Breaking News

ಕರ್ನಾಟಕ

ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು: ರಾಜ್ಯದ ಇಬ್ಬರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಚುನಾವಣಾ ಆಯೋಗದ ಅನುಮತಿಯೊಂದಿಗೆ ಸರ್ಕಾರದ ಕಾರ್ಯದರ್ಶಿ ಅಡಿಯಲ್ಲಿ ವರ್ಗಾವಣೆ ಆದೇಶ ಪ್ರಕಟ‌ವಾಗಿದೆ. ಬೆಂಗಳೂರು ಗ್ರಾಮಾಂತರ ಎಸ್ಪಿ ಟಿ.ಪಿ ಶಿವಕುಮಾರ್ ಅವರನ್ನು ಹೋಮ್ ಗಾರ್ಡ್ಸ್ ಆ್ಯಂಡ್ ಸಿವಿಲ್ ಡಿಫೆನ್ಸ್ ಅಕ್ಯಾಡೆಮಿಯ ಕಮ್ಯಾಂಡೆಂಟ್ ಸ್ಥಾನಕ್ಕೆ ವರ್ಗಾವಣೆ ಮಾಡಲಾಗಿದೆ. ಮತ್ತೊಬ್ಬ ಅಧಿಕಾರಿ

Read More »

ಬೆಟ್ಟಿಂಗ್, ಗೂಂಡಾ ಕಾಯಿದೆ ಜಾರಿ: ಡಿಜಿ & ಐಜಿಪಿ ಎಚ್ಚರಿಕೆ

ಬೆಂಗಳೂರು: ಲೋಕಸಭಾ ಚುನಾವಣೆ ಮುಗಿದಿದ್ದು, ಈ ಸಂದರ್ಭದಲ್ಲಿ ಯಾರೆಲ್ಲಾ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದಾರೋ ಅವರ ವಿರುದ್ಧ ಗೂಂಡಾ ಹಾಗೂ ಕೋಕಾ ಕಾಯಿದೆ ಜಾರಿಗೊಳಿಸುವುದಾಗಿ ಡಿಜಿ & ಐಜಿಪಿ ನೀಲಮಣಿ ಎನ್.ರಾಜು ಖಡಕ್​ ಎಚ್ಚರಿಕೆ ನೀಡಿದ್ದಾರೆ. ಯಾರು ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದಾರೋ ಅವರ ವಿರುದ್ಧ ಗೂಂಡಾ ಕಾಯ್ದೆ ತೆರೆಯಿರಿ ಎಂದು ನಗರದ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಡಿಜಿ & ಐಜಿಪಿ ಆದೇಶಿಸಿದ್ದಾರೆ.ಚುನಾವಣೆ ಬಳಿಕ, ಅತಿಹೆಚ್ಚು ಬೆಟ್ಟಿಂಗ್ ಮಂಡ್ಯದಲ್ಲಿ ನಡೆಯುತ್ತಿದೆ. ಈ ಹಿನ್ನೆಲೆ, …

Read More »

ಮಳೆಗಾಲಕ್ಕೆ ಬಿಬಿಎಂಪಿಯಿಂದ ಮುನ್ನೆಚ್ಚರಿಕೆ ಕ್ರಮ; ಅಧಿಕಾರಿಗಳಿಗೆ ನಗರಾಭಿವೃದ್ಧಿ ಸಚಿವರ ಸೂ

ಬೆಂಗಳೂರು: ಮಳೆಗಾಲದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಯಾವುದೇ ರೀತಿಯ ನೀರು ನಿಲ್ಲದಂತೆ ಮುನ್ನಚ್ಚರಿಕೆ ಕ್ರಮ ತೆಗೆದುಕೊಳ್ಳಲು ನಗರಾಭಿವೃದ್ಧಿ ಸಚಿವ ಡಾ.ಜಿ. ಪರಮೇಶ್ವರ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.ವಿಧಾನಸೌಧದ ಕೊಠಡಿ ಸಮಿತಿಯಲ್ಲಿ ಬುಧವಾರ ಬಿಬಿಎಂಪಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ಜಿ. ಪರಮೇಶ್ವರ, ಪ್ರತಿ ವರ್ಷ ಮಳೆಗಾಲದಲ್ಲಿ ತಗ್ಗು ಪ್ರದೇಶ, ರಾಜಕಾಲುವೆ, ರಸ್ತೆಗಳಲ್ಲಿ ನೀರು ನಿಲ್ಲುವ ಸ್ಥಿತಿ ಇದೆ. ಕಳೆದ ವರ್ಷ ನಿರೀಕ್ಷೆಗೂ ಹೆಚ್ಚು ಮಳೆಯಾದ್ದರಿಂದ ನಗರವಾಸಿಗಳು ತೊಂದರೆ …

Read More »

2019: ಗಂಗಾವತಿಯಲ್ಲಿಂದು ಪ್ರಧಾನಿ ಮೋದಿ ಮತಬೇಟೆ..

ಕೊಪ್ಪಳ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಕೊಪ್ಪಳದ ಗಂಗಾವತಿಯಲ್ಲಿ ಭರ್ಜರಿ ಪ್ರಚಾರ ನಡೆಸಲಿದ್ದಾರೆ.ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಭತ್ತದ ನಾಡು ಗಂಗಾವತಿಗೆ ಆಗಮಿಸಲಿರುವ ಪ್ರಧಾನಿ ಮೋದಿ,ಶರಣಬಸವೇಶ್ವರ ಕ್ಯಾಂಪ್ ಬಳಿಯ ಕೃಷಿ ವಿಜ್ಞಾನ ಕೇಂದ್ರ ಎದುರುಗಡೆ ನಡೆಯಲಿರುವ ತ್ರಿವಳಿ (ಕೊಪ್ಪಳ, ರಾಯಚೂರು, ಬಳ್ಳಾರಿ) ಜಿಲ್ಲೆಯ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಮೋದಿ ಆಗಮನದ ಹಿನ್ನೆಲೆಯಲ್ಲಿ ಬಿಗಿ ಪೋಲಿಸ್ ಭದ್ರತೆ ಏರ್ಪಡಿಸಲಾಗಿದೆ.ಏಪ್ರಿಲ್ 9ರಂದು ಚಿತ್ರದುರ್ಗ, ಮೈಸೂರಿನಲ್ಲಿ ಅಬ್ಬರದ …

Read More »

ಚೌಕಿದಾರ್ ನಾಟಕ ಬಹಳ ದಿನ ನಡೆಯಲ್ಲ: ಮಾಯಾವತಿ..

ಮೈಸೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಬುಧವಾರ ಭಾಗವಹಿಸಿದ ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಕಾಂಗ್ರೆಸ್ ಹಾಗೂ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.ಸ್ವಾತಂತ್ಯಾ ನಂತರ ಹಲವು ವರ್ಷಗಳ ಕಾಲ ದೇಶದ ಅಧಿಕಾರ ಕಾಂಗ್ರೆಸ್ ಹಾಗೂ ಬಿಜೆಪಿ ಕೈಯಲ್ಲೇ ಇತ್ತು. ಆದರೆ ದೇಶದಲ್ಲಿ ಬಡತನ ನಿರ್ಮೂಲನೆ ಅವರಿಂದ ಸಾಧ್ಯವಾಗಲಿಲ್ಲ. ಈಗ ಬಡವರಿಗೆ ಹಣ ನೀಡುತ್ತಿದ್ದಂತೆ ಬಡತನ ನಿರ್ಮೂಲನೆಯಾಗುವುದೇ ಎಂದು ಪ್ರಶ್ನಿಸಿದ ಮಾಯಾವತಿ, ಕಾಂಗ್ರೆಸ್ ನ …

Read More »

ಮೋದಿ ಮತ್ತೆ ಪ್ರಧಾನಿ ಆದ್ರೆ ನಾನು ರಾಜಕೀಯ ಬಿಟ್ಟು ಹೋಗ್ತೀನಿ: ಹೆಚ್​.ಡಿ ರೇವಣ್ಣ..

ಮೈಸೂರು: 6, 7,8 ನನಗೆ ಲಕ್ಕಿ ನಂಬರ್. ಬೇಕಾದ್ರೆ ಡೈರಿಯಲ್ಲಿ ಬರೆದು ಇಟ್ಕೊಳಿ, ಮೋದಿ ಮತ್ತೆ ಪ್ರಧಾನಿ ಆದ್ರೆ ನಾನು ರಾಜಕೀಯ ಬಿಟ್ಟು ಹೋಗ್ತೀನಿ. 18 ಲಕ್ಕಿ ನಂಬರ್ ಈ ಬಾರಿ ಮೊದಲ ಹಂತದ 14 ಅಭ್ಯರ್ಥಿಗಳು ನಾವೇ ಗೆಲ್ತೀವಿ ಎಂದು ಲೋಕೋಪಯೋಗಿ ಸಚಿವ ಹೆಚ್​.ಡಿ ರೇವಣ್ಣ ಹೇಳಿದ್ದಾರೆ.ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನಗೆ 6, 8, 22 ಅದೃಷ್ಟ ಸಂಖ್ಯೆಗಳೇ. 18 ಅಂದರೆ 1+8=9. 9 ಬಹಳ …

Read More »

ತಪ್ಪು ಮಾಹಿತಿ ನೀಡಿದ್ರೆ ಕ್ರಿಮಿನಲ್ ಕೇಸ್; ಅಧಿಕಾರಿಗಳಿಗೆ ‘ಹೈ’ ಎಚ್ಚರಿಕೆ

ಬೆಂಗಳೂರು: ನಾಕೋಡ ಡೆವಲಪರ್ಸ್​ ಸೇರಿದಂತೆ ನಗರದಲ್ಲಿ ನಿರ್ಮಾಣ ಆಗಿರುವ ಅಪಾರ್ಟ್ಮೆಂಟ್​ಗಳಿಗೆ ಬಿಬಿಎಂಪಿ ಸ್ವಾಧೀನ ಪ್ರಮಾಣಪತ್ರ ನೀಡಿದ ಸಂಬಂಧ ಹೈಕೋರ್ಟ್​ ಗರಂ ಆಗಿದೆ. ಪ್ರಕರಣ ಸಂಬಂಧ ಖುದ್ದು ಹಾಜರಾಗುವಂತೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್​ಗೆ ಹೈಕೋರ್ಟ್ ನ್ಯಾಯಮೂರ್ತಿ ಸತ್ಯನಾರಾಯಣ ಜಾಮೀನುರಹಿತ ವಾರೆಂಟ್ ಜಾರಿ ಮಾಡಿದ್ರು. ಮಂಜುನಾಥ್ ಪ್ರಸಾದ್ ಜಿಲ್ಲಾ ಚುನಾವಣಾಧಿಕಾರಿಯಾಗಿಯೂ ಕಾರ್ಯ ನಿರ್ವಹಿಸುತ್ತಿರುವ ಹಿನ್ನೆಲೆ ಮಧ್ಯಾಹ್ನ 2.30ಕ್ಕೆ ಕೋರ್ಟ್​ಗೆ ಆಗಮಿಸಿದ್ರು.ವಿಚಾರಣೆ ವೇಳೆ, ನ್ಯಾ. ಸತ್ಯನಾರಾಯಣ ಕಂದಾಯ ಇಲಾಖೆ, ಬಿಬಿಎಂಪಿ ಮತ್ತು ಬಿಡಿಎಯಲ್ಲಿ …

Read More »

ಕುಲಕರ್ಣಿಗೆ ಮತ್ತೆ ಸಂಕಷ್ಟ, ಕೊಲೆ ಪ್ರಕರಣ ತನಿಖೆ ಮಾಡುವಂತೆ ಕೋರ್ಟ್ ಆದೇಶ

ಧಾರವಾಡ: ಮೈತ್ರಿ ಕೂಟದ ಲೋಕಸಭಾ ಚುನಾವಣಾ ಅಭ್ಯರ್ಥಿ, ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಸಂಕಷ್ಟ ಎದುರಾಗಿದೆ. ಜಿಪಂ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣಕ್ಕೆ ಸಂಭಂದಪಟ್ಟಂತೆ ಸಾಕ್ಷಿಗಳ ಮೇಲೆ ಒತ್ತಡ ಹಾಗೂ ಜೀವ ಬೆದರಿಕೆ ಹಾಕಿದ ಆರೋಪ ಹಿನ್ನೆಲೆಯಲ್ಲಿ ವಿನಯ್​​ ಕುಲಕರ್ಣಿ ವಿರುದ್ಧ ಕೇಸ್ ದಾಖಲಿಸಿಕೊಂಡು ತನಿಖೆ ಮಾಡುವಂತೆ ಕೋರ್ಟ್ ಸೂಚನೆ ನೀಡಿದೆ. ಪ್ರಕರಣದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ, ಪೊಲೀಸ್ ಅಧಿಕಾರಿಗಳಾದ ತುಳಜಪ್ಪ ಸುಲ್ಪಿ ಹಾಗೂ ಚಂದ್ರಶೇಖರ್ ಮೂವರ ವಿರುದ್ಧ …

Read More »

ಟಿಕ್ ಟಾಕ್ ಬ್ಯಾನ್​ಗಾಗಿ ಕೋರ್ಟ್​​​​ ಮೊರೆ ಹೋದ ಮಹಿಳಾ ಆಯೋಗ..

ಬೆಂಗಳೂರು: ಟಿಕ್ ಟಾಕ್ ವಿರುದ್ಧ ಕಾನೂನು ಸಮರ ಸಾರಲು ಮಹಿಳಾ ಆಯೋಗ ಮುಂದಾಗಿದೆ. ಟಿಕ್ ಟಾಕ್​ನ ಮಹಿಳೆಯರ ವಿಡಿಯೋಗಳನ್ನು ಅಸಭ್ಯವಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದ್ರಿಂದ ಕೋರ್ಟ್​​​​ಗೆ ಸಾರ್ವಜನಿಕ ಹಿತಾಸಕ್ತಿಯಡಿಯಲ್ಲಿ ಟಿಕ್ ಟಾಕ್ ಬ್ಯಾನ್ ಮಾಡುವಂತೆ ಮಹಿಳಾ ಆಯೋಗ ಅರ್ಜಿ ಸಲ್ಲಿಸಲಾಗಿದೆ. ಅರ್ಜಿಯಲ್ಲಿ ಟಿಕ್ ಟಾಕ್ ಸಂಪೂರ್ಣ ನಿಷೇಧಕ್ಕಾಗಿ ಕೋರ್ಟ್​​​​ಗೆ ಮೊರೆ ಹೋಗಿದ್ದೇವೆ. ಟಿಕ್ ಟಾಕ್ ವಿರುದ್ಧ ಮಹಿಳಾ ಆಯೋಗಕ್ಕೆ ಸಾಕಷ್ಟು ದೂರು ಬಂದ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದೆ ಎಂದು

Read More »

ಧಾರವಾಡ ಆಯ್ತು, ಈಗ ಬೆಂಗಳೂರು ಸರದಿ, ನಿರ್ಮಾಣ ಹಂತದ ಕಟ್ಟಡ ಕುಸಿದು ಇಬ್ಬರ ಸಾವು! ಎಪಿಎಂಸಿ ವತಿಯಿಂದ ಪಾರ್ಕಿಂಗ್ ಗಾಗಿ ನಿರ್ಮಾಣವಾಗುತ್ತಿದ್ದ ಕಟ್ಟಡ, ದುರಂತಕ್ಕೆ ಕಳಪೆ ಕಾಮಗಾರಿ ಕಾರಣ

ಬೆಂಗಳೂರು: ಧಾರವಾಡ ಕಟ್ಟಡ ಕುಸಿತ ಪ್ರಕರಣ ಇನ್ನೂ ಹಸಿರಾಗಿರುವಂತೆಯೇ ಇತ್ತ ಬೆಂಗಳೂರಿನಲ್ಲೂ ಅಂತಹುದೇ ಮತ್ತೊಂದು ದುರ್ಘಟನೆ ಸಂಭವಿಸಿದೆ.ಬೆಂಗಳೂರಿನ ಆರ್ ಎಂಸಿ ಯಾರ್ಡ್ ಠಾಣಾ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು ಇಬ್ಬರು ಮೃತಪಟ್ಟಿದ್ದಾರೆ. ಇಂದು ಮುಂಜಾನೆ 4.30ರ ಸುಮಾರಿಗೆ ಕಟ್ಟಡದ ಸೆಟ್ರಿಂಗ್ ಕುಸಿದ ಪರಿಣಾಮ ಅಲ್ಲಿದ್ದ ಹಲವು ಕಟ್ಟಡ ಕಾರ್ಮಿಕರು ಅವಶೇಷಗಳಡಿಯಲ್ಲಿ ಕುಸಿದಿದ್ದರು. ಈ ಪೈಕಿ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದು, ಮೃತರನ್ನು ರಾಕೇಶ್ ಹಾಗೂ ರಾಹುಲ್ ಎಂದು ಗುರುತಿಸಲಾಗಿದೆ.ರಾಕೇಶ್ ಹಾಗೂ …

Read More »