ಗ್ಯಾಂಗ್ ರೇಪ್ ಆರೋಪಿಗಳ ರೋಡ್ ಶೋ..??
ಜಾಮೀನು ಸಿಕ್ಕ ಮೇಲೆ ರೀಲ್ಸ್ ಮಾಡಿ ಹರಿಬಿಟ್ಟ ಪುಂಡರು…
ಹಾನಗಲ್ ಗ್ಯಾಂಗ್ ರೇಪ್ ಪ್ರಕರಣದ 7 ಆರೋಪಿಗಳಿಗೆ ಜಾಮೀನು ಮಂಜೂರಾಗಿದ್ದು, ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆಯೇ ರೋಡ್ ಶೋ ಮೂಲಕ ಪಟ್ಟಣದ ಬೀದಿ ಬೀದಿಗಳಲ್ಲಿ ಮೆರೆದಾಡಿರುವ ಘಟನೆ ನಡೆದಿದೆ. ಆಲೂರು ಪಟ್ಟಣದಲ್ಲಿ ಆರೋಪಿಗಳು 5 ಕಾರುಗಳಲ್ಲಿ ಭರ್ಜರಿ ರೋಡ್ ಶೋ ನಡೆಸಿದ್ದಾರೆ.ಆರೋಪಿಗಳು ಮೆರವಣಿಗೆ ನಡೆಸಿರುವ
ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.2024ರ ಜ.8ರಂದು ಹಾನಗಲ್ ಹೊರವಲಯದಲ್ಲಿ ಗ್ಯಾಂಗ್ ರೇಪ್ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಜೈಲು ಸೇರಿದ್ದ 19 ಆರೋಪಿಗಳಲ್ಲಿ 12 ಆರೋಪಿಗಳು ಹತ್ತು ತಿಂಗಳ ಹಿಂದೆಯೇ ಜಾಮೀನು ಪಡೆದಿದ್ದರು.3 ದಿನಗಳ ಹಿಂದೆ ಹಾನಗಲ್ ಗ್ಯಾಂಗ್ ರೇಪ್ ಪ್ರಕರಣದ ಪ್ರಮುಖ 7 ಆರೋಪಿಗಳಿಗೆ ಹಾವೇರಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಸಂತ್ರಸ್ತೆ ಆರೋಪಿಗಳನ್ನು ಗುರುತಿಸಲು ವಿಫಲವಾದ ಹಿನ್ನೆಲೆಯಲ್ಲಿ ಆರೋಪಿಗಳಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು.A1 ಆರೋಪಿ ಅಪ್ತಾಬ್ ಚಂದನಕಟ್ಟಿ, A2 ಮದರ್ ಸಾಬ್ ಮಂಡಕ್ಕಿ, A3 ಸಮಿವುಲ್ಲಾ ಲಾಲನವರ, A4 ಮಹಮದ್ ಸಾದಿಕ್ ಅಗಸಿಮನಿ, A8 ಶೊಯಿಬ್ ಮುಲ್ಲಾ, A11 ತೌಸಿಪ್ ಚೋಟಿ, A13 ರಿಯಾಜ್ ಸಾವಿಕೇರಿಗೆ ಜಾಮೀನು ಮಂಜೂರು ಮಾಡಿದೆ.ಮೆರವಣಿಗೆ ನಡೆಸಿದವರ ಮೇಲೆ ಹೊಸ ಪ್ರಕರಣ ದಾಖಲು ಮಾಡುವ ಸಾಧ್ಯತೆ ಇದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

