ಬೆಂಗಳೂರು: ಬಾಗಲೂರಿನಲ್ಲಿ ಕಾರಿನಲ್ಲೇ ಗುಜರಿ ವ್ಯಾಪಾರಿ ಇಮ್ರಾಜ್ ಪಾಷಾ ಅವರನ್ನು ಗುಂಡಿಕ್ಕಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ನವೀದ್ ಇಲಾಹಿ ಬೇಗ್ ಹಾಗೂ ಸಹಚರ ಮುಬಾರಕ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಸ್ಕ್ರಾಪ್ ವ್ಯಾಪಾರದ ವೈಷಮ್ಯವೇ ಕೊಲೆಗೆ ಕಾರಣ ಎನ್ನಲಾಗಿದೆ. ವ್ಯಾಪಾರ ವಿಸ್ತರಿಸದಂತೆ ನವೀದ್ ಎಚ್ಚರಿಕೆ ನೀಡಿದ್ದರೂ ಇಮ್ರಾಜ್ ಪಾಷಾ ಮುಂದುವರಿದಿದ್ದರಿಂದ ಆಕ್ರೋಶಗೊಂಡು, ಮಾತನಾಡುವ ನೆಪದಲ್ಲಿ ಕರೆಸಿ ಲೈಸೆನ್ಸ್ ಹೊಂದಿದ್ದ ಪಿಸ್ತೂಲ್‌ನಿಂದ ಗುಂಡಿಕ್ಕಿದ್ದಾಗಿ ಆರೋಪಿ ಹೇಳಿದ್ದಾನೆ. ತಲೆಮರೆಸಿಕೊಂಡಿದ್ದ ಆರೋಪಿಯನ್ನು ವಿಜಯನಗರದ ಟೆಲಿಕಾಂ ಲೇಔಟ್‌ನಲ್ಲಿ ಬಂಧಿಸಲಾಗಿದೆ. ಪಿಸ್ತೂಲ್ ವಶಪಡಿಸಿಕೊಂಡಿರುವ ಪೊಲೀಸರು ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದು, ಹೆಚ್ಚಿನ ವಿಚಾರಣೆಗಾಗಿ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆಯಲು ಸಿದ್ಧತೆ ನಡೆಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news
