Breaking News

Breaking News

ನೆಲ್ಲೂರಿನಲ್ಲಿ ಭೀಕರ ರಸ್ತೆ ಅಪಘಾತ; ಮಗು ಸೇರಿದಂತೆ 7 ಜನ ಸಾವು.

ನೆಲ್ಲೂರಿನ ಸಂಗಮ್ ಮಂಡಲದ ರಾಷ್ಟ್ರೀಯ ಹೆದ್ದಾರಿಯಲ್ಲಿ ಪೆರಮನ್ ಬಳಿ ಇಂದು ಟಿಪ್ಪರ್ ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮದಿಂದ ಮಗು ಸೇರಿದಂತೆ 7 ಜನರು ಸಾವನ್ನಪ್ಪಿದ್ದಾರೆ.ರಸ್ತೆಯಲ್ಲಿ ಅತಿ ವೇಗವಾಗಿ ಬರುತ್ತಿದ್ದ ಟಿಪ್ಪರ್ ಕಾರಿಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮದಿಂದ ವಾಹನವು ಲಾರಿಯ ಕೆಳಗೆ ನಜ್ಜುಗುಜ್ಜಾಗಿದ್ದು, ವಾಹನದಲ್ಲಿದ್ದವರು ಮೃತಪಟ್ಟಿದ್ದಾರೆ. ಈ ಅಪಘಾತದ ಸಮಯದಲ್ಲಿ ಕಾರು ನೆಲ್ಲೂರಿನಿಂದ ಕಡಪದ ಕಡೆಗೆ ಸಾಗುತ್ತಿತ್ತು.ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಈ ದುರಂತ ಅಪಘಾತದ ಬಗ್ಗೆ ಆಘಾತ …

Read More »

2 ಬಾರಿ ಕಚ್ಚಿದ ನಾಯಿಗೆ ಜೀವಾವಧಿ ಶಿಕ್ಷೆ, ರಾಗಾ ಹೈಡ್ರೋಜನ್ ಬಾಂಬ್, ಇವಿಎಂಲ್ಲಿ ಅಭ್ಯರ್ಥಿಗಳ ಕಲರ್ ಪೊಟೋ.

ದೆಹಲಿಯನ್ನು ಬೀದಿನಾಯಿ ಮುಕ್ತ ಮಾಡಿ ಎಂಬ ಸುಪ್ರೀಂ ಕೋರ್ಟ್ ಆದೇಶದ ಬೆನ್ನಲ್ಲೇ ದೇಶಾದ್ಯಂತ ಸಂಚಲನ ಸೃಷ್ಟಿಸಿ ಚರ್ಚೆ ಹುಟ್ಟು ಹಾಕಿದ್ದ ನಿರಾಶ್ರಿತ ಶ್ವಾನಗಳಿಗೆ ಸಂಬಂಧಿಸಿದಂತೆ ಉತ್ತರಪ್ರದೇಶ ಸರ್ಕಾರ ಹೊಸ ಆದೇಶ ಹೊರಡಿಸಿದೆ.ಉತ್ತರ ಪ್ರದೇಶ ಸರ್ಕಾರದಲ್ಲಿ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಅಮೃತ್ ಅಭಿಜಿತ್ ಅವರು ಈ ಆದೇಶ ಹೊರಡಿಸಿದ್ದಾರೆ. ಯಾರಿಗಾದರೂ ನಾಯಿ ಕಚ್ಚಿದ್ದು ತಿಳಿದುಬಂದರೆ, ಆ ಶ್ವಾನವನ್ನು ಹಿಡಿದು ಸಂತಾನಹರಣ ಚಿಕಿತ್ಸೆ ಮಾಡಲಾಗುವುದು. ಬಳಿಕ 10 ದಿನ …

Read More »

ಬಸ್ ಇಳಿಯುತ್ತಿದ್ದಂತೆ ಅಟ್ಯಾಕ್ ಮಾಡಿ ಯುವಕನ ಕೊಚ್ಚಿ ಕೊಲೆ.

ಬಸ್ ಇಳಿಯುತ್ತಿದ್ದಂತೆ ಯುವಕನ ಮೇಲೆ ದುಷ್ಕರ್ಮಿಗಳು ಮಚ್ಚಿನಿಂದ ದಾಳಿ ನಡೆಸಿ ಕೊಚ್ಚಿ ಕೊಲೆಗೈದ ಪ್ರಕರಣ ಹುಕ್ಕೇರಿ ಶಹಾಬಂದರ ಗ್ರಾಮದಲ್ಲಿ ನಡೆದಿದೆ.ಗ್ರಾಮದ ಮಹಾಂತೇಶ್ ಬುಕನಟ್ಟಿ (24) ಕೊಲೆಯಾದ ಯುವಕ ಎಂದು ತಿಳಿದು ಬಂದಿದೆ.ಯುವಕ ಕೆಲಸ ಮುಗಿಸಿ ಊರಿಗೆ ವಾಪಸ್ ಆಗಿದ್ದ. ಈ ವೇಳೆ ಬಸ್ ಇಳಿಯುತ್ತಿದ್ದಂತೆ ಹಿಂದಿನಿಂದ ಬಂದು ಮಚ್ಚಿನಿಂದ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ.

Read More »

Assam: ಅಧಿಕಾರಿ ಮನೆಯಲ್ಲಿ ಕಂತೆ ಕಂತೆ ಹಣ, ಚಿನ್ನ ಪತ್ತೆ!

ಆದಾಯಕ್ಕಿಂತ ಹೆಚ್ಚಿನ ಸಂಪತ್ತು ಹೊಂದಿದ ಆರೋಪದಲ್ಲಿ ಅಸ್ಸಾಂ ನಾಗರಿಕ ಸೇವೆಯ ಮಹಿಳಾ ಅಧಿಕಾರಿಯೊಬ್ಬರನ್ನು ಬಂಧಿಸಲಾಗಿದೆ. ಬಂಧಿತೆಯನ್ನು ಕಾಮರೂಪ್‌ ಜಿಲ್ಲೆಯಲ್ಲಿ ವೃತ್ತಾಧಿಕಾರಿಯಾಗಿ ಸೇವೆಯಲ್ಲಿದ್ದ ನೂಪುರ್‌ ಬೋರಾ ಎಂದು ಗುರುತಿಸಲಾಗಿದೆ.ನಗದು, 1 ಕೋಟಿ ರೂ.ಗೂ ಅಧಿಕ ಮೌಲ್ಯದ ಆಭರಣ ಬಾರ್‌ಪೇಟಾದಲ್ಲಿರುವ ಬಾಡಿಗೆ ಮನೆಯಿಂದ 10 ಲಕ್ಷ ರೂ.ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

Read More »

ಗೃಹಲಕ್ಸ್ಮಿಯರಿಗೆ ಶಾಕ್..2 ಲಕ್ಷ ಮಹಿಳೆಯರ ಹೆಸರು ತೆಗೆದುಹಾಕಿದ ಸರ್ಕಾರ!

ಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿಕೊಂಡಿದ್ದ ಎರಡು ಲಕ್ಷಕ್ಕೂ ಹೆಚ್ಚು ಮಹಿಳೆಯರ ಹೆಸರನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಫಲಾನುಭವಿಗಳ ಪಟ್ಟಿಯಿಂದ ತೆಗೆದುಹಾಕಿದೆ. ಇವರ ಪತಿ ಅಥವಾ ಪತ್ನಿಯವರು ಆದಾಯ ತೆರಿಗೆ ಪಾವತಿಸುತ್ತಿರುವುದು ಅಥವಾ ಸರಕು ಮತ್ತು ಸೇವಾ ತೆರಿಗೆ ರಿಟರ್ನ್ಸ್ ಸಲ್ಲಿಸುತ್ತಿರುವುದು ಮುಖ್ಯ ಕಾರಣವಾಗಿದೆ..ತೆರಿಗೆ ಪಾವತಿಸುತ್ತಿದ್ದ ಕುಟುಂಬಗಳ 1.08 ಲಕ್ಷ ಮಹಿಳಾ ಮುಖ್ಯಸ್ಥರ ಹೆಸರುಗಳು ಹಾಗೂ ಜಿಎಸ್‌ಟಿ ಪಾವತಿಸುತ್ತಿದ್ದ ಕುಟುಂಬಗಳ 1.04 ಲಕ್ಷ ಮಹಿಳೆಯರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. …

Read More »

ಧಾರವಾಡ ಕೃಷಿ ಮೇಳಕ್ಕೆ ತೆರೆ; 4 ದಿನದಲ್ಲಿ 23 ಲಕ್ಷ ಜನ ಭೇಟಿ ; ಮತ್ತೊಂದು ಗಿನ್ನಿಸ್ ದಾಖಲೆ.

.13ರಿಂದ ಸೆ.16ರ ವರೆಗೆ ನಡೆದ ಕೃಷಿ ಮೇಳದಲ್ಲಿ ಕಿತ್ತೂರು ಕರ್ನಾಟಕ ಮಾತ್ರವಲ್ಲ, ಕಲ್ಯಾಣ ಕರ್ನಾಟಕದಿಂದಲೂ ರೈತರು ಬಂದು ಕೃಷಿಗೆ ಸಂಬಂಧಪಟ್ಟ ಸಂಶೋಧನೆ ಮತ್ತು ತಂತ್ರಜ್ಞಾನಗಳ ಬಗ್ಗೆ ಮಾಹಿತಿ ಪಡೆದುಕೊಂಡು ಹೋಗಿದ್ದು ದಾಖಲಾಗಿದೆ.ಕೃಷಿ ಮೇಳದ ಸ್ವರೂಪದಲ್ಲಿ ಬದಲಾವಣೆ ಆಗುತ್ತಲೇ ಸಾಗಿದ್ದು, ಕೊನೆಯ ದಿನವಂತೂ ಇಡೀ ಕೃಷಿ ಮೇಳವು ಮಾರುಕಟ್ಟೆಯಾಗಿ ಮಾರ್ಪಾಟಾಗಿತ್ತು. ಉತ್ತರ ಭಾರತದಿಂದ ಆಟಿಕೆಗಳನ್ನು ಮಾರಾಟ ಮಾಡುವ ಸಾವಿರಾರು ಸಣ್ಣ ವ್ಯಾಪಾರಿಗಳು ಕೃಷಿ ವಿವಿಯ ಎಲ್ಲಾ ರಸ್ತೆಗಳಿಗೂ ಲಗ್ಗೆ ಹಾಕಿದ್ದರು. ಕೃಷಿ …

Read More »

ಬೆಂಗಳೂರು | ಪ್ರತಿಷ್ಠಿತ ವಾಚ್ ಕಂಪೆನಿಯಲ್ಲಿ ಕಳುವಾಗಿದ್ದ 70 ಕೈಗಡಿಯಾರಗಳ ಜಪ್ತಿ; ಮಾಜಿ ಉದ್ಯೋಗಿ ಸೆರೆ

ಪ್ರತಿಷ್ಠಿತ ವಾಚ್ ಕಂಪೆನಿಯೊಂದರಲ್ಲಿ ಕೆಲಸ ಮಾಡಿಕೊಂಡು ಪ್ರತಿನಿತ್ಯ ಕೈಗಡಿಯಾರಗಳನ್ನು ಕಳವು ಮಾಡುತ್ತಿದ್ದ ಪ್ರಕರಣದಡಿ ಕಂಪೆನಿಯ ಮಾಜಿ ಉದ್ಯೋಗಿಯನ್ನು ಇಲ್ಲಿನ ಪರಪ್ಪನ ಅಗ್ರಹಾರ ಠಾಣೆಯ ಪೊಲೀಸರು ಬಂಧಿಸಿ 10ಲಕ್ಷ ರೂ.ಮೌಲ್ಯದ 70 ಕೈ ಗಡಿಯಾರಗಳನ್ನು ವಶಪಡಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.ಆಂಧ್ರಪ್ರದೇಶ ಮೂಲದ ಶೇಷಾದ್ರಿ ರೆಡ್ಡಿ(27) ಬಂಧಿತ ಆರೋಪಿ.

Read More »

ಹೈದರಾಬಾದ್‌ ದೇವಸ್ಥಾನದ ಗೋಡೆಗೆ ಡಿಕ್ಕಿಯಾಗಿ ಟ್ಯಾಂಕರ್ ಪಲ್ಟಿ;

ಹೈದರಾಬಾದ್‌ನ ಉಪ್ಪಲ್ ಪ್ರದೇಶದ ಎನ್‌ಜಿಆರ್‌ಐ ಬಳಿಯ ದೇವಸ್ಥಾನದ ಕಾಂಪೌಂಡ್ ಗೋಡೆಗೆ ಸೆಪ್ಟಿಕ್ ಟ್ಯಾಂಕರ್ ಡಿಕ್ಕಿ ಹೊಡೆದು, ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ.ಘಟನೆಯಲ್ಲಿ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಇಡೀ ಘಟನೆ ಆ ಪ್ರದೇಶದಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿದೆ. ಈ ವಿಡಿಯೋ ವೈರಲ್ ಆಗಿದ್ದು, ರಸ್ತೆ ಸುರಕ್ಷತೆಯ ಬಗ್ಗೆ ಗಂಭೀರವಾದ ಆತಂಕ ಸೃಷ್ಟಿಸಿದೆ.

Read More »

ವಿಜಯಪುರ: SBI ಸಿಬ್ಬಂದಿಗೆ ಗನ್ ತೋರಿಸಿ ₹8 ಕೋಟಿ ನಗದು, 50 KG ಚಿನ್ನಾಭರಣ ದರೋಡೆ

ನೆರೆಯ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಯ ಚಡಚಣ ಪಟ್ಟಣದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಮಂಗಳವಾರ ಸಂಜೆ 7 ಗಂಟೆಗೆ ಏಳೆಂಟು ಮುಸುಕುದಾರಿ ದರೋಡೆಕೋರರು ಪಿಸ್ತೂಲ್‌ ಮತ್ತು ಮಾರಕಾಸ್ತ್ರಗಳನ್ನು ತೋರಿಸಿ, ಬ್ಯಾಂಕಿನ ಸಿಬ್ಬಂದಿಯ ಕೈಕಾಲು ಕಟ್ಟಿ ಹಾಕಿ ದರೋಡೆ ಮಾಡಿದ್ದಾರೆ.ಅಂದಾಜು ₹8 ಕೋಟಿ ನಗದು, 50 ಕೆ.ಜಿ ಚಿನ್ನಾಭರಣವನ್ನು ದೋಚಿಕೊಂಡು ಪರಾರಿಯಾಗಿದ್ದಾರೆ ಎಂದು ಬ್ಯಾಂಕಿನ ಸಿಬ್ಬಂದಿ, ಪೊಲೀಸ್‌ ಮೂಲಗಳಿಂದ ತಿಳಿದುಬಂದಿದೆ. ಆದರೆ, ಖಚಿತ ಮಾಹಿತಿ ಇನ್ನೂ ಲಭಿಸಿಲ್ಲ.

Read More »

ಚಾಮುಂಡಿ ತಾಯಿಗೆ ಹೂ ಮುಡಿಸಲು ದಲಿತ ಮಹಿಳೆಗೆ ಅವಕಾಶ ಇಲ್ಲ ಎಂಬ ಹೇಳಿಕೆ : ಶಾಸಕ ಯತ್ನಾಳ್ ವಿರುದ್ಧ ‘FIR’ ದಾಖಲು

ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ ಭಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವ ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷಗಳು ಆಕ್ರೋಶ ಹೊರ ಹಾಕುತ್ತಿವೆ. ಇದೇ ವೇಳೆ ವಿಜಯಪುರ ನಗರ ಉಚ್ಛಾಟಿತ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಚಾಮುಂಡಿ ತಾಯಿಗೆ ಹೂ ಮುಡಿಸಲು ಸನಾತನ ಧರ್ಮದವರಿಗೆ ಮಾತ್ರ ಅವಕಾಶ ಇದೆ.ಸಾಮಾನ್ಯ ದಲಿತ ಮಹಿಳೆಗೂ ಅವಕಾಶ ಇಲ್ಲ ಎಂದು ಹೇಳಿಕೆ ನೀಡಿದ್ದರು. ಇದೀಗ ಇವರ ಹೇಳಿಕೆ ವಿರುದ್ಧ ಕೊಪ್ಪಳದಲ್ಲಿ ಎಫ್‌ಐಆರ್ ದಾಖಲಾಗಿದೆ.ಶಾಸಕ ಯತ್ನಾಳ್ …

Read More »