Shaikh BIG TV NEWS, Hubballi
August 25, 2018
ದೇಶ-ವಿದೇಶ, ಸುದ್ದಿ
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು 2000 ಕೋಟಿ ರೂ.ಗಳ ಮಧ್ಯಂತರ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ. ಬೆಂಗಳೂರು: ಕರ್ನಾಟಕದಲ್ಲಿ ಪ್ರವಾಹದಿಂದಾಗಿರುವ ನಷ್ಟದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು 2000 ಕೋಟಿ ರೂ.ಗಳ ಮಧ್ಯಂತರ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ. ರಾಜ್ಯದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಕೊಡಗು ಸೇರಿದಂತೆ ಇತರ ಮಲೆನಾಡು ಭಾಗಗಳಲ್ಲಿ ಉಂಟಾದ …
Read More »
Shaikh BIG TV NEWS, Hubballi
August 25, 2018
ದೇಶ-ವಿದೇಶ, ಸುದ್ದಿ
ಸಾಂದರ್ಭಿಕ ಚಿತ್ರ ಮತದಾರನ ಗುರುತಿನ ಚೀಟಿಯಲ್ಲಿ ಅವರ ಹೆಸರಿನ ಮುಂದೆ ಅವರ ಭಾವಚಿತ್ರಕ್ಕೆ ಬದಲಾಗಿ ಸನ್ನಿಲಿಯೋನ್, ಆನೆ, ಕುದುರೆ, ಜಿಂಕೆಗಳ ಫೋಟೊ ಮುದ್ರಣವಾಗಿದೆ. ಲಖನೌ: ಮತದಾರರ ಗುರುತಿನ ಚಿಟಿ ಎಂದಮೇಲೆ ಅದರಲ್ಲಿ ಮತದಾರನ ಭಾವಚಿತ್ರ ಇರೋದು ಸಹಜ. ಆದರೆ ಇಲ್ಲೊಂದು ಪ್ರದೇಶದಲ್ಲಿ ಮತದಾರನ ಗುರುತಿನ ಚೀಟಿಯಲ್ಲಿ ಅವರ ಹೆಸರಿನ ಮುಂದೆ ಅವರ ಭಾವಚಿತ್ರಕ್ಕೆ ಬದಲಾಗಿ ಸನ್ನಿಲಿಯೋನ್, ಆನೆ, ಕುದುರೆ, ಜಿಂಕೆಗಳ ಫೋಟೊ ಮುದ್ರಣವಾಗಿದೆ. ಪ್ರಾಣಿಗಳ ಫೋಟೋ ಇದ್ದರೆ ಹೋಗ್ಲಿ ಬಿಡಿ …
Read More »
Shaikh BIG TV NEWS, Hubballi
August 24, 2018
ಕರ್ನಾಟಕ, ಸುದ್ದಿ
ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ. ಧಾರವಾಡ ತಾಲೂಕಿನ ದಾಸನಕೊಪ್ಪ ಗ್ರಾಮದ ಬಳಿ ಘಟನೆ. ಬೈಕನಲ್ಲಿದ್ದ ಮೂವರ ಸ್ಥಿತಿ ಗಂಬೀರ, ಕಾರ ಚಾಲಕನಿಗೂ ಸಣ್ಣಪುಟ್ಟ ಗಾಯ. ಸ್ಥಳಕ್ಕೆ ಧಾರವಾಡ ಗ್ರಾಮೀಣ ಪೋಲಿಸರು ಭೇಟಿ ಪರಿಶಿಲನೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ರವಾನೆ. ಧಾರವಾಡ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ
Read More »
Shaikh BIG TV NEWS, Hubballi
August 24, 2018
ದೇಶ-ವಿದೇಶ, ಸುದ್ದಿ
ಕೋಲ್ಕತ್ತಾ: ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆ ವಿಚಾರವಾಗಿ ಸುಪ್ರಿಂಕೋರ್ಟ್ ನೀಡಿರುವ ತೀರ್ಪನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜೀ ಸ್ವಾಗತಿಸಿದ್ದಾರೆ. ಸುಪ್ರಿಂ ಕೋರ್ಟ್ ನೀಡಿರುವ ತೀರ್ಪನ್ನು ಮಮತಾ ಪ್ರಜಾಪ್ರಭುತ್ವ ಮತ್ತು ಜನತೆಯ ವಿಜಯ” ಎಂದು ಬಣ್ಣಿಸಿದ್ದಾರೆ ಅಲ್ಲದೆ ಪಂಚಾಯತ ಚುನಾವಣೆಯ ವಿಚಾರವಾಗಿ ಕಾಂಗ್ರೆಸ್, ಸಿಪಿಎಂ,ಮತ್ತು ಬಿಜೆಪಿ ಪಕ್ಷಗಳ ಟೀಕೆಯನ್ನು ಸುಳ್ಳು ಪ್ರಚಾರ ಎಂದು ಅವರು ಕಿಡಿಕಾರಿದ್ದಾರೆ. ಅಲ್ಲದೆ ಇದು ರಾಜಕೀಯ ಲಾಭ ಪಡೆಯಲು ಮೂರು ಪಕ್ಷಗಳು ಯೋಜಿಸಿದ ಕ್ರಮ ಎಂದು ವ್ಯಾಖ್ಯಾನಿಸಿದ್ದಾರೆ. ಇದು …
Read More »
Shaikh BIG TV NEWS, Hubballi
August 24, 2018
ದೇಶ-ವಿದೇಶ, ಸುದ್ದಿ
ಪಕ್ಷದ ಕಾರ್ಯಕರ್ತರಾದ ಸುದೀಪ್ಟೋ ಘೋಷ್ ಮತ್ತು ಬಿಮಲ್ ಚೌಧರಿ ಎಂಬುವರು ಗುರುವಾರ ನಡೆದ ಸ್ಫೋಟದಲ್ಲಿ ಮೃತಪಟ್ಟಿದ್ದಾರೆ. ಕೋಲ್ಕತ್ತ: ಪಶ್ಚಿಮ ಬಂಗಾಳದ ಪಶ್ಚಿಮ ಮಿಡ್ನಾಪುರ ಜಿಲ್ಲೆಯ ತೃಣಮೂಲ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಇಬ್ಬರು ಮೃತಪಟ್ಟಿದ್ದು, ಆರು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಪಶ್ಚಿಮ ಮಿಡ್ನಾಪುರ ಜಿಲ್ಲೆಯ ನಾರಾಯಣಗರ್ ಪ್ರದೇಶದಲ್ಲಿರುವ ತೃಣಮೂಲ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಗುರುವಾರ ಬೆಳಗ್ಗೆ ಸ್ಫೋಟ ಸಂಭವಿಸಿದ ಸಂದರ್ಭದಲ್ಲಿ ಪಕ್ಷದ 12 ಕಾರ್ಯಕರ್ತರು …
Read More »
Shaikh BIG TV NEWS, Hubballi
August 24, 2018
ದೇಶ-ವಿದೇಶ, ಸುದ್ದಿ
ನವದೆಹಲಿ: ದೆಹಲಿ ಹೈಕೋರ್ಟ್ ಶುಕ್ರವಾರದಂದು ಹರ್ಯಾಣದ ಮಿರ್ಚಪುರ್ ದಲಿತರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 20 ಜನರನ್ನು ತಪ್ಪಿತಸ್ಥರೆಂದು ಘೋಷಿಸಿದೆ. ಈ ಹಿಂದೆ 2010 ರಲ್ಲಿ ನಡೆದ ಮಿರ್ಚಪುರನಲ್ಲಿ 70 ವರ್ಷದ ದಲಿತ ವ್ಯಕ್ತಿ ಮತ್ತು 17 ವರ್ಷದ ಅವನ ಮಗಳನ್ನು 2010 ಜೀವಂತವಾಗಿ ಸುಡಲಾಗಿತ್ತು.ಈ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 20 ಜನರು ಆರೋಪಿಗಳ ಮೇಲಿರುವ ಕೇಸ್ ನ್ನು ಸ್ಥಳೀಯ ನ್ಯಾಯಾಲಯ ವಜಾಗೊಳಿಸಿತ್ತು.ಅದರಲ್ಲಿ 97 ಜನರಲ್ಲಿ ಒಟ್ಟು 82 ಜನರ …
Read More »
Shaikh BIG TV NEWS, Hubballi
August 24, 2018
ದೇಶ-ವಿದೇಶ, ಸುದ್ದಿ
ಅನಾರೋಗ್ಯದ ಹಿನ್ನೆಲೆಯಲ್ಲಿ ಕೋರ್ಟ್ ಪೆರೋಲ್ ಮೇಲೆ ಬಿಡುಗಡೆ ಮಾಡಲು ಅನುಮತಿ ನೀಡಿತ್ತು. ಪಾಟ್ನಾ: ರಾಷ್ಟ್ರೀಯ ಜನತಾ ದಳ(ಆರ್ಜೆಡಿ) ಮುಖ್ಯಸ್ಥ ಹಾಗೂ ಬಿಹಾರ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರು ಅನಾರೋಗ್ಯದ ಆಧಾರದ ಮೇಲೆ ಪೆರೋಲ್ ಅವಧಿಯನ್ನು 3 ತಿಂಗಳವರೆಗೆ ವಿಸ್ತರಿಸುವಂತೆ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿರುವ ಜಾರ್ಖಂಡ್ ಹೈಕೋರ್ಟ್ ಆಗಸ್ಟ್ 30ರೊಳಗೆ ಶರಣಾಗುವಂತೆ ಶುಕ್ರವಾರ ಆದೇಶ ನೀಡಿದೆ. ಮುಂಬೈನ ಏಶಿಯನ್ ಹಾರ್ಟ್ ಇನ್ಸ್ಟಿಟ್ಯೂಟ್’ನಲ್ಲಿ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿರುವ ಲಾಲೂ ಅವರು …
Read More »
Shaikh BIG TV NEWS, Hubballi
August 24, 2018
ದೇಶ-ವಿದೇಶ, ಸುದ್ದಿ
ನವದೆಹಲಿ .ಕಾಂಗ್ರೆಸ್ ಪಕ್ಷವು ಒಂದುಕಡೆ ಭಾರತದ ಜನರನ್ನು ಒಗ್ಗೂಡಿಸುತ್ತಿದ್ದರೆ ಇನ್ನೊಂದೆಡೆಗೆ ಬಿಜೆಪಿ, ಆರ್.ಎಸ್.ಎಸ್ ಸಂಘಟನೆಯು ದೇಶವನ್ನು ವಿಭಜಿಸಿ ದ್ವೇಷವನ್ನು ಹರಡುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದರು. ಬರ್ಲಿನ್ ನಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ “ಕಾಂಗ್ರೆಸ್ ನ ವಿಚಾರವಾದ ವಿವಿಧತೆಯಲ್ಲಿ ಏಕತೆಯು ಗುರುನಾನಕರಿಂದ ಉತ್ತೇಜನ ಪಡೆದಿದೆ ಭಾಷಣದುದ್ದಕ್ಕೂ ಬಿಜೆಪಿ ವಿರುದ್ಧ ಕಿಡಿ ಕಾರಿದ ಅವರು ಉದ್ದುದ್ದ ಭಾಷಣಗಳನ್ನು ಮಾಡುವುದರ ಮೂಲಕ ದ್ವೇಷವನ್ನು ಪ್ರಸರಿಸಲಾಗುತ್ತಿದೆ.ರೈತರು ಆತ್ಮಹತ್ಯೆಯನ್ನು ಮಾಡಿಕೊಳ್ಳುತ್ತಿದ್ದಾರೆ ಯುವಕರಿಗೆ …
Read More »
Shaikh BIG TV NEWS, Hubballi
August 24, 2018
ದೇಶ-ವಿದೇಶ, ಸುದ್ದಿ
ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಕೊಡಗಿಗೆ 1 ಕೋಟಿ ರೂಪಾಯಿ ನೆರವು ನೀಡುವುದಾಗಿ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಕೊಡಗು: ಪ್ರವಾಹಪೀಡಿತ ಪ್ರದೇಶಗಳ ಪುನರ್ವಸತಿ ಮತ್ತು ಪರಿಹಾರ ಕಾರ್ಯಕ್ಕಾಗಿ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಕೊಡಗಿಗೆ 1 ಕೋಟಿ ರೂಪಾಯಿ ನೆರವು ನೀಡುವುದಾಗಿ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಜಿಲ್ಲೆಯಲ್ಲಿ ಉಂಟಾದ ಪ್ರವಾಹದಿಂದ ಭಾರೀ ನಷ್ಟವಾಗಿದೂ, ಈ ಬಗ್ಗೆ ಇಂದು ಕೊಡಗಿಗೆ ಭೇಟಿ ನೀಡಿ …
Read More »
Shaikh BIG TV NEWS, Hubballi
August 24, 2018
ಕರ್ನಾಟಕ, ಸುದ್ದಿ
ರಾಜಕೀಯ ಎಂಬುದು ಕೆರೆಯ ನೀರಲ್ಲ. ಮೇಲಿದ್ದವರು ಕೆಳಗೆ ಬರಲೇಬೇಕು. ಕೆಳಗಿದ್ದವರು ಮೇಲೆ ಏರಲೇಬೇಕು. ನಾನು ಮತ್ತೆ ಮುಖ್ಯಮಂತ್ರಿಯಾಗುತ್ತೇನೆ- ಸಿದ್ದರಾಮಯ್ಯ ಹಾಸನ: ನಾನು ಮತ್ತೆ ಸಿಎಂ ಆಗ್ತೀನಿ. ಇನ್ನೊಮ್ಮೆ ಅಧಿಕಾರಕ್ಕೆ ಬರುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹಾಸನದ ಹೊಳೆನರಸೀಪುರದ ಹಾಡ್ಯ ಗ್ರಾಮಕ್ಕೆ ಭೇಟಿ ನೀಡಿದ್ದ ಸಿದ್ದರಾಮಯ್ಯ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ನಾನು ಮತ್ತೆ ಮುಖ್ಯಮಂತ್ರಿಯಾದಾಗ ಗುತ್ತಿಗೆ ನೀಡುವಲ್ಲೂ ಮೀಸಲಾತಿ ತರುತ್ತೇನೆ. ಎಲ್ಲವನ್ನೂ ಈಗಲೇ ಹೇಳಿದರೆ ಕೆಲವರ ಕಣ್ಣು ಕೆಂಪಗಾಗುತ್ತೆ …
Read More »