Breaking News

ಕಾಂಗ್ರೆಸ್ ವಿರುದ್ಧ ಶೆಟ್ಟರ್ ಕಿಡಿ

ಹುಬ್ಬಳ್ಳಿ:ಚುನಾವಣೆ ಬರ್ತಿದೆ ಎಂದು ಕಾಂಗ್ರೆಸ್ ರಾಜಕಾರಣ ಆರಂಭಿಸಿದೆ,ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಈ ಹಿಂದೆ ಸರಕಾರ ನಡೆಸಿದವರು ಈಗ ಮೇಕೆ ದಾಟು ವಿಚಾರ ಇಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಮ್ ಜಗದೀಶ್ ಶೆಟ್ಟರ್ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದರು.

ನಗರದಲ್ಲಿಂದು ಹದಿನೆಂಟು ವಯಸ್ಸಿನ ಮಕ್ಕಳಿಗೆ ಲಸಿಕಾ ಕಾರ್ಯಕ್ರಮದ ನಂತರ ಮಾತಾನಾಡಿ, ಮೇಕೆ ದಾಟು ವಿಚಾರದಲ್ಲಿ ಕಾನೂನು ತೊಡಕುಗಳು ಇರುವುದರಿಂದ ವಿಳಂಬವಾಗಿದೆ,ಈ ವಿಚಾರವಾಗಿ ಎಲ್ಲರೂ ಒಂದು ಕಡೆ ಕುಳಿತು ಚರ್ಚೆ ಮಾಡಬೇಕು ,ಎಲ್ಲರೂ ಸೇರಿ ಸರ್ವಸಮ್ಮತವಾದ ನಿರ್ಣಯ ಕೈಗೊಳ್ಳಬೇಕು ಅಂದಾಗ ಮಾತ್ರ ಸಮಸ್ಯೆ ಇತ್ಯರ್ಥವಾಗುತ್ತದೆ,ಅದರಲ್ಲಿಯೂ ತಮಿಳನಾಡು ವಿರುದ್ಧದ ಹೋರಾಟ ಮಾಡಿ ಜಾರಿಗೆ ತರಬೇಕು ಅಂದರೆ ಎಲ್ಲ ಪಕ್ಷಗಳ ಸಹಕಾರ ಅತ್ಯಗತ್ಯ,ಇದನ್ನು ರಾಜಕೀಕರಣ ಮಾಡಿದರೆ ಇದರ ಲಾಭವನ್ನು ಬೇರೆ ರಾಜ್ಯಗಳು ಪಡೆಯುತ್ತವೆ ,ಮೇಕೆದಾಟು ಯೋಜನೆ ಕರ್ನಾಟಕದ ಹಕ್ಕುಈ ಅಭಿಪ್ರಾಯಕ್ಕೆ ಎಲ್ಲ ಪಕ್ಷಗಳೂ ಬದ್ಧವಾಗಿವೆ ಎಂದರು.

Share News

About admin

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *