ರ ವಾಹನ ಸಹ ಜಪ್ತಿ ಮಾಡಿದ್ದಾರೆ.ಅಂಬುಲೆನ್ಸ್ ಗೆ ದಾರಿ ಬಿಡದೆ ಪುಂಡಾಟ ಮೆರೆದಿದ್ದ ಬೈಕ್ ಸವಾರನನ್ನು ಪೊಲೀಸರು ಇದೀಗ ಅರೆಸ್ಟ್ ಮಾಡಿದ್ದಾರೆ. ಬೆಟ್ಟಂಪಾಡಿ ಗ್ರಾಮದಲ್ಲಿ ಮೊಹಮ್ಮದ್ ಮನ್ಸೂರ್ (38) ಇದೀಗ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿತ್ತು. ನಿನ್ನೆ ಬಿಸಿಲೆ ಘಾಟ್ ಬಳಿ ಅಪಘಾತ …

Read More »