ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದರು. 5 ವರ್ಷವೂ ನಾನೇ ಈ ರಾಜ್ಯದ ಸಿಎಂ ಆಗಿರುತ್ತಾನೆ. ನಿಮಗ್ಯಾಕೆ ಅನುಮಾನ ಬಂದಿದೆ? ಎಂದು ಪ್ರಶ್ನೆ ಮಾಡಿದರು.ನಾಲ್ಕು ವರ್ಷ ಅಧಿಕಾರದಲ್ಲಿದ್ದರು, ಕುಮಾರಸ್ವಾಮಿ ಅವರೊಂದಿಗೆ ಸಮ್ಮಿಶ್ರ ಸರಕಾರ ನಡೆಸಿದ್ದರೂ, ಯಾವುದೇ ಕ್ಷೇತ್ರದಲ್ಲೂ ಏನೂ ಕೆಲಸ ಮಾಡಿಲ್ಲ. ಸುಮ್ಮನೆ ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಮಾಡಿದ್ದಾರೆ.ಮುಂದಿನ ಐದು ವರ್ಷ ನಾನೆ ಸಿಎಂ ಆಗಿ ಮುಂದುವರಿಯುತ್ತೇನೆ. ಆರ್. ಅಶೋಕ್, ವಿಜಯೇಂದ್ರ, ಛಲವಾದಿ ನಾರಾಯಣ ಸ್ವಾಮಿ ಏನು ನಮ್ಮ ಹೈಕಮಾಂಡಾ? ಅವರೆಲ್ಲ ಬಿಜೆಪಿಯವರು ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

