ಪ್ರೀತಿ ಎಂಬ ಮೋಹಕ್ಕೆ ಬಲಿಯಾಗಿ ಅದೆಷ್ಟೋ ಕೃತ್ಯಗಳು ನಡೆದಿರೋದನ್ನ ನೋಡಿರುತ್ತೇವೆ. ಅಂಥದ್ದೇ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದೆ. ಸಾಹಿಲ್ ಎಂಬಾತನ ಹಿಂದೆ ಬಿದ್ದ ಮುಸ್ಕಾನ್ ರಸ್ತೋಗಿ ಪತಿ ಸೌರಭ್ ರಜಪೂತ್‌ನನ್ನೇ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಅಷ್ಟೇ ಅಲ್ಲ ಬಳಿಕ ಸೌರಭ್ ದೇಹವನ್ನ 15 ಪೀಸ್ ಮಾಡಿ ಪ್ಲಾಸ್ಟಿಕ್ ಬ್ಯಾರಲ್‌ನಲ್ಲಿ ಹಾಕಿ ಅದಕ್ಕೆ ಸಿಮೆಂಟ್ ತುಂಬಿಸಿ ಪ್ರಕರಣವನ್ನೇ ಕ್ಲೋಸ್ ಮಾಡೋ ಹುನ್ನಾರ ಮಾಡಿದ್ದರು.ಅಳಿಯನ ಕೊಲೆ ಸುದ್ದಿ ಕೇಳಿ ಆರೋಪಿ ಮುಸ್ಕಾನ್ ಪೋಷಕರು ಆಕೆಯ ಬಗ್ಗೆ ಹಲವಾರು ಹೇಳಿಕೆಗಳನ್ನು ನೀಡಿದ್ದಾರೆ. ಮಗಳಿಗೆ ಏನು ಶಿಕ್ಷೆ ಕೊಡಬೇಕು ಎಂದು ಕೇಳಿದಾಗ, ದಂಪತಿ ಕಣ್ಣೀರು ಸುರಿಸುತ್ತಾ, “ಆಕೆಯನ್ನು ಗಲ್ಲಿಗೇರಿಸಬೇಕು. ಅವಳಿಗೆ ಬದುಕುವ ಹಕ್ಕಿಲ್ಲ” ಎಂದು ಹೇಳಿದ್ದಾರೆ.
Oplus_131072
bigtvnews | Hubli Dharwad News | Kannada News | Karnataka News Hubli News | News In Hubli | Local news

