BigTv News
July 2, 2025
Breaking News
ಕಡೂರಿನಿಂದ ಸಾಗರಕ್ಕೆ ತೆರಳುತ್ತಿದ್ದ ಕೋಳಿ ಸಾಗಾಟದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಮುಂಬಾಳ್ ಕೆರೆಯ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಲಾರಿ ಪಲ್ಟಿಯಾಗಿ ಸಾವಿರಾರು ಕೋಳಿಗಳು ಸಾವನ್ನಪ್ಪಿವೆ. ಕೋಳಿಗಳನ್ನು ಕೊಂಡೊಯ್ಯಲು ಸ್ಥಳೀಯರು ಮುಗಿಬಿದ್ದಿದ್ದರು.ಸತ್ತ ಕೋಳಿಯಿಂದ ಲಕ್ಷಾಂತರ ರೂ. ನಷ್ಟ ಉಂಟಾಗಿದೆ ಎನ್ನಲಾಗಿದೆ.
Read More »
BigTv News
July 2, 2025
Breaking News
ಮೊಗರುಕಟ್ಟೆಯಿಂದ ಗಂಜಿಮಠದ ಕಡೆಗೆ ತೆರಳುತ್ತಿದ್ದ ಕಾರೊಂದು ತಡರಾತ್ರಿ ಸುಮಾರು 2 ಗಂಟೆಗೆ ನಾರ್ಲಪದವು ಎಂಬಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡು ವಿದ್ಯುತ್ ಕಂಬಕ್ಕೆ ಢಿಕ್ಕಿಯಾಗಿದೆ.ಪರಿಣಾಮ ಕಾರಿನ ಎಸಿ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗಿದೆ.ಅವಘಡದಲ್ಲಿ ಕಾರು ಸಂಪೂರ್ಣ ಭಸ್ಮಗೊಂಡಿದ್ದು, ಕಾರಿನಲ್ಲಿದ್ದ ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಇದು ಕೊಳಂಬೆ ಮೂಲದ ವ್ಯಕ್ತಿಯೊಬ್ಬರಿಗೆ ಸೇರಿದ ಟೂರಿಸ್ಟ್ ಕಾರು ಎಂದು ತಿಳಿದು ಬಂದಿದೆ.
Read More »
BigTv News
July 2, 2025
Breaking News
ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದರು. 5 ವರ್ಷವೂ ನಾನೇ ಈ ರಾಜ್ಯದ ಸಿಎಂ ಆಗಿರುತ್ತಾನೆ. ನಿಮಗ್ಯಾಕೆ ಅನುಮಾನ ಬಂದಿದೆ? ಎಂದು ಪ್ರಶ್ನೆ ಮಾಡಿದರು.ನಾಲ್ಕು ವರ್ಷ ಅಧಿಕಾರದಲ್ಲಿದ್ದರು, ಕುಮಾರಸ್ವಾಮಿ ಅವರೊಂದಿಗೆ ಸಮ್ಮಿಶ್ರ ಸರಕಾರ ನಡೆಸಿದ್ದರೂ, ಯಾವುದೇ ಕ್ಷೇತ್ರದಲ್ಲೂ ಏನೂ ಕೆಲಸ ಮಾಡಿಲ್ಲ. ಸುಮ್ಮನೆ ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಮಾಡಿದ್ದಾರೆ.ಮುಂದಿನ ಐದು ವರ್ಷ ನಾನೆ ಸಿಎಂ ಆಗಿ ಮುಂದುವರಿಯುತ್ತೇನೆ. ಆರ್. ಅಶೋಕ್, ವಿಜಯೇಂದ್ರ, ಛಲವಾದಿ ನಾರಾಯಣ ಸ್ವಾಮಿ ಏನು ನಮ್ಮ ಹೈಕಮಾಂಡಾ? …
Read More »
BigTv News
July 2, 2025
Breaking News
ಭಾಂಡಪ್‌ನ ಎತ್ತರದ ಕಟ್ಟಡವೊಂದರಲ್ಲಿ ವಾಸಿಸುತ್ತಿದ್ದ 16 ವರ್ಷದ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಜೂನ್ 24 ರಂದು 15 ವರ್ಷದ ಬಾಲಕಿಯನ್ನು ಕಟ್ಟಡದ ಟೆರೇಸ್‌ನಿಂದ ತಳ್ಳಿ ಆಕೆಯ ಸಾವಿಗೆ ಕಾರಣವಾದ ಆರೋಪದ ಮೇಲೆ ಆತನನ್ನು ಬಂಧಿಸಲಾಗಿದೆ.ತನಿಖೆಯ ಸಮಯದಲ್ಲಿ, ಬಾಲಕಿ ಅಧ್ಯಯನಕ್ಕೆ ಸಂಬಂಧಿಸಿದ ಒತ್ತಡದಿಂದಾಗಿ 30 ಮತ್ತು 31 ನೇ ಮಹಡಿಗಳ ನಡುವಿನ ಕಿಟಕಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆತ ಪೊಲೀಸರಿಗೆ ತಿಳಿಸಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ. ಆದಾಗ್ಯೂ, ಕಟ್ಟಡದ ಸಿಸಿಟಿವಿ …
Read More »
BigTv News
July 2, 2025
Breaking News
14 ವರ್ಷದ ಅಪ್ರಾಪ್ತ ಬಾಲಕಿಯನ್ನು ರೂಮ್ನಲ್ಲಿನ ಮಂಚದ ಕೆಳಗೆ ಕೂಡಿ ಹಾಕಿ ಲಕ್ಕವ್ವ ಚಿತ್ರಹಿಂಸೆ ಕೊಟ್ಟಿರುವುದು ಬೆಳಕಿಗೆ ಬಂದಿತ್ತು. ವಿಷಯ ತಿಳಿದ ಬ್ಯಾಗವಾದಿ ಗ್ರಾಮಸ್ಥರು ಮಹಿಳೆಗೆ ಧರ್ಮದೇಟು ಕೊಟ್ಟು ಬಾಲಕಿಯನ್ನು ರಕ್ಷಿಸಿದ್ದಾರೆ.ಮನೆ ಬಿಟ್ಟು ಬಂದವರು, ಬಡವರು, ಅನಾಥರು, ನೊಂದ ಯುವತಿಯರು, ಬಾಲಕಿಯರನ್ನೇ ಮಹಿಳೆ ಟಾರ್ಗೆಟ್ ಮಾಡುತ್ತಿದ್ದಳಂತೆ. ಈ ಬಾಲಕಿಯರನ್ನು ಪುಸಲಾಯಿಸಿ ಮನೆಗೆ ಕರೆದುಕೊಂಡು ಬಂದು ಲಕ್ಷಾಂತರ ರೂಪಾಯಿಗೆ ಮಾರಾಟ ಅಥವಾ ಮದುವೆ ಮಾಡಿಕೊಡುತ್ತಿದ್ದಳು ಎಂಬ ಆರೋಪ ಕೇಳಿಬಂದಿದೆ.ಪೊಲೀಸರು ಯುವತಿಯನ್ನು ಚಿಕ್ಕಮಗಳೂರಿಗೆ …
Read More »
BigTv News
July 2, 2025
Breaking News
ಸಿಎಂ ಸಿದ್ದರಾಮಯ್ಯ ಕಳೆದೊಂದು ತಿಂಗಳಿನಲ್ಲಿ ಹಾಸನ ಜಿಲ್ಲೆಯೊಂದರಲ್ಲೇ ಇಪ್ಪತ್ತಕ್ಕೂ ಅಧಿಕ ಮಂದಿ ಹೃದಯಾಘಾತಕ್ಕೆ ಒಳಗಾಗಿ ಸಾವಿಗೀಡಾದ ವಿಚಾರವನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಈ ಸರಣಿ ಸಾವುಗಳಿಗೆ ನಿಖರ ಕಾರಣವನ್ನು ಪತ್ತೆಹಚ್ಚಿ, ಅದಕ್ಕೆ ಪರಿಹಾರ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಡಾ. ರವೀಂದ್ರನಾಥ್ ಅವರ ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸಿ, 10 ದಿನಗಳ ಒಳಗಾಗಿ ಅಧ್ಯಯನ ವರದಿ ನೀಡುವಂತೆ ಸೂಚಿಸಲಾಗಿದೆ.ಜನರ ಆರೋಗ್ಯ ರಕ್ಷಣೆಗಾಗಿ …
Read More »
BigTv News
July 2, 2025
Breaking News
ಬೆಂಗಳೂರಿನ ಕೆಲವು ಮನೆಗಳಲ್ಲಿ ಮನೆಯ ಸದಸ್ಯರನ್ನ ಮಾತನಾಡಿಸದೇ ಅವರ ವಿವರಗಳನ್ನ ಪಡೆಯದೇ ಹಾಗೇ ಸ್ಟಿಕ್ಕರ್ ಅಂಟಿಸಿ ಹೋಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.ಅದೇ ರೀತಿ ಕೆಲವು ಖಾಲಿ ಮನೆಗೂ ಸ್ಟಿಕ್ಕರ್ ಅಂಟಿಸಿ ಹೋಗಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಕೂಡ ಸ್ಟಿಕ್ಕರ್ ಕಳ್ಳಾಟಕ್ಕೆ ಜನಾಕ್ರೋಶ ವ್ಯಕ್ತವಾಗಿದೆ.
Read More »
BigTv News
July 2, 2025
Breaking News
ಜುಲೈ 03ರಂದು ತ್ರಿಪುರದಲ್ಲಿ ಬ್ಯಾಂಕ್‌ಗಳು ಬಂದ್ ಆಗಿರಲಿವೆ. ನಿಮ್ಮ ಹಣಕಾಸಿನ ವ್ಯವಹಾರ, ಇಂದು ಇಲ್ಲವೇ ಶುಕ್ರವಾರಕ್ಕೆ ಮುಂದೂಡಬೇಕಾಗುತ್ತದೆ. ಗುರುವಾರ ತೆರಳುವವರಿಗೆ ಬ್ಯಾಂಕ್ ಬಂದ್ ಎಂಬ ನಾಮಫಲಕ, ಮುಚ್ಚಿದ ಬ್ಯಾಂಕ್ ಗೇಟುಗಳು ಗೋಚರಿಸುತ್ತವೆ. ತ್ರಿಪುರದಲ್ಲಿ ಖಾರ್ಚಿ ಪೂಜೆಯ ಹಬ್ಬವನ್ನು ಗುರುವಾರ ಆಚರಣೆ ಮಾಡಲಾಗುತ್ತದೆ. ಹೀಗಾಗಿ ಪ್ರತಿ ವರ್ಷ ಜುಲೈನಲ್ಲಿ ಈ ಹಬ್ಬ ಸಂಭ್ರಮ, ಸಡಗರದಿಂದ ನಡೆಯುತ್ತದೆ. ಹೀಗಾಗಿ ರಜೆ ಘೋಷಣೆ ಆಗಿದೆ.
Read More »
BigTv News
July 2, 2025
Breaking News
ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ರೂಪಾಯಿ ಹಗರಣದ ಸಮಗ್ರ ತನಿಖೆ ನಡೆಸುವಂತೆ ಕೇಂದ್ರ ತನಿಖಾ ದಳ (ಸಿಬಿಐ)ಕ್ಕೆ ಹೈಕೋರ್ಟ್ ಮಂಗಳವಾರ ಆದೇಶಿಸಿದೆ ಎನ್ನಲಾಗಿದೆ.ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಿಬಿಐಗೆ ವರ್ಗಾಯಿಸುವಂತೆ ಎಸ್‌ಐಟಿಗೆ ನ್ಯಾಯಾಲಯ ಆದೇಶಿಸಿದೆ. ಅಲ್ಲದೆ ವಿಸ್ತೃತವಾದ ಸ್ಥಿತಿಗತಿಯ ವರದಿ ಸಲ್ಲಿಸುವಂತೆ ಸಿಬಿಐಗೆ ಆದೇಶಿಸಿದೆ. ನಾನು, ಕುಮಾರ್ ಬಂಗಾರಪ್ಪ, ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ ಸೇರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ನ್ಯಾಯ …
Read More »
BigTv News
July 2, 2025
Breaking News
ದಾವಣಗೆರೆ ಜಿಲ್ಲೆಯ ಚೆನ್ನಗಿರಿ ಮೂಲದ ವಿದ್ಯಾ 6 ತಿಂಗಳ ಹಿಂದಷ್ಟೇ ಸೋಮಲಾಪುರ ಗ್ರಾಮದ ಶಿವು ಎಂಬಾತನ ಜೊತೆ ವಿವಾಹವಾಗಿದ್ದರು.ಶಿವು ಬೆಂಗಳೂರಿನಲ್ಲಿ ಪೊಲೀಸ್ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಪತಿ-ಪತ್ನಿ ಇಬ್ಬರೂ ಬೆಂಗಳೂರಿನ ಶಂಕರಪುರಂ ನಲ್ಲಿ ವಾಸವಾಗಿದ್ದರು.ಎರಡು ದಿನಗಳಿಂದ ನಾಪತ್ತೆಯಾಗಿದ್ದ ವಿದ್ಯಾ ಇಂದು ಅರಸೀಕೆರೆ ರೈಲ್ವೆ ಟ್ರ್ಯಾಕ್ ಮೇಲೆ ಶವವಾಗಿ ಪತ್ತೆಯಾಗಿದ್ದಾರೆ. ಮದುವೆಯಾದಾಗಿನಿಂದಲೂ ಪತಿ ಹಾಗೂ ಮನೆಯವರು ಕಿರುಕುಳ ನೀಡುತ್ತಿದ್ದರು. ಈಗ ಅವರೇ ವಿದ್ಯಾಳನ್ನು ಹತ್ಯೆ ಮಾಡಿದ್ದಾರೆ ಎಂದು ವಿದ್ಯಾ ಪೋಷಕರು ಆರೋಪಿಸಿದ್ದಾರೆ.
Read More »