Warning: Trying to access array offset on value of type bool in /home/eamphica/public_html/wp-content/themes/sahifa/framework/functions/theme-functions.php on line 626
Breaking News

Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73

12ಕ್ಕೆ ನೀರಿದ್ದರೆ ನಾಳೆ ಕೃತಿ ಬಿಡುಗಡೆ ಸಮಾರಂಭ

ಹುಬ್ಬಳ್ಳಿ: ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಹಾಗೂ ಸಾಹಿತ್ಯ ಪ್ರಕಾಶನದ ಸಹಯೋಗದಲ್ಲಿ ನೀರಿದ್ದರೆ ನಾಳೆ ಕೃತಿ ಬಿಡುಗಡೆ ಕಾರ್ಯಕ್ರಮವನ್ನು ಇದೇ 12ರಂದು ನಗರದ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಾಹಿತ್ಯ ಪ್ರಕಾಶನದ ಮುಖ್ಯಸ್ಥ ಸುಬ್ರಹ್ಮಣ್ಯ ತಿಳಿಸಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಧುನೀಕರಣದ ವ್ಯವಸ್ಥೆಯಿಂದಾಗಿ ಜೀವನದಿಗಳು ಸಾವಿನ ಅಂಚಿನಲ್ಲಿರುವುದು ವಿಷಾದಕರ ಸಂಗತಿಯಾಗಿದ್ದು, ಇದೇ ವ್ಯವಸ್ಥೆ ಮುಂದುವರೆದರೇ ಮುಂದೊಂದು ದಿನ ನೀರು ಇಲ್ಲದೇ ಕುಡಿಯುವ ನೀರಿಗೆ ಗಂಡಾಂತರ ಎದುರಾಗುತ್ತದೇ ಎಂದರು. ಇಂತಹ ಹಲವಾರು ಅವ್ಯವಸ್ಥೆಯನ್ನು ನಿಯಂತ್ರಿಸುವ ಸದುದ್ದೇಶದಿಂದ ಜೀವ ಜಲದ ಸಂರಕ್ಷಣೆಗೆ ಪೂರಕವಾದ ನೀರಿದ್ದರೇ ನಾಳೆ ಕೃತಿ ಬಿಡುಗಡೆ ಹಾಗೂ ಜನಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅವರು ಹೇಳಿದರು. ಕಾರ್ಯಕ್ರಮದ ಸಾನಿಧ್ಯವನ್ನು ಮನಗುಂಡಿಯ ಬಸವಾನಂದ ಸ್ವಾಮೀಜಿ ವಹಿಸಲಿದ್ದು,ಕೃತಿ ಬಿಡುಗಡೆಯನ್ನು ಸಾಹಿತಿಗಳಾದ ವೀಣಾ ಬನ್ನಂಜೆ ನೆರವೇರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಲೇಖಕರು ಕೃಷಿ ತಜ್ಞರಾದ ಶಿವಾನಂದ ಕಾಳವೆ ಮುಖ್ಯ ಮಾತುಗಳನ್ನಾಡಲಿದ್ದಾರೆ . ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾಣಿಜ್ಯೋದ್ಯಮ ಸಂಸ್ಥೆಯ ವಿ.ಪಿ.ಲಿಂಗನಗೌಡರ ವಹಿಸಲಿದ್ದಾರೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ವಿ.ಪಿ.ಲಿಂಗನಗೌಡರ, ಅಶೋಕ ಗಡಾದಿ ಸೇರಿದಂತೆ ಇತರರು ಇದ್ದರು.

Share News

About Shaikh BIG TV NEWS, Hubballi

Check Also

ಗಸ್ತು ಪೊಲೀಸರ ಮೇಲೆ ದಾಳಿ: ಕಾನೂನಿಗೆ ಸವಾಲು ಹಾಕಿದ ದುಷ್ಕರ್ಮಿಗಳು!

ಪೊಲೀಸರೇ ಸುರಕ್ಷಿತ ಅಲ್ಲವಾ..? ಹುಬ್ಬಳ್ಳಿಯಲ್ಲಿ ಗೂಂಡಾಗಿರಿ ಮಿತಿ ಮೀರಿ! ಸ್ಮಶಾನದಲ್ಲೇ ದಾಳಿ: ಪೊಲೀಸರ ಮೇಲೆ ಚಾಕು ನಗರದಲ್ಲಿ ಭೀತಿ! ಕರ್ತವ್ಯದಲ್ಲಿದ್ದ …

Leave a Reply

Your email address will not be published. Required fields are marked *