Breaking News

ಹೇಮಾವತಿ ನದಿ ನೀರು ಮನೆಗೆ ನುಗ್ಗಿ ಕಟ್ಟಡ ಕುಸಿತ

ಮಂಡ್ಯ : ಹಾಸನ ದ ಗೋರೂರ್ ಡ್ಯಾಮ್ ನಿಂದ ಸುಮಾರು 1, 5 ಲಕ್ಷ ಕ್ಯೂಸೆಕ್ ನೀರನ್ನು ಹೊರಬಿಟ್ಟ ಹಿನ್ನಲೆಯಲ್ಲಿ ಚಿಕ್ಕ ಮಂದಗೆರೆ ಗ್ರಾಮದಲ್ಲಿ ಮಂಜುನಾಥ್ ಮತ್ತು ಚಂದ್ರಶೇಖರ ಎಂಬುವರ ಮನೆಗೆ ಹೇಮಾವತಿ ನಧಿಯ ನೀರು ನುಗ್ಗಿ ಮನೆಯ ಕಟ್ಟಡ ಕುಸಿದಿದೆ. ಅದೃಷ್ಟವಶಾತ್ ಮನೆಯಲ್ಲಿ ಇದ್ದ ಯಾರಿಗೂ ಏನು ತೊಂದರೆಯಾಗಿಲ್ಲ. ‌
ಈ ಕಾರಣದಿಂದಾಗಿ ನಮಗೆ ಊಟಕ್ಕೂ ತುಂಬಾ ತೊಂದರೆ ಆಗಿದೆ ಮಲಗುವದಕ್ಕೂ ಜಾಗವಿಲ್ಲ ಎಂದು ಪತ್ರಕರ್ತರ ಮೂಲಕ ಮಂಜುನಾಥ್ ಮತ್ತು ವಿಶ್ವನಾಥ್ ರವರು ಅನಿಸಿಕೆ ಯನ್ನು ತಿಳಿಸಿದ್ದಾರೆ
ಮಾದ್ಯಮ ಮಿತ್ರರೊಂದಿಗೆ ಮಾತನಾಡಿದ ಅವರು, ನಮ್ಮ ಸುಮಾರು 6 ಎಕರೆ ಭೂಮಿ ಮುಳುಗಡಿ ಆಗಿದೆ ಜಮೀನಲಿ ಕಬ್ಬು ಸುಂಟಿ ತೆಂಗು ಜೋಳ ಬಾಲೇ ಅಡಿಕೆ ಬೆಳೆದಿದೆ ಅದರೇ ಕೈಗೆ ಬಂದ ತುತ್ತು ಬಾಯಿಗೆ ಬರಂಥ ಆಯಿತು ಎಂದು ತಮ್ಮ ದುಃಖ ಹೊರಹಾಕಿದ್ದಾರೆ.
ಇಷ್ಟೆಲ್ಲ ಅನಾಹುತ ಆದರೂ ಇದಕ್ಕೆ ಸಂಬಂದಿಸಿದ ಅಧಿಕಾರಿಗಳು ಯಾರು ನಮ್ಮ ನು ವಿಚಾರಿಸಿಲ್ಲ ಎಂದು ತಿಳಿಸಿದರು.
ಇಷ್ಟೆಲ್ಲ ಕಾರಣ ಬೋರಾಕ್ ವಿದ್ಯುತ್ 2 ಆಡಿ ದೊಡ್ಡದು ಮಾಡಬೇಕಿತ್ತು. ಆದರೆ ಅದನ್ನು ಬೋರಾಕ್ ಕಂಪನಿ ಯವರು ಮಾಡಿಲ್ಲ ಮಾಡದ ಕಾರಣ ಬೋರಾಕ್ ಇಂದೇ ಇರುವ ಮನೆಗಳಿಗೆ ನೀರು ನುಗ್ಗುತಿದೆ ಎಂದು ಮಾತನಾಡಿದ ಅವರು ನಮಗೆ ತುಂಬಾ ನಷ್ಟ ಆಗಿದೆ ಇದಕ್ಕೆ ಸರ್ಕಾರ ದಿಂದ ಏನಾದರೂ ಪರಿಹಾರ ಮಾಡಿಕೊಟ್ಟರೆ ತುಂಬಾ ಅನುಕೂಲ ಆಗುತ್ತದೆ ಎಂದು ಮನವಿ ಮಾಡಿದ್ದಾರೆ.

Share News

About admin

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *