Breaking News

Breaking News

ರಾಮನಗರ : ಅಪಘಾತ, ತಂದೆ, ಮಗ ಸೇರಿ ಮೂವರು ಸಾವು!

ಬೆಂಗಳೂರು ಟು ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ತಡೆಗೋಡೆಗೆ ಕಾರು ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರಾಮನಗರ ತಾಲೂಕಿನ ಜಯಪುರಗೇಟ್ ಬಳಿ ಬೆಳಗಿನ ಜಾವ ಘಟನೆ ನಡೆದಿದೆ.ಚಿಕ್ಕನಾಯಕಹಳ್ಳಿಯ ತಮ್ಮಣ್ಣಗೌಡ (56), ಪುತ್ರ ಮುತ್ತುರಾಜ್ (28) ಮತ್ತು ಹಾಸನ ಮೂಲದ ಚಾಲಕ ಸಚಿನ್ (27) ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ.ಸ್ಥಳಕ್ಕೆ ರಾಮನಗರ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

Read More »

ವಿದ್ಯಾರ್ಥಿನಿಗೆ ನಿರಂತರ ಲೈಂಗಿಕ ದೌರ್ಜನ್ಯ: ಕಾಲೇಜು ಆವರಣದಲ್ಲೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಸಂತ್ರಸ್ತೆ!

ಕಾಲೇಜು ವಿದ್ಯಾರ್ಥಿನಿಗೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಹೆಚ್ ಒಡಿ ಹಿಂಸೆಗೆ ಬೇಸತ್ತು ವಿದ್ಯಾರ್ಥಿನಿಯೊಬ್ಬಳು ಕಾಲೇಜು ಆವರಣದಲ್ಲಿಯೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.ನೊಂದ ವಿದ್ಯಾರ್ಥಿನಿ ಬೇರೆ ದಾರಿ ಕಾಣದೆ ಕಾಲೇಜಿನ ಪ್ರಾಂಶುಪಾಲರ ಕೊಠಡಿ ಮುಂದೆಯೇ ಬೆಂಕಿ ಹಚ್ಚಿಕೊಂಡಿದ್ದಾಳೆ. ಶೇ.೯೫ರಷ್ಟು ಭಾಗ ಸುಟ್ಟು ಹೋಗಿದೆ. ಆಕೆಯನ್ನು ರಕ್ಷಿಸಲು ಹೋದ ಮತ್ತೋರ್ವ ವಿದ್ಯಾರ್ಥಿನಿಗೂ ಸುಟ್ಟ ಗಾಯಗಳಾಗಿವೆ. ಆಕೆಗೂ ಶೇ.೭೦ರಷ್ಟು ಭಾಗ ಸುಟ್ಟಿದೆ. ಇಬ್ಬರನ್ನೂ ಭುವನೇಶ್ವರ ಏಮ್ಸ್ ಆಸ್ಪತ್ರೆಗೆ ದಾಖಲಾಗಿದೆ. ಪ್ರಕರನದಾಖಲಿಸಿಕೊಂಡಿರುವ …

Read More »

ಆರೋಪಿಯನ್ನು ಪೊಲೀಸ್ ಠಾಣೆಯಿಂದ ಹೊರಗೆ ಎಳೆದು ತಂದು ಕೊಲೆ!!

ಅರುಣಾಚಲ ಪ್ರದೇಶದಲ್ಲಿ ಗುಂಪೊಂದು ಅಪ್ರಾಪ್ತ ಬಾಲಕಿಯರ ಮೇಲೆ ದೌರ್ಜನ್ಯ ಎಸಗಿದ ಆರೋಪಿಯನ್ನು ಪೊಲೀಸ್ ಠಾಣೆಯಿಂದ ಹೊರಗೆ ಎಳೆದು ತಂದು ನಂತರ ಹೊಡೆದು ಕೊಂದಿದ್ದಾರೆ. ಈ ಘಟನೆ ಲೋವರ್ ದಿಬಾಂಗ್ ಕಣಿವೆ ಜಿಲ್ಲೆಯ ರೋಯಿಂಗ್‌ನಲ್ಲಿ ನಡೆದಿದೆ. ಮೃತನನ್ನು ಕಟ್ಟಡ ಕಾರ್ಮಿಕ ಎಂದು ಹೇಳಲಾಗುತ್ತಿದೆ.ಆರೋಪಿಯನ್ನು ಪೊಲೀಸರು ಬಂಧಿಸಿ ಪೊಲೀಸ್ ಠಾಣೆಯಲ್ಲಿ ಇರಿಸಿದ್ದರು. ಶುಕ್ರವಾರ ಪೋಷಕರು ಮತ್ತು ಸ್ಥಳೀಯರು ಪೊಲೀಸ್ ಠಾಣೆಗೆ ನುಗ್ಗಿ, ಆರೋಪಿಯನ್ನು ಹೊರಗೆ ಎಳೆದು ತೀವ್ರವಾಗಿ ಥಳಿಸಿದ್ದಾರೆ. ಪೊಲೀಸರು ಆರೋಪಿಯನ್ನು ರಕ್ಷಿಸಿ …

Read More »

ಹೊತ್ತಿ ಉರಿದ ಇಂಧನ ಟ್ಯಾಂಕರ್! ವಂದೇ ಭಾರತ್ ಸೇರಿ 08 ರೈಲು ಸಂಚಾರ ರದ್ದು!

ಚೆನ್ನೈನಿಂದ ಬೆಂಗಳೂರಿಗೆ ಇಂಧನ ಸಾಗಿಸುತ್ತಿದ್ದ ಟ್ಯಾಂಕರ್ ಲಾರಿಯು ಬೆಂಕಿಗೆ ಆಹುತಿಯಾದ ಘಟನೆ ಭಾನುವಾರ ಬೆಳಗಿನ ಜಾವ ನಡೆದಿದೆ. ಇದರಿಂದಾಗಿ ವಂದೇ ಭಾರತ್ ಸೇರಿದಂತೆ ವಿವಿಧ ರೈಲುಗಳ ಸಂಚಾರದಲ್ಲಿ ವಿಳಂಬವಾಯಿತು. ಸುಮಾರು ಎಂಟು ರೈಲುಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯವಾಗಿದೆ. ಇಂಧನ ಹೊತ್ತು ಬರುತ್ತಿದ್ದ ಲಾರಿಯೊಂದು ತಮಿಳುನಾಡಿನ ಚೆನ್ನೈನಿಂದ ಬೆಂಗಳೂರಿಗೆ ರಸ್ತೆ ಮಾರ್ಗವಾಗಿ ಬರುತ್ತಿತ್ತು. ಈ ವೇಳೆ ತಿರುವಳ್ಳೂರು ರೈಲು ನಿಲ್ದಾಣದ ಬಳಿ ಬರುತ್ತಿದ್ದಂತೆ ಇಂದು ಬೆಳಗಿನ ಜಾವ ದಿಢೀರ್ ಬೆಂಕಿ ಕಾಣಿಸಿಕೊಂಡಿತು. ನೋಡ …

Read More »

ಖ್ಯಾತ ಹಿರಿಯ ನಟ ಶ್ರೀನಿವಾಸ ರಾವ್ ನಿಧನ!

ಜನಪ್ರಿಯ ಚಲನಚಿತ್ರ ನಟ ಕೋಟ ಶ್ರೀನಿವಾಸ ರಾವ್ (83) ನಿಧನರಾಗಿದ್ದಾರೆ. ನಟ ಮತ್ತು ರಾಜಕಾರಣಿಯೂ ಆಗಿದ್ದ ಅವರು, ಕಳೆದ ಕೆಲವು ದಿನಗಳಿಂದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಕೋಟ ಶ್ರೀನಿವಾಸ ರಾವ್ ಅವರ ನಿಧನದ ಸುದ್ದಿ ಚಿತ್ರರಂಗ ಮಾತ್ರವಲ್ಲದೆ, ಅವರ ಹುಟ್ಟೂರು ವಿಜಯವಾಡದಲ್ಲಿ ಶೋಕದ ಛಾಯೆ ಆವರಿಸುವಂತೆ ಮಾಡಿದೆ.750 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಕೋಟ ಶ್ರೀನಿವಾಸರಾವ್ ತೆಲುಗು ಚಿತ್ರರಂಗದ ಇತಿಹಾಸದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಖಳನಾಯಕನ ಪಾತ್ರದಲ್ಲಿ ನಟಿಸುತ್ತಾ …

Read More »

ಫೋಟೋಶೂಟ್‌ ನೆಪದಲ್ಲಿ ನದಿಗೆ ತಳ್ಳಿದ ಪತ್ನಿ!

ಪೋಟೊಶೂಟ್ ನೆಪದಲ್ಲಿ, ಪತ್ನಿಯೊಬ್ಬಳು ತನ್ನ ಪತಿಯನ್ನು ನದಿಗೆ ತಳ್ಳಿದ ರಾಯಚೂರಿನ ಘಟನೆ ಎಲ್ಲರು ಶಾಕ್ ಆಗುವಂತೆ ಮಾಡಿದೆ. ಮಹಿಳೆಯೊಬ್ಬರು ತನ್ನ ಪತಿಯನ್ನು “ಫೋಟೊಶೂಟ್” ನೆಪದಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್​​​ಗೆ ಬಳಿ ಕರೆದುಕೊಂಡು ಹೋಗಿ, ಮೊದಲಿಗೆ ತಾವು ಫೋಟೋ ತೆಗೆಸಿಕೊಂಡು, ನಂತರ ಪತಿಗೆ ಸೇತುವೆಯ ತುದಿಗೆ ಹೋಗಲು ಹೇಳುತ್ತಾರೆ.ನಿರ್ದಯವಾಗಿ ನದಿಗೆ ತಳ್ಳಿ ಬಿಟ್ಟಿದ್ದಾರೆ.ಅದೃಷ್ಟವಶಾತ್, ಆ ವ್ಯಕ್ತಿಗೆ ಈಜು ಚೆನ್ನಾಗಿ ಬರುತ್ತಿದ್ದರಿಂದ, ತಕ್ಷಣವೇ ನದಿ ಮಧ್ಯದ ಬಂಡೆಯೊಂದರ ಮೇಲೆ ಹತ್ತಿ ಜೀವ ಉಳಿಸಿಕೊಂಡಿದ್ದಾರೆ. …

Read More »

ಹಾವೇರಿ: ‘ಸ್ವಚ್ಛ ವಿಧಾನಸಭೆ’ಗಾಗಿ ಎಂಜಿನಿಯರ್ ಪಾದಯಾತ್ರೆ!

ಬಾಗಲಕೋಟೆಯ ನಾಗರಾಜ, 2023ರ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ನಡೆದ ಭ್ರಷ್ಟಾಚಾರ, ಜಾತಿ ವ್ಯವಸ್ಥೆ, ಕೋಮು ಸೌಹಾರ್ದಕ್ಕೆ ಧಕ್ಕೆ ಹಾಗೂ ಮತದಾರರಿಗೆ ಒಡ್ಡುವ ಆಮಿಷಗಳನ್ನು ನೋಡಿ ಬೇಸತ್ತಿದ್ದ ಅವರು, ಪ್ರಜಾಪ್ರಭುತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಇದೀಗ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ‘ಭ್ರಷ್ಟರಲ್ಲದ, ಕೋಮುವಾದಿಯಲ್ಲದ ಪ್ರಬುದ್ಧ-ಜನಪರ-ಸುಸಂಸ್ಕೃತ ವ್ಯಕ್ತಿತ್ವವುಳ್ಳವರು ಬೇಕಾಗಿದ್ದಾರೆ’ ಎಂಬ ಫಲಕ ಹಿಡಿದುಕೊಂಡು ಸಾಗುತ್ತಿದ್ದಾರೆ. ಕರ್ನಾಟಕ ಹಾಗೂ ಭಾರತದ ಬಾವುಟವನ್ನೂ ಜೊತೆಗೆ ಕೊಂಡೊಯ್ಯುತ್ತಿದ್ದಾರೆ. …

Read More »

ಮಲೆಮಹದೇಶ್ವರ ದುರಂತ ಬೆನ್ನಲ್ಲೇ ಬನ್ನೇರುಘಟ್ಟದಲ್ಲಿ 3 ಹುಲಿಮರಿ ಸಾವು!

ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ 5 ಹುಲಿಗಳು ವಿಷಪ್ರಾಶನದಿಂದ ಮೃತಪಟ್ಟ ಘಟನೆ ಹಚ್ಚಹಸಿರಾಗಿರುವಾಗಲೇ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ 3 ಹುಲಿ ಮರಿಗಳು ಸಂಶಯಾಸ್ಪದವಾಗಿ ಸಾವಿಗೀಡಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.ಕಳೆದ ಮೂರ್ನಾಲ್ಕು ದಿನದ ಹಿಂದೆ ಹಿಮ ಎಂಬ ಹೆಸರಿನ 7 ವರ್ಷದ ಹೆಣ್ಣು ಹುಲಿಯೊಂದು 2 ಗಂಡು ಹಾಗೂ 1 ಹೆಣ್ಣು ಸೇರಿ ಒಟ್ಟು 3 ಮರಿಗಳಿಗೆ ಜನ್ಮ ನೀಡಿತ್ತು. ಜನ್ಮ ನೀಡಿದ 3 ದಿನಗಳ ಅಂತರದಲ್ಲಿ ಮೂರೂಮರಿಗಳು …

Read More »

ಬಾಕಿ ಬಿಲ್‌ ಕೇಳಿದ ಮಾಲಕ: ಅಂಗಡಿ ಬ್ಯಾನರ್‌ಗೆ ಬೆಂಕಿ ಹಚ್ಚಿದ ಗ್ರಾಹಕ!

ದಿನಸಿ ಅಂಗಡಿಯೊಂದರಲ್ಲಿ ಸಾಮಾನು ಖರೀದಿಸಿ ಬಿಲ್‌ ನೀಡದೆ ಬಾಕಿ ಉಳಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಹಕನೋರ್ವ ಅಂಗಡಿ ಬ್ಯಾನರ್‌ಗೆ ಬೆಂಕಿ ಹಚ್ಚಿದ ಘಟನೆ ಗುರುವಾಯನಕೆರೆಯಲ್ಲಿ ನಡೆದಿದೆ.ಅರೋಪಿತನು ಸಾಮಾನು ಖರೀದಿಯ ದುಡ್ಡನ್ನು ಬಾಕಿ ಯಿರಿಸಿದ್ದು, ಅದನ್ನು ಮಾಲಕ ಕೇಳಿದ್ದಕ್ಕೆ ಕೋಪಗೊಂಡು ಈ ಕೃತ್ಯವನ್ನು ಎಸಗಿದ್ದಾನೆ. ಇದರಿಂದ 3000 ರೂ. ನಷ್ಟ ಉಂಟಾಗಿದೆ ಎಂದು ಬೆಳ್ತಂಗಡಿ ಪೊಲೀಸ್‌ ಠಾಣೆಗೆ ನೀಡಿದ ದೂರಿನಂತೆ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.

Read More »

GAIL ಗ್ಯಾಸ್ ಪೈಪ್ ಲೈನ್ ಹಾನಿಯಾಗಿ ಅನಿಲ ಸೋರಿಕೆ: ಮಲ್ಲೇಶ್ವರದ ನಿವಾಸಿಗಳಲ್ಲಿ ಆತಂಕ!

ಬಿಡಬ್ಲ್ಯುಎಸ್ ಎಸ್ ಬಿ ನಡೆಸುತ್ತಿರುವ ಕಾಮಗಾರಿ ಸಮಯದಲ್ಲಿ GAIL ಅನಿಲ ಪೈಪ್‌ಲೈನ್ ಆಕಸ್ಮಿಕವಾಗಿ ಹಾನಿಗೊಳಗಾಗಿ ಮಲ್ಲೇಶ್ವರಂನಲ್ಲಿ ಭಯಯ ವಾತಾವರಣ ನಾಗರಿಕರಲ್ಲಿ ಉಂಟಾಯಿತು. 8ನೇ ಮುಖ್ಯ ರಸ್ತೆಯಲ್ಲಿ ಅಗೆಯುವ ಸಮಯದಲ್ಲಿ ಈ ಘಟನೆ ಸಂಭವಿಸಿದ್ದು, ಇದರಿಂದ ಅನಿಲ ಸೋರಿಕೆಯುಂಟಾಯಿತು.ಅನಿಲ ಸೋರಿಕೆಯು ದೇಶೀಯ ಸಿಎನ್‌ಜಿ ಸರಬರಾಜನ್ನು ಅಡ್ಡಿಪಡಿಸಿತು. ಪ್ರದೇಶದ ಅನೇಕ ಮನೆಗಳು ಅಡುಗೆಗಾಗಿ ಎಲ್‌ಪಿಜಿಯಿಂದ ಪೈಪ್ಡ್ ಸಿಎನ್‌ಜಿಗೆ ಬದಲಾಯಿಸಿವೆ. ಸೋರಿಕೆಯ ನಂತರ, ಹೆಚ್ಚಿನ ಅಪಾಯವನ್ನು ತಡೆಗಟ್ಟಲು ಗೈಲ್ ಅಧಿಕಾರಿಗಳು ಪೂರೈಕೆಯನ್ನು ಸ್ಥಗಿತಗೊಳಿಸಿದ್ದಾರೆ.ಗ್ಯಾಸ್ ಪೂರೈಕೆ …

Read More »