ಬೆಂಗಳೂರು ಎಲಿವೇಟೆಡ್ ಟೋಲ್‌ವೇ ಸಂಸ್ಥೆಯ ನಿರ್ಧಾರದಂತೆ ಅತ್ತಿಬೆಲೆ ಮತ್ತು ಎಲೆಕ್ಟ್ರಾನಿಕ್ ಸಿಟಿ ಟೋಲ್ ಪ್ಲಾಜಾಗಳ ದಿನದ ಟೋಲ್ ದರ, ತಿಂಗಳ ಮತ್ತು ವಾರ್ಷಿಕ ಪಾಸ್ ದರ ಹೆಚ್ಚಿಸಲಾಗಿದೆ.NHAI ಟೋಲ್ ವಸೂಲಿ ಬಗ್ಗೆ ಕೆಲವು ನಿಯಮ, ವಿನಾಯಿತಿಗಳನ್ನು ಹೊರಡಿಸಿದೆ. ವಾಹನದ ಪ್ರಕಾರ, ದೂರದ ಆಧಾರದ ಮೇಲೆ ಟೋಲ್ ಬದಲಾಗುತ್ತೆ. ಟ್ರಕ್, ಬಸ್‌ಗಳಿಗೆ ಕಾರುಗಳಿಗಿಂತ ದುಬಾರಿ. ಟೋಲ್ ಗೇಟ್‌ನ 20 ಕಿ.ಮೀ ವ್ಯಾಪ್ತಿಯಲ್ಲಿ ವಾಸಿಸುವವರಿಗೆ ಲೋಕಲ್ ಪಾಸ್ ಸಿಗುತ್ತೆ. ಇದನ್ನ ತಿಂಗಳಿಗೊಮ್ಮೆ ರೀಚಾರ್ಜ್ ಮಾಡಿಕೊಳ್ಳಬೇಕು. ಟೋಲ್ ಪ್ಲಾಜಾ ಹತ್ತಿರ ಇರೋರು ಆಗಾಗ ಅದನ್ನ ದಾಟಿ ಹೋಗ್ಬೇಕಾಗುತ್ತೆ. ಪ್ರತಿ ಸಲ ಟೋಲ್ ಕಟ್ಟೋದು ದುಬಾರಿ. ಅದಕ್ಕೆ ಮಾಸಿಕ ಪಾಸ್ ಕೊಡಲಾಗುತ್ತದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

