Breaking News

ಗೃಹಪ್ರವೇಶವಾಗಿ ಒಂದೇ ತಿಂಗಳಿಗೆ ಹೊಸ ಮನೆಗೆ ಕನ್ನ! ದಂಪತಿಗೆ ಲಾಂಗ್‌, ಮಚ್ಚು ತೋರಿಸಿ ದರೋಡೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಪುರ ಗ್ರಾಮದಲ್ಲಿ ಗೃಹಪ್ರವೇಶವಾಗಿ ಒಂದು ತಿಂಗಳಷ್ಟೇ ಕಳೆದಿದ್ದ ನೂತನ ಮನೆಗೆ ನುಗ್ಗಿದ ಮೂವರು ಮುಸುಕುಧಾರಿಗಳು ದಂಪತಿಗೆ ಮಾರಕಾಸ್ತ್ರ ತೋರಿಸಿ ದರೋಡೆ ಮಾಡಿದ್ದಾರೆ. ಸಿಮೆಂಟ್ ಇಟ್ಟಿಗೆಯಿಂದ ಮನೆಯ ಬಾಗಿಲು ಒಡೆದು ಒಳನುಗ್ಗಿದ ಆರೋಪಿಗಳು, ಲಾಂಗ್‌ ಮತ್ತು ಮಚ್ಚು ತೋರಿಸಿ ದಂಪತಿಗೆ ಬೆದರಿಕೆ ಹಾಕಿ 117 ಗ್ರಾಂ ಚಿನ್ನಾಭರಣ, ₹8 ಸಾವಿರ ನಗದು ಹಾಗೂ ಮೊಬೈಲ್‌ಗಳನ್ನು ದೋಚಿ ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ವಿಜಯಪುರ ಪೊಲೀಸರು ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರು ಗ್ರಾಮಾಂತರ ಎಸ್ಪಿ ಚಂದ್ರಕಾಂತ್ ನೇತೃತ್ವದಲ್ಲಿ ತನಿಖೆ ಚುರುಕುಗೊಂಡಿದ್ದು, ಆರೋಪಿಗಳ ಪತ್ತೆಗೆ ತಂಡ ರಚಿಸಲಾಗಿದೆ.

Share News

About BigTv News

Check Also

ಮನೆಯ ಮಾಲೀಕನಿಗೆ ಚಾಕು ತೋರಿಸಿ ಚಿನ್ನ, ನಗದು ದರೋಡೆ!

ಬೆಂಗಳೂರು: ದೇವನಹಳ್ಳಿ ತಾಲೂಕಿನ ಪುರ ಗ್ರಾಮದಲ್ಲಿ ಮಧ್ಯರಾತ್ರಿ ಮುಸುಕುಧಾರಿ ದರೋಡೆಕೋರರ ತಂಡವೊಂದು ಮನೆಯ ಬಾಗಿಲು ಒಡೆದು ಒಳನುಗ್ಗಿ ದಂಪತಿಗೆ ಚಾಕು …

Leave a Reply

Your email address will not be published. Required fields are marked *