ಬೆಳಗಾವಿ: ಸಮ್ಮಿಶ್ರ ಸರ್ಕಾರದ ಸಚಿವರಿಗೂ ಈಗ ದಂಗೆಯ ನಂಟು ಬೆಳೆದಂತಿದೆ. ಸರ್ಕಾರದಲ್ಲಿ ಕಾಡುತ್ತಿರುವ ಅಸ್ಥಿರತೆಯ ಬಗ್ಗೆ ಮಾಧ್ಯಮಗಳು ಪ್ರಶ್ನೆ ಕೇಳಿದ್ರೆ ಸಚಿವ ರಮೇಶ್ ಜಾರಕಿಹೊಳಿ ಜನ ನಿಮ್ಮ ಮೇಲೆ ದಂಗೆ ಏಳಬೇಕಾಗುತ್ತೆ ಅಂತ ಹರಿಹಾಯ್ದಿದ್ದಾರೆ. ಸರ್ಕಾರ ಉಳಿಸಿಕೊಳ್ಳಲು ಮಾಡುತ್ತಿರುವ ಪ್ರಯತ್ನಗಳ ಬಗ್ಗೆ ಹೇಳೋ ಬದಲು ಮಾಧ್ಯಮಗಳ ಮೇಲೇ ಗೂಬೆ ಕೂರಿಸುವ ಯತ್ನ ನಡೆಸಿದ್ದಾರೆ. ನೀವು ಸಮ್ಮಿಶ್ರ ಸರ್ಕಾರವನ್ನ ಎಂಡ್ ಮಾಡಲು ಗುತ್ತಿಗೆ ಪಡೆದಿದ್ದೀರಿ. ಹೀಗೆ ಮುಂದುವರಿದ್ರೆ ಜನ ಮಾಧ್ಯಮಗಳ ಮೇಲೆ ದಂಗೆ ಏಳಬೇಕಾಗುತ್ತದೆ ಅಂತಾ ರಮೇಶ್ ಜಾರಕಿಹೊಳಿ ಮಾಧ್ಯಮಗಳ ವಿರುದ್ಧ ಹರಿಹಾಯ್ದಿದ್ದಾರೆ. ಬೆಳಗಾವಿಯ ಗೋಕಾಕ್ ನಿವಾಸದ ಬಳಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯೆ ನೀಡಿದ ಸಚಿವರು, ಮೂರು ಜನ ಸಚಿವರು ರೆಸಾರ್ಟ್ಗೆ ಹೋಗಿರೋ ವಿಚಾರ ನನಗೆ ಗೊತ್ತಿಲ್ಲ. ನಾನೇನು ಸಿಎಂ ಅಲ್ಲ, ಡಿಸಿಎಂ ಅಲ್ಲ. ಪಿಎಲ್ಡಿ ಬ್ಯಾಂಕ್ ವಿಚಾರದಲ್ಲಿ ನಮಗೆ ಜಯವಾಗಿದೆ. ನಮ್ಮ ನಾಯಕರ ಜೊತೆ ಚರ್ಚಿಸಿದ್ದೇನೆ. ನಮ್ಮ ಅಸಮಧಾನ ಅಂತ್ಯವಾಗಿದೆ. ಆದ್ರೆ ಮಾಧ್ಯಮಗಳು ನಾನು ಪಕ್ಷ ತೊರೆಯುತ್ತೇನೆ ಅಂತಾ ಹೇಳುತ್ತಿವೆ. ನಾನೆಲ್ಲೂ ಹೋಗೋದಿಲ್ಲ. ಹೋಗೋದಾದ್ರೆ ನಿಮಗೆ ಹೇಳಿ ಹೋಗುತ್ತೇನೆ ಅಂತಾ ಹೇಳಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





