Breaking News

ಸುದ್ದಿ

ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿದ ಡಿ.ಕೆ.ಶಿ. ಸಂತ್ರಸ್ತರಿಗೆ ಅಗತ್ಯ ಸಾಮಾಗ್ರಿಗಳ ವಿತರಣೆ.

ಹುಬ್ಬಳ್ಳಿ:ಮಳೆಯಿಂದ ಹಾನಿಗೊಳಗಾದ ಹಳೇ ಹುಬ್ಬಳ್ಳಿ, ಗೌಸಿಯಾ ಗಲ್ಲಿ, ಆನಂದ ನಗರ, ಮುಲ್ಲಾನಗರ ಸೇರಿದಂತೆ ಇನ್ನಿತರ ಪ್ರದೇಶಗಳಿಗೆ ಭೇಟಿ ನೀಡಿದ ಮಾಜಿ ಸಚಿವ ಡಿ.ಕೆ.ಶಿವಕುಮಾರ್, ಸಂತ್ರಸ್ತರಿಗೆ ಅಗತ್ಯ ಸಾಮಗ್ರಿಗಳನ್ನ ವಿತರಿಸಿದ್ದಾರೆ.ಸರ್ಕಾರದಿಂದ ಪರಿಹಾರ ಒದಿಸುವುದಾಗಿ ಭರವಸೆ ನೀಡಿದರು. ಸಂತ್ರಸ್ತರ ಸಮಸ್ಯೆ ಆಲಿಸಿ, ಅಕ್ಕಿ, ಎಣ್ಣೆ, ಕಾಳುಗಳು, ಹಾಸಿಗೆ ನೀಡಿದರು. ಅಲ್ಲದೇ, ಸರ್ಕಾರ ಆದಷ್ಟು ಬೇಗ ಪರಿಹಾರ ನೀಡುತ್ತೆವೆ ಎಂದು ಭರವಸೆ ಕೊಟ್ಟರು. ಈ ವೇಳೆ ಶಾಸಕ ಪ್ರಸಾದ ಅಬ್ಬಯ್ಯ ಡಿಕೆಶಿಗೆ ಸಾಥ್​ ನೀಡಿದರು.

Read More »

ಹೇಮಾವತಿ ನದಿ ನೀರು ಮನೆಗೆ ನುಗ್ಗಿ ಕಟ್ಟಡ ಕುಸಿತ

ಮಂಡ್ಯ : ಹಾಸನ ದ ಗೋರೂರ್ ಡ್ಯಾಮ್ ನಿಂದ ಸುಮಾರು 1, 5 ಲಕ್ಷ ಕ್ಯೂಸೆಕ್ ನೀರನ್ನು ಹೊರಬಿಟ್ಟ ಹಿನ್ನಲೆಯಲ್ಲಿ ಚಿಕ್ಕ ಮಂದಗೆರೆ ಗ್ರಾಮದಲ್ಲಿ ಮಂಜುನಾಥ್ ಮತ್ತು ಚಂದ್ರಶೇಖರ ಎಂಬುವರ ಮನೆಗೆ ಹೇಮಾವತಿ ನಧಿಯ ನೀರು ನುಗ್ಗಿ ಮನೆಯ ಕಟ್ಟಡ ಕುಸಿದಿದೆ. ಅದೃಷ್ಟವಶಾತ್ ಮನೆಯಲ್ಲಿ ಇದ್ದ ಯಾರಿಗೂ ಏನು ತೊಂದರೆಯಾಗಿಲ್ಲ. ‌ ಈ ಕಾರಣದಿಂದಾಗಿ ನಮಗೆ ಊಟಕ್ಕೂ ತುಂಬಾ ತೊಂದರೆ ಆಗಿದೆ ಮಲಗುವದಕ್ಕೂ ಜಾಗವಿಲ್ಲ ಎಂದು ಪತ್ರಕರ್ತರ ಮೂಲಕ ಮಂಜುನಾಥ್ …

Read More »

ಮಂಗಳವಾರದ ರಾಶಿಫಲ

ಮೇಷ: ಇಂದು ನೀವು ಹೊರಹೋಗಲು ಉತ್ಸಾಹಿಗಳಾಗಿದ್ದೀರಿ. ನಿಮ್ಮ ಈ ಹುರುಪನ್ನು ಒಳ್ಳೆಯ ಕೆಲಸಕ್ಕೆ ಬಳಸಿ. ಇದು ಕೆಲಸ ಮಾಡುವ ಸಮಯವೇ ಹೊರತು ಯೋಜಿಸುವುದಲ್ಲ.‌ವೃಷಭ: ಇಡೀ ದಿನ ನಿಮ್ಮ ಮನಸ್ಥಿತಿಯನ್ನು ಶಕ್ತಿ, ಸಮೃದ್ಧಿ ಮತ್ತು ಉತ್ಸಾಹ ಆಳುತ್ತವೆ. ಅಂತಹ ಉತ್ಸಾಹ ಸಾಂಕ್ರಾಮಿಕವಾಗಿದ್ದು ನಿಮ್ಮ ಪ್ರೀತಿಪಾತ್ರರು ಅದರಿಂದ ಮೋಡಿಗೆ ಒಳಗಾಗುತ್ತಾರೆ. ದಿನ ಮುಂದೆ ಸಾಗಿದಂತೆ ವಿಷಯಗಳು ಉತ್ತಮಗೊಳ್ಳುತ್ತವೆ. ನೀವು ಬೇಸರವೆನಿಸಿದರೆ ಕೆಲಸದಿಂದ ಬಿಡುವು ಪಡೆದು ವಿಶ್ರಾಂತಿ ಪಡೆದು ನವೋತ್ಸಾಹ ತಂದುಕೊಳ್ಳಿ.ಮಿಥುನ: ಇಂದು ನಿಮ್ಮ …

Read More »

ಮಳೆಹಾನಿಗೆ ಒಳಗಾದ ಪ್ರದೇಶಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಭೇಟಿ ಟ ಸಂತ್ರಸ್ಥರಿಗೆ ಮೂಲಭೂತ ಸಾಮಗ್ರಿಗಳನ್ನು ವಿತರಣೆ

ಧಾರವಾಡ: ಜಿಲ್ಲೆಯಲ್ಲಿ ಮಳೆಹಾನಿಗೆ ಒಳಗಾದ ಪ್ರದೇಶಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಭೇಟಿ ನೀಡಿ ಸಂತ್ರಸ್ಥರಿಗೆ ಮೂಲಭೂತ ಸಾಮಗ್ರಿಗಳನ್ನು ವಿತರಿಸಿದರು.ಜಿಲ್ಲೆಯ ಹನುಮನಾಳ ಗ್ರಾಮದಲ್ಲಿ ಬಿದ್ದ ಮನೆಗಳಿಗೆ ಭೇಟಿ ನೀಡಿ, ನಿರಾಶ್ರಿತರಿಗೆ ಮೂಲಭೂತ ವಸ್ತುಗಳನ್ನು ವಿತರಿಸಿದರು. ಮತ್ತು ಗ್ರಾಮದ ಸೇತುವೆ ಮತ್ತು ದೇವಾಲಯಗಳಿಗೆ ಭೇಟಿ ನೀಡಿ ಸುರಕ್ಷತೆಯನ್ನು ಪರೀಕ್ಷಿಸಿದರು. ಈ ವೇಳೆ ಕೇಂದ್ರ ಸರ್ಕಾರ ನಿಮ್ಮ ಜೊತೆ ಇದೆ ಎಂದು ಸಂತ್ರಸ್ತರಿಗೆ ಧೈರ್ಯ ತುಂಬುವ ಕೆಲಸ ಮಾಡಿದರು. ಈ ಸಂದರ್ಭದಲ್ಲಿ ತಾಲೂಕು ಮಟ್ಟದ …

Read More »

ಮಾಜಿ ತಾಲ್ಲೂಕು ಸಾಕ್ಷರತಾ ಸಂಯೋಜಕ ಸಿಂಧುಘಟ್ಟ ಮಂಜುನಾಥ್ ನಿಧನ

ಮಂಡ್ಯ: ವಯಸ್ಕರ ಶಿಕ್ಷಣ ಇಲಾಖೆಯ ಮಾಜಿ ತಾಲ್ಲೂಕು ಸಾಕ್ಷರತಾ ಸಂಯೋಜಕರು, ಮಂಡ್ಯ ಜಿಲ್ಲೆ ಮಂಡ್ಯ ಕ್ಯಾತನಹಳ್ಳಿ ಶಾಲೆಯ ಶಿಕ್ಷಕರಾದ ಸಿಂಧುಘಟ್ಟ ಮಂಜುನಾಥ್(50) ಅವರು ಅನಾರೋಗ್ಯದಿಂದ ನಿಧನ ಹೊಂದಿರುತ್ತಾರೆಮೃತರ ಅಂತ್ಯಕ್ರಿಯೆಯು ಆ.13ರಂದು ಮಂಗಳವಾರ ಮಧ್ಯಾಹ್ನ 12ರಿಂದ 1ಗಂಟೆಗೆ ಮೃತರ ಸ್ವಗ್ರಾಮ ಸಿಂಧುಘಟ್ಟ ಗ್ರಾಮದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.ಮೃತರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮಾಜಿ ವಿಶೇಷಾಧಿಕಾರಿಗಳಾದ ಸಿಂಧುಘಟ್ಟ ಅರವಿಂದ್ ಅವರ ಸಹೋದರ ಸಂಬಂಧಿಯಾಗಿರುತ್ತಾರೆ.ಮೃತರ ನಿಧನಕ್ಕೆ ನಿವೃತ್ತ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ …

Read More »

ಕೆಎಸ್ ಆರ್ ಟಿಸಿ ಬಸ್ ಚಾಲಕರ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ವಿದ್ಯಾರ್ಥಿಗಳ ಪ್ರತಿಭಟನೆ.

ಚಿಕ್ಕಬಳ್ಳಾಪುರ: ಕೆ ಎಸ್ ಆರ್ ಟಿ ಸಿ ಬಸ್ ಚಾಲಕರ ಧೋರಣೆಯನ್ನು ಖಂಡಿಸಿ ಇಂದು ನೂರಾರು ವಿದ್ಯಾರ್ಥಿಗಳು ಕೆ ಎಸ್ ಆರ್ ಟಿ ಸಿ ಬಸ್ ತಡೆದು ಪ್ರತಿಭಟನೆ ನಡೆಸಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಕೈವಾರ ಕ್ರಾಸ್ ಬಳಿ ನಡೆದಿದೆ.ನಿತ್ಯ ಇಲ್ಲಿ ನೂರಾರು ವಿದ್ಯಾರ್ಥಿಗಳು ಪ್ರಯಾಣ ಮಾಡುತ್ತಿದ್ದು, ಕೈವಾರ ಕ್ರಾಸ್ ಗೆ ವೇಗದೂತ ನಿಲುಗಡೆ ಇದ್ದರೂ ಬಸ್ ನಿಲ್ಲಿಸುವದಿಲ್ಲ. ಇದರಿಂದ ಪ್ರತಿನಿತ್ಯ ವಿದ್ಯಾರ್ಥಿಗಳು ಸಮಯಕ್ಕೆ ಕಾಲೇಜಿಗೆ ಹೋಗಲಾರದೆ …

Read More »

ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನನ್ನು ಚಾಕುವಿನಿಂದ ಇರಿದು ಕೊಲೆ

ಆನೇಕಲ್: ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನನ್ನೆ ಚಾಕುವಿನಿಂದ ಹಿರಿದು ಕೊಲೆ ಮಾಡಿರುವಂತಹ ಘಟನೆ ಬೆಂಗಳೂರು ಹೊರವಲಯದ ಹೆಬ್ಬಗೋಡಿ ಪೋಲೀಸ್ ಠಾಣಾ ವ್ಯಾಪ್ತಿ ಯ ಕಮ್ಮಸಂದ್ರದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.ಹೌದು ಕಮ್ಮಸಂದ್ರದ ಓಂ ಇಂಡಸ್ಟ್ರೀಸ್ ಕಂಪನಿಯಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ಡಬ್ಲು ಪಾಸ್ವಾನ್ ಮೃತ ದುರ್ದೈವಿ ಯಾಗಿದ್ದು ಎರಡು ದಿನದ ಹಿಂದೆ ಅದೇ ಕಂಪನಿಯಲ್ಲೆ ವೆಡ್ಡಿಂಗ್ ನಲ್ಲಿ ಕೆಲಸ ಮಾಡುಕೊಂಡು ರೂಮ್ ನಲ್ಲಿ ಜೊತೆಯಲ್ಲಿ ವಾಸ ಮಾಡುತ್ತಿದ್ದ ಮುನಿನ್ …

Read More »

ಉತ್ತರ ಕರ್ನಾಟಕದ ನಿರಾಶ್ರಿತರಿಗೆ ಒಂದು ಕೋಟಿ ರೂ. ಸಹಾಯಧನ ವಿತರಣೆ

ಹೊಸಕೋಟೆ: ಉತ್ತರ ಕರ್ನಾಟಕ ಭಾಗದಲ್ಲಿ ನೆರೆ ಪ್ರವಾಹ ಹಿನ್ನೆಲೆಯಲ್ಲಿ ಸರ್ಕಾರ ನಿರಾಶ್ರಿತರಿಗಾಗಿ ಒಂದು ಕೋಟಿ ಸಹಾಯ ಧನ ಚೆಕ್ ವಿತರಿಸಲು ಘೋಷಿಸಿದ ಬೆನ್ನಲ್ಲೇ ಮಾಜಿ ಸಚಿವ ಅನರ್ಹ ಶಾಸಕ ಎಂಟಿಬಿ ನಾಗರಾಜ್ ರಿಂದ ಪರಿಹಾರಧನದ ಚೆಕ್ ವಿತರಿಸಲಾಯಿತು.ನೆರೆ ಸಂತ್ರಸ್ಥರ ನೆರವಿಗಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಒಂದು ಕೋಟಿ ಹಣ ಘೋಷಣೆ ಮಾಡಲಾಗಿದ್ದು,ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ವಿಧಾನಸಭಾ ಕ್ಷೇತ್ರದ ಅನರ್ಹ ಕೈ ಶಾಸಕ ಎಂಟಿಬಿ ನಾಗರಾಜ್ ರಿಂದ ಹಣ ವಿತರಿಸಿದರು.

Read More »

ನೆರೆ ಹಾವಳಿ ಕುರಿತು ವೀರೇಂದ್ರ ಹೆಗ್ಗಡೆ ಅವರೊಂದಿಗೆ ಯಡಿಯೂರಪ್ಪ ಚರ್ಚೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಮುಖ್ಯ ಮಂತ್ರಿ ಬಿ ಎಸ್ ಯಡಿಯೂರಪ್ಪ ನವರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿ ಮಂಜುನಾಥ ಸ್ವಾಮಿ ದೇವರ ದರ್ಶನ ಪಡೆದರು . ಬಳಿಕ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿದರು .ನೆರೆ ಹಾವಳಿಯಿಂದ ಆಗಿರುವ ಹಾನಿಯ ಕುರಿತು ಚರ್ಚೆ ನಡೆಸಿದರು .

Read More »

ದಾವಣಗೆರೆ ಜಿಲ್ಲಾ ಬಿಜೆಪಿ ಯುವಮೋರ್ಚಾ ವತಿಯಿಂದ ನೆರೆ ಸಂತ್ರಸ್ತರಿಗಾಗಿ ನಿಧಿ ಸಂಗ್ರಹಣೆ

ದಾವಣಗೆರೆ; ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ತರ ನೆರವಿಗಾಗಿ ದಾವಣಗೆರೆ ಜಿಲ್ಲಾ ಬಿಜೆಪಿ ಯುವಮೋರ್ಚಾ ವತಿಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ ನಿಧಿ ಸಂಗ್ರಹಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ನಗರದ ಚಾಮರಾಜಪೇಟೆಯಲ್ಲಿ ಡಬ್ಬಿ ಹಿಡಿದ ಸಂಸದ ಜಿಎಂ ಸಿದ್ದೇಶ್ವರ, ಶಾಸಕ ಎಸ್ ಎ ರವೀಂದ್ರನಾಥ್‌ ನಿಧಿ ಸಂಗ್ರಹಕ್ಕೆ ಚಾಲನೆ ನೀಡಿದರು.

Read More »