Breaking News

ಸಾಬೀತಾಯ್ತು, ಅಟಲ್ ಜೀ ಬಗೆಗಿನ ಮಹಾಕವಿ ನೀರಜ್ ಭವಿಷ್ಯವಾಣಿ!

ನೀರಜ್ ಅವರನ್ನು ಒಬ್ಬ ಮಹಾನ್ ಕವಿ ಎಂಬುದರ ಜೊತೆಗೆ ಜ್ಯೋತಿಷ್ಯ ಶಾಸ್ತ್ರದಲ್ಲಿಯೂ ಅವರನ್ನು ಪರಿಣಿತರು ಎಂದು ಪರಿಗಣಿಸಲಾಗುತ್ತದೆ.
ನವದೆಹಲಿ: ಮಹಾಕಾವಿ ಗೋಪಾಲ್ ದಾಸ್ ನೀರಜ್ ಮತ್ತು ಅಟಲ್ ಬಿಹಾರಿ ವಾಜಪೇಯಿ ಕಾನ್ಪುರದ ಡಿ.ಎ.ವಿ ಕಾಲೇಜಿನಲ್ಲಿ ಅಧ್ಯಯನ ಮಾಡಿದವರು. ಆ ಸಮಯದಲ್ಲಿ ಪರಿಚಯವಾಗಿದ್ದ ಅವರು ಆಗಾಗ್ಗೆ ಭೇಟಿ ಮಾಡುತ್ತಿದ್ದರು. ನೀರಜ್ ಅವರನ್ನು ಒಬ್ಬ ಮಹಾನ್ ಕವಿ ಎಂಬುದರ ಜೊತೆಗೆ ಜ್ಯೋತಿಷ್ಯ ಶಾಸ್ತ್ರದಲ್ಲಿಯೂ ಅವರನ್ನು ಪರಿಣಿತರು ಎಂದು ಪರಿಗಣಿಸಲಾಗುತ್ತದೆ. ಆ ಇಬ್ಬರು ಜನರ ಜಾತಕವು ತುಂಬಾ ಹೋಲುತ್ತದೆ ಎಂದು ಅಂದಾಜು ಮಾಡುವಾಗ ಮಹಾಕಾವಿ ಹೀಗೆ ಹೇಳಿದ್ದರಂತೆ. ದೈನಿಕ್ ಜಾಗರಣ್ ವರದಿಯ ಪ್ರಕಾರ, 2009ರಲ್ಲಿ ನೀರಜ್ ಭವಿಷ್ಯ ನುಡಿಯುತ್ತಾ ನನ್ನ ಮತ್ತು ವಾಜಪೇಯಿ ನಿಧನದ ನಡುವೆ ಒಂದು ತಿಂಗಳಿಗಿಂತ ಹೆಚ್ಚಿನ ಅಂತರವಿರುವುದಿಲ್ಲ ಎಂದಿದ್ದರಂತೆ. ವಾಸ್ತವವಾಗಿ, ಅವರ ಭವಿಷ್ಯವಾಣಿ ನಿಜವೆಂದು ಸಾಬೀತಾಯಿತು. ನೀರಜ್ ಜುಲೈ 19 ರಂದು ನಿಧನರಾದರು ಮತ್ತು 29 ದಿನಗಳ ನಂತರ, ಅಟಲ್ ಬಿಹಾರಿ ವಾಜಪೇಯಿ ನಿಧನರಾದರು.
ಇಬ್ಬರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಉನ್ನತ ಮಟ್ಟಕ್ಕೆ ಹೋಗುವುದಾಗಿ ಮಹಾಕವಿ ನೀರಜ್ ಜಾತಕದ ಆಧಾರದ ಮೇಲೆ ಹೇಳಿದ್ದರಂತೆ. ನೀರಾಜ್ ಅವರು ಸಾಹಿತ್ಯ ಮತ್ತು ಕಲೆ ಕ್ಷೇತ್ರದಲ್ಲಿ ಖ್ಯಾತಿ ಪಡೆದರು ಮತ್ತು ಅವರ ಹಾಡುಗಳು ಪ್ರಪಂಚದಾದ್ಯಂತ ಪ್ರಸಿದ್ಧವಾದವು. ಅಟಲ್ ಬಿಹಾರಿ ವಾಜಪೇಯಿ ರಾಜಕೀಯದ ಉತ್ತುಂಗಕ್ಕೇರಿದರು. 2009 ರ ಸಂದರ್ಶನವೊಂದರಲ್ಲಿ, ನೀರಜ್, ನಾವಿಬ್ಬರೂ ನಮ್ಮ ಜೀವನದ ಕೊನೆಯ ಹಂತದಲ್ಲಿ ಗಂಭೀರ ಕಾಯಿಲೆಗಳನ್ನು ಎದುರಿಸಬೇಕಾಗುತ್ತದೆ ಎಂದು  ಹೇಳಿದ್ದರು. ಅವರ ಆ ಮಾತು ಕೂಡಾ ಸಾಬೀತಾಗಿದೆ.
ಭಾರತ ಸರ್ಕಾರ ನೀರಜ್ ಅವರ ಹಾಡುಗಳಿಗೆ ‘ಪದ್ಮಶ್ರೀ’ ಮತ್ತು ‘ಪದ್ಮಭೂಷಣ’ ಪುರಸ್ಕಾರವನ್ನು ನೀಡಿ ಗೌರವಿಸಿದೆ. ಅವರು ಹಿಂದಿ ಚಲನಚಿತ್ರಗಳಿಗಾಗಿ ಹಲವು ಹಾಡುಗಳನ್ನು ಬರೆದಿದ್ದಾರೆ ಮತ್ತು ಅವರ ಹಾಡುಗಳನ್ನು ಇಂದಿಗೂ ಸಹ ಗುನುಗಲಾಗುತ್ತದೆ. 
ಹಿಂದಿ ವೇದಿಕೆಗಳ ಪ್ರಸಿದ್ಧ ಕವಿ ನೀರಜ್ ಅವರನ್ನು ಉತ್ತರ ಪ್ರದೇಶ ಸರ್ಕಾರದಿಂದ ಯಶ್ ಭಾರತಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
Share News

About Shaikh BIG TV NEWS, Hubballi

Check Also

ಮ್ಯಾನ್ಮರ್ ಭೂಕಂಪನದಲ್ಲಿ 1700ಕ್ಕೂ ಹೆಚ್ಚು ಮಂದಿ ದುರ್ಮರಣ.!

ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮರ್ ಮುಸ್ಲಿಮ್ ನೆಟ್ ವರ್ಕ್ ಸಮಿತಿಯ ಸದಸ್ಯ ಕುನ್ ಕೀ ಶುಕ್ರವಾರ ಸಂಭವಿಸಿದ ಭೂಕಂಪನದಿಂದ 60 ಮಸೀದಿಗಳು …

Leave a Reply

Your email address will not be published. Required fields are marked *