Breaking News

ಸುದ್ದಿ

ಕೊಡಗಿನಲ್ಲಿ ಪ್ರವಾಹ; ಸಂತ್ರಸ್ತರ ರಕ್ಷಣೆಗೆ ಸಹಾಯವಾಣಿ ಆರಂಭ

ಪ್ರವಾಹದಲ್ಲಿ ಸಿಲುಕಿರುವವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ರಕ್ಷಣಾ ಸಿಬ್ಬಂದಿ ಹರಸಾಹಸ ಮಾಡುತ್ತಿದ್ದಾರೆ. ಬೆಂಗಳೂರು: ರಾಜ್ಯದ ಕರಾವಳಿ ಭಾಗದಲ್ಲಿ ಮುಂದುವರೆದ ಭಾರೀ ಮಳೆಯಿಂದಾಗಿ ಎಲ್ಲೆಡೆ ಪ್ರವಾಹ ಉಂಟಾಗಿದ್ದು, ಅತಿ ಹೆಚ್ಚು ಪ್ರವಾಹ ಪೀಡಿತವಾಗಿರುವ ಕೊಡಗಿನಲ್ಲಿ ಮೃತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಮತ್ತೊಂದೆಡೆ ಪ್ರವಾಹದಲ್ಲಿ ಸಿಲುಕಿರುವವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ರಕ್ಷಣಾ ಸಿಬ್ಬಂದಿ ಹರಸಾಹಸ ಮಾಡುತ್ತಿದ್ದಾರೆ. ಕೊಡಗಿನ ನಾಪೋಕ್ಲು, ಅಯ್ಯಂಗೇರಿ, ಭಾಗಮಂಡಲ, ಚೆಟ್ಟಿಮಾನಿ ವ್ಯಾಪ್ತಿಯ ಗ್ರಾಮಗಳಲ್ಲಿ ಭಾರಿ ಮಳೆಯಾಗುತ್ತಿದೆ. ಗುರುವಾರ …

Read More »

ಪೋಖ್ರಾನ್ ಅಣ್ವಸ್ತ್ರ ಪರೀಕ್ಷೆ ಮೂಲಕ ಇಡೀ ವಿಶ್ವದ ಗಮನ ಸೆಳೆದಿದ್ದ ವಾಜಪೇ

ನವದೆಹಲಿ: ಭಾರತವು ಮೇ 11, 1998 ರಂದು ರಾಜಸ್ಥಾನದ ಪೋಖ್ರಾನ್ನಲ್ಲಿ ಪರಮಾಣು ಪರೀಕ್ಷೆಯನ್ನು ನಡೆಸುವ ಮೂಲಕ ಇಡೀ ಪ್ರಪಂಚವನ್ನು ಆಶ್ಚರ್ಯಪಡಿಸಿತು. ಭಾರತವು ಈ ಪರಮಾಣು ಪರೀಕ್ಷೆ ಬಗ್ಗೆ ತುಂಬಾ ಗೌಪ್ಯತೆಯನ್ನು ಕಾಪಾಡಿಕೊಂಡಿತ್ತು. ಜಗತ್ತು ಭಾರತ ಇಂತಹದೊಂದು ಪರಮಾಣು ಪರೀಕ್ಷೆ ಮಾಡಲಿದೆ ಎಂದು ಊಹಿಸಿಯೂ ಇರಲಿಲ್ಲ.  ಅಟಲ್ ಬಿಹಾರಿ ವಾಜಪೇಯಿ ಸರ್ಕಾರದ ಈ ಹೆಜ್ಜೆ ಇಡೀ ವಿಶ್ವವನ್ನೇ ಆಶ್ಚರ್ಯಚಕಿತಗೊಳಿಸಿತ್ತು. ಪ್ರಧಾನ ಮಂತ್ರಿ ವಾಜಪೇಯಿ ಅವರ ವೈಜ್ಞಾನಿಕ ಸಲಹೆಗಾರ ಮತ್ತು ಡಿ.ಆರ್.ಡಿ.ಓ ಮುಖ್ಯಸ್ಥ …

Read More »

ದೆಹಲಿ ಮೆಟ್ರೋ: ಮುಖ್ಯ ಅಥಿತಿಯಾದರೂ ಸರತಿ ಸಾಲಿನಲ್ಲಿ ನಿಂತು ಟೋಕನ್ ಖರೀದಿಸಿದ ಅಪರೂಪದ ನಾಯಕ!

2002 ರ ಡಿಸೆಂಬರ್ 24 ರಂದು ದೆಹಲಿ ಮೆಟ್ರೊ ರೈಲ್ವೆ ಕಾರ್ಪೋರೇಶನ್(ಡಿಎಂಆರ್ಸಿ)  ದೆಹಲಿಯ ದೊಡ್ಡ ಕನಸಿನ ಮೊದಲ ಕಾರಿಡಾರ್ ಅನ್ನು ವಾಜಪೇಯಿ ಉದ್ಘಾಟಿಸಿದರು. ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಗುರುವಾರ ಗುರುವಾರ ಸಂಜೆ 05:05 ಗಂಟೆಗೆ ಅವರು ದೆಹಲಿಯಲ್ಲಿ ಎಐಐಎಂಎಸ್ ನಲ್ಲಿ ಕೊನೆಯುಸಿರೆಳೆದರು. ಅಟಲ್ ಇನ್ನು ನೆನಪು ಮಾತ್ರ. ದೇಶಕ್ಕೆ ಅವರು ನೀಡಿದ ಕೊಡುಗೆ ಅಪಾರ. ದೆಹಲಿ ಮೆಟ್ರೋ ಕೂಡ ವಾಜಪೇಯಿ ಅವರ ಕೊಡುಗೆ.  2002 …

Read More »

ಸಾಬೀತಾಯ್ತು, ಅಟಲ್ ಜೀ ಬಗೆಗಿನ ಮಹಾಕವಿ ನೀರಜ್ ಭವಿಷ್ಯವಾಣಿ!

ನೀರಜ್ ಅವರನ್ನು ಒಬ್ಬ ಮಹಾನ್ ಕವಿ ಎಂಬುದರ ಜೊತೆಗೆ ಜ್ಯೋತಿಷ್ಯ ಶಾಸ್ತ್ರದಲ್ಲಿಯೂ ಅವರನ್ನು ಪರಿಣಿತರು ಎಂದು ಪರಿಗಣಿಸಲಾಗುತ್ತದೆ. ನವದೆಹಲಿ: ಮಹಾಕಾವಿ ಗೋಪಾಲ್ ದಾಸ್ ನೀರಜ್ ಮತ್ತು ಅಟಲ್ ಬಿಹಾರಿ ವಾಜಪೇಯಿ ಕಾನ್ಪುರದ ಡಿ.ಎ.ವಿ ಕಾಲೇಜಿನಲ್ಲಿ ಅಧ್ಯಯನ ಮಾಡಿದವರು. ಆ ಸಮಯದಲ್ಲಿ ಪರಿಚಯವಾಗಿದ್ದ ಅವರು ಆಗಾಗ್ಗೆ ಭೇಟಿ ಮಾಡುತ್ತಿದ್ದರು. ನೀರಜ್ ಅವರನ್ನು ಒಬ್ಬ ಮಹಾನ್ ಕವಿ ಎಂಬುದರ ಜೊತೆಗೆ ಜ್ಯೋತಿಷ್ಯ ಶಾಸ್ತ್ರದಲ್ಲಿಯೂ ಅವರನ್ನು ಪರಿಣಿತರು ಎಂದು ಪರಿಗಣಿಸಲಾಗುತ್ತದೆ. ಆ ಇಬ್ಬರು ಜನರ …

Read More »

ನಾಳೆ ಅಟಲ್ ಅಂತ್ಯಸಂಸ್ಕಾರ; ದೇಶಾದ್ಯಂತ 7 ದಿನಗಳ ಶೋಕಾಚರಣೆ…

ಅಟಲ್ ಬಿಹಾರಿ ವಾಜಪೇಯಿ ಅವರ ಅಂತ್ಯ ಸಂಸ್ಕಾರ ಆಗಸ್ಟ್ 17ರ ಸಂಜೆ 5 ಗಂಟೆಗೆ ರಾಷ್ಟ್ರೀಯ ಸ್ಮೃತಿ ಸ್ಥಳದಲ್ಲಿ ನಡೆಯಲಿದೆ.  ನವದೆಹಲಿ: ಗುರುವಾರ ಸಂಜೆ ನಿಧನರಾದ ಮಾಜಿ ಪ್ರಧಾನಿ ಹಾಗೂ ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಅವರ ಅಂತ್ಯ ಸಂಸ್ಕಾರ ಆಗಸ್ಟ್ 17ರ ಸಂಜೆ 5 ಗಂಟೆಗೆ ರಾಷ್ಟ್ರೀಯ ಸ್ಮೃತಿ ಸ್ಥಳದಲ್ಲಿ ನಡೆಯಲಿದೆ. ವಾಜಪೇಯಿ ಅವರ ನಿಧನಕ್ಕೆ ಕೇಂದ್ರ ಸರ್ಕಾರ ದೇಶಾದ್ಯಂತ 7 ದಿನಗಳ ಶೋಕಾಚರಣೆ ಘೋಷಿಸಿದೆ.  ದೇಶಕಂಡ ಅತ್ಯುತ್ತಮ …

Read More »

ಅಜಾತಶತ್ರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅಸ್ತಂಗತ…

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಗುರುವಾರ ಮಧ್ಯಾಹ್ನ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.   ನವದೆಹಲಿ: ದೇಶಕಂಡ ಅತ್ಯುತ್ತಮ ನಾಯಕ, ಅಜಾತ ಶತ್ರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಗುರುವಾರ ಸಂಜೆ 5.05ಕ್ಕೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಹೃದಯ, ಕಿಡ್ನಿ ಮತ್ತು ಮೂತ್ರನಾಳದ ಸೋಂಕಿನಿಂದ ಬಳಲುತ್ತಿದ್ದ ವಾಜಪೇಯಿ ಅವರನ್ನು ಕ ಜೂ.11ರಂದು ಏಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಕಳೆದ 36 ಗಂಟೆಗಳಿಂದ ವಾಜಪೇಯಿ ಆರೋಗ್ಯ …

Read More »

ನಾನು ರಾಜೀವ್ ಗಾಂಧಿಯಿಂದ ಬದುಕಿದ್ದೇನೆ ಎಂದು ಅಟಲ್ ಬಿಹಾರಿ ವಾಜಪೇಯಿ ಹೇಳಿದಾಗ….!

ಸ್ವಾತಂತ್ರ್ಯದ ನಂತರ ದೀರ್ಘಾವಧಿ ಆಳ್ವಿಕೆ ನಡೆಸಿದ್ದ ನೆಹರು-ಗಾಂಧಿ ಕುಟುಂಬದೊಂದಿಗೆ ಅಟಲ್ ಬಿಹಾರಿ ವಾಜಪೇಯಿ ಅವರ ಸಂಬಂಧ. ನವದೆಹಲಿ: ಭಾರತೀಯ ರಾಜಕೀಯದಲ್ಲಿ ಉತ್ತುಂಗದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ 1957ರಿಂದಲೂ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಆದರೆ ಅವರು ಎಂದಿಗೂ ಸೋಲಲಿಲ್ಲ. ಅವರು ರಾಜಕೀಯದಲ್ಲಿ ಮಾನವ ಮೌಲ್ಯಗಳಿಗೆ ಒಲವು ತೋರಿದ್ದರು. ಸ್ವಾತಂತ್ರ್ಯದ ನಂತರ ದೀರ್ಘಾವಧಿ ಆಳ್ವಿಕೆ ನಡೆಸಿದ್ದ ನೆಹರು-ಗಾಂಧಿ ಕುಟುಂಬದೊಂದಿಗೆ ಅಟಲ್ ಬಿಹಾರಿ ವಾಜಪೇಯಿ ಅವರ ಸಂಬಂಧ ಸಹಜವಾಗಿತ್ತು.  ನೆಹರು ಕುಟುಂಬದ ಮೂರು ಪೀಳಿಗೆಗಳೊಂದಿಗೆ ಅಟಲ್ …

Read More »

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸ್ಥಿತಿ ಗಂಭೀರ..

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಸದ್ಯ ಅವರಿಗೆ ಆಮ್ಲಜನಕದ ಬೆಂಬಲ ನೀಡಲಾಗಿದೆ ಎಂದು ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಏಮ್ಸ್) ಬುಧವಾರ ಸಂಜೆ ಬಿಡುಗಡೆಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. 93 ವರ್ಷ ವಯಸ್ಸಿನ  ಅಜಾತಶತ್ರು ವಾಜಪೇಯಿ ಅವರು ಮೂತ್ರಪಿಂಡದ ಸೋಂಕು, ಮಧುಮೇಹ, ಎದೆ ನೋವಿನಿಂದ ಬಳಲುತ್ತಿದ್ದಾರೆ.  ಬುಧವಾರ ರಾತ್ರಿ 07:15ಕ್ಕೆ ಏಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ್ದ …

Read More »

ಮಂಡ್ಯ ಜಿಲ್ಲೆಯಲ್ಲಿ ಪ್ರವಾಹ ಭೀತಿ; ರಂಗನತಿಟ್ಟು, ನಿಮಿಷಾಂಬ ದೇವಾಲಯ ಜಲಾವೃತ!

ಪ್ರಸಿದ್ಧ ಪ್ರವಾಸಿ ತಾಣವಾದ ರಂಗನತಿಟ್ಟೂ ಸಹ ಸಂಪೂರ್ಣ ಜಲಾವೃತವಾಗಿದ್ದು, ನೆಲಮಟ್ಟದಿಂದ 4 ಅಡಿ ಎತ್ತರದವರೆಗೆ ನೀರು ಆವೃತವಾಗಿದೆ.  ಮಂಡ್ಯ ಕೆ.ಆರ್.ಎಸ್. ಜಲಾಶಯದಿಂದ ಭಾರೀ ಪ್ರಮಾಣದ ನೀರು ಹೊರಬಿಟ್ಟ ಹಿನ್ನೆಲೆಯಲ್ಲಿ ಕಾವೇರಿ ನದಿ ಅಪಾಯ ಪ್ರಮಾಣವನ್ನೂ ಮೀರಿ ಹರಿಯುತ್ತಿದ್ದು, ಜಿಲ್ಲೆಯಾದ್ಯಂತ ಪ್ರವಾಹ ಭೀತಿ ಎದುರಾಗಿದೆ.  ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಬಳಿಯಿರುವ ನಿಮಿಷಾಂಬ ದೇವಾಲಯದ ಸನ್ನಿಧಿವರೆಗೂ ಕಾವೇರಿ ನೀರಿನ ಪ್ರವಾಹ ಉಂಟಾಗಿದೆ. ದೇವಾಲಯದ ಪ್ರಾಂಗಣ ಸಂಪೂರ್ಣ ಜಲಾವೃತವಾಗಿದ್ದು, ಸಾಯಿಮಂದಿರ ಸೇರಿ ಸಮೀಪದ ಬಹುತೇಕ …

Read More »

ಸ್ವಾತಂತ್ರ್ಯೋತ್ಸವ: ರಾಜ್ಯದ 18 ಪೋಲಿಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ

ಎಸ್ಐಟಿ ಸಹಾಯಕ ತನಿಖಾಧಿಕಾರಿ ಡಿವೈಎಸ್ಪಿ ಟಿ.ರಂಗಪ್ಪ ಸೇರಿದಂತೆ 18 ಮಂದಿಗೆ ರಾಷ್ಟ್ರಪತಿ ಪದಕ ಲಭಿಸಿದೆ.  ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ಭೇದಿಸಿದ ಎಸ್ಐಟಿ ಸಹಾಯಕ ತನಿಖಾಧಿಕಾರಿ ಡಿವೈಎಸ್ಪಿ ಟಿ.ರಂಗಪ್ಪ ಸೇರಿದಂತೆ 18 ಮಂದಿಗೆ ಸ್ವಾತಂತ್ರೋತ್ಸವ ನಿಮಿತ್ತ ಪೋಲಿಸ್ ಇಲಾಖೆಯಲ್ಲಿ ಗಣನೀಯ ಸೇವೆ ಸಲ್ಲಿಸಿದ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಶ್ಲಾಘನೀಯ ಸೇವಾ ಪುರಸ್ಕಾರ ಲಭಿಸಿದೆ. ಕೆಎಸ್‌ಆರ್‌ಪಿ ತುಮಕೂರು ಉಪಕಮಾಂಡೆಂಟ್‌ ಟಿ.ಸುಂದರರಾಜು, ಮೈಕೋ ಲೇಔಟ್‌ ಎಸಿಪಿ ಎಂ.ಎನ್‌.ಕರಿಬಸವನಗೌಡ, ಮೈಸೂರಿನ ಎಸಿಪಿ …

Read More »