ಹುಬ್ಬಳ್ಳಿ: ಕ್ಷುಲ್ಲಕ ವಿಚಾರಕ್ಕೆ ಯುವಕನೊಬ್ಬನಿಗೆ ಚಾಕು ಇರಿತದ ಘಟನೆ ಆನಂದ ನಗರದ ಮದನಿ ಮಸೀದಿ ಬಳಿ ನಡೆದಿದೆ.
ವಿನಾಯಕ ಚಿತ್ರಗಾರ (21)ಎಂಬಾತನಿಗೆ ಚಾಕುವಿನಿಂದ ಇರಿಯಲಾಗಿದೆ. ಸಮೀರ, ಇರ್ಫಾನ್, ದೀಪಕ್, ಬಬ್ಬು ಮತ್ತಿತರರು ಹಲ್ಲೆ ಮಾಡಿ ಚಾಕುವಿನಿಂದ ಇರಿದಿದ್ದು, ಗಂಭೀರಾವ್‌ಇ ಗಾಯಗೊಂಡ ವಿನಾಯಕನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಎಂಟು ದಿನಗಳ ಹಿಂದೆ ವಿನಾಯಕ ಹಾಗೂ ಸಮೀರ್ ಕುಟುಂಬದ ಮಕ್ಕಳ ನಡುವೆ ಜಗಳವಾಗಿತ್ತು. ಇದೇ ಕ್ಷುಲ್ಲಕ ಕಾರಣಕ್ಕಾಗಿ ಆಕ್ರೋಶ ಗೊಂಡ ಸಮೀರ್ ವಿನಾಯಕ ನಿಗೆ ಚಾಕು ಇರಿದಿದ್ದಾನೆ. ಚಾಕುವಿನಿಜದ ಇರಿದ ಸಮೀರ್ ನನ್ನು ಪೊಲೀಸರು ಬಂಧಿಸಿದ್ದು, ಉಳಿದವರಿಗಾಗಿ ಹಳೆ ಹುಬ್ಬಳ್ಳಿ ಠಾಣೆಯಲ್ಲಿ ಪೊಲೀಸರು ಬಲೆ ಬೀಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

