Breaking News

ಬೆಂಗಳೂರಲ್ಲಿ ಗುಜರಿ ವ್ಯಾಪಾರಿ ಹಣೆಗೆ ಗುಂಡಿಟ್ಟು ಕೊಲೆ ಕೇಸ್ : ಆರೋಪಿ, ಕಾಂಗ್ರೆಸ್ ಮುಖಂಡ ಪೋಲೀಸರ ಮುಂದೆ ಸರೆಂಡರ್!

ಬೆಂಗಳೂರು: ಗುಜರಿ ವ್ಯಾಪಾರಿ ಇಮ್ರಾನ್ ಪಾಷಾ ಅವರನ್ನು ಗುಂಡಿಕ್ಕಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಇಲಾಹಿ ನವೀದ್ ಬೇಗ ಪೊಲೀಸರ ಮುಂದೆ ಶರಣಾಗಿದ್ದಾನೆ. ನವೆಂಬರ್ 17ರಂದು ಕಾರಿನಲ್ಲೇ ಇಮ್ರಾನ್ ಪಾಷಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಕೆ.ಪಿ. ಅಗ್ರಹಾರದ ನಿವಾಸಿಯಾಗಿರುವ ಆರೋಪಿ ಬಾಪೂಜಿನಗರದ ಕಾಂಗ್ರೆಸ್ ಮುಖಂಡನಾಗಿದ್ದಾನೆ. ಬಾಗಲೂರು ಠಾಣೆ ಪೊಲೀಸರ ಮುಂದೆ ಶರಣಾಗಿರುವುದಾಗಿ ತಿಳಿದುಬಂದಿದೆ. ಪ್ರಕರಣದ ತನಿಖೆ ಕೈಗೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ಇದೀಗ ಪ್ರಮುಖ ಆರೋಪಿ ಶರಣಾಗಿದ್ದು, ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

Share News

About BigTv News

Check Also

ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದ ಮಹಿಳೆಗೆ ನೆರವಿನ ಸೋಗಿನಲ್ಲಿ ವಂಚನೆ – ಲ್ಯಾಪ್‌ಟಾಪ್‌, ಬ್ಯಾಗ್ ದೋಚಿದ ಕಳ್ಳ!

ಬೆಂಗಳೂರು: ರಸ್ತೆಯಲ್ಲಿ ಬಿದ್ದು ಗಾಯಗೊಂಡಿದ್ದ ಮಹಿಳೆಗೆ ಸಹಾಯ ಮಾಡುವ ನೆಪದಲ್ಲಿ ಕಳ್ಳನೊಬ್ಬ ಆಕೆಯ ಲ್ಯಾಪ್‌ಟಾಪ್ ಬ್ಯಾಗ್ ಕಳವು ಮಾಡಿಕೊಂಡು ಪರಾರಿಯಾಗಿರುವ …

Leave a Reply

Your email address will not be published. Required fields are marked *