Breaking News

ಮತ್ತೆ ಸಿಎಂ ಆಗ್ತೀನಿ’- ಮಾಜಿ ಸಿಎಂ ಸಿದ್ದರಾಮಯ್ಯ

ರಾಜಕೀಯ ಎಂಬುದು ಕೆರೆಯ ನೀರಲ್ಲ. ಮೇಲಿದ್ದವರು ಕೆಳಗೆ ಬರಲೇಬೇಕು. ಕೆಳಗಿದ್ದವರು ಮೇಲೆ ಏರಲೇಬೇಕು. ನಾನು ಮತ್ತೆ ಮುಖ್ಯಮಂತ್ರಿಯಾಗುತ್ತೇನೆ- ಸಿದ್ದರಾಮಯ್ಯ
ಹಾಸನ: ನಾನು ಮತ್ತೆ ಸಿಎಂ ಆಗ್ತೀನಿ. ಇನ್ನೊಮ್ಮೆ ಅಧಿಕಾರಕ್ಕೆ ಬರುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹಾಸನದ ಹೊಳೆನರಸೀಪುರದ ಹಾಡ್ಯ ಗ್ರಾಮಕ್ಕೆ ಭೇಟಿ ನೀಡಿದ್ದ ಸಿದ್ದರಾಮಯ್ಯ ಸುದ್ದಿಗಾರರೊಂದಿಗೆ ಮಾತನಾಡುತ್ತಾ,  ನಾನು ಮತ್ತೆ ಮುಖ್ಯಮಂತ್ರಿಯಾದಾಗ ಗುತ್ತಿಗೆ ನೀಡುವಲ್ಲೂ ಮೀಸಲಾತಿ ತರುತ್ತೇನೆ. ಎಲ್ಲವನ್ನೂ ಈಗಲೇ ಹೇಳಿದರೆ ಕೆಲವರ ಕಣ್ಣು ಕೆಂಪಗಾಗುತ್ತೆ ಎಂದರು.
ರಾಜಕೀಯ ಎನ್ನುವುದು ಇಂದಿನ ದಿನಗಳಲ್ಲಿ ಹಣ, ಜಾತಿಯ ಆಧಾರದ ಮೇಲೆ ನಿಂತಿದೆ, ಇದು ರಾಜಕೀಯ ಕ್ಷೇತ್ರದಲ್ಲಿ ಒಳ್ಳೆಯ ಬೆಳವಣಿಗೆ ಎನಿಸಿಕೊಳ್ಳುವುದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಒಂದು ಹುದ್ದೆಯನ್ನು ಅಲಂಕರಿಸಿದ ಮೇಲೆ ಎಲ್ಲಾ ಜಾತಿ, ಧರ್ಮದ ಪರವಾಗಿಯೂ ಕೆಲಸ ಮಾಡಬೇಕಾಗುತ್ತದೆ. ಯಾವುದೋ ಒಂದು ಜಾತಿಗೆ ಸೀಮಿತವಾಗಿ ಕೆಲಸ ಮಾಡಿದರೆ ಜನನಾಯಕ ಎನಿಸಿಕೊಳ್ಳಲು ಸಾಧ್ಯವಿಲ್ಲ. ನಾನು 5 ವರ್ಷದಲ್ಲಿ ಎಲ್ಲಾ ಜಾತಿಗಳಿಗೂ ಸಹಾಯ ಮಾಡಿದ್ದೇನೆ. ನಾನು ಸಿಎಂ ಆಗಬಾರದೆಂದು ವಿರೋಧಿಗಳಿಂದ ಒಳಗೊಳಗೆ ಸಾಕಷ್ಟು ಪಿತೂರಿ ನಡೆಯುತ್ತಿರುತ್ತದೆ. ಆದರೆ ಜನರು ಉತ್ತಮ ಕೆಲಸ ಮಾಡುವವರನ್ನು ಗೆಲ್ಲಿಸಬೇಕು. ರಾಜಕಾರಣಿಗಳಿಗೆ ಜನರೇ ದೇವರು, ನೀವು ಕೊಟ್ಟರೆ ವರ, ಇಲ್ಲವಾದರೆ ನಾವು ಮನೆಗೆ ಹೋಗಬೇಕು ಎಂದರು.
ಗ್ರಾಮ ಪಂಚಾಯಿತಿಲ್ಲಿ ಮೀಸಲಾತಿ ಮಾಡಿದವನು ನಾನು. ಆದರೆ ಬೇರೆಯವರು ನಾನು ಮಾಡ್ದೆ ಅಂತ ಹೇಳ್ಕೊಂಡು ಒಡಾಡ್ತಾರೆ ಎಂದು ಸಿಎಂ ಕುಮಾರಸ್ವಾಮಿ ಹೆಸರು ಹೇಳದೆಯೇ ಪರೋಕ್ಷವಾಗಿ ಟಾಂಗ್ ನೀಡಿದ ಸಿದ್ದರಾಮಯ್ಯ, ರಾಜಕೀಯ ಎಂಬುದು ಕೆರೆಯ ನೀರಲ್ಲ. ಮೇಲಿದ್ದವರು ಕೆಳಗೆ ಬರಲೇಬೇಕು, ಕೆಳಗಿದ್ದವರು ಮೇಲೆ ಏರಲೇಬೇಕು ಎಂದು ಹೇಳಿದರು.
ಸಿದ್ದರಾಮಯ್ಯ ಹಾಗೆ ಸುಮ್ಮನೇ ಏನನ್ನೂ ಹೇಳುವವರಲ್ಲ. ಅವರ ಪ್ರತಿ ಹೇಳಿಕೆಗೂ ಒಂದು ತೂಕವಿರುತ್ತದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
Share News

About Shaikh BIG TV NEWS, Hubballi

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *