Breaking News

ಬ್ಯಾಲೆಟ್ ಪೇಪರ್ ಬಳಸಲು ಒತ್ತಾಯಿಸಿ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ಪತ್ರ

ಚುನಾವಣೆಗಳಲ್ಲಿ ಇವಿಎಂ ಗಳಿಗೆ ಬದಲಾಗಿ ಬ್ಯಾಲೆಟ್ ಪೇಪರ್ ಗಳನ್ನು ಬಳಸುವಂತೆ ಒತ್ತಾಯಿಸಿ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ.   
ನವದೆಹಲಿ: ದೇಶದಲ್ಲಿ ನಡೆಯುವ ಚುನಾವಣೆಗಳಲ್ಲಿ ಇವಿಎಂ ಗಳಿಗೆ ಬದಲಾಗಿ ಬ್ಯಾಲೆಟ್ ಪೇಪರ್ ಗಳನ್ನು ಬಳಸುವಂತೆ ಒತ್ತಾಯಿಸಿ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ. 
ಚುನಾವಣಾ ವಿಚಾರಗಳ ಬಗ್ಗೆ ಚರ್ಚಿಸಲು ಏಳು ರಾಷ್ಟ್ರೀಯ ಮತ್ತು ಇತರ ಪ್ರಾದೇಶಿಕ ಪಕ್ಷಗಳೊಂದಿಗೆ ಚುನಾವಣಾ ಆಯೋಗ ಸೋಮವಾರ ಸಭೆ ನಡೆಸಲಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪತ್ರ ಬರೆದಿದೆ. ದೇಶದಲ್ಲಿ ಪಾರದರ್ಶಕವಾದ ಚುನಾವಣೆ ನಡೆಸಲಿ ಮರಳಿ ಬ್ಯಾಲೆಟ್ ಪೇಪರ್ ಗಳನ್ನು ಬಳಸುವ ಅಗತ್ಯವಿದೆ ಎಂದಿದೆ.
ಆದಾಗ್ಯೂ, ಇವಿಎಂಗಳನ್ನು ಚುನಾವಣೆಯಲ್ಲಿ ಬಳಸುತ್ತಿರುವುದಕ್ಕೆ ಕಾಂಗ್ರೆಸ್ ಪಕ್ಷವೊಂದೇ ವಿರೋಧ ವ್ಯಕ್ತಪಡಿಸಿಲ್ಲ. ವಿರೋಧ ಪಕ್ಷಗಳಾದ ತೃಣಮೂಲ ಕಾಂಗ್ರೆಸ್, ಬಹುಜನ ಸಮಾಜ ಪಕ್ಷ, ಜನತಾ ದಳ-ಸೆಕ್ಯುಲರ್ (ಜೆಡಿಎಸ್), ತೆಲುಗುದೇಶಂ ಪಕ್ಷ (ಟಿಡಿಪಿ), ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್ಸಿಪಿ), ಸಮಾಜವಾದಿ ಪಕ್ಷ, ಸಿಪಿಐ-ಎಂ, ರಾಷ್ಟ್ರೀಯ ಜನತಾ ದಳ (ಆರ್ಜೆಡಿ), ಡಿಎಂಕೆ, ಸಿಪಿಐ, ವೈಎಸ್ಆರ್ ಕಾಂಗ್ರೆಸ್, ಕೇರಳ ಕಾಂಗ್ರೆಸ್ ಮಣಿ (ಕೆಸಿಎಂ) ಮತ್ತು ಎಐಯುಡಿಎಫ್ ಕೂಡ ಇದೇ ಇವಿಎಂ ಬಳಕೆಗೆ ವಿರೋಧ ವ್ಯಕ್ತಪಡಿಸಿವೆ. ಅಷ್ಟೇ ಏಕೆ, ಎನ್ಡಿಎ ಮಿತ್ರಪಕ್ಷವಾದ ಶಿವಸೇನೆಯು ಕೂಡ ಚುನಾವಣೆಯಲ್ಲಿ ಇವಿಎಂಗಳನ್ನು ಬಳಸುವುದನ್ನು ಪ್ರಶ್ನಿಸಿದೆ.
Share News

About Shaikh BIG TV NEWS, Hubballi

Check Also

ಅನಂತಕುಮಾರ ಹೆಗಡೆ ವಿರುದ್ಧ ತೀವ್ರ ವಾಗ್ದಾಳಿ….

ದಾವಣಗೆರೆ: ಮುಖ್ಯ ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ಏಕವಚನದಲ್ಲಿ ಬಿಜೆಪಿ ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ಮಾತನಾಡಿರುವ ಕುರಿತು …

Leave a Reply

Your email address will not be published. Required fields are marked *

You cannot copy content of this page