ಪೋಟೊಶೂಟ್ ನೆಪದಲ್ಲಿ, ಪತ್ನಿಯೊಬ್ಬಳು ತನ್ನ ಪತಿಯನ್ನು ನದಿಗೆ ತಳ್ಳಿದ ರಾಯಚೂರಿನ ಘಟನೆ ಎಲ್ಲರು ಶಾಕ್ ಆಗುವಂತೆ ಮಾಡಿದೆ. ಮಹಿಳೆಯೊಬ್ಬರು ತನ್ನ ಪತಿಯನ್ನು “ಫೋಟೊಶೂಟ್” ನೆಪದಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ಗೆ ಬಳಿ ಕರೆದುಕೊಂಡು ಹೋಗಿ, ಮೊದಲಿಗೆ ತಾವು ಫೋಟೋ ತೆಗೆಸಿಕೊಂಡು, ನಂತರ ಪತಿಗೆ ಸೇತುವೆಯ ತುದಿಗೆ ಹೋಗಲು ಹೇಳುತ್ತಾರೆ.ನಿರ್ದಯವಾಗಿ ನದಿಗೆ ತಳ್ಳಿ ಬಿಟ್ಟಿದ್ದಾರೆ.ಅದೃಷ್ಟವಶಾತ್, ಆ ವ್ಯಕ್ತಿಗೆ ಈಜು ಚೆನ್ನಾಗಿ ಬರುತ್ತಿದ್ದರಿಂದ, ತಕ್ಷಣವೇ ನದಿ ಮಧ್ಯದ ಬಂಡೆಯೊಂದರ ಮೇಲೆ ಹತ್ತಿ ಜೀವ ಉಳಿಸಿಕೊಂಡಿದ್ದಾರೆ. ಅವರ ಕಿರುಚಾಟ ಕೇಳಿ ಸ್ಥಳೀಯರು ಧಾವಿಸಿ, ಹಗ್ಗ ಬಳಸಿ 2 ಗಂಟೆಗಳ ರಕ್ಷಣಾ ಕಾರ್ಯಾಚರಣೆಯ ನಂತರ ರಕ್ಷಿಸಿದ್ದಾರೆ. ರಾಯಚೂರು ಜಿಲ್ಲೆಯ ಗುರ್ಜಾಪುರ ಬ್ರಿಡ್ಜ್ ಬಳಿ ಈ ಘಟನೆ ನಡೆದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

