Breaking News

Breaking News

ತುಮಕೂರು :ರಸ್ತೆ ದಾಟುತ್ತಿದ್ದ ಮಹಿಳೆ,ಸ್ಥಳದಲ್ಲೇ ಸಾವು.!

ತುಮಕೂರಿನ ಬಸ್ ಸ್ಟಾಂಡ್‌ನಿಂದ ಕಡೂರಿಗೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ನಗರದ ಟೌನ್‌ಹಾಲ್ ಸರ್ಕಲ್ ನಲ್ಲಿ ರಸ್ತೆ ದಾಟುತ್ತಿದ್ದ ವೇಳೆ ಬಸ್ ಡಿಕ್ಕಿ ಹೊಡೆದಿದೆ ಡಿಕ್ಕಿಯ ರಭಸಕ್ಕೆ ಮಂಜಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ತುಮಕೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Read More »

ಅತ್ತೆ ಮೇಲೆ ಮಾರಣಾಂತಕ ಹಲ್ಲೆ:ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅತ್ತೆ.

ಮಾವಿನಕಟ್ಟಿ ಗ್ರಾಮದಲ್ಲಿ ಪತಿ ತನ್ನ ತಾಯಿ ಮನೆಗೆ ಊಟಕ್ಕೆ ಹೋಗಿದ್ದಕ್ಕೆ ಪತ್ನಿ ಶಿಲ್ಪಾ ಆಕ್ರೋಶ ವ್ಯಕ್ತಪಡಿಸಿ ಅತ್ತೆಯ ಮೇಲೆ ಕುಡಗೋಲಿನಿಂದ ಹಲ್ಲೆ ನಡೆಸಿದ್ದಾಳೆ ಎಂದು ಹೇಳಲಾಗಿದೆ. ಅತ್ತೆ ಸೊಸೆ ಮಧ್ಯೆ ಕಳೆದ ಹಲವು ವರ್ಷಗಳಿಂದ ಜಗಳ ನಡೆಯುತ್ತಿದ್ದು, ಹಲವು ಬಾರಿ ಪೊಲೀಸ್ ಠಾಣೆಗೂ ಹೋಗಿದ್ದಾರೆ.ಶಿಲ್ಪಾ ವಿರುದ್ಧ ಮಹಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಶಿಲ್ಪಾ ಮಾತ್ರ ತಾನು ಹಲ್ಲೆ ಮಾಡಿಲ್ಲ ಎಂದು ಆರೋಪ ನಿರಾಕರಿಸಿದ್ದಾರೆ.ಸಧ್ಯ ಜಾನವ್ವ ಬೀಮ್ಸ್ ಆಸ್ಪತ್ರೆಯಲ್ಲಿ …

Read More »

ಮಹಾರಾಷ್ಟ್ರ :ಜೈಲು ಕಂಬಿನಲ್ಲಿ ನುಸುಳಿ ಪರಾರಿಯಾದ ಅಪರಾಧಿ.

ಠಾಣೆಯಲ್ಲಿ ಯಾರು ಇಲ್ಲದಿರುವುದನ್ನು ಗಮನಿಸಿ ಆರೋಪಿ ಜೈಲು ಕಂಬಿಯ ನಡುವೆಯೇ ನುಸುಳಿ ಪರಾರಿಯಾಗಿದ್ದಾನೆ. ಆರೋಪಿಯು ಇದಕ್ಕೂ ಮೊದಲು ಹಲವಾರು ಬಾರಿ ಇದೆ ರೀತಿ ಪರಾರಿಯಾಗಿದ್ದ ಎನ್ನಲಾಗಿದೆ.ಆರೋಪಿ ತಪ್ಪಿಸಿಕೊಂಡು ಹೋಗುತ್ತಿದ್ದಂತೆ ಪೊಲೀಸರು ಮತ್ತೆ ಆತನನ್ನು ಬಂಧಿಸಿ ಬಂಧೀಖಾನೆ ಗೆ ಕರೆದುಕೊಂಡು ಬಂದಿದ್ದಾರೆ. ಈ ವೇಳೆ ಬೀಗ, ಸರಳು ಯಾವುದಕ್ಕೂ ಹಾನಿ ಮಾಡದೆ ಆಚೆ ಬಂಡಿರೋದನ್ನು ನೋಡಿ ಒಂದು ಕ್ಷಣ ಪೊಲೀಸರೇ ಶಾಕ್ ಆಗಿದ್ದಾರೆ.

Read More »

ನಿಯಮ ಉಲ್ಲಂಘಿಸಿದ್ದಕ್ಕಾಗಿಟ್ಯಾಂಕರ್ ಚಾಲಕನಿಗೆ ಆರು ತಿಂಗಳು ಜೈಲು.

ವಿಜಯಪುರ ಜಿಲ್ಲೆಯ ಮುದ್ದೆಬಿಹಾಳ ತಾಲ್ಲೂಕಿನ ಜಂಬಲದಿನ್ನಿ ಗ್ರಾಮದ ವೀರೇಶ ಶಾಂತಗೌಡ ಬಿರಾದಾರ ಟ್ಯಾಂಕರ್ ಚಾಲಕ ಶಿಕ್ಷೆಗೆ ಒಳಗಾದ ವ್ಯಕ್ತಿ. ಶಹಾಪುರ ತಾಲ್ಲೂಕಿನ ರಸ್ತಾಪುರ ಗ್ರಾಮದ ಟಂಟಂ ಚಾಲಕ ಮಲ್ಲಪ್ಪ ಮಲ್ಲಪ್ಪ ನಾಯ್ಕೋಡಿ ಅವರಿಗೆ ದಂಡ ವಿಧಿಸಲಾಗಿದೆ. ಟ್ರ್ಯಾಕ್ಟರ್‌-ಟಂಟಂ ಡಿಕ್ಕಿಯಾಗಿ ಆರು ಜನರ ಸಾವಿಗೆ ಕಾರಣವಾದ ಟ್ಯಾಂಕರ್ ಚಾಲಕನಿಗೆ ಆರು ತಿಂಗಳು ಜೈಲು ಶಿಕ್ಷೆ, ₹3500 ದಂಡ, ವಿಧಿಸಲಾಗಿದೆ.

Read More »

ನಾಪತ್ತೆಯಾಗಿದ್ದ ವಸತಿ ಶಾಲೆಯ ಇಬ್ಬರೂ ವಿದ್ಯಾರ್ಥಿಗಳು ಪತ್ತೆ.

ವಿದ್ಯಾರ್ಥಿಗಳು ಮಾರ್ಚ್​ 3ರಂದು ವಸತಿ ಶಾಲೆಯಿಂದ‌ ನಾಪತ್ತೆಯಾಗಿದ್ದರು. ಮಂಗಳೂರಿನ ಹೋಟೆಲ್​ವೊಂದರಲ್ಲಿ ಕೆಲಸಕ್ಕೆ ಸೇರಲು ಯತ್ನಿಸಿದ್ದರು ಎಂದು ತಿಳಿದುಬಂದಿದೆ. ಯಶ್ವಿತ್, ತರುಣ್ ಉತ್ತಮ ಸ್ನೇಹಿತರಾಗಿದ್ದಾರೆ. ಓದಿನಲ್ಲಿ ಆಸಕ್ತಿ ಇಲ್ಲದೆ ಇದ್ದರೂ ವಸತಿ ಶಾಲೆಯಲ್ಲಿ ಒಳ್ಳೆಯ ಹೆಸರು ಪಡೆದಿದ್ದರ.ಮಕ್ಕಳು ನಾಪತ್ತೆಯಾಗುತ್ತಿದ್ದಂತೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರು ದಾಖಲಿಸಿಕೊಂಡ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು, ವಿದ್ಯಾರ್ಥಿಗಳ ಪತ್ತೆಗಾಗಿ ವಿಶೇಷ ತಂಡ ರಚನೆ ಮಾಡಿದ್ದಾರೆ.ಅನುಮಾನಗೊಂಡು ಮಂಗಳೂರಿನಲ್ಲೂ ಹುಡುಕಾಟ ನಡೆಸಿದಾಗ ವಿದ್ಯಾರ್ಥಿಗಳು ಪತ್ತೆಯಾಗಿದ್ದಾರೆ. ಪೊಲೀಸರು …

Read More »

ಸಿಂಗಟಗೆರೆ ಪೊಲೀಸ್ ಠಾಣೆಯ ಜೀಪ್ ಚಾಲಕ ಶಿವಕುಮಾರ್​​​ನ್ನು ಅಮಾನತು,ಎಸ್‌ಪಿ ವಿಕ್ರಮ್ ಆಮ್ಟೆ ಆದೇಶ.

ಜೀಪ್ ಡಿಕ್ಕಿಯಿಂದ ಗಂಗಾಧರ ಎಂಬುವವರು ಸಾವನ್ನಪ್ಪಿದ್ದರು. ಕಡೂರು ಪಟ್ಟಣದ ಮಚ್ಚೇರಿ ಗ್ರಾಮದ ಬಳಿ ಅಪಘಾತ ಸಂಭವಿಸಿತ್ತು. ಕಡೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು. ಅಪಘಾತ ವೇಳೆ ಪೊಲೀಸ್‌ ಜೀಪ್ ನಿಲ್ಲಿಸದೇ ಶಿವಕುಮಾರ್ ಪರಾರಿಯಾಗಿದ್ದ. ಜೀಪ್‌ ಚಾಲಕನ ನಿರ್ಲಕ್ಷ್ಯದ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಂಗಟಗೆರೆ ಪೊಲೀಸ್ ಠಾಣೆಯ ಜೀಪ್ ಚಾಲಕ ಶಿವಕುಮಾರ್​​​ನ್ನು ಅಮಾನತು ಮಾಡಿ ಚಿಕ್ಕಮಗಳೂರು ಎಸ್‌ಪಿ ವಿಕ್ರಮ್ ಆಮ್ಟೆ ಆದೇಶ ಹೊರಡಿಸಿದ್ದಾರೆ.

Read More »

ತಿಥಿ ಕಾರ್ಯದಿಂದ ವಾಪಸ್ಸಾಗ್ತಿದ್ದ ಓರ್ವನ ತಿಥಿ ಮಾಡುವ ಪರಿಸ್ಥಿತಿ!.

ಕಾರವಾರದ ಸಂಬಂಧಿಕರ ಮನೆಯಲ್ಲಿ ತಿಥಿ ಕಾರ್ಯ ಮುಗಿಸಿ ಮಾರುತಿ ಸುಜುಕಿ ಆಲ್ಟೋ ಕಾರಿನಲ್ಲಿ ಹುಬ್ಬಳ್ಳಿಗೆ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ. ತಿರುವಿನಲ್ಲಿ ರಸ್ತೆಗೆ ಅಡ್ಡಬಂದ ಆಕಳನ್ನು ತಪ್ಪಿಸಲು ಹೋಗಿ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಯಲ್ಲಿ ಪಲ್ಟಿಯಾಗಿದೆ.ಘಟನೆಯಲ್ಲಿ ಶೈಲಾ ಸುರೇಶ್ ರಾಣೆ, ಸಂಜೀವ ಸಾವಳು ನಾಯ್ಕ ಹಾಗೂ ಶ್ವೇತಾ ಸಂಜೀವ ನಾಯ್ಕ ಇವರಿಗೆ ಗಾಯಗಳಾಗಿದೆ. ಇವರನ್ನು ಅಂಕೋಲಾ ತಾಲೂಕು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿ ಕಾರವಾರ ಕೀಮ್ಸ್ …

Read More »

ಬಳ್ಳಾರಿಯ ಬಿಜೆಪಿ ಮುಖಂಡ ದೇವು ನಾಯಕ್ ಅರೆಸ್ಟ್!

7 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸೆಗಿರುವ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಇದೀಗ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಠಾಣೆಯ ಪೊಲೀಸರು ಬಿಜೆಪಿ ಮುಖಂಡ ದೇವು ನಾಯಕ್ ನನ್ನು ಅರೆಸ್ಟ್ ಮಾಡಿದ್ದಾರೆ. ಬಿಜೆಪಿ ಮುಖಂಡ ದೇವು ನಾಯಕ ಮುಂಬರುವ ಸ್ಥಳೀಯ ಚುನಾವಣೆಗಳಲ್ಲಿ ಜಿಲ್ಲಾ ಪಂಚಾಯಿತಿ ಟಿಕೆಟ್‌ ಆಕಾಂಕ್ಷಿಯಾಗಿದ್ದು, ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿಕೊಂಡಿದ್ದಾನೆ.

Read More »

ಪ್ರಿಯಕರನ ಜೊತೆ ಸೇರಿ ಕಟ್ಟಿಕೊಂಡ ಗಂಡನನ್ನೇ ಹತ್ಯೆ!

ಪ್ರೀತಿ ಎಂಬ ಮೋಹಕ್ಕೆ ಬಲಿಯಾಗಿ ಅದೆಷ್ಟೋ ಕೃತ್ಯಗಳು ನಡೆದಿರೋದನ್ನ ನೋಡಿರುತ್ತೇವೆ. ಅಂಥದ್ದೇ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದೆ. ಸಾಹಿಲ್‌ ಎಂಬಾತನ ಹಿಂದೆ ಬಿದ್ದ ಮುಸ್ಕಾನ್ ರಸ್ತೋಗಿ ಪತಿ ಸೌರಭ್ ರಜಪೂತ್‌ನನ್ನೇ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಅಷ್ಟೇ ಅಲ್ಲ ಬಳಿಕ ಸೌರಭ್ ದೇಹವನ್ನ 15 ಪೀಸ್‌ ಮಾಡಿ ಪ್ಲಾಸ್ಟಿಕ್‌ ಬ್ಯಾರಲ್‌ನಲ್ಲಿ ಹಾಕಿ ಅದಕ್ಕೆ ಸಿಮೆಂಟ್ ತುಂಬಿಸಿ ಪ್ರಕರಣವನ್ನೇ ಕ್ಲೋಸ್ ಮಾಡೋ ಹುನ್ನಾರ ಮಾಡಿದ್ದರು.ಅಳಿಯನ ಕೊಲೆ ಸುದ್ದಿ ಕೇಳಿ ಆರೋಪಿ ಮುಸ್ಕಾನ್‌ ಪೋಷಕರು …

Read More »

ಹಾಸ್ಯನಟ ದರ್ಶನ 20 ವರ್ಷಗಳ ಜೈಲು ಶಿಕ್ಷೆಗೆ ಗುರಿ.

ಆಗ್ರೋಹಾ ಪ್ರದೇಶದ ಗ್ರಾಮವೊಂದರ ಅಪ್ರಾಪ್ತ ಬಾಲಕಿಯ ತಾಯಿ ಪೊಲೀಸ್ ದೂರು ದಾಖಲಿಸಿದ್ದರು. ಯೂಟ್ಯೂಬ್‌ನಲ್ಲಿನ ಹಾಸ್ಯ ವೀಡಿಯೊಗಳಿಗೆ ಹೆಸರುವಾಸಿಯಾದ ದರ್ಶನ್, ತನ್ನ ವೀಡಿಯೊಗಳಲ್ಲಿ ಒಂದರಲ್ಲಿ ನಟಿಸುವ ನೆಪದಲ್ಲಿ ಬಾಲಕಿಗೆ ಆಮಿಷವೊಡ್ಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.ಬೈಕ್‌ನಲ್ಲಿ ಚಂಡೀಗಢಕ್ಕೆ ಕರೆದೊಯ್ದು, ಅಲ್ಲಿ ಹೋಟೆಲ್ ಕೋಣೆಯಲ್ಲಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿತ್ತು.ಹರಿಯಾಣ ಮೂಲದ ದರ್ಶನ್, ಮಾರ್ಚ್ 11 ರಂದು ತಪ್ಪಿತಸ್ಥರೆಂದು ಸಾಬೀತಾಗಿದ್ದು, ಅಂದಿನಿಂದ ಪೊಲೀಸ್ ವಶದಲ್ಲಿದ್ದಾರೆ.ಜೈಲು ಶಿಕ್ಷೆ ಮತ್ತು ದಂಡದ ಜೊತೆಗೆ, ಬಲಿಪಶುವಿಗೆ 2,00,000 ರೂಪಾಯಿ …

Read More »