Breaking News

Breaking News

ಅತ್ತಿಬೆಲೆ, ಎಲೆಕ್ಟ್ರಾನಿಕ್ ಸಿಟಿ ಟೋಲ್‌ ಇಂದಿನಿಂದ 5 ರು. ಹೆಚ್ಚಳ!

ಬೆಂಗಳೂರು ಎಲಿವೇಟೆಡ್‌ ಟೋಲ್‌ವೇ ಸಂಸ್ಥೆಯ ನಿರ್ಧಾರದಂತೆ ಅತ್ತಿಬೆಲೆ ಮತ್ತು ಎಲೆಕ್ಟ್ರಾನಿಕ್ ಸಿಟಿ ಟೋಲ್‌ ಪ್ಲಾಜಾಗಳ ದಿನದ ಟೋಲ್‌ ದರ, ತಿಂಗಳ ಮತ್ತು ವಾರ್ಷಿಕ ಪಾಸ್‌ ದರ ಹೆಚ್ಚಿಸಲಾಗಿದೆ.NHAI ಟೋಲ್ ವಸೂಲಿ ಬಗ್ಗೆ ಕೆಲವು ನಿಯಮ, ವಿನಾಯಿತಿಗಳನ್ನು ಹೊರಡಿಸಿದೆ. ವಾಹನದ ಪ್ರಕಾರ, ದೂರದ ಆಧಾರದ ಮೇಲೆ ಟೋಲ್ ಬದಲಾಗುತ್ತೆ. ಟ್ರಕ್, ಬಸ್‌ಗಳಿಗೆ ಕಾರುಗಳಿಗಿಂತ ದುಬಾರಿ. ಟೋಲ್ ಗೇಟ್‌ನ 20 ಕಿ.ಮೀ ವ್ಯಾಪ್ತಿಯಲ್ಲಿ ವಾಸಿಸುವವರಿಗೆ ಲೋಕಲ್ ಪಾಸ್ ಸಿಗುತ್ತೆ. ಇದನ್ನ ತಿಂಗಳಿಗೊಮ್ಮೆ ರೀಚಾರ್ಜ್ …

Read More »

ಐದು ಹುಲಿಗಳ ಸಾವು ಪ್ರಕರಣ : ಕರ್ತವ್ಯ ಲೋಪ ಹಿನ್ನಲೆ ಡಿಸಿಎಫ್, ಎಸಿಎಫ್ ಮತ್ತು ಆರ್‌ಎಫ್‌ಒ ಗೆ ಕಡ್ಡಾಯ ರಜೆ!!

ಹುಲಿಗಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪ ಕಂಡು ಬಂದಿರುವ ಹಿನ್ನೆಲೆಯಲ್ಲಿ ಮಲೆ ಮಹದೇಶ್ವರ ವನ್ಯಜೀವಿಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಹಿತ ಮೂವರು ಅಧಿಕಾರಿಗಳಿಗೆ ಕಡ್ಡಾಯ ರಜೆಯಲ್ಲಿ ತೆರಳಲು ಅರಣ್ಯ ಇಲಾಖೆ ಆದೇಶಿಸಿದೆ.ಹುಲಿಗಳ ಸಾವು ನಡೆದ ಘಟನಾ ಸ್ಥಳದಿಂದ 800 ಮೀಟರ್ ಅಂತರದಲ್ಲಿ ಕಳ್ಳ ಬೇಟೆ ತಡೆ ಶಿಬಿರವಿದ್ದು, ಮುಖ್ಯ ಸಂಚಾರ ರಸ್ತೆಯಿಂದ 100 ಮೀಟರ್ ಹಂತರದಲ್ಲಿ ಹುಲಿಗಳು ಸಾವನ್ನಪ್ಪಿರುವುದು ಹಾಗೂ ಕಳೆದ ಮೂರು ತಿಂಗಳಿಂದ ಹೊರ ಗುತ್ತಿಗೆ ನೌಕರರಿಗೆ …

Read More »

ತೆಲಂಗಾಣ ಕೆಮಿಕಲ್‌ ಕಾರ್ಖಾನೆ ಸ್ಪೋಟ – ಸಾವಿನ ಸಂಖ್ಯೆ 34 ಕ್ಕೆ ಏರಿಕೆ!

ಸಿಗಾಚಿ ರಾಸಾಯನಿಕ ಇಂಡಸ್ಟ್ರಿಯಲ್ಲಿ ರಿಯಾಕ್ಟ‌ರ್ ಸ್ಫೋಟಗೊಂಡು ಬೆಂಕಿ ಕಾಣಿಸಿಕೊಂಡಿತ್ತು.ಗಾಯಾಳುಗಳನ್ನು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸೆ ವೇಳೆ ಹಲವರು ಕಾರ್ಮಿಕರು ಸಾವನ್ನಪ್ಪಿದ್ದಾರೆ.ಮೃತರ ಕುಟುಂಬಗಳಿಗೆ ಪಿಎಂಎನ್​ಆರ್​ಎಫ್​ನಿಂದ ತಲಾ 2 ಲಕ್ಷ ರೂ ಪರಿಹಾರ ಘೋಷಣೆ ಮಾಡಿದೆ. ಗಾಯಾಳುಗಳಿಗೆ 50 ಸಾವಿರ ರೂ ನೀಡಲು ತೀರ್ಮಾನಿಸಲಾಗಿದೆ.ಸಾವನ್ನಪ್ಪಿದವರ ಸಂಖ್ಯೆ 34ಕ್ಕೆ ಏರಿಕೆಯಾಗಿದ್ದು, 30ಕ್ಕೂ ಹೆಚ್ಚು ಗಾಯಳುಗಳಿಗೆ ಚಿಕಿತ್ಸೆ ಮುಂದುವರಿದಿದೆ

Read More »

ದಾವಣಗೆರೆ: ಮನೆಯಲ್ಲಿ ‘UPS’ ಸ್ಪೋಟಗೊಂಡು ಇಬ್ಬರು ದುರ್ಮರಣ!

ಯುಪಿಎಸ್ ಸ್ಪೋಟ ಸಂಭವಿಸಿ ಇಬ್ಬರು ದುರ್ಮರಣಕ್ಕೀಡಾಗಿದ್ದಾರೆ.ಮೃತರನ್ನು ವಿಮಲಾ ಮತ್ತು ಕುಮಾರ್ ಎಂದು ಗುರುತಿಸಲಾಗಿದೆ. ರುದ್ರಮುನಿಸ್ವಾಮಿ ಹಿರೇಮಠ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದೆ. ದಾವಣಗೆರೆ ನಗರದ ಕಾಯಿಪೇಠೆಯಲ್ಲಿ ಈ ಘಟನೆ ನಡೆದಿದೆ.ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ . ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ

Read More »

ವಿದ್ಯಾರ್ಥಿನಿಯ ಕತ್ತು ಕೊಯ್ದು ಹತ್ಯೆಗೈದ ಯುವಕ!!

ಆಸ್ಪತ್ರೆ ಆವರಣದಲ್ಲಿ ನೂರಾರು ಜನರ ಸಮ್ಮುಖದಲ್ಲಿ ಆರೋಪಿ ಅಭಿಷೇಕ್ ಕೋಶ್ಟಿ ವಿದ್ಯಾರ್ಥಿನಿಯ ಕುತ್ತಿಗೆಯನ್ನು ಸೀಳುತ್ತಿರುವುದು ವೀಡಿಯೊದಲ್ಲಿ ಕಂಡುಬರುತ್ತದೆ. ಈ ಸಮಯದಲ್ಲಿ, ಆರೋಪಿ ಅಭಿಷೇಕ್ ಕೋಶ್ಟಿ ವಿದ್ಯಾರ್ಥಿನಿಯ ಕುತ್ತಿಗೆಯನ್ನು ಸೀಳಲು ಪ್ರಯತ್ನಿಸಿದ್ದಾನೆ. ಆದರೆ ವಿದ್ಯಾರ್ಥಿನಿಗೆ ಇನ್ನೂ ಸ್ವಲ್ಪ ಜೀವ ಉಳಿದಿದೆ ಮತ್ತು ಅವಳು ನೋವಿನಿಂದ ನರಳುತ್ತಿದ್ದಳು ಎಂದು ನೋಡಿದಾಗ ಅವನು ವಿದ್ಯಾರ್ಥಿನಿಯ ಕುತ್ತಿಗೆಯನ್ನು ಕತ್ತರಿಸಲು ಪ್ರಾರಂಭಿಸಿದನು.

Read More »

ತಾಯಿ ಜತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದವನನ್ನ ಬರ್ಬರವಾಗಿ ಹತ್ಯೆಗೈದ ಮಕ್ಕಳು!

ಶಿವಮೊಗ್ಗ ನಗರದ ಬೊಮ್ಮಕಟ್ಟೆಯಲ್ಲಿ ಸ್ನೇಹಿತನ ಪತ್ನಿ ಜೊತೆ ಅನೈತಕ ಸಂಬಂಧ ಹಿನ್ನಲೆಯಲ್ಲಿ ಯುವಕನ ಮರ್ಡರ್ ಆಗಿತ್ತು. ಪತಿಯು ಅನೈತಿಕ ಸಂಬಂಧ ಹೊಂದಿದ್ದ ಸ್ನೇಹಿತನನ್ನು ಕೊಲೆ ಮಾಡಿ ಜೈಲುಪಾಲಾಗಿದ್ದ. ಇದೀಗ ಮತ್ತದೇ ಅನೈತಿಕ ಸಂಬಂಧದ ವಿಚಾರವಾಗಿ ಮತ್ತೊಂದು ಕೊಲೆಯಾಗಿದೆ. ಅನೈತಿಕ ಸಂಬಂಧಕ್ಕೆ ಮುಂದಾಗುವವರಿಗೆ ತಕ್ಕ ಪಾಠ ಆಗಬೇಕೆಂದು ಸಹೋದರರಿಬ್ಬರು ಬೀದಿಯಲ್ಲೇ ವಸಂತನನ್ನು ಗ್ರಾಮಸ್ಥರ ಎದುರೇ ಕೊಚ್ಚಿ ಹಾಕಿದ್ದಾರೆ. ವಸಂತ ಕೊಲೆ ಮಾಡಿದ ಬಳಿಕ ಇಬ್ಬರು ಎಸ್ಕೇಪ್ ಆಗಿದ್ದಾರೆ. ಕುಂಸಿ ಠಾಣೆಯ ಸಿಪಿಐ …

Read More »

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಭಾರೀ ಅಗ್ನಿ ಅವಘಡ!!

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಬರ್ನಿಂಗ್ ವಾರ್ಡ್​ನಲ್ಲಿ ಇಂದು ಅಗ್ನಿ ಅವಘಡ ಸಂಭವಿಸಿದೆ. ಈ ವೇಳೆ ಐಸಿಯುನಲ್ಲಿದ್ದ 5 ಮಂದಿ ರೋಗಿಗಳು ಸೇರಿ ಒಟ್ಟು 26 ರೋಗಿಗಳನ್ನು ಸುರಕ್ಷಿತವಾಗಿ ತಕ್ಷಣವೇ ಬೇರೆ ವಾರ್ಡ್‌ಗೆ ಶಿಫ್ಟ್‌ ಮಾಡಲಾಗಿದೆ.ರೋಗಿಗಳನ್ನು ಬೇರೆ ವಾರ್ಡ್​​ಗೆ ಸ್ಥಳಾಂತರಿಸಲಾಗಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದುಬಂದಿದೆ.

Read More »

ಬೆಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ : ನಾಲ್ವರು ಸ್ಥಳದಲ್ಲೇ ಸಾವು!

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಮಾಕಳಿಯಲ್ಲಿ ಈ ಭೀಕರ ಅಪಘಾತ ಸಂಭವಿಸಿದ್ದು, ಅಪಘಾತದ ರಭಸಕ್ಕೆ ಮೃತದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.ಬೆಳಗ್ಗೆ ದೇವಸ್ಥಾನಕ್ಕೆಂದು ಇನ್ನೋವಾ ಕಾರಿನಲ್ಲಿ 8 ಮಂದಿ ಬಂದಿದ್ದರು. ಈ ವೇಳೆ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದರೆ, ನಾಲ್ವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈಶ್ವರಪ್ಪ, ಪುರುಷೋತ್ತಮ, ಕಾಳಪ್ಪ ಸೇರಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ದೊಡ್ಡಬಳ್ಳಾಪುರ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

Read More »

ಉಕ್ರೇನ್‌ಗೆ ಅಮೆರಿಕ ನೀಡಿದ್ದ ಎಫ್‌-16 ರಷ್ಯಾದಿಂದ ಧ್ವಂಸ!

ರಷ್ಯಾ ಮತ್ತು ಉಕ್ರೇನ್ ನಡುವೆ ಸಮರ ಮುಂದುವರೆದಿದ್ದು, ಭಾನುವಾರ ಉಕ್ರೇನ್‌ ಮೇಲೆ ರಷ್ಯಾ 477 ಡ್ರೋನ್ ಸೇರಿದಂತೆ 537 ವೈಮಾನಿಕ ಸಾಧನಗಳನ್ನು ಹಾರಿಸಿ 3 ವರ್ಷಗಳಲ್ಲೇ ಘನಘೋರ ದಾಳಿ ಮಾಡಿದೆ. ಇದರ ಮಧ್ಯೆಯೇ ಉಕ್ರೇನ್‌ಗೆ ಅಮೆರಿಕ ನೀಡಿದ್ದ ಎಫ್ -16 ಸೂಪರ್‌ನಿಕ್ ಯುದ್ಧ ವಿಮಾನ ಹೊಡೆದುರುಳಿಸಿದೆ ಹಾಗೂ ಅದರಲ್ಲಿದ್ದ ಪೈಲಟ್‌ನನ್ನು ಹತ್ಯೆ ಮಾಡಿದೆ.

Read More »

ಮೈಕ್ರೋಫೈನಾನ್ಸ್ ಕಿರಿಕಿರಿ ಶುರು, ಸೆಲ್ಫಿ ವಿಡಿಯೋ ಮಾಡಿಟ್ಟು ವ್ಯಕ್ತಿ ಆತ್ಮಹತ್ಯೆ!!

ಜನ ಫೈನಾನ್ಸ್​ ಬ್ಯಾಂಕ್​ನಲ್ಲಿ ಸುಬ್ರಹ್ಮಣಿ 5 ಲಕ್ಷ ರೂ ಲೋನ್ ಪಡೆದಿದ್ದರು. ಇತ್ತೀಚಿಗೆ ಕಂತು ಡ್ಯೂ ಇದ್ದಿದ್ದಕ್ಕೆ ಮನೆ ಜಪ್ತಿ ಮಾಡುವುದಾಗಿ ಬ್ಯಾಂಕ್​ನಿಂದ ನೋಟಿಸ್ ಜಾರಿ ಮಾಡಿದ್ದರು. ಹೀಗಾಗಿ ನನ್ನ ಸಾವಿಗೆ ಜನ ಫೈನಾನ್ಸ್ ಬ್ಯಾಂಕ್ ಕಾರಣ ಅಂತಾ ವಿಡಿಯೋ‌ ಮಾಡಿ ಆತ್ಮಹತ್ಯೆ ಮಾಡಿದ್ದಾರೆ. ಜನ ಫೈನಾನ್ಸ್ ಬ್ಯಾಂಕ್​ ವಿರುದ್ಧ ಮೃತನ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸುಬ್ರಹ್ಮಣಿ(38) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

Read More »