Breaking News

Breaking News

ಮರಕ್ಕೆ ಕಾರು ಡಿಕ್ಕಿಯಾಗಿ ಗರ್ಭಿಣಿ ಸ್ಥಳದಲ್ಲೇ ಸಾವು.!

ಗರ್ಭಿಣಿ ಅರ್ಚನಾ ಅವರನ್ನು ಅವರ ಮಾವ ನಾರಾಯಣಸ್ವಾಮಿ ಅವರ ಗ್ರಾಮ ಕೊರಚನೂರಿಗೆ ಕರೆದುಕೊಂಡು ಹೋಗುತ್ತಿದ್ದರು.ಎದುರಿಗೆ ಲಾರಿಯೊಂದು ಬಂದಿದ್ದು, ಅದನ್ನು ತಪ್ಪಿಸಲು ಹೋಗಿ ಮರಕ್ಕೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ಕಾರಿನಲ್ಲಿದ್ದ ಅರ್ಚನಾ ದೇಹದಿಂದ ರುಂಡ ಹಾಗೂ ಎಡಗೈ ಭಾಗ ಪ್ರತ್ಯೇಕವಾಗಿದೆ.ಪರಿಣಾಮ ಸ್ಥಳದಲ್ಲೇ ಮಹಿಳೆ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಚಾಲಕ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

Read More »

ಮದ್ವೆಯಾದ ರಾತ್ರಿಯೇ ನವವಿವಾಹಿತ ದುರಂತ ಸಾವು!

ಮದುವೆಯಾದ ರಾತ್ರಿಯೇ ನವವಿವಾಹಿತ ಯುವಕನೋರ್ವ ದುರಂತ ಸಾವು ಕಂಡಿದ್ದಾನೆ. ಸಬ್​ ರಿಜಿಸ್ಟರ್ ಕಚೇರಿಯಲ್ಲಿ ಮದುವೆಯಾಗಿದ್ದ ಯುವಕ ಹರೀಶ್​ ಬಾಬು ರಾತ್ರಿಯೇ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕಳೆದ ಹತ್ತು ವರ್ಷಗಳಿಂದ ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಡೇಟಾ ಎಂಟ್ರಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಹರೀಶ್ ಬಾಬು, ನಿನ್ನೆ ರಾತ್ರಿಯೇ ಜಿಲ್ಲಾಸ್ಪತ್ರೆಯ ಇ.ಎನ್​.ಟಿ ವಿಭಾಗದ ಕೊಠಡಿಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Read More »

ಅಮೇರಿಕಾದ ಇಸ್ಕಾನ್ ರಾಧಾಕೃಷ್ಣ ದೇವಸ್ಥಾನದ ಮೇಲೆ ಗುಂಡಿನ ದಾಳಿ!

ಸ್ಪ್ಯಾನಿಷ್ ಫೋರ್ಕ್, ಯುಟಾ ನಲ್ಲಿರುವ ಇಸ್ಕಾನ್‌ನ ಶ್ರೀ ಶ್ರೀ ರಾಧಾಕೃಷ್ಣ ದೇವಸ್ಥಾನದ ಮೇಲೆ 20 ರಿಂದ 30 ಗುಂಡುಗಳನ್ನು ಹಾರಿಸಿರುವ ಘಟನೆ ನಡೆದಿದೆ. ಗುಂಡಿನ ದಾಳಿ ರಾತ್ರಿ ಸಮಯದಲ್ಲಿ ನಡೆದಿದ್ದು, ಆಗ ದೇವಸ್ಥಾನದಲ್ಲಿ 20 ರಿಂದ 30 ಭಕ್ತರು ಇದ್ದರು. ಈ ಘಟನೆಯಿಂದ ದೇವಸ್ಥಾನದ ಕಮಾನುಗಳು ಸೇರಿದಂತೆ ಸಾವಿರಾರು ಡಾಲರ್‌ಗಳಷ್ಟು ನಷ್ಟವಾಗಿದೆ.ಜೂನ್ ತಿಂಗಳಲ್ಲಿ ದೇವಸ್ಥಾನದ ಕಟ್ಟಡದ ಮೇಲೆ 3 ಬೇರೆ-ಬೇರೆ ಸಮಯದಲ್ಲಿ ಗುಂಡಿನ ದಾಳಿ ನಡೆಸಲಾಗಿತ್ತು. ಈಗ ಗೋಡೆಗಳು, ಕಿಟಕಿಗಳು …

Read More »

ವಿಡಿಯೋ ಮಾಡಿ ನೇಣಿಗೆ ಶರಣಾದ ಯುವಕ!

ರಾಜ್ಯದಲ್ಲಿ ಆನ್ಲೈನ್ ಗೇಮ್ ಗೆ ಇದೀಗ ಮತ್ತೊಂದು ಜೀವ ಬಲಿಯಾಗಿದ್ದು, ದಾವಣಗೆರೆಯಲ್ಲಿ ಆನ್ಲೈನ್ ಗೇಮ್ ಗೆ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ದಾವಣಗೆರೆಯ ಸರಸ್ವತಿ ನಗರದ ಶಶಿಕುಮಾರ್ (25) ನೇಣಿಗೆ ಶರಣಾದ ಯುವಕ ಎಂದು ತಿಳಿದುಬಂದಿದೆ.

Read More »

ವಾಯುಭಾರ ಕುಸಿತ, ಮುಂದಿನ 1 ವಾರ ರಾಜ್ಯಾದ್ಯಂತ ಗಾಳಿ ಸಹಿತ ಭಾರೀ ಮಳೆ : ‘IMD’ ಮುನ್ಸೂಚನೆ

ಮುಂದಿನ ಏಳು ದಿನಗಳಲ್ಲಿ ಕರ್ನಾಟಕದಾದ್ಯಂತ ವ್ಯಾಪಕ ಮಳೆಯಾಗುವ ಸಾಧ್ಯತೆ ಇದ್ದು, ಹಲವಾರು ಜಿಲ್ಲೆಗಳಲ್ಲಿ “ಭಾರೀ ಮಳೆ” ಮತ್ತು ಪ್ರತ್ಯೇಕ ಸ್ಥಳಗಳಲ್ಲಿ “ಅತ್ಯಂತ ಭಾರೀ ಮಳೆ” ಬೀಳುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.ಧಾರವಾಡದಲ್ಲಿಯೂ “ಭಾರೀ ಮಳೆ” ಬೀಳುವ ನಿರೀಕ್ಷೆಯಿದೆ. ಬೀದರ್, ಬಾಗಲಕೋಟೆ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿಗಳಲ್ಲಿ ಈ ಮುನ್ಸೂಚನೆಯ ಅವಧಿಯಲ್ಲಿ ಬಿರುಗಾಳಿಯೊಂದಿಗೆ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ.

Read More »

ಚಿಕಾಗೋದಲ್ಲಿ ಗುಂಡಿನ ದಾಳಿ ; ನಾಲ್ವರು ಸಾವು, 14 ಮಂದಿಗೆ ಗಾಯ!

ರ‍್ಯಾಪರ್ ಒಬ್ಬರಿಗಾಗಿ ಆಲ್ಬಮ್ ಬಿಡುಗಡೆ ಪಾರ್ಟಿ ಆಯೋಜಿಸಿದ್ದ ರೆಸ್ಟೋರೆಂಟ್ ಮತ್ತು ಲೌಂಜ್ ಹೊರಗೆ ಗುಂಡಿನ ದಾಳಿ ನಡೆದಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ ಮತ್ತು 14 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಕನಿಷ್ಠ ಮೂವರ ಸ್ಥಿತಿ ಗಂಭೀರವಾಗಿದೆ.

Read More »

ವರ್ಕಾಡಿಯಲ್ಲಿ ಮನೆಯೊಂದಕ್ಕೆ ಗುಂಡಿನ ದಾಳಿ..!

ಹರೀಶ್ ಎಂಬವರ ಮನೆಯ ಮೇಲೆ ಮುಂಜಾನೆ ಎರಡೂವರೆ ಗಂಟೆ ಸುಮಾರಿಗೆ ಗುಂಡಿನ ದಾಳಿ ನಡೆದಿದೆ. ಶಬ್ದ ಕೇಳಿ ಹರೀಶ್ ಹಾಗೂ ಕುಟುಂಬ ಗಮನಿಸಿದಾಗ ದುಷ್ಕರ್ಮಿಗಳು ಕಾರು ಮತ್ತು ಬೈಕ್ ನಲ್ಲಿ ಪರಾರಿಯಾಗಿರುವುದಾಗಿ ಹರೀಶ್ ಮಂಜೇಶ್ವರ ಠಾಣಾ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.ಸ್ಥಳಕ್ಕೆ ಮಂಜೇಶ್ವರ ಠಾಣಾ ಪೊಲೀಸರು ಆಗಮಿಸಿ ತನಿಖೆ ಕೈಗೊಂಡಿದ್ದಾರೆ.

Read More »

ಕೋಮುಗಲಭೆ ನಡೆಸುವವರ ಬೆಂಡೆತ್ತಲು ರೆಡಿಯಾದ ವಿಶೇಷ ಕಾರ್ಯಪಡೆ!

ದಕ್ಷಿಣ ಕನ್ನಡ ಜಿಲ್ಲೆ ಸೇರಿ ಮೂರು ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ, ಕೋಮು ಸೌಹರ್ದತೆ ಮತ್ತು ಶಾಂತಿ ವಾತವಾರಣವನ್ನು ಕಾಪಾಡುವ ದೃಷ್ಟಿಯಿಂದ ಇತ್ತೀಚೆಗೆ ಹೊಸದಾಗಿ ಸ್ಥಾಪನೆಯಾಗಿರುವ ವಿಶೇಷ ಕಾರ್ಯಪಡೆ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ತರಬೇತಿ ನಡೆಸಲಾಗಿದೆ.ಕೋಮು ಗಲಭೆಗಳ ಸಂದರ್ಭ ಉದ್ರಿಕ್ತ ಜನ ಸಮೂಹವನ್ನು ಚದುರಿಸುವ ಸಲುವಾಗಿ ಉಪಯೋಗಿಸುವ ಬಗ್ಗೆ ಮಂಗಳೂರು ನಗರದ ನೆಹರೂ ಮೈದಾನದಲ್ಲಿ ತರಬೇತಿ ನೀಡಿ ಪ್ರಾತ್ಯಕ್ಷಿಕೆಯನ್ನು ನಡೆಸಲಾಯಿತು.

Read More »

ದೆಹಲಿ: ಮನೆ ಕೆಲಸದವನಿಂದಲೇ ಮಹಿಳೆ, ಮಗನ ಗಂಟಲು ಸೀಳಿ ಬರ್ಬರ ಹತ್ಯೆ!

ಕೆಲಸದವನಿಗೆ ರುಚಿಕಾ ಸೇವಾನಿ ಗದರಿಸಿದ್ದರಿಂದ ಕೋಪಗೊಂಡು ಇಬ್ಬರ ಕತ್ತು ಸೀಳಿ ಪರಾರಿಯಾಗಿದ್ದಾನೆ.ರುಚಿಕಾ ಅವರ ಪತಿ ಕುಲದೀಪ್ ಕೆಲಸದಿಂದ ಹಿಂದಿರುಗಿದಾಗ ಬಾಗಿಲು ಲಾಕ್ ಆಗಿತ್ತು.ಕುಲದೀಪ್ ಸೇವಾನಿ ಗೇಟ್ ಬಳಿ ಮತ್ತು ಮೆಟ್ಟಿಲುಗಳ ಮೇಲೆ ರಕ್ತದ ಕಲೆಗಳನ್ನು ಸಹ ನೋಡಿ ಗಾಬರಿಗೊಂಡು ಕೂಡಲೇ ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ.ಪೊಲೀಸರು ಬಂದು ಬಾಗಿಲು ಒಡೆದು ನೋಡಿದಾಗ ಆಘಾತಕಾರಿ ದೃಶ್ಯ,ಜೋಡಿ ಕೊಲೆಗೆ ಸಂಬಂಧಿಸಿದಂತೆ ಅಂಗಡಿಯಲ್ಲಿ ಸೇವಾನಿ ಕುಟುಂಬಕ್ಕೆ ಸಹಾಯ ಮಾಡುತ್ತಿದ್ದ ಮತ್ತು ಚಾಲಕನಾಗಿ ಕೆಲಸ ಮಾಡುತ್ತಿದ್ದ ಮುಖೇಶ್ …

Read More »

ಮಂಗಳೂರು – ಧರ್ಮಸ್ಥಳ ನಡುವೆ ರಾಜಹಂಸ ಬಸ್ ಆರಂಭ..!

ಇಂದಿನಿಂದ ಮಂಗಳೂರು ವಿಭಾಗದ ಎರಡನೇ ಘಟಕದಿಂದ ಮಂಗಳೂರು- ಧರ್ಮಸ್ಥಳ ಮಾರ್ಗವಾಗಿ ಕೆಎಸ್ಸಾರ್ಟಿಸಿಯ ರಾಜಹಂಸ ಬಸ್ ಸಾರಿಗೆಯನ್ನು ಪರಿಚಯಿಸಲಾಗುತ್ತಿದೆ.ಅಲ್ಲದೇ ಈ ಬಸ್ ಗಳು ಬಿಸಿ ರೊಡ್,ಬಂಟ್ವಾಳ, ಕಾರಿಂಜ ಕ್ರಾಸ್, ಪೂಂಜಾಲಕಟ್ಟೆ, ಮಡಂತ್ಯಾರು, ಗುರುವಾಯನಕೆರೆ, ಬೆಳ್ತಂಗಡಿ, ಉಜಿರೆ ಮಾರ್ಗವಾಗಿ ಸಂಚರಿಸಲಿದೆ.

Read More »