Breaking News

ಸುದ್ದಿ

ಈಕೆಗೆ ಸಿಎಂ ಜನತಾದರ್ಶನ ತಂದ ಫಲವಿದು!

ಬೆಂಗಳೂರು: ಜನತಾದರ್ಶನದಲ್ಲಿ ಮನೆ ಕಳೆದುಕೊಂಡು ದುಗುಡ ಹೊತ್ತು ತಂದಿದ್ದ ಗಿರಿನಗರದ ಕನ್ನಿಯಮ್ಮನ ಮೊಗದಲ್ಲಿಂದು ಮಂದಹಾಸ. ಪತಿ ಮಾಡಿದ ಕೈಸಾಲ ಪ್ರಾಮಾಣಿಕವಾಗಿ ತೀರಿಸುತ್ತಾ ಬಂದಿದ್ದರೂ ಊರಲ್ಲಿ ಇಲ್ಲದ ಸಂದರ್ಭದಲ್ಲಿ ಸಾಲ ಕೊಟ್ಟ ವ್ಯಕ್ತಿ ಆಕೆಯ ಮನೆಯ ಬೀಗ ಒಡೆದು ಮನೆಯನ್ನ ಸ್ವಾಧೀನ ಪಡಿಸಿಕೊಂಡು ಅಕ್ರಮವಾಗಿ ಮತ್ತೊಬ್ಬರಿಗೆ ಬಾಡಿಗೆ ಕೊಟ್ಟಿದ್ದರು.  ಸೆಪ್ಟೆಂಬರ್1 ರಂದು ನಡೆದ ಜನತಾದರ್ಶನದಲ್ಲಿ ಮುಖ್ಯಮಂತ್ರಿಗಳ ಬಳಿ ಮನೆ ವಾಪಸ್ ಕೊಡಿಸುವಂತೆ ಕನ್ನಿಯಮ್ಮ ಅಹವಾಲು ಸಲ್ಲಿಸಿದ್ದರು. ಕೂಡಲೇ ಪೊಲೀಸ್ ಆಯುಕ್ತ ಸುನೀಲ್ …

Read More »

ಗೋವಾ: ಮೂರು ಬಿಜೆಪಿ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದ ಕಾಂಗ್ರೆಸ್

ಪಣಜಿ: ಗೋವಾದಲ್ಲಿ, ಬಿಜೆಪಿ ಆಡಳಿತದ ಮೂರು ಶಾಸಕರು ತಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ, ಮನೋಹರ್ ಪರಿಕ್ಕರ್ ನೇತೃತ್ವದ ಸಮ್ಮಿಶ್ರ ಸರ್ಕಾರ ಶೀಘ್ರದಲ್ಲೇ ಪತನವಾಗಬಹುದು ಎಂದು ಕಾಂಗ್ರೆಸ್ ಹೇಳಿದೆ.  ಈ ಹೇಳಿಕೆಯನ್ನು ತಿರಸ್ಕರಿಸಿರುವ ಬಿಜೆಪಿ ಕಾಂಗ್ರೆಸ್ ತನ್ನ ಹೇಳಿಕೆಯಿಂದ ಮೂರ್ಖರನ್ನಾಗಿಸುತ್ತಿದೆ ಎಂದು ಹೇಳಿದೆ.  ಕಾಂಗ್ರೆಸ್ ವಕ್ತಾರ ಮತ್ತು ಶಾಸಕ ದಯಾನಂದ ಸೋಪ್ಟೆ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, “ಬಿಜೆಪಿ ಶಾಸನಸಭೆಯ ಮೂರು ಶಾಸಕರು ಕಾಂಗ್ರೆಸ್ನೊಂದಿಗೆ ಸಂಪರ್ಕದಲ್ಲಿರುತ್ತಾರೆ” ಎಂದು ಹೇಳಿದರು. ಆದರೆ ಅವರು ಶಾಸಕರ ಹೆಸರು ತಿಳಿಸಲು …

Read More »

ಗೌರಿ ದಿನಾಚರಣೆ: ಬೆದರಿಕೆಗೆ, ಗನ್ನಿಗೆ ಎಂದೂ ನಾವು ಬಗ್ಗುವುದಿಲ್ಲ: ಹೋರಾಟಗಾರರ ಎಚ್ಚರಿಕೆ.

ಬೆಂಗಳೂರು: ಕೋಮುವಾದಿಗಳ ಬೆದರಿಕೆಗೆ ಮತ್ತು ಅವರ ಗನ್ನಿಗೆ ನಾವು ಎಂದೂ ಬಗ್ಗುವುದಿಲ್ಲ ಎಂದು ವಿಚಾರವಾದಿಗಳು ಮತ್ತು ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ. ಬುಧವಾರ ಬೆಂಗಳೂರಿನಲ್ಲಿ ನಡೆದ ಪತ್ರಕರ್ತೆ ಗೌರಿ ಲಂಕೇಶ್ ಅವರ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿಚಾರವಾದಿಗಳು ಕೇಂದ್ರ ಸರ್ಕಾರ ದಮನಕಾರಿ ನೀತಿ ಅನುಸರಿಸುತ್ತಿದೆ ಎಂದು ಒಕ್ಕೋರಲಿನಿಂದ ಹೇಳಿದೆ. ಗೌರಿ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ದಿ ವೈರ್ ಪತ್ರಿಕೆ ಸಂಪಾದಕ ಸಿದ್ಧಾರ್ಥ ವರದರಾಜನ್ ಅವರು, ಆದಿವಾಸಿಗಳು ಹಾಗೂ ದಲಿತ ಹಕ್ಕುಗಳ ಹೋರಾಟಗಾರರನ್ನು, …

Read More »

ಜಾರಕಿಹೊಳಿ ಸೋದರರು-ಲಕ್ಷ್ಮಿ ಹೆಬ್ಬಾಳ್ಕರ್ ನಡುವಿನ ಕಿತ್ತಾಟ; ಸಮ್ಮಿಶ್ರ ಸರ್ಕಾರಕ್ಕೆ ಕುತ್ತು?

ಬೆಳಗಾವಿ : ಇಲ್ಲಿನ ಪ್ರಾಥಮಿಕ ಭೂ ಅಭಿವೃದ್ಧಿ(ಪಿಎಲ್ ಡಿ) ಬ್ಯಾಂಕ್ ಮುಖ್ಯಸ್ಥರ ಹುದ್ದೆ ಚುನಾವಣೆಗೆ ಸಂಬಂಧಿಸಿದಂತೆ ಜಾರಕಿಹೊಳಿ ಸೋದರರು ಮತ್ತು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ನಡುವೆ ನಡೆದ ಕಲಹ, ಮನಸ್ತಾಪ, ಕಿತ್ತಾಟಗಳಿಂದ ಸಮ್ಮಿಶ್ರ ಸರ್ಕಾರದ ಭವಿಷ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎನ್ನಲಾಗಿದೆ. ಪಿಎಲ್ ಡಿ ಬ್ಯಾಂಕಿನ ಮುಖ್ಯಸ್ಥರ ಚುನಾವಣೆ ನಾಳೆ ನಡೆಯಲಿದ್ದು ರಾಜ್ಯ ರಾಜಕೀಯದಲ್ಲಿ ಪ್ರಭಾವ ಹೊಂದಿರುವ ಸತೀಶ್ ಜಾರಕಿಹೊಳಿ ಮತ್ತು ರಮೇಶ್ ಜಾರಕಿಹೊಳಿ ಸೋದರರು, ಪಿಎಲ್ ಡಿ …

Read More »

ಬಿಜೆಪಿ ವಿರುದ್ಧ ದಿನೇಶ್ ಗುಂಡುರಾವ್ ನೇತೃತ್ವದಲ್ಲಿ ಪ್ರತಿಭಟನೆ

ಪೆಟ್ರೋಲ್,  ಡಿಸೇಲ್ ಬೆಲೆ ಏರಿಕೆಯನ್ನು ಖಂಡಿಸಿ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ‌ ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿನೂತನ ‌ ಪ್ರತಿಭಟನೆ ನಡೆಸಿದರು. ನಗರದ ಕೆಇಸಿ ವೃತ್ತದಿಂದ ವಿಮಾನ‌ ನಿಲ್ದಾಣದವರೆಗೆ ಎತ್ತಿನ ಬಂಡೆಯಲ್ಲಿ ಮೆರವಣಿಗೆ ಮಾಡುವ ಮೂಲಕ ಕೇಂದ್ರ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡೆಸಿದರು. ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿಯವರು ಭಾಷಣ ಮಾಡಿ ಪುಕ್ಕಟೆ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.  ಈ ವೇಳೆ ಮಾತನಾಡಿದ …

Read More »

ಆಧಾರ್ ಇಲ್ಲವೆಂದು ಮಕ್ಕಳ ಪ್ರವೇಶವನ್ನು ಶಾಲೆಗಳು ನಿರಾಕರಿಸುವಂತಿಲ್ಲ: ಯುಐಡಿಎಐ.

ನವದೆಹಲಿ: ಆಧಾರ್ ಕಾರ್ಡ್ ಹೊಂದಿಲ್ಲವೆಂಬ ಕಾರಣಕ್ಕೆ ಶಾಲೆಗಳು ಮಕ್ಕಳ ಪ್ರವೇಶಾತಿಯನ್ನು ನಿರಾಕರಿಸುವಂತಿಲ್ಲ ಎಂದು ಭಾರತದ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ ಸ್ಪಷ್ಟಪಡಿಸಿದೆ.  ಕೇವಲ ಆಧಾರ್ ಕಾರ್ಡ್ ಇಲ್ಲ ಎಂಬ ಕಾರಣಕ್ಕೆ ಮಕ್ಕಳನ್ನು ಶಾಲೆಗೆ ದಾಖಲಿಸಿಕೊಳ್ಳಲು ಆಡಳಿತ ಮಂಡಳಿಗಳು ನಿರಾಕರಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿದ್ದು, ಇದನ್ನು ಯುಐಡಿಎಐ ಗಂಭೀರವಾಗಿ ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಯುಐಡಿಎಐ ಸುತ್ತೋಲೆ ಹೊರಡಿಸಿದ್ದು, ಆಧಾರ್ ಇಲ್ಲದ ಕಾರಣಕ್ಕೆ ಮಕ್ಕಳಿಗೆ ಪ್ರವೇಶ ನಿರಾಕರಿಸುವುದು …

Read More »

ಗುಟ್ಕಾ ಹಗರಣ: ಚೆನ್ನೈನಾದ್ಯಂತ ಸಚಿವರು, ಅಧಿಕಾರಿಗಳ ಮನೆ ಮೇಲೆ ಸಿಬಿಐ ದಾಳಿ

ಚೆನ್ನೈ: ಬಹುಕೋಟಿ ಗುಟ್ಕಾ ಹಗರಣಕ್ಕೆ ಸಂಬಂಧಿಸಿದಂತೆ ಚೆನ್ನೈನಾದ್ಯಂತ ತನಿಖಾ ಕಾರ್ಯಾಚರಣೆ ಆರಂಭಿಸಿರುವ ಸಿಬಿಐ, ತಮಿಳುನಾಡು ಆರೋಗ್ಯ ಮಂತ್ರಿ ಸಿ.ವಿಜಯಭಾಸ್ಕರ್ ಮನೆ ಸೇರಿದಂತೆ ಸುಮಾರು 40 ಸ್ಥಳಗಳ ಮೇಲೆ ದಾಳಿ ನಡೆಸಿದ್ದಾರೆ. ತಮಿಳುನಾಡು ಪೊಲೀಸ್ ಮಹಾನಿರ್ದೇಶಕ ಟಿ.ಕೆ.ರಾಜೇಂದ್ರನ್ಮ್ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಎಸ್.ಜಾರ್ಜ್ ಸೇರಿದಂತೆ ಇತರ ಪೋಲಿಸ್ ಅಧಿಕರಿಗಲ್ ಮೆನೆ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದು, ಹಲವು ದಾಖಲೆಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. ತಮಿಳುನಾಡಿನಲ್ಲಿ 2017ರ ಜುಲೈ 8ರಂದು ಗುಟ್ಕಾ ಹಗರಣ …

Read More »

ವಿಮಾನ ಟಿಕೆಟ್ ಖರೀದಿಯಲ್ಲಿ ಭಾರೀ ರಿಯಾಯಿತಿ

ನವದೆಹಲಿ: ಹಬ್ಬದ ಸೀಸನ್ ಪ್ರಾರಂಭವಾಗಿದೆ, ಈ ಸೀಸನ್ ನಲ್ಲಿ ವಾಯುಯಾನ ವಲಯದಲ್ಲಿ ಹಲವು ಕಂಪನಿಯ ನಡುವಿನ ಸ್ಪರ್ಧೆಯು ಹೆಚ್ಚಾಗಿದ್ದು ಹಲವು ಕಂಪನಿಗಳು ಅಗ್ಗದ ಟಿಕೆಟ್ಗಳನ್ನು ಒದಗಿಸುತ್ತಿವೆ. ಗ್ರಾಹಕರನ್ನು ಆಕರ್ಷಿಸಲು, ಕಂಪೆನಿಗಳು ಈಗಾಗಲೇ ರಿಯಾಯಿತಿ ದರದಲ್ಲಿ ಟಿಕೆಟ್ ಅನ್ನು ನೀಡುತ್ತಿವೆ. ಈ ಸಂದರ್ಭದಲ್ಲಿ, ವಿಮಾನಗಳ ಟಿಕೆಟ್ ಗಳಲ್ಲಿ ನೀವೂ ಸಹ ಬಂಪರ್ ರಿಯಾಯಿತಿಯ ಲಾಭವನ್ನು ಪಡೆಯಬಹುದು. ಏವಿಯೇಷನ್ ಸೆಕ್ಟರ್ನ 4 ದೊಡ್ಡ ಕಂಪನಿಗಳು ತಮ್ಮ ಕೊಡುಗೆಗಳನ್ನು ನೀಡಿವೆ. ಇದರಲ್ಲಿ ದೇಶೀಯ ಪ್ರಯಾಣದ …

Read More »

ಇಂದಿನಿಂದ ಶಿರಾಡಿಘಾಟ್’ನಲ್ಲಿ ಲಘು ವಾಹನ ಸಂಚಾರ ಆರಂಭ.

ಹಾಸನ: ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಕೊಡಗಿನಲ್ಲಿ ಉಂಟಾಗಿದ್ದ ಪ್ರವಾಹದಿಂದಾಗಿ ಸಂಪೂರ್ಣ ಹದಗೆಟ್ಟಿದ್ದ ಶಿರಾಡಿ ಘಾಟ್ ರಸ್ತೆ ದುರಸ್ತಿ ಕಾರ್ಯ ಪೂರ್ಣಗೊಂಡಿದ್ದು, ಇಂದಿನಿಂದ ಲಹುವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.  ಅಲ್ಲದೆ, ಚಾರ್ಮಾಡಿ ಘಾಟ್’ನಲ್ಲಿಯೂ ಭಾರಿ ಮಳೆಯಿಂದಾಗಿ ಗುಡ್ಡ ಕುಸಿದ ಹಿನ್ನೆಲೆಯಲ್ಲಿ ಮಂಗಳೂರಿಗೆ ಹೋಗಲು ದಾರಿಯೇ ಇಲ್ಲದಂತಾಗಿತ್ತು. ಆದರೆ ಆ ರಸ್ತೆಯನ್ನು ಕೆಲ ದಿನಗಳ ಹಿಂದೆ ಸರಿಪಡಿಸಲಾಗಿತ್ತು. ಈಗ ಶಿರಾಡಿ ಘಾಟ್ ರಸ್ತೆ ಸರಿಪಡಿಸಿ ಮೊದಲ ಹಂತದಲ್ಲಿ ಸಣ್ಣ ವಾಹನಗಳ ಸಂಚಾರಕ್ಕೆ …

Read More »

ರಫೇಲ್‌ ಡೀಲ್‌ ವಿರುದ್ಧ ಪಿಐಎಲ್: ಅರ್ಜಿ ವಿಚಾರಣೆಗೆ ಸುಪ್ರೀಂ ಅಸ್ತು..

ನವದೆಹಲಿ: ಭಾರತ ಮತ್ತು ಫ್ರಾನ್ಸ್‌ ನಡುವಿನ ರಫೇಲ್‌ ಫೈಟರ್‌ ಜೆಟ್‌ ಖರೀದಿ ವ್ಯವಹಾರಕ್ಕೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಮುಂದಿನವಾರ ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ಬುಧವಾರ ತಿಳಿಸಿದೆ. ವಕೀಲ ಮನೋಹರ್ ಲಾಲ್ ಶರ್ಮಾರಿಂದ ಪಿಐಎಲ್ ಸಲ್ಲಿಸಿದ್ದಾರೆ. ರಫೇಲ್‌ ಫೈಟರ್‌ ಜೆಟ್‌ ಖರೀದಿ ವ್ಯವಹಾರದಲ್ಲಿ ಕೆಲವೊಂದು ನ್ಯೂನತೆಗಳಿವೆ. ಹಾಗಾಗಿ ಅದಕ್ಕೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಯನ್ನು ಪುರಸ್ಕರಿಸಿರುವ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು …

Read More »