Breaking News

ಸುದ್ದಿ

ವಾಟ್ಸಪ್ ಮತ್ತು ಕೇಂದ್ರ ಸರ್ಕಾರದ ನಡುವಿನ ಫೈಟ್ ಬಗ್ಗೆ ನಿಮಗೆಷ್ಟು ಗೊತ್ತು?

ಭಾರತ ಅತಿ ಹೆಚ್ಚು ವಾಟ್ಸಪ್ ಬಳಕೆದಾರರನ್ನು ಹೊಂದಿರುವ ದೇಶ, ಆದರೆ ಇತ್ತೀಚಿಗೆ ಹಲವಾರು ವಿಷಯಗಳಲ್ಲಿ ಕೇಂದ್ರ ಸರ್ಕಾರದ ನಡುವೆ ವಾಗ್ವಾದ ನಡೆಯುತ್ತಿದೆ.ಅದರಲ್ಲೂ ಫೇಕ್ ನ್ಯೂಸ್ ಗಳ ಹಾವಳಿ ವಿಚಾರವಾಗಿ ಸರ್ಕಾರ ಈಗ ವಾಟ್ಸಪ್ ಕಂಪನಿಗೆ ಸೂಚನೆ ನೀಡಿದೆ ನವದೆಹಲಿ: ಈಗ ಮೋದಿ ಸರ್ಕಾರ ಮತ್ತು ಸಾಮಾಜಿಕ ಮಾಧ್ಯಮವಾದ ವಾಟ್ಸಪ್ ನಡುವೆ ನಿರಂತರವಾದ ಜಿದ್ದಾಜಿದ್ದಿ ನಡೆಯುತ್ತಿದೆ ಹಾಗಾದರೆ ಈ ಏನಂತೀರಾ ? ಇಲ್ಲಿದೆ ಇದರ  ಸಂಪೂರ್ಣ ವಿವರ ಭಾರತ ಅತಿ ಹೆಚ್ಚು …

Read More »

ಭಾರೀ ಮಳೆಯಿಂದಾಗಿ ದೇಶಾದ್ಯಂತ 1074 ಮಂದಿ ಸಾವು:

ಕೇರಳ, ಕರ್ನಾಟಕ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಗಣನೀಯ ಪ್ರಮಾಣದಲ್ಲಿ ಸಾವು ಸಂಭವಿಸಿದೆ. ನವದೆಹಲಿ: ಕೇರಳ ಪ್ರವಾಹದಿಂದ ನೂರಾರು ಮಂದಿ ಸಾವನ್ನಪ್ಪಿದ್ದು, ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ. ಈ ವರ್ಷ ಭಾರೀ ಮಳೆ ಕಾರಣದಿಂದ ದೇಶದಾದ್ಯಂತ 1074 ಜನರು ಸಾವನ್ನಪ್ಪಿದ್ದಾರೆ. ಆಗಸ್ಟ್ 26 ರ ತನಕ ಭಾರಿ ಮಳೆಯ ಕಾರಣದಿಂದಾಗಿ ದೇಶಾದ್ಯಂತ 1074 ಮಂದಿ ಸಾವನ್ನಪ್ಪಿದ್ದಾರೆ ಎಂದು ಗೃಹ ಸಚಿವಾಲಯ ತನ್ನ ವರದಿಯಲ್ಲಿ ತಿಳಿಸಿದೆ. ಇವುಗಳಲ್ಲಿ ಕೇರಳದಲ್ಲಿ 443 …

Read More »

ವಾಯುಮಾಲಿನ್ಯ ನಿಯಂತ್ರಣಕ್ಕೆ ಡೀಸೆಲ್ ಬಸ್‌ಗಳ ಬದಲು ಬರಲಿದೆಯೇ ಎಲೆಕ್ಟ್ರಿಕ್ ಬಸ್?

ನಗರದಲ್ಲಿ ವಾಯುಮಾಲಿನ್ಯ ನಿಯಂತ್ರಣಕ್ಕೆ ಡೀಸೆಲ್ ಬಸ್‌ಗಳ ಬದಲು ಎಲೆಕ್ಟ್ರಿಕ್ ಬಸ್‌ಗಳನ್ನು ರಸ್ತೆಗಿಳಿಸಿದರೆ ಬಹುತೇಕ ವಾಯುಮಾಲಿನ್ಯ ನಿಯಂತ್ರಣಕ್ಕೆ ಬರಲಿದೆ.  ಬೆಂಗಳೂರು: ನಗರದಲ್ಲಿ ಎಲೆಕ್ಟ್ರಿಕ್ ಬಸ್‌ಗಳನ್ನು ರಸ್ತೆಗಿಳಿಸಿದರೆ ಒಂದು ಮಿಲಿಯನ್ ಡಾಲರ್ಸ್ ಟೆಕ್ನಿಕಲ್ ಅಸಿಸ್ಟೆಂಟ್ಸ್ ನೀಡಲು ಜರ್ಮನ್ ದೇಶ ಒಪ್ಪಿದ್ದು, ಈ ಸಂಬಂಧ ಶೀಘ್ರವೇ ಒಪ್ಪಂದ ಮಾಡಿಕೊಳ್ಳುವ ಬಗ್ಗೆ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರು ಚರ್ಚಿಸಿದರು. ಜರ್ಮನ್ ಪ್ರತಿನಿಧಿಗಳಾದ ಮುನ್ಸಿಪಾಲ್ ಫಿನಾನ್ಸ್ ಎಕ್ಸ್‌ಪರ್ಟ್ ಜರ್ಗನ್ ಬೌವ್ಮಾನ್ನ್, ಸಿ-40 ಸಿಟಿ ಮುಖ್ಯಸ್ಥ ಜೇಮ್ಸ್ ಅಲೆಗ್ಸಾಂಡರ್ …

Read More »

ಜಾಹೀರಾತು ಪಾಲಿಸಿ ಜಾರಿಗೆ ತರಲು ಚಿಂತನೆ-

ಡಿಸಿಎಂ ಡಾ.ಜಿ. ಪರಮೇಶ್ವರ್ ನ್ಯಾಯಾಲಯದ ನಿರ್ದೇಶನದ ಬಳಿಕ ಎಲ್ಲ ಫ್ಲೆಕ್ಸ್‌ಗಳನ್ನು ತೆರವುಗೊಳಿಸಲಾಗಿದೆ. ಕೆಲ ಜಾಹೀರಾತುದಾರರು ನ್ಯಾಯಾಲಯದ ಮೊರೆ ಹೋಗುವ ಸಾಧ್ಯತೆ ಇದೆ. ಬೆಂಗಳೂರು: ನಗರದಲ್ಲಿ ವ್ಯವಸ್ಥಿತವಾಗಿ ಜಾಹೀರಾತು ಪ್ರದರ್ಶನಕ್ಕೆಂದೇ‌ ನೂತನ ‘ಜಾಹೀರಾತು ಪಾಲಿಸಿ’ ತರಲು ಚಿಂತಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು. ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿಯಲ್ಲಿ ಕಾರ್ಡ್ ರಸ್ತೆ ಮಂಜುನಾಥ ನಗರದಲ್ಲಿ ಸೋಮವಾರ ನೂತನ ಮೆಲ್ಸೇತುವೆ ಉದ್ಘಾಟಿಸಿ ಮಾತನಾಡಿದ ಪರಮೇಶ್ವರ್, ನ್ಯಾಯಾಲಯದ ನಿರ್ದೇಶನದ ಬಳಿಕ …

Read More »

ಬ್ಯಾಲೆಟ್ ಪೇಪರ್ ಬಳಸಲು ಒತ್ತಾಯಿಸಿ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ಪತ್ರ

ಚುನಾವಣೆಗಳಲ್ಲಿ ಇವಿಎಂ ಗಳಿಗೆ ಬದಲಾಗಿ ಬ್ಯಾಲೆಟ್ ಪೇಪರ್ ಗಳನ್ನು ಬಳಸುವಂತೆ ಒತ್ತಾಯಿಸಿ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ.    ನವದೆಹಲಿ: ದೇಶದಲ್ಲಿ ನಡೆಯುವ ಚುನಾವಣೆಗಳಲ್ಲಿ ಇವಿಎಂ ಗಳಿಗೆ ಬದಲಾಗಿ ಬ್ಯಾಲೆಟ್ ಪೇಪರ್ ಗಳನ್ನು ಬಳಸುವಂತೆ ಒತ್ತಾಯಿಸಿ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ.  ಚುನಾವಣಾ ವಿಚಾರಗಳ ಬಗ್ಗೆ ಚರ್ಚಿಸಲು ಏಳು ರಾಷ್ಟ್ರೀಯ ಮತ್ತು ಇತರ ಪ್ರಾದೇಶಿಕ ಪಕ್ಷಗಳೊಂದಿಗೆ ಚುನಾವಣಾ ಆಯೋಗ ಸೋಮವಾರ ಸಭೆ ನಡೆಸಲಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪತ್ರ …

Read More »

ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲು ಸೌಲಭ್ಯ ಜಾರಿಗೆ ತಂದಿದ್ದು ಕಾಂಗ್ರೆಸ್- ಸಿದ್ದರಾಮಯ್ಯ

ದಿವಂಗತ ರಾಜೀವ್ ಗಾಂಧಿಯವರ ಪ್ರಯತ್ನದಿಂದ ಮಹಿಳೆಯರು, ಹಿಂದುಳಿದವರು ಹಾಗೂ ಇತರೆ ವರ್ಗದವರಿಗೆ ಮೀಸಲು ಸೌಲಭ್ಯ ದೊರೆತಿದೆ. ಮಹಿಳೆಯರಿಗೆ ಶೇ. 50ರಷ್ಟು ಮೀಸಲು ಸೌಲಭ್ಯ ದೊರೆಯುವಂತೆ ಮಾಡಿದ್ದು ಕಾಂಗ್ರೆಸ್.    ಮೈಸೂರು: ಮೈಸೂರು ಮಹಾನಗರ ಪಾಲಿಕೆ ಚುನಾವಣೆಗೆ ಕಾಂಗ್ರೆಸ್  63 ವಾರ್ಡ್ ಗಳಲ್ಲಿ ಸ್ಪರ್ಧೆ ಮಾಡಿದೆ. ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟಿರುವ ಪಕ್ಷ ನಮ್ಮದು. ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲು ಸೌಲಭ್ಯ ಜಾರಿಗೆ ತಂದಿದ್ದು ಸಹ ಕಾಂಗ್ರೆಸ್. ಇದರ ಕಾರಣಕರ್ತರು ದಿವಂಗತ …

Read More »

ನಿಗದಿತ ದಿನಾಂಕದಲ್ಲೇ ಪ್ರಾರಂಭಗೊಳ್ಳಲಿದೆ ‘ಆಯುಷ್ಮಾನ್ ಭಾರತ್ ಯೋಜನೆ’

ವಿಶ್ವದ ಅತಿದೊಡ್ಡ ಸರ್ಕಾರಿ ಆರೋಗ್ಯ ವಿಮೆಯ ಯೋಜನೆಯನ್ನು ಕಾರ್ಯಗತಗೊಳಿಸಲು ಸೆಪ್ಟೆಂಬರ್ 25 ರ ದಿನಾಂಕವನ್ನು ಪ್ರಧಾನಿ ನರೇಂದ್ರ ಮೋದಿ ಅವರು ನಿಗದಿ ಪಡಿಸಿದ್ದಾರೆ. ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಆಯುಷ್ಮಾನ್ ಭಾರತ್ ಯೋಜನೆ ಬಿಡುಗಡೆಗೆ ದಿನಾಂಕವನ್ನು ನಿಗದಿಪಡಿಸಿದ್ದಾರೆ. ಯೋಜನೆಯ ಬಿಡುಗಡೆಗೆ ಒಂದು ತಿಂಗಳಿಗಿಂತ ಕಡಿಮೆ ಸಮಯ ಉಳಿದಿರುವುದರಿಂದ ಆರೋಗ್ಯ ಸಚಿವಾಲಯದ ಉದ್ಯೋಗಿಗಳ ರಜಾದಿನಗಳನ್ನು ರದ್ದುಗೊಳಿಸಲಾಗಿದೆ. ವಿಶ್ವದ ಅತಿದೊಡ್ಡ ಸರ್ಕಾರಿ ಆರೋಗ್ಯ ವಿಮೆಯ ಯೋಜನೆಯನ್ನು ಕಾರ್ಯಗತಗೊಳಿಸಲು ಸೆಪ್ಟೆಂಬರ್ 25 ರ ದಿನಾಂಕವನ್ನು …

Read More »

ಸುಕನ್ಯಾ ಸಮೃದ್ಧಿ ಯೋಜನೆಯ ಲಾಭ ಪಡೆಯುವುದು ಇನ್ನೂ ಸುಲಭ

ಸುಕನ್ಯಾ ಸಮೃದ್ಧಿ ಯೋಜನೆಯಡಿ, ನವೆಂಬರ್ 2017 ರವರೆಗೆ 1.26 ಕೋಟಿ ಖಾತೆಗಳು ಇದ್ದವು, ಅದರಲ್ಲಿ ಸುಮಾರು 19,183 ಕೋಟಿ ರೂ. ಠೇವಣಿ ಮಾಡಲಾಗಿದೆ.   ನವದೆಹಲಿ: 2015 ರ ಜನವರಿಯಲ್ಲಿ : ಹೆಣ್ಣು ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ‘ಸುಕನ್ಯಾ ಸಮೃದ್ಧಿ ಯೋಜನೆ’ಯನ್ನು ಭಾರತ ಸರ್ಕಾರವು ಪ್ರಾರಂಭಿಸಿತು. ಈ ಯೋಜನೆಯ ಬಗ್ಗೆ ಸಾಕಷ್ಟು ಚರ್ಚಿಸಲಾಗಿದೆ. ಸರ್ಕಾರ ಇತ್ತೀಚೆಗೆ ಈ ಯೋಜನೆಗೆ ಸಂಬಂಧಿಸಿದ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ‘ಸುಕನ್ಯಾ ಸಮೃದ್ಧಿ ಖಾತೆ ನಿಯಮಗಳ-2016’ಕ್ಕೆ …

Read More »

JIO ಗೆ ಸೆಡ್ಡು ಹೊಡೆದ BSNL: 699 ರೂ. ಪ್ಲಾನ್

700 GB ಡಾಟಾ ಒದಗಿಸಲಿದೆ BSNL. ನವದೆಹಲಿ: ರಿಲಯನ್ಸ್ ಜಿಯೋ ಗಿಗಾ ಫೈಬರ್ ಗೆ ಸೆಡ್ಡು ಹೊಡೆದಿರುವ ಬಿಎಸ್ಎನ್ಎಲ್ 699 ರೂಪಾಯಿ ಯೋಜನೆಯನ್ನು ಪರಿಷ್ಕರಿಸಿದೆ. ಚೆನ್ನೈ ಸುತ್ತಮುತ್ತಲ ಪ್ರದೇಶದಲ್ಲಿ ಈ ಯೋಜನೆ ಚಾಲನೆಯಲ್ಲಿದೆ. ಜಿಯೋ ಫೈಬರ್ನ ಆಗಮನದ ಮೊದಲು ಯೋಜನೆಯನ್ನು ಪರಿಷ್ಕರಿಸಿರುವ ಕಂಪೆನಿಯು 700 ಜಿಬಿ ಡೇಟಾವನ್ನು ಒದಗಿಸುತ್ತಿದೆ. ಅಂದರೆ BSNL ತನ್ನ ಗ್ರಾಹಕರಿಗೆ ಐದು ಪಟ್ಟು ಹೆಚ್ಚಿನ ಡಾಟಾವನ್ನು ಒದಗಿಸುತ್ತಿದೆ. ಅದೇ ಸಮಯದಲ್ಲಿ ಡಾಟಾ ವೇಗವನ್ನು ಹೆಚ್ಚಿಸಲಾಗಿದೆ. ಬಿಎಸ್ಎನ್ಎಲ್ …

Read More »

ನಿರ್ಮಲಾ ಸೀತಾರಾಮನ್ ಅವರು ತೋರಿದ ನಡವಳಿಕೆ ಅತಿಯಾದದ್ದು- ಸಿದ್ದರಾಮಯ್ಯ

ಮೈಸೂರು: ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತೋರಿದ ನಡವಳಿಕೆ ಅತಿಯಾಗಿತ್ತು ಅದು ಕೇಂದ್ರ ಸಚಿವರ ರೀತಿ ಇರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.  ಮೈಸೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಪ್ರಧಾನಮಂತ್ರಿಗಳ  ಪ್ರತಿನಿಧಿಯಾಗಿ ಬಂದಂತಹ  ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಒಂದು ಪೈಸೆ ಪರಿಹಾರವನ್ನು ಸಹ ನೀಡಿಲ್ಲ,ಇನ್ನು ಮಡಿಕೇರಿಯಲ್ಲಿ ನಡೆದ ಸಭೆ ವೇಳೆ ರಕ್ಷಣಾ ಸಚಿವೆ ತೋರಿದ ನಡವಳಿಕೆ ಅತಿಯಾದದ್ದು ಎಂದು ಅವರು ಕಿಡಿಕಾರಿದ ಸಿದ್ದರಾಮಯ್ಯ  …

Read More »