Breaking News

Breaking News

ತಾಕತ್ತಿದ್ದರೆ ನನ್ನನ್ನು ಹಿಡೀರಿ ಎಂದ ಗ್ಯಾಂಗ್‌ಸ್ಟರ್‌ – ಎದೆಯೊಳಗೆ ಬುಲೆಟ್‌ ನುಗ್ಗಿಸಿದ ಪೊಲೀಸರು!

ಸಾಧ್ಯವಾದರೆ ನನ್ನನ್ನು ಹಿಡಿಯಿರಿ ಎಂದು ವಿಡಿಯೋ ಮೂಲಕ ಪೊಲೀಸರಿಗೆ ಸವಾಲು ಹಾಕಿದ್ದ ಜಾರ್ಖಂಡ್‌ನ ಕುಖ್ಯಾತ ಗ್ಯಾಂಗ್‌ಸ್ಟರ್ ಉತ್ತಮ್ ಯಾದವ್ ಶನಿವಾರ ಪೊಲೀಸರ ಎನ್‌ಕೌಂಟರ್‌ ನಲ್ಲಿ ಹತ್ಯೆಯಾಗಿದ್ದಾನೆ.ಪೊಲೀಸರಿಗೆ ದೊಡ್ಡ ತಲೆನೋವಾಗಿದ್ದ. ಶನಿವಾರ ಪೊಲೀಸರು ಹಾಗೂ ಗ್ಯಾಂಗ್‌ಸ್ಟರ್‌ಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಉತ್ತಮ್‌ ಯಾದವ್‌ ಗಾಯಗೊಂಡು ನಂತರ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Read More »

ಭೀಕರ ಅಪಘಾತದಲ್ಲಿ ಕಚೇರಿಗೆ ತೆರಳುತ್ತಿದ್ದ ಮಹಿಳೆ ಸ್ಥಳದಲ್ಲೇ ಸಾವು!

ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದ್ದು, ಬೈಕ್ ನಲ್ಲಿದ್ದ ಮಹಿಳೆ ಸಾವನ್ನಪ್ಪಿರುವ ಘಟನೆ ನಡೆದಿದೆ.ಬೈಕ್ ನಲ್ಲಿ ಕಚೇರಿಗೆ ತೆರಳುತ್ತಿದ್ದ ವೇಳೆ ಲಾರಿಯೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತದಲ್ಲಿ ಮಹಿಳೆ ಸಾವನ್ನಪ್ಪಿದ್ದಾರೆ.ಕಲ್ಪನಾ (38) ಮೃತ ಮಹಿಳೆ. ಬೆಂಗಳೂರಿನ ನಂದಿನಿ ಲೇಔಟ್ ನಲ್ಲಿ ಈ ದುರಂತ ಸಂಭವಿಸಿದೆ.

Read More »

ಬೆಂಗಳೂರಿನಲ್ಲಿ ಹಾಡಹಗಲೇ ಮಹಿಳೆಗೆ ಚಾಕು ಇರಿದು ಪರಾರಿಯಾದ ದುಷ್ಕರ್ಮಿ.

ಬಸ್ ನಿಲ್ದಾಣದಲ್ಲಿ ನಿಂತಿದ್ದ ರೇಖಾ ಎಂಬುವವರ ಜೊತೆ ಲೋಕೇಶ್ ಎಂಬಾತ ಮಾತಿಗೆ ಮಾತು ಬೆಳೆಸಿ ಜಗಳವಾಡಿದ್ದಾನೆ ದುಷ್ಕರ್ಮಿ ಚಾಕು ಇರಿದಿದ್ದಾನೆ. ಇಬ್ಬರ ನಡುವೆ ಗಲಾಟೆಯಾಗಿದೆ. ಯಾವ ಕಾರಣಕ್ಕೆ ಗಲಾಟೆ ನಡೆದಿದೆ ಎಂಬುದು ತಿಳಿದುಬಂದಿಲ್ಲ.ಹಲ್ಲೆಗೊಳಗಾದ ರೇಖಾ ಅವರನ್ನು ಪೊಲೀಸರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನಾ ಸ್ಥಳಕ್ಕೆ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More »

ಅಪಘಾತ ನಡೆದು ಒಂದು ತಾಸಾದರೂ ಬಾರದ ಆಂಬುಲೆನ್ಸ್‌ – ಮಹಿಳೆ ಸಾವು, ಮೂವರ ಸ್ಥಿತಿ ಗಂಭೀರ!

ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮಹಿಳೆ ಸಾವನ್ನಪ್ಪಿದ್ದು, ಮೂವರಿಗೆ ಗಂಭೀರವಾಗಿ ಗಾಯಗಳಾಗಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಆರೂಡಿ, ಸಾಸಲು ರಸ್ತೆಯ ಗುಮ್ಮನಹಳ್ಳಿ ಸಮೀಪ ಭಾನುವಾರ ಸಂಜೆ ನಡೆದಿದೆ.ಗಾಯಗೊಂಡವರನ್ನು ತಾಲೂಕಿನ ಬಿಜವಾರ ಗ್ರಾಮದ ತಾಯಿ ಮತ್ತು ಮಗ ಎನ್ನಲಾಗಿದ್ದು, ಇನ್ನಿಬ್ಬರು ನೇಪಾಳಿ ಮೂಲದವರು ಎನ್ನಲಾಗುತ್ತಿದೆ.

Read More »

ಕಲಬುರ್ಗಿಯಲ್ಲಿ ಭಾರೀ ಮಳೆ – ಗೋಡೆ ಕುಸಿದು ಬಾಲಕಿ ಸಾವು, ನಾಲ್ವರಿಗೆ ಗಾಯ.!

ಕಲಬುರ್ಗಿಯಲ್ಲಿ ಭಾರೀ ಮಳೆಗೆ ಮನೆ ಗೋಡೆ ಕುಸಿದು ಬಾಲಕಿ ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿರುವ ದಾರುಣ ಘಟನೆ ಕಲಬುರಗಿ ಜಿಲ್ಲೆಯ ಯಡ್ರಾಮಿ ಪಟ್ಟಣದಲ್ಲಿ ನಡೆದಿದೆ.ಮೃತ ಬಾಲಕಿಯನ್ನು ಸಾನಿಯಾ ಸೈಫನಸಾಬ್ ಎಂದು ಗುರುತಿಸಲಾಗಿದೆ. ಯಡ್ರಾಮಿ ಪಟ್ಟಣದಲ್ಲಿ ಭಾನುವಾರ ಭಾರೀ ಮಳೆಯಾಗಿತ್ತು. ಈ ಹಿನ್ನಲೆ ಮನೆಯಲ್ಲಿ ಮಲಗಿದ್ದರು. ಈ ವೇಳೆ ಗೋಡೆ ಕುಸಿದಿದ್ದು, ಸಾನಿಯಾ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

Read More »

ಅಕ್ರಮ ಮದ್ಯ ದಾಸ್ತಾನು; ಅಬಕಾರಿ ಅಧಿಕಾರಿಗಳ ದಾಳಿ; ಆರೋಪಿ ಪತ್ತೆಗೆ ತನಿಖೆ.

ಮಂಚಿ ಗ್ರಾಮದ ಮನೆಯೊಂದಕ್ಕೆ ದಾಳಿ ನಡೆಸಿದ ಬಂಟ್ವಾಳ ಅಬಕಾರಿ ಇಲಾಖೆಯ ತಂಡ ಅಕ್ರಮವಾಗಿ ದಾಸ್ತಾನಿಟ್ಟಿದ್ದ ಗೋವಾ ರಾಜ್ಯದ ಮದ್ಯ ಹಾಗೂ ಹೋಮ್ ಮೇಡ್ ವೈನ್ ಗಳನ್ನು ವಶಪಡಿಸಿಕೊಂಡಿದೆ. ಖಾಲಿ ಎಂ ಸಿ ಮ್ಯಾಕ್ಡೊವೆಲ್ಸ್ ವಿಸ್ಕಿ ಬಾಟಲಿಗಳಲ್ಲಿ ತುಂಬಿಸಿದ ವಿವಿಧ ಫ್ಲೇವರ್ ಗಳ ಹೋಮ್ ಮೇಡ್ ವೈನ್ ಸೇರಿ ಒಟ್ಟು 13 ಬಾಟಲ್‌ ಗಳಲ್ಲಿ 4.250 ಲೀಟರ್ ನಷ್ಟು, ಗೋವಾ ರಾಜ್ಯದಲ್ಲಿ ಮಾತ್ರ ಮಾರಾಟಕ್ಕಿರುವ ವಿವಿಧ ಬ್ರಾಂಡ್ ನ 8 ಖಾಲಿ …

Read More »

ಬೆಂಗಳೂರಿನ 1,478 ರೌಡಿಗಳ ಮನೆ ಮೇಲೆ ಪೊಲೀಸರಿಂದ ದಾಳಿ.

ನಗರದ 11 ಉಪ ವಿಭಾಗಗಳ ಕೆಲವು ಬಡಾವಣೆಗಳಲ್ಲಿ ನೆಲಸಿರುವ ರೌಡಿಗಳ ಮನೆಗಳ ಮೇಲೆ ಶುಕ್ರವಾರ ತಡರಾತ್ರಿ ದಿಢೀರ್ ದಾಳಿ ನಡೆಸಿದ ಪೊಲೀಸರು, ರೌಡಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಮುಂದಿನ ದಿನಗಳಲ್ಲಿ ರೌಡಿ ಚುಟುವಟಿಕೆಗಳಲ್ಲಿ ಭಾಗಿ ಆಗಬಾರದು ಎಂದು ಸೂಚನೆ ನೀಡಿದ್ದಾರೆ.1,478 ರೌಡಿಗಳ ಮನೆಗಳ ಮೇಲೆ ಆಯಾ ಠಾಣೆಯ ಪೊಲೀಸರು ದಾಳಿ ನಡೆಸಿದ್ದಾರೆ. ಪದೇ ಪದೇ ಅಪರಾಧಗಳಲ್ಲಿ ತೊಡಗುವ ಎಂಒಬಿಗಳ (ಅಪರಾಧ ಹಿನ್ನೆಲೆಯುಳ್ಳವರು) 165 ಮನೆಗಳ ಮೇಲೆ ದಾಳಿ ನಡೆಸಿ, ಪರಿಶೀಲನೆ ನಡೆಸಲಾಗಿದೆ …

Read More »

ಮಲ್ಲೇಶ್ವರಂನಲ್ಲಿ ಟೆಂಪೋ ಡ್ರೈವರ್ ಮೇಲೆ ಮಚ್ಚಿನಿಂದ ಮಾರಣಾಂತಿಕ ದಾಳಿ!

ಟೆಂಪೋ ಡ್ರೈವರ್ ಮೇಲೆ ನಾಲ್ಕೈದು ಜನರು ಮಚ್ಚಿನಿಂದ ಮಾರಣಾಂತಿಕ ದಾಳಿ ನಡೆಸಿ ಸ್ಥಳದಿಂದ ಪರಾರಿಯಾದ ಘಟನೆ ಬೆಂಗಳೂರಿನ ಮಲ್ಲೇಶ್ವರಂನ ಎಂಡಿ ಬ್ಲಾಕ್ 4ನೇ ಕ್ರಾಸ್‌ನಲ್ಲಿ ನಡೆದಿದೆ.ಟೆಂಪೋ ಡ್ರೈವರ್ ಜಾವೀದ್ ಪಾಷ (38) ಹಲ್ಲೆಗೊಳಗಾದವ. ಶನಿವಾರ ರಾತ್ರಿ 8:30ರ ಸುಮಾರಿಗೆ ಅಟ್ಯಾಕ್ ಮಾಡಿರೋದುಷ್ಕರ್ಮಿಗಳು ಜಾವೀದ್‌ನ ಮೇಲೆ ಮಚ್ಚಿನಿಂದ ದಾಳಿ ಮಾಡಿ, ತಕ್ಷಣವೇ ಸ್ಥಳದಿಂದ ಪರಾರಿಯಾಗಿದ್ದಾರೆ. ಗಾಯಗೊಂಡ ಜಾವೀದ್ ಪಾಷ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.ಆರೋಪಿಗಳನ್ನು ಪತ್ತೆಹಚ್ಚುವ ವಿಶ್ವಾಸವನ್ನು ಪೊಲೀಸರು …

Read More »

ಪೊಲೀಸರ ಕೈಗೆ ಸಿಕ್ಕಿಬಿದ್ದ 55 ವರ್ಷಗಳಿಂದ ನಾಪತ್ತೆಯಾಗಿದ್ದ ವಾರೆಂಟ್ ಆಸಾಮಿ.

ಸುಮಾರು 55 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ವಾರೆಂಟ್ ಆಸಾಮಿ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪತ್ತೆಯಾದ ಅತ್ಯಂತ ಹಳೆಯ ಪ್ರಕರಣ ಇದಾಗಿದೆ. ಈಗ ಅರೆಸ್ಟ್ ಆಗಿರುವ ಆರೋಪಿಗೆ ವಯಸ್ಸು 78.1970ರಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ Cr NO 32/1970 u/s 154,155 (2)MF Rules 1969 sec 86 of MF Act ( LPC :2/1972) ಕ್ಕೆ ಸಂಬಂಧಿಸಿದಂತೆ LPC ವಾರಂಟ್ …

Read More »

ಚಿಕ್ಕಮಗಳೂರು: ಪತ್ನಿಯೊಂದಿಗೆ ಸೆಲ್ಫಿ ತೆಗೆಯಲು ಹೋಗಿ ಪ್ರಪಾತಕ್ಕೆ ಬಿದ್ದು ಪತಿ ಸಾವು!

ಪ್ರಸಿದ್ಧ ಪ್ರವಾಸಿ ತಾಣದ ವೀವ್ ಪಾಯಿಂಟ್​​ನಲ್ಲಿ ಹೆಂಡತಿಯೊಂದಿಗೆ ಸೆಲ್ಫಿ ತೆಗೆಯಲು ಹೋಗಿ ನೂರಾರು ಅಡಿ ಆಳದ ಪ್ರಪಾತಕ್ಕೆ ಕಾಲು ಜಾರಿ ಬಿದ್ದು ಗಂಡಸಂತೋಷ್ (40) ಮೃತ ವ್ಯಕ್ತಿ. ಸಂತೋಷ್ ಶಿಕ್ಷಕರಾಗಿದ್ದರು. ಲಿಂಗದಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ‌ದಾಖಲಾಗಿದೆ. ಮೃತಪಟ್ಟಿರುವಂತಹ ಘಟನೆ ಕೆಮ್ಮಣ್ಣುಗುಂಡಿಯಲ್ಲಿ ನಡೆದಿದೆ.

Read More »